ಸಂಭ್ರಮ ದಿವಸ್

Total
0
Shares

ಪ್ರತಿಯೊಂದು ಸಂಭ್ರಮದ ಆಚರಣೆಯ ಹಿನ್ನೆಲೆಯಲ್ಲಿ ಒಂದು ಸಂತೋಷದ ಘಟನೆಯಿರುತ್ತದೆ. ಅಂತಹ ಒಂದು ಸಂತೋಷದ ವಾತಾವರಣ ದೇಶದೆಲ್ಲೆಡೆ ಇದ್ದಾಗ ಸಂಭ್ರಮ ಜೋರಾಗಿಯೇ ಇರುತ್ತದೆ. ಮೋದಿಜೀಯವರು 500 ಮತ್ತು 1000 ದ ನೋಟುಗಳನ್ನು ನಿಷೇಧಿಸಿದ್ದರಿಂದ ಕಪ್ಪುಹಣ ಇಟ್ಟವರಲ್ಲಿ ಭಯ ಶುರುವಾಯಿತು. ಇಟ್ಟ ಹಣ ಹಲವಾರು ರೂಪಗಳ ಮೂಲಕ ಹೊರಬರಲು ಪ್ರಾರಂಭಿಸಿತು. ಬ್ಯಾಂಕುಗಳಲ್ಲಿನ ವಹಿವಾಟು ಚುರುಕಾಯಿತು. ನಿಷ್ಪ್ರಯೋಜಕವಾಗಿದ್ದ ಹಣ ಹೊರಬಂತು.ಆದರೆ ಅತಿಯಾಗಿ ಶೇಖರಿಸಿದ್ದವರಿಗೆ ಪೀಕಲಾಟ ಶುರುವಾಯಿತು. ಕೆಲವರು ಅದನ್ನು ಸುಟ್ಟರು, ನೀರಿಗೆ ಹಾಕಿದರು, ಬಡವರ ಖಾತೆಗಳಲ್ಲಿ ತುಂಬಲು ಶುರುಮಾಡಿದರು. ಏನೂ ಮಾಡಲಾಗದಿದ್ದಾಗ ಅವರ ಮನಸ್ಸು ಕುದಿಯಿತು, ಅದರ ಫಲವಾಗಿಯೋ ಎಂಬಂತೆ ದೇಶದೆಲ್ಲೆಡೆ “ಆಕ್ರೋಶ್ ದಿವಸ್” ಆಚರಿಸಲು ಮುಂದಾದರು.

ಆದರೆ ಹೆಚ್ಚುಪಾಲು ಜನರಿಗೆ ಮೋದಿಜಿಯವರ ಈ ಕಾರ್ಯ ದೇಶದ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಮನದಟ್ಟಾಗಿತ್ತು. ಕಪ್ಪು ಹಣ ಹೊರಬಂದು ದೇಶದಲ್ಲಿ ಸುಖ ಸಮೃದ್ಧಿಯುಂಟಾಗುತ್ತದೆ ಎಂದು ಅರಿತ ಜನ “ಆಕ್ರೋಶ್ ದಿವಸ್” ಅನ್ನು ಪ್ರತಿಭಟಿಸಿ ಮೋದಿಜೀಯವರ ಜೊತೆ ನಾವಿದ್ದೇವೆ ಎಂದು ಸಾರಲು ತಮ್ಮ ವ್ಯಾಪಾರ, ವ್ಯವಹಾರ, ಕೆಲಸ ನಿಲ್ಲಿಸದೆ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲವೆಂದು ಕಂಕಣ ಬದ್ಧರಾದರು. ಯುವಾ ಬ್ರಿಗೇಡ್‍ನಂತಹ ದೇಶಭಕ್ತ ಸಂಘಟನೆಗಳು ಮುಂದೆ ಬಂದು ದೇಶದಲ್ಲಿ ಆಗುತ್ತಿರುವ ಸಕಾರಾತ್ಮಕ ಬೆಳವಣಿಗೆಯನ್ನು ಸಂತೋಷದಿಂದ ಬರಮಾಡಿಕೊಳ್ಳುವ ಸಲುವಾಗಿ “ಸಂಭ್ರಮ ದಿವಸ್” ಎಂದು ಆಚರಿಸಲು ಕರೆಕೊಟ್ಟಿತು. ಇದೊಂದು “ರಾಷ್ಟ್ರೀಯತೆಯ ಹಬ್ಬ”, ದೇಶದ ಏಳಿಗೆ ಬಯಸುವ ಪ್ರತಿಯೊಬ್ಬ ಭಾರತೀಯನೂ ಆಚರಿಸಬೇಕು ಎಂದು ಕರೆಕೊಟ್ಟಿದ್ದೇ ತಡ ಬರೀ ಸಂಘಟನೆಗಳಿಗೆ ಮೀಸಲಾಗದೆ ಪ್ರತಿಯೊಬ್ಬ ದೇಶಭಕ್ತ ಜನಸಾಮಾನ್ಯನೂ “ಸಂಭ್ರಮ ದಿವಸ್” ಆಚರಣೆಗೆ ಸಿದ್ಧನಾದಾಗ, ಅದರ ಬಿಸಿ ತಟ್ಟಿ “ಆಕ್ರೋಶ” ತಣ್ಣಗಾಗಬೇಕಾಯಿತು.

g

ನವೆಂಬರ್ 28 ಯುವಾ ಬ್ರಿಗೇಡ್ “ಸಂಭ್ರಮ ದಿವಸ್” ಆಚರಿಸಿತು. ನಮ್ಮಲ್ಲಿ ಹಲವಾರು ಹಬ್ಬಗಳನ್ನು ಆಚರಿಸುತ್ತೇವೆ, ಅದಕ್ಕೊಂದು ಹಿನ್ನೆಲೆ ಇರುತ್ತದೆ. ಉಗಾದಿಗೆ ಹೊಸತನ, ಹೋಳಿಗೆ ಕಾಮದಹನ; ಬಣ್ಣದಾಟ, ವಿಜಯದಶಮಿಗೆ ವಿಜಯೋತ್ಸವ, ದೀಪಾವಳಿ ಜ್ಞಾನದ ದೀಪ ಬೆಳಗುವ ಹಬ್ಬ. ಆದರೆ “ಸಂಭ್ರಮ ದಿವಸ್” ಈ ಎಲ್ಲಾ ಹಬ್ಬಗಳ ಹಿನ್ನೆಲೆಯನ್ನು ಒಂದಾಗಿಸಿ ಆಚರಿಸಿದ ಹಬ್ಬವಾಗಿತ್ತು. ಹೇಗೆಂದರೆ ಮೋದಿಜೀಯವರ ನಡೆ ದೇಶಕ್ಕೆ ಹೊಸತನ ತಂದುಕೊಟ್ಟಿತ್ತು. ಬಚ್ಚಿಟ್ಟ ಕಪ್ಪು ಹಣದ ದಹನವೂ ಆಗಿತ್ತು. ಉಗ್ರರ ಅಟ್ಟಹಾಸ ಕಣಿವೆಯಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿ, ವಿಜಯೋತ್ಸವ ಹಾಗೂ ಸಾಮಾನ್ಯ ಜನರಿಗೆ ದೇಶದ ನಿಜ ಪರಿಸ್ಥಿತಿ ಅರಿವಾಗಿ ಜ್ಞಾನ ದೀಪ ಬೆಳಗುವಂತೆ ಮಾಡಿತ್ತು. ಆ ದಿನದ ಆಚರಣೆ ಹೇಗಿತ್ತೆಂದರೆ ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತರು ಒಂದೆಡೆ ಸೇರಿ ಬಣ್ಣ ಬಣ್ಣದ ರಂಗೋಲಿ ಹಾಕಿ ತೋರಣ ಕಟ್ಟಿ, ಸೋದರರನ್ನು ಹಸೆಮಣೆಯ ಮೇಲೆ ಕೂರಿಸಿ ಎಣ್ಣೆ ಹಚ್ಚಿ, ಆರತಿ ಮಾಡಿ ಬಣ್ಣಗಳ ಜೊತೆ ಹೋಲಿ ಆಡಿ, ಕಪ್ಪು ಹಣದ ಪ್ರತಿಕೃತಿಯ ದಹನ ಮಾಡಿದರು. ಅಭ್ಯಂಜನದ ನಂತರ ದೇವರ ಪೂಜೆ, ಹೋಳಿಗೆ ಊಟ ಮಾಡಿ ಸಂಭ್ರಮಿಸಲಾಯಿತು.

ಇಡೀ ರಾಜ್ಯದಲ್ಲಿ ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತರು ಬ್ಯಾಂಕ್ ಮತ್ತು ಅಂಚೆ ಕಛೇರಿಗಳಿಗೆ ತೆರಳಿ ನಿರಂತರವಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿ ವರ್ಗಕ್ಕೆ ಹೂವು ಮತ್ತು ಸಿಹಿ ಹಂಚುವ ಮೂಲಕ ದೇಶದ ಒಳಿತಿಗಾಗಿ ಅವರ ಸೇವೆಯನ್ನು ಅಭಿನಂದಿಸಿದರು. ಮಂಗಳೂರು, ಶಿವಮೊಗ್ಗದಲ್ಲಿ ದೊಡ್ಡ ದೊಡ್ಡ ಬಣ್ಣದ ರಂಗೋಲಿಗಳನ್ನು ಹಾಕಿ ದೇಶ ಭಕ್ತಿಗೀತೆಗಳನ್ನು ಹಾಡುವ ಮೂಲಕ ಸಂಭ್ರಮಿಸಿದರು. ರಾತ್ರಿ ರಾಜ್ಯದ ಹಲವಾರು ಭಾಗಗಳಲ್ಲಿ ದೀಪೋತ್ಸವ ನಡೆಸಲಾಯಿತು. ನಮ್ಮ ಮಾರ್ಗದರ್ಶಕರಾದ ಚಕ್ರವರ್ತಿ ಅಣ್ಣ ಆ ದಿನ ನಾಗಾಲ್ಯಾಂಡ್ ನಲ್ಲಿ ಇದ್ದರು. ಅಲ್ಲಿಯೂ ಅವರು ಬ್ಯಾಂಕ್ ಮತ್ತು ಅಂಚೆಕಛೇರಿಗಳಿಗೆ ತೆರಳಿ ಅಭಿನಂದಿಸಿದಾಗ ಸಿಬ್ಬಂದಿಗಳು “ಮೊದಲ ಬಾರಿಗೆ ನಮ್ಮನ್ನು ಜನಸಾಮಾನ್ಯರು ಅಭಿನಂದಿಸಿದ್ದಾರೆ” ಎಂದು ಸಂತೋಷ ವ್ಯಕ್ತಪಡಿಸಿದರು.

15193553_1137236756374317_7471449434596849538_n 15219502_10211968373663791_1171676460035540834_n 15242034_1138342219597104_6942221095923298415_n

 

 

p

 

15193627_1138542546243738_6003833865350361529_n 15241265_1138431459588180_8717732777854176454_n 15253540_1231427360251218_3747663600851247686_n

SBI 15232178_1182663991821775_3317650816628746271_n 15205730_1200817436679641_1626183710_o

ಕ್ಯಾಲೆಂಡರ್‍ನಲ್ಲಿ ಸೂಚಿಸದೇ ಇದ್ದ ಹಬ್ಬವಾದರೂ ಸಂಭ್ರಮ ದಿವಸ್ ಎಂಬ ರಾಷ್ಟ್ರೀಯತೆಯ ಹಬ್ಬ ಬಹಳ ಸಡಗರದಿಂದ ಕೂಡಿತ್ತು. ಪರಿಸ್ಥಿತಿಗೆ ತಕ್ಕಂತೆ ಪ್ರತಿಕ್ರಿಯಿಸುವ ಮನಃಸ್ಥಿತಿ ಜನರಲ್ಲಿ ಎದ್ದು ಕಾಣುತ್ತಿತ್ತು. ಇದು ಹೀಗೆ ಮುಂದುವರೆದಲ್ಲಿ ಭಾರತ ವಿಶ್ವಗುರುವಾಗುವುದನ್ನು ನೋಡಿ ಸಂಭ್ರಮಿಸುವ ಕಾಲ ದೂರವಿಲ್ಲ ಎನಿಸುತ್ತಿದೆ!!!!

Leave a Reply

Your email address will not be published. Required fields are marked *

You May Also Like

ಕ್ಯಾಶ್ ಲೆಸ್ ದುನಿಯಾ

ಪ್ರಧಾನ ಮಂತ್ರಿ ತೆಗೆದುಕೊಂಡ ಅರ್ಥ ವ್ಯವಸ್ಥೆಯ ಮಹಾ ಕ್ರಾಂತಿಯಿಂದಾಗಿ ದೊಡ್ಡ ಮುಖಬೆಲೆಯ ನೋಟುಗಳು ಮೌಲ್ಯ ಕಳೆದುಕೊಂಡಿತು. ಆಗಲೇ ಕಾಳಧನಿಕರ ಆಕ್ರೋಶ ತೀವ್ರವಾಗಿದ್ದು.ಇವರ ಆಕ್ರೋಶವನ್ನು ಬಡವರ ತಲೆಗೆ ಕಟ್ಟುವ ಎಲ್ಲ ಪ್ರಯತ್ನಗಳು ನಡೆದವು. ಇಂತಹ ಸಮಯದಲ್ಲಿ ಜನ ಸಾಮಾನ್ಯರಿಗೆ ತುರ್ತಾಗಿ ಯೋಜನೆಯ ಸಾಧಕ-…
View Post

ಕನ್ನಡವೇ ಸತ್ಯ

ನವೆಂಬರ್ ಬಂತೆಂದರೆ ಎಲ್ಲೆಲ್ಲೂ ನಾಡಹಬ್ಬದ ಸಡಗರ. ನಾಡಿನ, ನುಡಿಯ ಆರಾಧನೆ ಮಾಸಾದ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.ಆದರೆ ನವೆಂಬರ್ ಒಂದರ ಕನ್ನಡಿಗರಾಗುವುದಕ್ಕಿಂತ ನಂಬರ್ ಒನ್ ಕನ್ನಡಿಗರಾಗುವುದು ಅತ್ಯಂತ ಅವಶ್ಯಕ ಹಾಗು ಸೂಕ್ತವೆಂದು ನಂಬಿರುವ ಯುವಾಬ್ರಿಗೇಡ್ ಈ ಬಾರಿಯ ರಾಜ್ಯೋತ್ಸವವನ್ನು ತುಂಬಾ ವಿಶೇಷವಾಗಿ ಆಚರಿಸಿ ಹೊಸ…
View Post

ಭುವನ ದೀಪ

“ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ರಾಷ್ಟ್ರಕವಿ ಕುವೆಂಪು ಅವರ ಈ ನಾಡಗೀತೆ ಆಲಿಸಿದಾಗಲೆಲ್ಲ ಮೈಮನದಲಿ ಪುಳಕ ! ಹೌದು, ನಮ್ಮ ನಾಡಿನ ಹಿರಿಮೆಯೇ ಅಂತದ್ದು,ತನ್ನ ಸಾರಸ್ವತ , ಕಲಾತ್ಮಕ, ನೈಸರ್ಗಿಕ, ಕೈಗಾರಿಕ ಶ್ರೀಮಂತಿಕೆಯ ಮೂಲಕ ವಿಶ್ವಭಾರತಿಗೆ ಅವಿರತವಾಗಿ ಕನ್ನಡದಾರತಿಯ ಬೆಳಗುತ್ತಿರುವ…
View Post