ಭುವನ ದೀಪ

Total
0
Shares

“ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ರಾಷ್ಟ್ರಕವಿ ಕುವೆಂಪು ಅವರ ಈ ನಾಡಗೀತೆ ಆಲಿಸಿದಾಗಲೆಲ್ಲ ಮೈಮನದಲಿ ಪುಳಕ ! ಹೌದು, ನಮ್ಮ ನಾಡಿನ ಹಿರಿಮೆಯೇ ಅಂತದ್ದು,ತನ್ನ ಸಾರಸ್ವತ , ಕಲಾತ್ಮಕ, ನೈಸರ್ಗಿಕ, ಕೈಗಾರಿಕ ಶ್ರೀಮಂತಿಕೆಯ ಮೂಲಕ ವಿಶ್ವಭಾರತಿಗೆ ಅವಿರತವಾಗಿ ಕನ್ನಡದಾರತಿಯ ಬೆಳಗುತ್ತಿರುವ ಕರುನಾಡಿನಲ್ಲೆಡೆ ನವೆ೦ಬರ್ 1ರ೦ದು ರಾಜ್ಯೋತ್ಸವದ ಸ೦ಭ್ರಮ. ದೀಪಾವಳಿಯ ಹೆಗಲನ್ನೇರಿ ಬಂದ ನಾಡ ಹಬ್ಬ ಎಲ್ಲರ ಉತ್ಸಾಹ, ಸಂತೋಷವನ್ನು ದುಪ್ಪಟ್ಟು ಮಾಡಿತ್ತು. ತನ್ನ ವಿಭಿನ್ನ ಆಲೋಚನೆ -ಕಾರ್ಯಕ್ರಮದ ಮೂಲಕ ಈಗಾಗಲೇ ನಾಡಿನಾದ್ಯಂತ ಮನೆಮಾತಗಿರುವ ಯುವಾಬ್ರಿಗೇಡ್ ಈ ಬಾರಿಯ ರಾಜ್ಯೋತ್ಸವವನ್ನು ಕನ್ನಡನಾಡಿನ ಅಧೀದೇವತೆ ಭುವನೇಶ್ವರಿಯ ಏಕಮಾತ್ರ ಸನ್ನಿಧಿಯಾದ ಉತ್ತರಕನ್ನಡದ ಸಿದ್ದಾಪುರದಲ್ಲಿ ಆಚರಿಸಿತು. ಕನ್ನಡದ ಖ್ಯಾತ ರಾಜಮನೆತನವಾದ ಕದಂಬರ ಬನವಾಸಿಯ ಪಕ್ಕದಲ್ಲೇ ಇರುವ ಸಿದ್ದಾಪುರ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಪ್ರದೇಶ. ಹಚ್ಚಹಸುರಿನ ಕಾಡಿನ ,ನದಿ-ಜಲಪಾತಗಳ ಈ ಪ್ರದೇಶದಲ್ಲಿ ಕನ್ನಡಾಂಬೆಯ ನಿರಂತರ ನಿತ್ಯೋತ್ಸವ ನಡೆಯುತ್ತಲೇ ಇದೆ .

ಭುವನದೀಪವೆಂಬ ವಿನೂತನ ಹೆಸರಿನ ಈ ಕಾರ್ಯಕ್ರಮಕ್ಕೆ ದೂರದ ಬೆಳಗಾವಿ , ನಂಜನಗೂಡು ಸೇರಿದ೦ತೆ ನಾಡಿನ ಅನೇಕ ಕಡೆಗಳಿಂದ ನೂರಕ್ಕು ಮೀರಿ ಕಾರ್ಯಕರ್ತರು ಸಿದ್ದಾಪುರಕ್ಕೆ ಆಗಮಿಸಿದ್ದರು.ಅಂದು ನಸುಕಿನ ಮುಸು ಮುಸು ಚಳಿಯಲ್ಲಿ ಸಮೀಪದ ಚಂದ್ರಗುತ್ತಿಯ ರೇಣುಕಾ ಎಲ್ಲಮ್ಮ ದೇವಿಯ ದರ್ಶನ ಪಡೆದು ಪಕ್ಕದಲ್ಲೇ ಇರುವ ಬಿಳಗಿಯ ರಾಮ ಮಂದಿರದಲ್ಲಿ ಉಪಹಾರ ಸೇವಿಸಿ ಅಲ್ಲೇ ಇರುವ ಐತಿಹಾಸಿಕ ಜೈನ ಬಸದಿ ಹಾಗು ಸುರಂಗ ಮಾರ್ಗ ಉಳ್ಳ ಗೋಳ್ ಬಾವಿಯನ್ನು ವೀಕ್ಷಿಸಿ ಬುರುಡೆ ಜಲಪಾತದತ್ತ ನಮ್ಮ ಪಯಣ ಸಾಗಿತ್ತು .

1-2

1-6


ಹತ್ತಲು -ಇಳಿಯಲು ಕಷ್ಟಸಾಧ್ಯವಾದ ಬುರುಡೆ ಜಲಪಾತವನ್ನು , ಅದರ ಶ್ರೀಮಂತ ಗಾಂಭೀರ್ಯವನ್ನು ನೋಡಿ ಅದೇನೋ ಹೇಳತೀರದ ಧನ್ಯತೆಯ ಭಾವ ನಮ್ಮಲ್ಲಿ ಮೂಡಿತ್ತು.ಈ ಎಲ್ಲಾ ಸ್ಥಳಗಳಿಗೆ ನಮ್ಮ ಯುವಾಬ್ರಿಗೇಡಿನ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆಯವರು ನಮ್ಮೊ೦ದಿಗೆ ಇದ್ದದ್ದು ಹೊಸ ಹುರುಪು ತುಂಬಿತ್ತು.

ಅಂದು ಮಧ್ಯಾಹ್ನ ಸಿದ್ದಾಪುರದ ಭುವನಗಿರಿಯ ದೇವಿಗೆ ನಾಡಹಬ್ಬದ ವಿಷೇಶ ಪೂಜೆ ಸಲ್ಲಿಸಿ ವಿಶ್ವಗುರು ಸಂಕಲ್ಪಕ್ಕೆ ಆಶೀರ್ವಾದ ಬೇಡಿದ ನಾವು ಒಟ್ಟಾಗಿ ಕೂತು ಊಟ ಮಾಡಿದೆವು. ಸ೦ಜೆ ದೇವಾಲಯದ ಅ೦ಗಳದಲ್ಲೇ ನಿರ್ಮಿಸಿದ್ದ ಭುವನದೀಪ ವೇದಿಕೆಯಲ್ಲಿ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ವಿಶ್ವಗುರು ಉಪನ್ಯಾಸ ಏರ್ಪಡಿಸಲಾಗಿತ್ತು. ಸ್ಥಳೀಯ ದೇಶಪ್ರೇಮಿಗಳಿಂದ ಕಿಕ್ಕಿರಿದ ಸಭೆಯಲ್ಲಿ ಭಾರತ-ಕರ್ನಾಟಕಕ್ಕಿರುವ ತಾಯಿ ಮಗಳ ಅವಿನಾಭಾವ ಸಂಬಂಧ , ನಾಡು-ನುಡಿ ಸೇವೆಯ ಮೂಲಕ ದೇಶಸೇವಯ ಮಹತ್ವವನ್ನು ಎಳೆ ಎಳೆಯಾಗಿ ಚಕ್ರವರ್ತಿಯವರು ಬಿಡಿಸಿಟ್ಟರು.

1-8

ವೈಜ್ಞಾನಿಕ ತಳಹದಿಯಲ್ಲಿ ರಚಿತವಾದ ಕನ್ನಡ ಭಾಷೆಯ ವೈಶಿಷ್ಟ್ಯವನ್ನೂ , ನಾಭಿ, ಗಂಟಲು, ನಾಲಿಗೆ ತುಟಿ ಹಾಗು ಹಲ್ಲುಗಳ ಉಪಯೋಗದ ಮೂಲಕ ಹೊರ ಹೊಮ್ಮುವ ಸ್ವರ ವ್ಯಂಜನದ ವೀಷೇಶತೆಯನ್ನು ಅವರು ಬಣ್ಣಿಸಿದಾಗ ಸಭಿಕರು ಆನಂದದಿಂದ ತಲೆ ತೂಗಿದರು. ತನ್ನ ನೈಸರ್ಗಿಕ ಹಾಗು ಐತಿಹಾಸಿಕ ಸಂಪತ್ತಿನಿಂದ ಕರ್ನಾಟಕ ಪ್ರವಾಸಿಗಳನ್ನು ತನ್ನತ್ತ ಸೆಳೆಯುವ ಶಕ್ತಿ ಇದ್ದರೂ ,ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.ನಾಡು-ನುಡಿಯ ಏಳ್ಗೆಗಾಗಿ ಶ್ರಮಿಸುವಂತೆ ತನ್ಮೂಲಕ ದೇಶ ಕಟ್ಟುವ ಕೆಲಸಕ್ಕೆ ಮುಂದಾಗುವಂತೆ ನೆರೆದಿದ್ದ ಯುವಸ್ತೋಮಕ್ಕೆ ಕರೆ ಕೊಟ್ಟರು. ಈ ಹೃದಯಸ್ಪರ್ಶಿ ಕಾರ್ಯಕ್ರಮದ ಕೊನೆಯ ಹಂತವಾಗಿ ಭುವನ ಗಿರಿಯ ತಪ್ಪಲಿನ ಕಲ್ಯಾಣಿಯಲ್ಲಿ ದೀಪೋತ್ಸವ ಆಚರಿಸಲಾಯಿತು.

1-4-1024x682

ಕಾರ್ತಿಕ ಮಾಸದ ಸಾಯಂಕಾಲದಲ್ಲಿ ನೂರಾರು ಹಣತೆಗಳು ಸಾಲಾಗಿ ಬೆಳಗುವುದನನ್ನು ನೋಡಿ ಕೈಗೊಂಡ ಸತ್ ಸಂಕಲ್ಪಗಳಿಗೆ ಬಲಬಂದತಾಯಿತು. ಬಹಳ ದಿನಗಳ ಕಾಲ ಈ ಸವಿನೆನಪು ನಮ್ಮನ್ನೂ ಕಾಡುವುದಂತೂ ದಿಟ! … ಮನಸ್ಸು ಗೊತ್ತಿಲ್ಲದೆ ಗುನುಗುನಿಸುತ್ತಿದೆ ” ಹೊತ್ತಿತೋ ಹೊತ್ತಿತು ಕನ್ನಡದ ದೀಪ”. ಹೌದು, ಶತಮಾನಗಳ ಶಾಪ ಕಳೆಯುವ, ಹೊಸ ನಾಡನ್ನು ಕಟ್ಟುವ ಸಮಯ ಸಮೀಪಿಸುತ್ತಿದೆ.

Leave a Reply

Your email address will not be published. Required fields are marked *

You May Also Like

ಸಂಭ್ರಮ ದಿವಸ್

ಪ್ರತಿಯೊಂದು ಸಂಭ್ರಮದ ಆಚರಣೆಯ ಹಿನ್ನೆಲೆಯಲ್ಲಿ ಒಂದು ಸಂತೋಷದ ಘಟನೆಯಿರುತ್ತದೆ. ಅಂತಹ ಒಂದು ಸಂತೋಷದ ವಾತಾವರಣ ದೇಶದೆಲ್ಲೆಡೆ ಇದ್ದಾಗ ಸಂಭ್ರಮ ಜೋರಾಗಿಯೇ ಇರುತ್ತದೆ. ಮೋದಿಜೀಯವರು 500 ಮತ್ತು 1000 ದ ನೋಟುಗಳನ್ನು ನಿಷೇಧಿಸಿದ್ದರಿಂದ ಕಪ್ಪುಹಣ ಇಟ್ಟವರಲ್ಲಿ ಭಯ ಶುರುವಾಯಿತು. ಇಟ್ಟ ಹಣ ಹಲವಾರು…
View Post

ಕ್ಯಾಶ್ ಲೆಸ್ ದುನಿಯಾ

ಪ್ರಧಾನ ಮಂತ್ರಿ ತೆಗೆದುಕೊಂಡ ಅರ್ಥ ವ್ಯವಸ್ಥೆಯ ಮಹಾ ಕ್ರಾಂತಿಯಿಂದಾಗಿ ದೊಡ್ಡ ಮುಖಬೆಲೆಯ ನೋಟುಗಳು ಮೌಲ್ಯ ಕಳೆದುಕೊಂಡಿತು. ಆಗಲೇ ಕಾಳಧನಿಕರ ಆಕ್ರೋಶ ತೀವ್ರವಾಗಿದ್ದು.ಇವರ ಆಕ್ರೋಶವನ್ನು ಬಡವರ ತಲೆಗೆ ಕಟ್ಟುವ ಎಲ್ಲ ಪ್ರಯತ್ನಗಳು ನಡೆದವು. ಇಂತಹ ಸಮಯದಲ್ಲಿ ಜನ ಸಾಮಾನ್ಯರಿಗೆ ತುರ್ತಾಗಿ ಯೋಜನೆಯ ಸಾಧಕ-…
View Post

ಕನ್ನಡವೇ ಸತ್ಯ

ನವೆಂಬರ್ ಬಂತೆಂದರೆ ಎಲ್ಲೆಲ್ಲೂ ನಾಡಹಬ್ಬದ ಸಡಗರ. ನಾಡಿನ, ನುಡಿಯ ಆರಾಧನೆ ಮಾಸಾದ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.ಆದರೆ ನವೆಂಬರ್ ಒಂದರ ಕನ್ನಡಿಗರಾಗುವುದಕ್ಕಿಂತ ನಂಬರ್ ಒನ್ ಕನ್ನಡಿಗರಾಗುವುದು ಅತ್ಯಂತ ಅವಶ್ಯಕ ಹಾಗು ಸೂಕ್ತವೆಂದು ನಂಬಿರುವ ಯುವಾಬ್ರಿಗೇಡ್ ಈ ಬಾರಿಯ ರಾಜ್ಯೋತ್ಸವವನ್ನು ತುಂಬಾ ವಿಶೇಷವಾಗಿ ಆಚರಿಸಿ ಹೊಸ…
View Post