ಕ್ಯಾಶ್ ಲೆಸ್ ದುನಿಯಾ

Total
0
Shares

ಪ್ರಧಾನ ಮಂತ್ರಿ ತೆಗೆದುಕೊಂಡ ಅರ್ಥ ವ್ಯವಸ್ಥೆಯ ಮಹಾ ಕ್ರಾಂತಿಯಿಂದಾಗಿ ದೊಡ್ಡ ಮುಖಬೆಲೆಯ ನೋಟುಗಳು ಮೌಲ್ಯ ಕಳೆದುಕೊಂಡಿತು. ಆಗಲೇ ಕಾಳಧನಿಕರ ಆಕ್ರೋಶ ತೀವ್ರವಾಗಿದ್ದು.ಇವರ ಆಕ್ರೋಶವನ್ನು ಬಡವರ ತಲೆಗೆ ಕಟ್ಟುವ ಎಲ್ಲ ಪ್ರಯತ್ನಗಳು ನಡೆದವು. ಇಂತಹ ಸಮಯದಲ್ಲಿ ಜನ ಸಾಮಾನ್ಯರಿಗೆ ತುರ್ತಾಗಿ ಯೋಜನೆಯ ಸಾಧಕ- ಬಾಧಕಗಳನ್ನು ತಿಳಿಸಬೇಕಿತ್ತು.ಈ ನಿಟ್ಟಿನಲ್ಲಿ ಯುವಾ ಬ್ರಿಗೇಡ್ ಬ್ಲ್ಯಾಕ್ ಅಂಡ್ ವೈಟ್ ಹೆಸರಿನಲ್ಲಿ ರಾಜ್ಯಾದ್ಯಂತ ಜನಜಾಗೃತಿ ಕಾರ್ಯಕ್ರಮವನ್ನು ನಡೆಸಿತು.ಐದುನೂರು, ಸಾವಿರ ನೋಟುಗಳ ರದ್ದತಿಯ ನಂತರ ಹೊಸ ನೋಟುಗಳು ಬಂದರೂ, ಇದು ಒಂದಷ್ಟು ಸಿರಿವಂತರ ಮನೆಯ ಮಾಳಿಗೆ ಸೇರಿದ್ದರಿಂದ ಜನಸಾಮಾನ್ಯ ತುಸು ಕಷ್ಟ ಪಡಬೇಕಾಯಿತು. ಆದರೆ ಕೂಡಿಟ್ಟ ಒಬ್ಬೊಬ್ಬರನ್ನು ಹಿಡಿಯುತ್ತಿರುವುದನ್ನು ನೋಡಿದ ಮೇಲೆ ಶ್ರೀ ಸಾಮಾನ್ಯ ಸಂಭ್ರಮಿಸಿದ್ದ.ಆದರೂ ಒಂದು ಪ್ರತಿಶತದಷ್ಟು ಜನರು ಬೊಬ್ಬೆ ಹೊಡೆಯುತ್ತಾ ಜನ ಸಾಮಾನ್ಯರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಲೇ ಇದ್ದರು.

ಹಳೆಯ ನೋಟಿನ ಬದಲಾಗಿ ಹೊಸ ನೋಟುಗಳು ಅಷ್ಟೇ ಪ್ರಮಾಣದಲ್ಲಿ ಬಂದ್ದಿದ್ದರೆ ಕಾಳಧನಿಕರು ಸಂಭ್ರಮ ಪಡುತ್ತಿದ್ದರೇನೊ! ಆದರೆ ಅವರಂದುಕೊಂಡಹಾಗೆ ಆಗಲಿಲ್ಲ. ಹೊಸ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಸಿಗಲೇ ಇಲ್ಲ. ಸಿಕ್ಕಿದ್ದರೆ ಮತ್ತೆ ಯಾರದ್ದೊ ಮನೆಯ ಮಾಳಿಗೆ ಸೇರಿ ಕುಳಿತು ಬಿಡುತ್ತಿತ್ತು.ಆರ್ಥಿಕ ಕ್ರಾಂತಿಯ ಮಹತ್ತರವಾದ ಈ ಯೋಜನೆ ಯಶಸ್ವಿಯಾಗುವುದರ ಬದಲಿಗೆ ಹಳ್ಳ ಹಿಡಿದು ಬಿಡುತ್ತಿತ್ತು.ಆದರೆ ಮೋದಿಜೀ ಎಲ್ಲವನ್ನೂ ಯೋಚಿಸಿ ಹೊಸ ನೋಟಿನ ಕೊರತೆಯನ್ನು ಹಾಗೆ ಉಳಿಸಿ ಕೊಂಡಿದ್ದರು. ಕಾರಣ ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು.ಕಪ್ಪು ಹಣವನ್ನು ಸಂಪೂರ್ಣವಾಗಿ ತಡೆದು ಭ್ರಷ್ಟಾಚಾರ ಮುಕ್ತ ಭಾರತವನ್ನಾಗಿಸಲು ನಾವು ” ಕ್ಯಾಶ್ ಲೆಸ್ ” ಆಗಲೇ ಬೇಕೆಂದು.

ಇಡಿಯ ದೇಶ ಆರ್ಥಿಕ ಮಹಾ ಕ್ರಾಂತಿಯ ಯಶಸ್ವಿಗೆ ಕ್ಯಾಶ್ ಲೆಸ್ ಆಗುವಲ್ಲಿ ತುರ್ತಾಗಿ ಹೊಸದೊಂದು ಹೆಜ್ಜೆ ಇಡಲೇ ಬೇಕಿತ್ತು.ಹೀಗಾಗಿ ಯುವಾ ಬ್ರಿಗೇಡ್ ಬ್ಲ್ಯಾಕ್ ಅಂಡ್ ವೈಟ್ ಕಾರ್ಯಕ್ರಮದ ನಂತರ ತುರ್ತಾಗಿ ಕ್ಯಾಶ್ ಲೆಸ್ ದುನಿಯಾ ಜನ ಜಾಗೃತಿ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಆಯೋಜಿಸಿತು‌‌‌. ಪ್ರತಿ ನೋಟಿನ ಹೆಜ್ಜೆ ಗುರುತು ಸಿಗುತ್ತವೆ ಎಂದಾದರೆ ಭ್ರಷ್ಟಾಚಾರ ಮುಕ್ತ ಭಾರತ, ಭಯೋತ್ಪಾದನಾ ಮುಕ್ತ ಭಾರತ ಆಗುವುದರಲ್ಲಿ ಅನುಮಾನವಿಲ್ಲ.ಆದರೆ ಇದೆಲ್ಲವೂ ಆಗಬೇಕಾದರೆ ಶ್ರೀ ಸಾಮಾನ್ಯ ಜಾಗೃತನಾಗಬೇಕಾದ ಅನಿವಾರ್ಯತೆ ಇತ್ತು. ಈ ಅನಿವಾರ್ಯತೆಯನ್ನು ಹೋಗಲಾಡಿಸಲು ಯುವಾ ಬ್ರಿಗೇಡ್ ಈ ಜಾಗೃತಿಯ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ಹಮ್ಮಿಕೊಂಡಿತು.

ಕ್ಯಾಶ್ ಲೆಸ್ನ ಮೊದಲ ಕಾರ್ಯಕ್ರಮ ಪ್ರಾರಂಭವಾಗಿದ್ದು ಕೇರಳದ ಕಾಸರಗೋಡಿನಿಂದ. ಕ್ಯಾಶ್ ಲೆಸ್ ಆಗುವತ್ತ ಕಾಸರಗೋಡಿನ ಜನ ಉತ್ಸುಕರಾಗಿದ್ದರು.ಬಡವರಿಗೆ ತೊಂದರೆ ಎಂದು ಬೊಬ್ಬೆ ಹೊಡೆಯುತ್ತಿದ್ದವನ್ನು ನೆನಪಿಸಿ ಕೊಂಡಾಗ ತೊಂದರೆ ಆಗುತ್ತಿರುವುದು ನಿಜವಾಗಿ ಯಾರಿಗೆ ಎನ್ನುವುದು ಸ್ಪಷ್ಟವಾಗುತ್ತದೆ. ಬಡವ ಎಲ್ಲ ಬದಲಾವಣೆಗೆ ಸಜ್ಜಾಗಿ ನಿಂತಿದ್ದಾನೆ. ಅವನಿಗೆ ದಾರಿತಪ್ಪಿಸುವುದರ ಬದಲು ಒಂದಿಷ್ಟು ತಿಳಿ ಹೇಳುವುವವರ ಅಗತ್ಯವಿದೆ. ಯುವಾ ಬ್ರಿಗೇಡ್ ಅದನ್ನೇ ತಿಳಿಸುವ ಪ್ರಯತ್ನ ಮಾಡಿದ್ದು.

ಕಾರ್ಯಕ್ರಮಗಳಿಗೆ ಕೊಪ್ಪಳ, ರಾಯಚೂರು, ಬಾಗಲಕೋಟೆಗಳಲ್ಲೂ ಜನ ಉತ್ತಮ ಬೆಂಬಲ ನೀಡಿದರು.ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಕ್ಯಾಶ್ ಲೆಸ್ ದುನಿಯಾ ಕಾರ್ಯಕ್ರಮಕ್ಕೆ ಕಿವಿಯಾದರು‌.ತದನಂತರ ಗದಗಿನಲ್ಲಿ ಐದು ಸಾವಿರಕ್ಕೂ ಹೆಚ್ಚು ಜನ ಕಾರ್ಯಕ್ರಮ ನೋಡುವ ಮೂಲಕ ದೇಶ ಕ್ಯಾಶ್ ಲೆಸ್ ಆಗುವುದಕ್ಕೆ ತಮ್ಮ ಬೆಂಬಲ ಸೂಚಿಸಿದರು. ಉಡುಪಿಯಲ್ಲಿ ಸಾರ್ವಜನಿಕವಾಗಿ ಕಾರ್ಯಕ್ರಮ ನಡೆಯಲು ಅನುಮತಿ ಸಿಗದೇ ಹೋದರೂ, ಮೀನುಗಾರರ ಸಂಘ ಮಾತ್ರ ನಾವು ದೇಶದ ಆರ್ಥಿಕ ಕ್ರಾಂತಿಗೆ ಕ್ಯಾಶ್ ಲೆಸ್ ಆಗಲು ಸಿದ್ಧ ಎನ್ನುವುದನ್ನು ವಿರೋಧದ ನಡುವೆಯೂ ಕಾರ್ಯಕ್ರಮ ಆಯೋಜಿಸುವ ಮೂಲಕ ತೋರಿಸಿ ಕೊಟ್ಟಿದ್ದರು.

ಚಿಕ್ಕಬಳ್ಳಾಪುರ, ಕೋಲಾರದಲ್ಲೂ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.ನಂತರದ ಕಾರ್ಯಕ್ರಮಗಳು ನಡೆದದ್ದು ಮಂಡ್ಯ, ವಿಜಯಪುರದಲ್ಲಿ. ರಾಜಕೀಯ ಮತ್ತು ಸಿನಿಮಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮಂಡ್ಯದ ಜನ ರಾಷ್ಟ್ರದ ಉನ್ನತಿಯ ಈ ಮಹಾ ಕ್ರಾಂತಿಯಲ್ಲಿ ನಾವು ಹಿಂದಿಲ್ಲ ಎನ್ನುವುದನ್ನು ತೋರಿಸಿದ್ದರು. ವಿಜಯಪುರದಲ್ಲಿ ಅಂದಾಜು ಹತ್ತು ಸಾವಿರ ಜನ ಸೇರುವ ಮೂಲಕ ಮೋದಿಜೀಯ ಈ ದಿಟ್ಟ ಹೆಜ್ಜೆಗೆ ನಾವು ಜೊತೆಗಿದ್ದೇವೆ ಎನ್ನುವುದನ್ನು ಸಾಬೀತು ಪಡಿಸಿದರು. ಕ್ಯಾಶ್ ಲೆಸ್ ದುನಿಯಾದ ಕೊನೆಯ ಕಾರ್ಯಕ್ರಮ ನಡೆದದ್ದು ಬೆಂಗಳೂರಿನ ಸಹಕಾರನಗರದಲ್ಲಿ. ಬೆಂಗಳೂರಿನಲ್ಲಿ ಜನ ಸೇರುವುದು ಹೆಚ್ಚಿನ ಸಮಯದಲ್ಲಿ ವಿರಳವೆ. ಅಂತಹದರಲ್ಲೂ ಬೆಂಗಳೂರಿನ ಸಹಕಾರನಗರದಲ್ಲಿ ಸೇರಿದ್ದ ಜನರ ಉತ್ಸಾಹ ನೋಡಿದರೆ ಆರು ತಿಂಗಳುಗಳಲ್ಲಿ ಬೆಂಗಳೂರು ಲೆಸ್ ಕ್ಯಾಶ್ ಆಗುವುದರಲ್ಲಿ ಅನುಮಾನವಿಲ್ಲ ಎಂದೆನಿಸುತ್ತದೆ.

x

y

ರಾಜ್ಯಾದ್ಯಂತ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದ ಯುವಾ ಬ್ರಿಗೇಡ್ ಮುಂದಿನ ಕಾರ್ಯಕ್ರಮವಾಗಿ ಕ್ಯಾಶ್ ಲೆಸ್ ಅಭ್ಯಾಸ ವರ್ಗ ಮತ್ತು ಒಂದಿಷ್ಟು ಹಳ್ಳಿಗಳನ್ನು ಕ್ಯಾಶ್ ಲೆಸ್ ಹಳ್ಳಿಯಾಗಿಸುವ ನಿಟ್ಟಿನಲ್ಲಿ ಮತ್ತೆ ಹೊಸದೊಂದು ಹೆಜ್ಜೆ ಇಟ್ಟಿದೆ.

Leave a Reply

Your email address will not be published. Required fields are marked *

You May Also Like

ಸಂಭ್ರಮ ದಿವಸ್

ಪ್ರತಿಯೊಂದು ಸಂಭ್ರಮದ ಆಚರಣೆಯ ಹಿನ್ನೆಲೆಯಲ್ಲಿ ಒಂದು ಸಂತೋಷದ ಘಟನೆಯಿರುತ್ತದೆ. ಅಂತಹ ಒಂದು ಸಂತೋಷದ ವಾತಾವರಣ ದೇಶದೆಲ್ಲೆಡೆ ಇದ್ದಾಗ ಸಂಭ್ರಮ ಜೋರಾಗಿಯೇ ಇರುತ್ತದೆ. ಮೋದಿಜೀಯವರು 500 ಮತ್ತು 1000 ದ ನೋಟುಗಳನ್ನು ನಿಷೇಧಿಸಿದ್ದರಿಂದ ಕಪ್ಪುಹಣ ಇಟ್ಟವರಲ್ಲಿ ಭಯ ಶುರುವಾಯಿತು. ಇಟ್ಟ ಹಣ ಹಲವಾರು…
View Post

ಕನ್ನಡವೇ ಸತ್ಯ

ನವೆಂಬರ್ ಬಂತೆಂದರೆ ಎಲ್ಲೆಲ್ಲೂ ನಾಡಹಬ್ಬದ ಸಡಗರ. ನಾಡಿನ, ನುಡಿಯ ಆರಾಧನೆ ಮಾಸಾದ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.ಆದರೆ ನವೆಂಬರ್ ಒಂದರ ಕನ್ನಡಿಗರಾಗುವುದಕ್ಕಿಂತ ನಂಬರ್ ಒನ್ ಕನ್ನಡಿಗರಾಗುವುದು ಅತ್ಯಂತ ಅವಶ್ಯಕ ಹಾಗು ಸೂಕ್ತವೆಂದು ನಂಬಿರುವ ಯುವಾಬ್ರಿಗೇಡ್ ಈ ಬಾರಿಯ ರಾಜ್ಯೋತ್ಸವವನ್ನು ತುಂಬಾ ವಿಶೇಷವಾಗಿ ಆಚರಿಸಿ ಹೊಸ…
View Post

ಭುವನ ದೀಪ

“ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ರಾಷ್ಟ್ರಕವಿ ಕುವೆಂಪು ಅವರ ಈ ನಾಡಗೀತೆ ಆಲಿಸಿದಾಗಲೆಲ್ಲ ಮೈಮನದಲಿ ಪುಳಕ ! ಹೌದು, ನಮ್ಮ ನಾಡಿನ ಹಿರಿಮೆಯೇ ಅಂತದ್ದು,ತನ್ನ ಸಾರಸ್ವತ , ಕಲಾತ್ಮಕ, ನೈಸರ್ಗಿಕ, ಕೈಗಾರಿಕ ಶ್ರೀಮಂತಿಕೆಯ ಮೂಲಕ ವಿಶ್ವಭಾರತಿಗೆ ಅವಿರತವಾಗಿ ಕನ್ನಡದಾರತಿಯ ಬೆಳಗುತ್ತಿರುವ…
View Post