ಕನ್ನಡವೇ ಸತ್ಯ

Total
0
Shares

ನವೆಂಬರ್ ಬಂತೆಂದರೆ ಎಲ್ಲೆಲ್ಲೂ ನಾಡಹಬ್ಬದ ಸಡಗರ. ನಾಡಿನ, ನುಡಿಯ ಆರಾಧನೆ ಮಾಸಾದ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.ಆದರೆ ನವೆಂಬರ್ ಒಂದರ ಕನ್ನಡಿಗರಾಗುವುದಕ್ಕಿಂತ ನಂಬರ್ ಒನ್ ಕನ್ನಡಿಗರಾಗುವುದು ಅತ್ಯಂತ ಅವಶ್ಯಕ ಹಾಗು ಸೂಕ್ತವೆಂದು ನಂಬಿರುವ ಯುವಾಬ್ರಿಗೇಡ್ ಈ ಬಾರಿಯ ರಾಜ್ಯೋತ್ಸವವನ್ನು ತುಂಬಾ ವಿಶೇಷವಾಗಿ ಆಚರಿಸಿ ಹೊಸ ಆಯಾಮಕ್ಕೆ ನಾಂದಿ ಹಾಡಿತು.

ತ್ವರಿತವಾಗಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ತಮ್ಮ ಅತ್ಯಾಧುನಿಕ ಜಂಗಮವಾಣಿಗಳ ಮೂಲಕ ವಿಶ್ವದ ಆಗು-ಹೋಗುಗಳನೆಲ್ಲ ಅಂಗೈನಲ್ಲಿ ದಕ್ಕಿಸಿಕೊಳ್ಳುವ ಇಂದಿನ ಜನಾಂಗಕ್ಕೆ ಜನಪ್ರಿಯ ಸಾಮಾಜಿಕ ಜಾಲತಾಣವಾದ “ಟ್ವಿಟರ್” ಮೂಲಕ ಕನ್ನಡಪರ ಕಾಳಜಿಯನ್ನು ರಾಷ್ಟ್ರಮಟ್ಟದಲ್ಲಿ ವ್ಯಕ್ತಪಡಿಸುವ ಹೊಸ ಸಂಕಲ್ಪಕ್ಕೆ ಯುವಾಬ್ರಿಗೇಡ್ ಕೈ ಹಾಕಿತು. ಕನ್ನಡನಾಡಿನ ಐತಿಹಾಸಿಕ, ಸಾಂಸೃತಿಕ, ಸಾಹಿತ್ಯಿಕ, ಬೌದ್ಧಿಕ, ನೈರ್ಸಗಿಕ ಸಂಪತ್ತಿನ ಕುರಿತಾದ ಅನೇಕ ಹೆಮ್ಮೆಯ ವಿಷಯಗಳನ್ನು ‘#ಕನ್ನಡವೇ ಸತ್ಯ‘ವೆಂಬ ಅಡಿರ್ಶೀಷಿಕೆಯೊಂದಿಗೆ ನಮ್ಮ ಕಾರ್ಯಕರ್ತರು ರಾಜ್ಯದ ಮೂಲೆ ಮೂಲೆಯಿಂದ ನವೆಂಬರ್ ಒಂದರ ಮುಂಜಾನೆ ಟ್ವೀಟ್ ಮಾಡುವ ಹೊಸ ಸಾಹಸಕ್ಕೆ ಅಣಿಯಾದರು. ನವೆಂಬರ್ 1ರ ಮುಂಜಾನೆಯ ನಸುಕಿನಲ್ಲಿ ಶುರುವಾದ ಕನ್ನಡಮ್ಮನ ಯಶೋಗಾಥೆಯ ಟ್ವೀಟ್ ಸರಮಾಲೆಗಳು ನೋಡನೋಡುತ್ತಿದ್ದಂತೆ ಐದುಲಕ್ಷಕ್ಕೂ ಹೆಚ್ಚು ಸಂಖ್ಯೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಟ್ವಿಟರ್ನ ಪ್ರಮುಖ ಸುದ್ದಿಯಾಗಿ ಸುಮಾರು ಹತ್ತು ಗಂಟೆಗಳ ಕಾಲ ರಾರಾಜಿಸಿ ತನ್ಮೂಲಕ ಕನ್ನಡ ಡಿಂಡಿಮವನ್ನು ದೇಶದೆಲ್ಲೆಡೆ ಮೊಳಗಿಸಿತು.

asdf

14925254_1111765458921447_630730010936720810_n

ಸದಾ ಇಂಗ್ಲಿಷ್ ಮತ್ತಿತರ ಭಾಷೆಗಳಿಂದ ತುಂಬಿಹೋಗಿದ್ದ ಟ್ವಿಟರ್‍ನಲ್ಲಿ ಮೊದಲನೆಯ ಸುದ್ದಿಯಾಗಿ ಕನ್ನಡದ ಅಕ್ಷರಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಕೇವಲ ನಮ್ಮ ಕಾರ್ಯಕರ್ತರು ಮಾತ್ರವಲ್ಲದೆ ಇತರ ಅನೇಕ ಕನ್ನಡ ಅಭಿಮಾನಿಗಳು ನಮ್ಮೊಂದಿಗೆ ಈ ಸಾಹಸದಲ್ಲಿ ಕೈ ಜೋಡಿಸಿದರು. ಮಹಾರಾಷ್ಟ್ರ,ಕೇರಳ,ಗೋವಾ, ದೆಹಲಿಯ ಕನ್ನಡಿಗರು ಟ್ವೀಟಿಸಿ ಪ್ರತಿಸ್ಪಂದಿಸಿದರು. ಆಧುನಿಕ ಸಂವಾಹನ ಮಾಧ್ಯಮ ಜಗತ್ತಿನಲ್ಲಿ ಹೊಸ ದಾಖಲೆ ನಿರ್ಮಿಸಿದ “ಕನ್ನಡವೇ ಸತ್ಯ” ಪರೋಕ್ಷವಾಗಿ ನಮ್ಮೆಲ್ಲರಿಗು ಕನ್ನಡ ನಾಡು-ನುಡಿಯ ಐಸಿರಿಯನ್ನು ಮತ್ತೆ ಮೆಲುಕುಹಾಕುವಂತೆ ಮಾಡಿ ಕೃತಾರ್ಥ ಭಾವ ಮೂಡಿಸಿತು.

Leave a Reply

Your email address will not be published. Required fields are marked *

You May Also Like

ಸಂಭ್ರಮ ದಿವಸ್

ಪ್ರತಿಯೊಂದು ಸಂಭ್ರಮದ ಆಚರಣೆಯ ಹಿನ್ನೆಲೆಯಲ್ಲಿ ಒಂದು ಸಂತೋಷದ ಘಟನೆಯಿರುತ್ತದೆ. ಅಂತಹ ಒಂದು ಸಂತೋಷದ ವಾತಾವರಣ ದೇಶದೆಲ್ಲೆಡೆ ಇದ್ದಾಗ ಸಂಭ್ರಮ ಜೋರಾಗಿಯೇ ಇರುತ್ತದೆ. ಮೋದಿಜೀಯವರು 500 ಮತ್ತು 1000 ದ ನೋಟುಗಳನ್ನು ನಿಷೇಧಿಸಿದ್ದರಿಂದ ಕಪ್ಪುಹಣ ಇಟ್ಟವರಲ್ಲಿ ಭಯ ಶುರುವಾಯಿತು. ಇಟ್ಟ ಹಣ ಹಲವಾರು…
View Post

ಕ್ಯಾಶ್ ಲೆಸ್ ದುನಿಯಾ

ಪ್ರಧಾನ ಮಂತ್ರಿ ತೆಗೆದುಕೊಂಡ ಅರ್ಥ ವ್ಯವಸ್ಥೆಯ ಮಹಾ ಕ್ರಾಂತಿಯಿಂದಾಗಿ ದೊಡ್ಡ ಮುಖಬೆಲೆಯ ನೋಟುಗಳು ಮೌಲ್ಯ ಕಳೆದುಕೊಂಡಿತು. ಆಗಲೇ ಕಾಳಧನಿಕರ ಆಕ್ರೋಶ ತೀವ್ರವಾಗಿದ್ದು.ಇವರ ಆಕ್ರೋಶವನ್ನು ಬಡವರ ತಲೆಗೆ ಕಟ್ಟುವ ಎಲ್ಲ ಪ್ರಯತ್ನಗಳು ನಡೆದವು. ಇಂತಹ ಸಮಯದಲ್ಲಿ ಜನ ಸಾಮಾನ್ಯರಿಗೆ ತುರ್ತಾಗಿ ಯೋಜನೆಯ ಸಾಧಕ-…
View Post

ಭುವನ ದೀಪ

“ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ರಾಷ್ಟ್ರಕವಿ ಕುವೆಂಪು ಅವರ ಈ ನಾಡಗೀತೆ ಆಲಿಸಿದಾಗಲೆಲ್ಲ ಮೈಮನದಲಿ ಪುಳಕ ! ಹೌದು, ನಮ್ಮ ನಾಡಿನ ಹಿರಿಮೆಯೇ ಅಂತದ್ದು,ತನ್ನ ಸಾರಸ್ವತ , ಕಲಾತ್ಮಕ, ನೈಸರ್ಗಿಕ, ಕೈಗಾರಿಕ ಶ್ರೀಮಂತಿಕೆಯ ಮೂಲಕ ವಿಶ್ವಭಾರತಿಗೆ ಅವಿರತವಾಗಿ ಕನ್ನಡದಾರತಿಯ ಬೆಳಗುತ್ತಿರುವ…
View Post