SVANSS – ಬಳ್ಳಾರಿ/ಶಿವಮೊಗ್ಗ

Total
0
Shares

ಸ್ವಾಮಿ ವಿವೇಕಾನಂದರ ಪ್ರಿಯ ಶಿಷ್ಯೆ ನಿವೇದಿತಾ ಅಕ್ಕನ ನೂರೈವತ್ತನೇ ಜಯಂತಿಯನ್ನು ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ಅತ್ಯಂತ ವಿಭಿನ್ನ ಮತ್ತು  ಅರ್ಥಪೂರ್ಣವಾಗಿ ಆಚರಿಸಬೇಕೆಂದು ಅದಾಗಲೇ ನಿರ್ಣಯಿಸಿಯಾಗಿತ್ತು. ಅದರ ಮೂರ್ತ ರೂಪವೇ ಈ ಸಾಹಿತ್ಯ ಸಮ್ಮೇಳನ. ಮಂಗಳೂರಿನಲ್ಲಿ ಉದ್ಘಾಟನೆಗೊಂಡ ಈ ಸಾಹಿತ್ಯ ಸಮ್ಮೇಳನ ಬೇರೆ ಬೇರೆ ಜಿಲ್ಲೆಗಳನ್ನು ಸಂಚರಿಸಿದೆ.

ಆಗಸ್ಟ  5 ರಂದು ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾರ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ಬಹಳ ಅದ್ಧೂರಿಯಿಂದ ಜರುಗಿತು. ಬೆಳೆಗ್ಗೆ 9 ಘಂಟೆಗೆ ನಗರದ ದುರ್ಗಮ್ಮ ದೇವಿ ದೇವಸ್ಥಾನದಿಂದ ವಿವೇಕಾನಂದ ಮತ್ತು ನಿವೇದಿತೆಯರ ಪ್ರಕಟಿತ ಸಾಹಿತ್ಯಗಳ ಪಲ್ಲಕ್ಕಿ ಮೆರವಣಿಗೆಯ ಮೂಲಕ ಕಾರ್ಯಕ್ರಮ ಆರಂಭವಾಯಿತು. ಪರಮ ಪೂಜ್ಯ ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್ ರವರು ಸಾಹಿತ್ಯ ಹೊತ್ತ ಪಲ್ಲಕ್ಕಿಗೆ ಪುಷ್ಪಾರ್ಚನೆ ಮಾಡಿ ಮರವಣಿಗೆಗೆ ಚಾಲನೆ ನೀಡಿದರು.ಬಸವ ಭವನದ ಆವರಣದಲ್ಲಿ ಆಯೋಜಿಸಲಾಗಿದ್ದ “ಪಶ್ಚಿಮದಲ್ಲಿ ವಿವೇಕಾನಂದ ಪೂರ್ವದಲ್ಲಿ ನಿವೇದಿತಾ ” ವಸ್ತು ಪ್ರದರ್ಶನ ಅತಿಥಿಗಳ ಮತ್ತು ವಿದ್ಯಾರ್ಥಿಗಳ ಗಮನ ಸೆಳೆಯಿತು.

ಬೆಳಿಗ್ಗೆ 11.00ಘಂಟೆಗೆ ಸರಿಯಾಗಿ ವೇದ ಘೋಷಗಳೊಂದಿಗೆ ಬೆಳಗುವ ಜ್ಯೋತಿಗೆ ತೈಲಧಾರೆ ಮಾಡುವ ಮುಖಾಂತರ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಗಂಗಾವತಿ ಪ್ರಾಣೇಶ್ ರವರು ಸಮ್ಮೇಳನವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಭಗಿನಿ ನಿವೇದಿತೆಯ ಪುಸ್ತಕಗಳನ್ನು ಕನ್ನಡಕ್ಕೆ ಪರಿಚಯಿಸಿದ ಮೈಸೂರು ರಾಮಕೃಷ್ಣಾಶ್ರಮದ ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಯುವಾ ಬ್ರಿಗೇಡ್ ನ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಸಾಹಿತ್ಯ ಸಮ್ಮೇಳನದ ಮಹತ್ವ ಮತ್ತು ಉದ್ದೇಶವನ್ನು ಜನರಿಗೆ ತಿಳಿಸಿಕೊಟ್ಟರು. ನಂತರ ಕಾರ್ಯಕ್ರಮದ ಉದ್ಘಾಟನಾ ನುಡಿಗಳನ್ನು ಶ್ರೀ ಗಂಗಾವತಿ ಪ್ರಾಣೇಶ್ ರವರು ನುಡಿದು ಅಪಾರ ಮೆಚ್ಚುಗೆಗೆ ಪಾತ್ರರಾದರು.

20637840_1525307984179447_2995064829669517306_n

20637865_1525307814179464_5937174416329286352_n

20663810_1525307270846185_3627995899655653287_n

20707911_1525307497512829_1833238798152289565_n

20708310_1525307577512821_1006137490714686422_n

 

ಕಾರ್ಯಕ್ರಮದಲ್ಲಿ ಎರಡು ವಿಶಿಷ್ಟ ಗೋಷ್ಠಿಗಳು ಮತ್ತು ಎರಡು ಸಮಾನಾಂತರ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಮೊದಲನೇ ಗೋಷ್ಠಿ ವಿವೇಕ ನಿವೇದನಾದಲ್ಲಿ ಜಿಜ್ಞಾಸು ಶಿಷ್ಯೆ ಮಹಾ ಜ್ಞಾನಿ ಗುರು ವಿಷಯವಾಗಿ ಸಂಸ್ಕೃತ ವಿದುಷಿಗಳಾದ ಡಾ,ಆರತಿ ಅವರು, ಎರಡನೇ ವಿಷಯ ಮಹಾಪರಿವರ್ತನೆ ಎಂಬುದರ ಬಗ್ಗೆ ಹೊಸಕೋಟೆ ಶಾರದಾಶ್ರಮದ ಮಾತಾಜಿ ಬ್ರಹ್ಮಮಯಿಯವರು, ಮೂರನೆಯ ವಿಷಯ ವಜ್ರಕ್ಕಿಂತಲೂ ಕಠು ಹೂವಿಗಿಂತಲೂ ಮೃದು ಎಂಬುದರ ಬಗ್ಗೆ ಹಲಸೂರು ಆಶ್ರಮದ ಸ್ವಾಮಿ ತ್ಯಾಗೀಶ್ವರಾನಂದಜಿ ಮಹಾರಾಜ್ ಇವರು ಮಾತನಾಡಿದರು. ಎರಡನೇ ಗೋಷ್ಠಿ ಸೇವೆ ಮತ್ತು ರಾಷ್ಟ್ರಭಕ್ತಿಯಲ್ಲಿ ಅದಮ್ಯ ರಾಷ್ಟ್ರಭಕ್ತಿ ಎಂಬುದರ ಕುರಿತು ರಾಮಕೃಷ್ಣ ಮಿಷನ್ ನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮೇಶ್ ಉಮರಾಣಿಯವರು, ಸೇವಾ ಯಜ್ಞದ ಸಮಿಧೆ ಎಂಬ ವಿಷಯದ ಕುರಿತಾಗಿ ಯುವಾ ಬ್ರಿಗೇಡ್ ನ ರಾಜ್ಯ ಸಂಚಾಲಕಾರದ ಶ್ರೀ ನಿತ್ಯಾನಂದ ವಿವೇಕವಂಶಿಯವರು ಮಾತನಾಡಿದರು. ಎರಡೂ ಗೋಷ್ಠಿಗಳಲ್ಲಿ ವಿವೇಕಾನಂದ ಮತ್ತು ನಿವೇದಿತೆಯರ ಚಿಂತನೆಗಳು ಈ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಹೇಗೆ ಪೂರಕವಾಗಿವೆ ಎಂಬುದರ ಬಗ್ಗೆ ಯುವ ಸಮೂಹಕ್ಕೆ ತಿಳಿಸಿಕೊಡಲಾಯಿತು.

20622094_1525363084173937_3797083195779517965_n 20622125_1525310317512547_3373828906490037981_n 20622290_1525363127507266_4375085541429599071_n 20638211_1525310367512542_4294571433914184879_n 20638745_1525310227512556_1413074445484426229_n20622037_1525363234173922_9061795651241750226_n

ಇನ್ನೂ ಎಚ್.ಐ.ವಿ ಪೀಡಿತರೊಂದಿಗೆ ಮತ್ತು ಯುವ ವೈದ್ಯರೊಂದಿಗೆ ನಡೆದ ಎರಡು ಸಮಾನಾಂತರ ಗೋಷ್ಠಿಗಳು ಯುವಕರ ಮತ್ತು ಎಚ್.ಐ.ವಿ ಪೀಡಿತರಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ತುಂಬುತ್ತ ಜೀವನವನ್ನು ಸ್ಫೂರ್ತಿಯುತವಾಗಿ ಮತ್ತು ಆದರ್ಶಮಯವಾಗಿ ನಡೆಸುವ ಬಗ್ಗೆ ತಿಳಿಸುವಲ್ಲಿ ಯಶಸ್ವಿಯಾಯಿತು. ಈ ಮಧ್ಯೆ ಯುವಕರಿಗೋಸ್ಕರ ಆಯೋಜಿಸಿದ್ದ ಕವನವಾಚನ ಕಾರ್ಯಕ್ರಮ ಯುವಕರಲ್ಲಿರುವ ಕ್ರಿಯಾಶೀಲತೆಯನ್ನು ಅನಾವರಣಗೊಳಿಸಿತು. ಹೊಸಪೇಟೆ ರಾಮಕೃಷ್ಣ ಗೀತಾಶ್ರಮದ ಸ್ವಾಮಿ ಸುಮೇಧಾನಂದಜಿ ಮಹಾರಾಜ್ ಅವರು ನಡೆಸಿಕೊಟ್ಟ ವಿವೇಕ ಸಂಗೀತ ಅತ್ಯಂತ ಸುಮಧುರವಾಗಿ ಮೂಡಿ ಬಂದಿತು. ಸಂಜೆ 5.00 ಘಂಟೆಗೆ ಸಮ್ಮೇಳನದ ಸಮಾರೋಪ ಕಾರ್ಯಕ್ರಮ ಜರುಗಿತು. ಸಮಾರೋಪದ ನುಡಿಗಳನ್ನಾಡಿದ ಸಮ್ಮೇಳನಾಧ್ಯಕ್ಷರಾದ ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್ ಸಮ್ಮೇಳನದ ಸಾರ್ಥಕತೆಯ ಬಗ್ಗೆ ಮಾತನಾಡಿದರು. ನಂತರ ರಾಷ್ಟ್ರಕವಿ ಕುವೆಂಪುರವರು ರಚಿಸಿದ ಸನ್ಯಾಸಿ ಗೀತೆಯನ್ನು ವೇದಿಕೆಯ ಮೇಲೆ ಎಲ್ಲ ಸಂತರು, ಕಾರ್ಯಕರ್ತರು ಹಾಡುವ ಮೂಲಕ ಸಮ್ಮೇಳನ ಸಮಾರೋಪಗೊಂಡಿತು.

20638703_1525309960845916_4572741404725307863_n

ಸಂಜೆ ಸೋದರಿ ಅಶ್ವಿನಿ ಅಂಗಡಿ ಮುನ್ನಡೆಸುತ್ತಿರುವ ಬೆಳಕು ಅಕಾಡೆಮಿಯ ಅಂಧ ಮಕ್ಕಳು ನಡೆಸಿಕೊಟ್ಟ ವಿಶಿಷ್ಟ ಯೋಗ ಪ್ರದರ್ಶನ ಮತ್ತು ಶ್ರೀ ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದಲ್ಲಿ ಭಾರತದ ಅಸ್ಮಿತೆಯನ್ನು ಬಿಂಬಿಸುವ “ನರೇಂದ್ರ ಭಾರತ” ವಿಶಿಷ್ಟ ಕಾರ್ಯಕ್ರಮ ಜನ ಮನ ಸೂರೆಗೊಂಡಿತು. ಸಮ್ಮೇಳನದ ಆರಂಭದಿಂದಲೂ ಕೊನೆಯವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ಪಾಲ್ಗೊಂಡು ಸಮ್ಮೇಳನದ ಮೆರಗನ್ನು ಹೆಚ್ಚಿಸಿದ್ದರು.

20622332_1525308247512754_4962723076663708652_n

20727904_1525310404179205_2790930759023481010_n

ಒಟ್ಟಿನಲ್ಲಿ ಬಳ್ಳಾರಿಯಲ್ಲಿ ಜರುಗಿದ ಈ ಸಾಹಿತ್ಯ ಸಮ್ಮೇಳನ, ಸ್ವಾಮಿ ವಿವೇಕಾನಂದರ ಮತ್ತು ಅಕ್ಕ ನಿವೇದಿತೆಯರ ಚಿಂತನೆಗಳನ್ನು ಯುವ ಸಮುದಾಯಕ್ಕೆ ಮುಟ್ಟಿಸುವಲ್ಲಿ ಯಶಸ್ವಿಯಾಯಿತು. ಬಳ್ಳಾರಿಯ ಸಾಹಿತ್ಯ ಲೋಕಕ್ಕೆ ಹೊಸ ಚಿಂತನೆಯ ಭಾಷ್ಯ ಬರೆಯಲು ನಾಂದಿಯಾಯಿತು.

ಬಳ್ಳಾರಿಯ ನಂತರ ಶಿವಮೊಗ್ಗಕ್ಕೆ ಕಾಲಿಟ್ಟಿತು ಸಾಹಿತ್ಯ ಉತ್ಸವ. ಆಗಸ್ಟ್ 17 ರಂದು ಶಿವಮೊಗ್ಗದಲ್ಲಿ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ನೆರವೇರಿತು. ಎಲ್ಲೆಡೆಯಂತೆ ಸಮ್ಮೇಳನ ಪಲ್ಲಕ್ಕಿ ಉತ್ಸವದ ಮೂಲಕ ಪ್ರಾರಂಭಗೊಂಡಿತು. ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿನಯಾನಂದ ಸರಸ್ವತಿ ಸ್ವಾಮೀಜಿ ಮತ್ತು ಧಾರವಾಡ ರಾಮಕೃಷ್ಣ ಆಶ್ರಮದ ವಿಜಯಾನಂದ ಸರಸ್ವತಿಯವರು ಪಲ್ಲಕ್ಕಿ ಉತ್ಸವವನ್ನು ಉದ್ಘಾಟಿಸಿದರು. ವಿವೇಕಾನಂದ-ನಿವೇದಿತೆಯರ ಬದುಕಿನ ಕುರಿತ ಪ್ರದರ್ಶಿನಿಯನ್ನು ಶಿವಮೊಗ್ಗದ ಜೆ.ಎನ್.ಎನ್.ಸಿ.ಇ ಕಾಲೇಜಿನ ಪ್ರಾಂಶುಪಾಲರಾದ ಮಹಾದೇವಸ್ವಾಮಿ ಮತ್ತು ಅಜೇಯ ಪತ್ರಿಕೆಯ ಸಂಪಾದಕ ಶ್ರೀನಿವಾಸ್ ಅವರು ಉದ್ಘಾಟಿಸಿದರು. ಕೆ.ಎಸ್. ನಾರಾಯಣಾಚಾರ್ಯರು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಜಯಾನಂದ ಸರಸ್ವತಿ ಸ್ವಾಮೀಜಿ ಸಮ್ಮೇಳನವನ್ನು ಉದ್ಘಾಟಿಸಿದರು.

20819688_1491552367619018_6129054653298505246_o

20840716_1491552204285701_8970084365391077137_n

20861627_1491552610952327_7784556839879020587_o

20900981_1491552024285719_1932423313480314531_o

ಮೊದಲನೇ ಗೋಷ್ಠಿಯಲ್ಲಿ ಮೂವರು ಅತಿಥಿಗಳು ವಿವೇಕಾನಂದ-ನಿವೇದಿತೆಯರ ಬದುಕನ್ನು ತೆರೆದಿಟ್ಟರು. ವಿವೇಕಹಂಸದ ಶ್ರೀ ರಘು ವೆಂಕಟಾಚಲ ಅವರು ಜಗತ್ಪ್ರಸಿದ್ಧ ವಿವೇಕಾನಂದ ಎಂಬ ವಿಷಯದ ಮೇಲೆ ಮಾತನಾಡಿದರು. ತೀರ್ಥಹಳ್ಳಿಯ ಶ್ರೀ ಜಯಶೀಲ ಅವರು ಮಾರ್ಗರೇಟಳ ಮೇಲೆ ವಿವೇಕ ಪ್ರಕಾಶ ವಿಷಯವನ್ನು ಕುರಿತು ಮಾತನಾಡಿದರು. ಯುವಾಬ್ರಿಗೇಡ್ನ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ನಿವೇದಿತೆಯ ಸಾಂಸ್ಕೃತಿಕ ತಾಕಲಾಟಗಳ ಮೇಲೆ ವಿಜಯ ಎಂಬ ವಿಷಯದ ಕುರಿತು ಮಾತನಾಡಿದರು. ಎರಡನೇ ಗೋಷ್ಠಿಯಲ್ಲಿ ಬೆಂಗಳೂರಿನ ಪ್ರಸಿದ್ಧ ಗಾಯಕರಾದ ವಿದ್ವಾನ್ ಕೃಷ್ಣಪ್ರಸಾದ್ ಅವರು ವಿವೇಕ ಸಂಗೀತವನ್ನು ನೆರವೇರಿಸಿಕೊಟ್ಟರು. ತಾವೇ ವಿವೇಕಾನಂದರ ಮೇಲೆ ಕೃತಿಯನ್ನು ರಚಿಸಿ ಸಂಗೀತ ಸಂಯೋಜನೆಯನ್ನು ಮಾಡಿ ಜನರ ಮುಂದೆ ಪ್ರಸ್ತುತ ಪಡಿಸಿದ್ದು ವಿಶೇಷವೇ ಸರಿ.

ಮೂರನೇ ಮತ್ತು ಕೊನೆಯ ಗೋಷ್ಠಿಯಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯ ವೆಂಕಟೇಶ್ ಮೂರ್ತಿಯವರು ನಿವೇದಿತೆಯ ಅತುಲ್ಯ ಸೇವೆಯ ಕುರಿತು ಮತ್ತು ಯುವ ಚಿಂತಕ ತೇಜಸ್ವಿಸೂರ್ಯ ಅವರು ನಿವೇದಿತೆಯ ಅದಮ್ಯ ರಾಷ್ಟ್ರಭಕ್ತಿಯ ಕುರಿತು ವಿಷಯ ಮಂಡನೆ ಮಾಡಿದರು. ಸಮಾರೋಪ ಸಮಾರಂಭದಲ್ಲಿ ಲೇಖಕ ಶ್ರೀ ರೋಹಿತ್ ಚಕ್ರತೀರ್ಥರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅಧ್ಯಕ್ಷರಾದ ಕೆ.ಎಸ್. ನಾರಾಯಣಾಚಾರ್ಯರು ಅಧ್ಯಕ್ಷೀಯ ಭಾಷಣವನ್ನು ನುಡಿದು ಜನರ ಮೆಚ್ಚುಗೆಗೆ ಪಾತ್ರರಾದರು. ಸಮ್ಮೇಳನಕ್ಕೆ ಸುಮಾರು 700 ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

22053254_1455351141166685_1373765777_n

22054397_1455353004499832_1637326820_n

22054367_1455352077833258_1785961198_n

ಎರಡನೇ ಗೋಷ್ಠಿಯಲ್ಲಿ ಬೆಂಗಳೂರಿನ ಪ್ರಸಿದ್ಧ ಗಾಯಕರಾದ ವಿದ್ವಾನ್ ಕೃಷ್ಣಪ್ರಸಾದ್ ಅವರು ವಿವೇಕ ಸಂಗೀತವನ್ನು ನೆರವೇರಿಸಿಕೊಟ್ಟರು. ತಾವೇ ವಿವೇಕಾನಂದರ ಮೇಲೆ ಕೃತಿಯನ್ನು ರಚಿಸಿ ಸಂಗೀತ ಸಂಯೋಜನೆಯನ್ನು ಮಾಡಿ ಜನರ ಮುಂದೆ ಪ್ರಸ್ತುತ ಪಡಿಸಿದ್ದು ವಿಶೇಷವೇ ಸರಿ.
ಮೂರನೇ ಮತ್ತು ಕೊನೆಯ ಗೋಷ್ಠಿಯಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯ ವೆಂಕಟೇಶ್ ಮೂರ್ತಿಯವರು ನಿವೇದಿತೆಯ ಅತುಲ್ಯ ಸೇವೆಯ ಕುರಿತು ಮತ್ತು ಯುವ ಚಿಂತಕ ತೇಜಸ್ವಿಸೂರ್ಯ ಅವರು ನಿವೇದಿತೆಯ ಅದಮ್ಯ ರಾಷ್ಟ್ರಭಕ್ತಿಯ ಕುರಿತು ವಿಷಯ ಮಂಡನೆ ಮಾಡಿದರು. ಸಮಾರೋಪ ಸಮಾರಂಭದಲ್ಲಿ ಲೇಖಕ ಶ್ರೀ ರೋಹಿತ್ ಚಕ್ರತೀರ್ಥರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅಧ್ಯಕ್ಷರಾದ ಕೆ.ಎಸ್. ನಾರಾಯಣಾಚಾರ್ಯರು ಅಧ್ಯಕ್ಷೀಯ ಭಾಷಣವನ್ನು ನುಡಿದು ಜನರ ಮೆಚ್ಚುಗೆಗೆ ಪಾತ್ರರಾದರು. ಸಮ್ಮೇಳನಕ್ಕೆ ಸುಮಾರು 700 ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೂರನೇ ಮತ್ತು ಕೊನೆಯ ಗೋಷ್ಠಿಯಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯ ವೆಂಕಟೇಶ್ ಮೂರ್ತಿಯವರು ನಿವೇದಿತೆಯ ಅತುಲ್ಯ ಸೇವೆಯ ಕುರಿತು ಮತ್ತು ಯುವ ಚಿಂತಕ ತೇಜಸ್ವಿಸೂರ್ಯ ಅವರು ನಿವೇದಿತೆಯ ಅದಮ್ಯ ರಾಷ್ಟ್ರಭಕ್ತಿಯ ಕುರಿತು ವಿಷಯ ಮಂಡನೆ ಮಾಡಿದರು. ಸಮಾರೋಪ ಸಮಾರಂಭದಲ್ಲಿ ಲೇಖಕ ಶ್ರೀ ರೋಹಿತ್ ಚಕ್ರತೀರ್ಥರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅಧ್ಯಕ್ಷರಾದ ಕೆ.ಎಸ್. ನಾರಾಯಣಾಚಾರ್ಯರು ಅಧ್ಯಕ್ಷೀಯ ಭಾಷಣವನ್ನು ನುಡಿದು ಜನರ ಮೆಚ್ಚುಗೆಗೆ ಪಾತ್ರರಾದರು. ಸಮ್ಮೇಳನಕ್ಕೆ ಸುಮಾರು 700 ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

22052531_1455351634499969_421891362_n

22052845_1455353787833087_760017897_n

22052762_1455351294500003_194656442_n

22054668_1455351397833326_1246330391_n

ಸಂಜೆ ಚಕ್ರವರ್ತಿ ಸೂಲಿಬೆಲೆಯವರ ಸಾರಥ್ಯದ ವಿಶೇಷ ಕಾರ್ಯಕ್ರಮ ನರೇಂದ್ರ ಭಾರತ ಅತ್ಯದ್ಭುತವಾಗಿ ಮೂಡಿಬಂತು. ಶಿವಮೊಗ್ಗದ ಸಾಧಕರಾದ ಶ್ರೀಮತಿ ರುಕ್ಮಿಣಿ ನಾಯಕ್ ಮತ್ತು ತಮಿಳ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

20841857_1491809780926610_1724381354148032876_n

22091405_1455352467833219_14186659_n

ಈ ಸಾಹಿತ್ಯ ಸಮ್ಮೇಳನಗಳು ವಿವೇಕಾನಂದ-ನಿವೇದಿತೆಯರ ಜೀವನ, ಬದುಕು ಮತ್ತು ಅವರ ಸಾಹಿತ್ಯವನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

22053238_1455352707833195_657062282_n

Leave a Reply

Your email address will not be published. Required fields are marked *

You May Also Like

ವಿವೇಕ ಕುಂಭದ ಕೊನೆಯಲ್ಲಿ ನನ್ನ ಕನಸಿನ ಕರ್ನಾಟಕ!

ಸಾವಿರಾರು ವಿವೇಕಾನಂದರ ಸಮ್ಮುಖದಲ್ಲಿ ಮಾತನಾಡಿದ ಕೆಲವೇ ನಿಮಿಷಗಳಲ್ಲಿ ನರೇಂದ್ರ ಮೋದಿಯವರು ಸಿದ್ದರಾಮಯ್ಯನವರು ಐದು ವರ್ಷಗಳಲ್ಲಿ ಮಾಡಲಾಗದ್ದನ್ನು ಮಾಡಿ ತೋರಿಸಿಬಿಟ್ಟರು. ಪ್ರಧಾನಮಂತ್ರಿಯವರಿಗೆ ಚೆನ್ನಾಗಿ ಗೊತ್ತು ಹತ್ತು ಸಾವಿರ ವಿವೇಕಾನಂದ ರೂಪಧಾರಿಗಳನ್ನು ನಿಮರ್ಿಸುವ ಸಂಕಲ್ಪ ಹೊತ್ತ ಸಂತ ಮನಸು ಮಾಡಿದರೆ ಜನ ಜೀವನವನ್ನೇ ಬದಲಾಯಿಸಬಲ್ಲ…
View Post

ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ

‘ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ. ಸೆಪ್ಟೆಂಬರ್ 10, 11 ‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ, ಜಡವಾದುದನ್ನು ಆದರ್ಶವಾಗಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀಣರ್ಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು ಬೇಕಾಗಿದ್ದಾರೆ.’…
View Post

ಉದ್ಘಾಟನೆಯಾಯ್ತು ಎರಡು ದಿನದ ಮಹಾ ಯಾತ್ರೆ! ವಿವೇಕಾನಂದ ನಿವೇದಿತಾರ ಸಾಹಿತ್ಯ ಜಾತ್ರೆ!

ಫೆಬ್ರುವರಿ 11 ಬೆಳಿಗ್ಗೆ 11 ಗಂಟೆ ಕಿಕ್ಕಿರಿದು ನೆರೆದಿದ್ದ ಎರಡು ಸಾವಿರ ಜನ. ಅದರಲ್ಲಿ 80% ನಷ್ಟು 30 ವಯಸ್ಸಿಗಿಂತಾ ಕಡಿಮೆಯಿದ್ದ ತರುಣರೇ! ವೇದಿಕೆಯ ಮೇಲೆ ಅತಿರಥ ಮಹಾರಥರು! ಮುಂದಿನ ವಿಶೇಷ ಆಸನಗಳಲ್ಲಿ ಸಾಧು ಸಂತರು ಸನ್ಯಾಸಿ ಸನ್ಯಾಸಿನಿಯರು ಸಾಧಕ ಗಣ.…
View Post

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಮತ್ತೊಮ್ಮೆ ದಿಗ್ವಿಜಯ

ಚಿಕಾಗೋ ಸರ್ವಧರ್ಮ ಸಮ್ಮೇಳನ ಎಂದೊಡನೆ ನೆನಪಾಗೋದು ನಿಸ್ಸಂಶಯವಾಗಿ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರೇ. ಇದೆ ಸಮ್ಮೇಳನದಲ್ಲಿಯೇ ಸ್ವಾಮೀಜಿ ಸನಾತನ ಧರ್ಮವನ್ನ ಜಗತ್ತಿನ ಮುಂದೆ ಎತ್ತಿ ಹಿಡಿದಿದ್ದು. ಸರ್ವಧರ್ಮ ಸಮ್ಮೇಳನಕ್ಕೆ ಹೊರಡುವ ಮೊದಲೇ ಆ ಸಮ್ಮೇಳನ ತನಗಾಗೇ ಆಗುತ್ತಿರುವುದೆಂದಿದ್ದರು ಸ್ವಾಮೀಜಿ. ಆದರೆ ತ್ಯಾಗ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘುಸಾಹಿತ್ಯ ಸಮ್ಮೇಳನ – ವಿಜಯಪುರ

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತೆ ರಾಜ್ಯಾದ್ಯಂತ ೧೫೦ ಲಘು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅಂದು ಮಾಡಿದ ಸಂಕಲ್ಪಕ್ಕೆ ಮೊದಲ ವೇದಿಕೆ ಸಜ್ಜುಗೊಳಿಸಿದ್ದು ಬೆಂಗಳೂರಿನ ವಿಜಯಪುರ‌.! ವಿವೇಕಾನಂದರು ಜಗತ್ತಿನಲ್ಲೆಲ್ಲ ಭಾರತದ ಪರಂಪರೆ ಶ್ರೇಷ್ಠತೆಯನ್ನು ಮುಟ್ಟಿಸಿದರೆ, ನಿವೇದಿತಾ…
View Post