ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ

Total
0
Shares

‘ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ.
ಸೆಪ್ಟೆಂಬರ್ 10, 11

‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ, ಜಡವಾದುದನ್ನು ಆದರ್ಶವಾಗಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀಣರ್ಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು ಬೇಕಾಗಿದ್ದಾರೆ.’

ಹೀಗೆಂದು ಅಕ್ಕ ನಿವೇದಿತೆ ಸುಸ್ಪಷ್ಟವಾಗಿ ತನ್ನ ಕನಸನ್ನು ಎಳೆಎಳೆಯಾಗಿ ಬಿಚ್ಚಿಡುವಾಗ ಆಕೆಯಲ್ಲಿ ಅದೆಂಥಾ ಪಕ್ವತೆ ಇದ್ದಿರಬಹುದು? ಪಶ್ಚಿಮದ ಮಾರ್ಗರೆಟ್ ಪೂರ್ವದ ಭವತಾರಿಣಿಯ ಚರಣಕಮಲಗಳಲ್ಲಿ ನಿವೇದನೆಯಾದ ಪುಷ್ಪವಾಗಿ ಪರಿವರ್ತನೆಯಾದದ್ದು, ಆಕೆಯ ತ್ಯಾಗ ಸೇವೆ ಮನುಕುಲದ ಎಡೆಗಿನ ನಿಷ್ಕಲ್ಮಷ ಪ್ರೇಮ, ಸತ್ಯದ ಹುಡುಕಾಟ, ಧರ್ಮದ ಆಳಕ್ಕಿಳಿದು ಅದನ್ನು ಅರಿತುಕೊಳ್ಳಲು ತೋರಿದ ಶ್ರದ್ಧೆ, ಭಾರತವನ್ನು ಗುಲಾಮಗಿರಿಯಿಂದ ರಕ್ಷಿಸಲು ತಾನೇ ಕ್ರಾಂತಿರಂಗದ ಅಖಾಡಕ್ಕಿಳಿದದ್ದು ಎಲ್ಲವೂ ಪಠ್ಯದಲ್ಲಿಲ್ಲ, ಇತಿಹಾಸದಲ್ಲಿದೆ!

ವಿಶ್ವಗುರು ಭಾರತದ ಹೊಂಗನಸನ್ನು ಕಟ್ಟಿಕೊಂಡ ‘ಯುವಾ ಬ್ರಿಗೇಡ್’ ಹಾಗೂ ಅಕ್ಕನ ಆದರ್ಶಗಳನ್ನು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನದಿಂದ ರೂಪುಗೊಂಡ ‘ಸೋದರಿ ನಿವೇದಿತಾ ಪ್ರತಿಷ್ಠಾನ’ದ ವತಿಯಿಂದ ಮಂಗಳೂರಿನಲ್ಲಿ ಇದೇ ಫೆಬ್ರವರಿಯಂದು ನಡೆದಿದ್ದ ಸಾಹಿತ್ಯ ಸಮ್ಮೇಳನವೆಂಬ ಉತ್ಸವದ ಸಮಾರೋಪವು ಸೆಪ್ಟೆಂಬರ್ 10 ಹಾಗೂ 11 ರಂದು ಬೆಳಗಾವಿಯಲ್ಲಿ ನಡೆದು ಸಂಪನ್ನಗೊಂಡಿತು. ಇದು ಅಕ್ಕ ನಿವೇದಿತೆಯ 150ನೇ ಜಯಂತಿಯ ಸುಸಂದರ್ಭವೂ ಹೌದು.

ಸ್ವಾಮಿ ವಿವೇಕಾನಂದರು ಬೆಳಗಾವಿಯಲ್ಲಿ ಭತರ್ಿ ಒಂಭತ್ತು ದಿನಗಳ ಕಾಲ ವಾಸಿಸಿದ್ದರೆನ್ನುವ ಸಕಾರಣದಿಂದ, ಸಮಾರೋಪದ ಸಂಭ್ರಮವನ್ನು ಬೆಳಗಾವಿಯ ಪುಣ್ಯನೆಲದಲ್ಲೇ ಆಯೋಜಿಸಲು ಯುವಾ ತಂಡ ಒಮ್ಮತದ ನಿರ್ಧಾರ ನಿಮಾಡಿತ್ತು.

ಸಾಹಿತ್ಯವೆಂದರೆ ಪ್ರತಿಯೊಂದೂ ನಾಡಿನ ಅಸ್ಮಿತೆ. ಪ್ರತಿಯೊಂದು ಸಂಸ್ಕೃತಿಗೂ ತನ್ನದೆನ್ನುವ ಸಾಹಿತ್ಯವಿದ್ದೇ ಇರುತ್ತದೆ. ಸಾಹಿತ್ಯದ ಸೊಗಡು ಅಪ್ಪಟ ಹೂದೋಟದ ಹಾಗೆ. ಪ್ರತಿಯೊಂದು ತೋಟವೂ ಹವಾಮಾನಕ್ಕನುಗುಣವಾಗಿ ಬಣ್ಣಬಣ್ಣದ ಎಲೆ, ಹೂ, ಕಾಯಿಯ ಜೊತೆಗೆ ವಿಶಿಷ್ಟ ಸುಗಂಧವನ್ನೂ ಹೊಂದಿರುತ್ತದೆ.ಈ ನೆಲದ ಸಾಹಿತ್ಯವೂ ವಿಶಿಷ್ಟ ಹೂಗಳ ಉದ್ಯಾನವನ, ಹಾಗೆಂದು ಭಾರತದ ಸಂಸ್ಕೃತಿಯನ್ನು ಸೀಮಿತ ಕೈದೋಟಕ್ಕೆ ಹೋಲಿಸುವುದು ಸಲ್ಲ. ತಾಯಿಭಾರತಿಯು ಒಂದೇ ಪದದಲ್ಲಿ ಹೆಸರಿಸಬಹುದಾದ ಸಂಸ್ಕೃತಿಯ ಒಡತಿಯಲ್ಲ. ಸಂಸ್ಕೃತಿಗಳ ತವರುಮನೆ ಈಕೆ. ಅನಾದಿಕಾಲದಿಂದಲೂ ಸತ್ಯಪಥದಲ್ಲಿಯೇ ಸಾಗಿಬಂದ ಸಂತ – ಸನಾತನಿಗಳ ಅಖಂಡ ಸಾಹಿತ್ಯ ಇವಳ ಗರ್ಭದಲ್ಲಿದೆ. ಹೋಲಿಸಲೇಬೇಕೆಂದರೆ ಹಿಮಾಲಯದ ಅನಘ್ರ್ಯ ಪುಷ್ಪಕಣಿವೆಗಷ್ಟೇ ಹೋಲಿಸಬಹುದು!
ಸ್ವಾಮಿ ವಿವೇಕಾನಂದ ಹಾಗೂ ಅಕ್ಕ ನಿವೇದಿತೆಯರ ಸಾಹಿತ್ಯವನ್ನು ಮೆರವಣಿಗೆ ಮಾಡಿ, ಸಮ್ಮೇಳನದ ಮೂಲಕ ಸಾಹಿತ್ಯಾಸಕ್ತರ ಸಮೇತ ದೇಶಭಕ್ತರ ಮನೆ ಮನಗಳಿಗೆ ತಲುಪಿಸುವ ಶ್ರೇಷ್ಠ ಕಾರ್ಯಕ್ಕೆ ಮಂಗಳೂರಿನಲ್ಲಿಯೇ ಚಾಲನೆ ಸಿಕ್ಕಿತ್ತು. ಇದೀಗ ನಮ್ಮ ಮುಂದಿದ್ದ ಬಲುದೊಡ್ಡ ಸವಾಲು, ಸಮಾರೋಪವನ್ನೂ ಅದ್ಧೂರಿಯಾಗಿ ಮಾಡಬೇಕೆನ್ನುವುದು. ಅದ್ಧೂರಿಯೆಂದರೆ ಕಣ್ಣುಕುಕ್ಕುವ ಆಡಂಬರವಲ್ಲ, ಕಣ್ಮನ ಸೂರೆಗೊಳ್ಳುವ ಚಿಂತನ ಮಂಥನಗಳ ಅದ್ಧೂರಿತನ!

ಅದಕ್ಕಾಗೇ ಸಮಾರೋಪಕ್ಕಿನ್ನೂ ತಿಂಗಳುಗಳಿರುವಾಗಲೇ ಅದರ ತಯಾರಿಯನ್ನು ತಂಡ ವಹಿಸಿಕೊಂಡಿತ್ತು. ಫ್ಲಾಷ್ ಮಾಬ್ ಮೂಲಕ, ಒಂದಷ್ಟು ತರುಣ ತರುಣಿಯರು ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡುವ ಮುಖೇನ ಕಾರ್ಯಕ್ರಮಕ್ಕೆ ಪ್ರಚಾರ ಕೊಟ್ಟರೆ, ಕಾರ್ಯಕರ್ತರು ಹಳ್ಳಿ ಹಳ್ಳಿಗಳಿಗೆ ಹೋಗಿ, ಸಮಾರಂಭದ ಕುರಿತು ತಿಳಿಸಿ ಬರುತ್ತಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರವಾಗಿ ಮಾಹಿತಿಯು ಲಭ್ಯವಿದ್ದದ್ದೂ ಅಷ್ಟೇ ಸತ್ಯ. ಅದರ ಜೊತೆಗೆ ಮುಖ್ಯರಸ್ತೆಗಳಲ್ಲಿ ಬ್ಯಾನರ್ ಕಟ್ಟಲಾಗಿತ್ತು, ಫ್ಲೆಕ್ಸ್ಗಳನ್ನೂ ಅಳವಡಿಸಲಾಗಿತ್ತು. ಇಷ್ಟೇ ಅಲ್ಲ, ಫೇಸ್ ಬುಕ್ಕಿನಲ್ಲಿ ‘ಇಂತಿಷ್ಟು ದಿನಗಳಿವೆ’ ಎಂಬುದನ್ನು ಸೂಚ್ಯವಾಗಿ ಕೌಂಟ್ ಡೌನ್ ಲೆಕ್ಕದಲ್ಲಿ ತೋರುವಂತೆ ಕಾರ್ಯಕರ್ತರ ಡಿಪಿ ಕೂಡಾ ಬದಲಾಗುತ್ತಿತ್ತು.

21369455_1723479551291579_9040133719348701712_n

1

 

ನಿರೀಕ್ಷಿಸಿದಂತೆ ಯುವಕರು, ಹಿರಿಯರು ಸ್ಪಂದಿಸಿದರು. ಸಾಹಿತ್ಯ ಸಮಾರಂಭದ ಚಚರ್ೆ ಹಲವು ಕಡೆಗಳಲ್ಲಿ ನಡೆಯಿತು. ಎಲ್ಲೆಲ್ಲೂ ಸಮ್ಮೇಳನದ್ದೇ ಸುದ್ದಿ. ‘ಭಗವಂತಾ, ಸಮಾರೋಪಕ್ಕೆ ಕಿಂಚಿತ್ ಕೊರತೆಯಾಗದಂತೆ ನೋಡಿಕೋ ತಂದೆ’ ಎಂಬುದು ಬಹುಜನರ ದಿನನಿತ್ಯದ ಬೇಡಿಕೆಯಾಗಿತ್ತು. ಈ ವರುಷದ ಗಣಪನ ಹಬ್ಬದಂದು, ವಿಘ್ನನಿವಾರಕ ಗಣಪತಿಗೆ ‘ಸಮ್ಮೇಳನ ಸರಾಗವಾಗಿ ನಡೆದುಬಿಡಲೆಂದು’ ಹೃನ್ಮನಗಳಿಂದ ಸಕಲರೂ ಕೇಳಿಕೊಂಡಿದ್ದೂ ಆಗಿತ್ತು.

ಇಷ್ಟೆಲ್ಲಾ ಸಾಹಿತ್ಯದ ಘಮಲು ಪಸರಿಸುವಾಗ, ಸಮಾರಂಭಕ್ಕೆ ಅಗತ್ಯವಾಗಿ ಬೇಕಿದ್ದ ಸೌಕರ್ಯಗಳ ಬಗ್ಗೆ ತಂಡ ಯೋಚಿಸಿತು. ನಿಜ. ಸಮ್ಮೇಳನ ನಡೆಯಲು ಸ್ಥಳ ಬೇಕು, ಕಾರ್ಯಕರ್ತರು ಉಳಿದುಕೊಳ್ಳಲು ಸೂರು ಬೇಕು. ಸಮ್ಮೇಳನದಲ್ಲಿ ಪಾಲುಗೊಂಡವರಿಗೆ ಊಟೋಪಚಾರದ ವ್ಯವಸ್ಥೆ ಆಗಬೇಕು, ವೇದಿಕೆಗೆ ಸಿದ್ಧತೆಯಾಗಬೇಕು, ಸಮ್ಮೇಳನದ ಸ್ಥಳದಲ್ಲಿ ಅಪರೂಪವೆನಿಸಿದ್ದನ್ನು ಸಾಹಿತ್ಯಾಸಕ್ತರಿಗೆ ಉಣಬಡಿಸಬೇಕು.. ಅಲ್ಲದೇ, ಅತಿಥಿಗಳನ್ನು ಕರೆತರುವ, ಪುನಃ ಅವರನ್ನು ಅವರವರ ಸ್ಥಳಕ್ಕೆ ವಾಪಸ್ ಕಳುಹಿಸುವ ವಾಹನದ ವ್ಯವಸ್ಥೆಯಾಗಬೇಕು! ಒಂದೇ ಎರಡೇ, ಸಮ್ಮೇಳನದ ಅಖಂಡ ಕೆಲಸಗಳಲ್ಲಿಕಾರ್ಯಕರ್ತರ ಪುಟ್ಟ ‘ಐಡಿಯಾ’ಗೂ ಬೆಲೆಯಿತ್ತು.. ಪಟ್ಟ ಶ್ರಮಕ್ಕೂ ಧನ್ಯತೆ ಇತ್ತು!

ಈಗ ಯೋಚಿಸ ಕೂತರೆ, ಅರೆ ಇಷ್ಟೆಲ್ಲಾ ಕೆಲಸಗಳನ್ನು ಪೂರೈಸಿಬಿಟ್ಟೆವಾ ಎಂದು ಅರೆಕ್ಷಣ ಅಚ್ಚರಿಯಾಗುವುದು ಖಚಿತ. ಆದರೆ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಅದೆಷ್ಟು ಕೆಲಸಗಳು ನಡೆದಿವೆಯೋ, ಅದೆಷ್ಟು ಕಾಣದ ಕೈಗಳ ಕೊಡುಗೆ ಸೇರಿಬಿಟ್ಟಿದೆಯೋ ಭಗವಂತನೇ ಬಲ್ಲ. ಅವನು ಪ್ರೀತಿಸುವ ಶ್ರದ್ಧಾವಂತರೆಲ್ಲರೂ ಸಮ್ಮೇಳನವೆಂಬ ಮಹಾ ಯಜ್ಞದಲ್ಲಿ ರಾಮಸೇತುವೆಂಬ ಮಹತ್ಕಾರ್ಯಕ್ಕೆ ಕಾರಣವಾದ’ಪುಟ್ಟ ಅಳಿಲಿ’ನಿಂದ ಹಿಡಿದು, ಸಂಜೀವಿನಿ ಪರ್ವತವನ್ನೇ ಎತ್ತಿ ತಂದ ‘ದಿಟ್ಟ ಹನುಮ’ನವರೆಗೂ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೌದು, ಭಗವಂತನು ಪ್ರೀತಿಸುವ ಶ್ರದ್ಧಾವಂತರೇ ಇವರು! ಇಲ್ಲದಿದ್ದರೆ ಸಹಸ್ರ ಮಜಲುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಸಹಸ್ರ ಮಂದಿಯು, ಒಂದೇ ಧ್ಯೇಯಕ್ಕೆ ಹೀಗೆ ಒಟ್ಟಾಗುವುದೆಂದರೆ ಅದು ಅವನ ಆಶಯವಲ್ಲದೇ ಮತ್ತೇನಿರಲು ಸಾಧ್ಯ?

ದಿನಾಂಕ, ಸ್ಥಳ ಈ ಮೊದಲೇ ನಿಗದಿಯಾಗಿತ್ತು. ಸಮ್ಮೇಳನ ನಡೆಯುವ ಸ್ಥಳ, ಅತಿಥಿಗಳು, ಊಟೋಪಚಾರದ ವ್ಯವಸ್ಥೆಯೂ ನಿಕ್ಕಿಯಾಗಿತ್ತು. ಆಹ್ವಾನ ಪತ್ರಿಕೆಯ ಸುಂದರ ವಿನ್ಯಾಸ ಮಾಡುವುದರಿಂದ ಹಿಡಿದು, ಅಪರೂಪದ ವೇದಿಕೆಯನ್ನು ರೂಪಿಸುವ ಜವಾಬ್ದಾರಿ ಕಾರ್ಯಕರ್ತರ ಹೆಗಲ ಮೇಲಿತ್ತು. ಒಟ್ಟಿನಲ್ಲಿ ಸಮ್ಮೇಳನದ ಪ್ರಾಂಗಣದಲ್ಲಿ ಎಲ್ಲಿ ನೋಡಿದರೂ, ತರುಣ ಪಡೆಯನ್ನು ಸ್ಫೂತರ್ಿಗೊಳಿಸುವ ಸಕಲ ವೈಶಿಷ್ಟ್ಯಗಳೂ ಇದ್ದವು.

 

21122267_1720333544939513_2068170912512542515_o

21731230_1542397165823259_7028111935095518674_n

ಹಾಗೆಂದೇ ಜೆ.ಎನ್.ಎಂ.ಸಿ ಆವರಣದ, ಕೆ.ಎಲ್.ಇ ಸಭಾಭವನದಲ್ಲಿ ಸ್ವಾಮೀಜಿ ಹಾಗೂ ಅಕ್ಕನ ಕುರಿತಾದ ಬಲುಸುಂದರವಾದ ಪ್ರದಶರ್ಿನಿಯು ಅನಾವರಣಗೊಂಡಿತ್ತು. ಜೀರಿಗೆ ಸಭಾಭವನದ ಮುಂಭಾಗದಲ್ಲೇ ಸಾಕಷ್ಟು ದೊಡ್ಡದಾಗಿದ್ದ ಅಕ್ವೇರಿಯಂನಲ್ಲಿ, ಸ್ವಾಮೀಜಿಯ ಧ್ಯಾನಸ್ಥ ಮೂತರ್ಿಯ ಪ್ರತಿಷ್ಠಾಪನೆಯೂ ಆಗಿತ್ತು. ಇದೆಲ್ಲದರ ಜೊತೆಗೆ ಅಚ್ಚುಕಟ್ಟಾದ ಸ್ವದೇಶೀ ಸ್ಟಾಲ್ಗಳೂ ರೂಪುಗೊಂಡಿದ್ದವು.

IMG_8795 IMG_8797IMG_0866

DSC_0135 DSC_0136 DSC_0138 DSC_0139 DSC_0140 DSC_0141

ಸಮಾರೋಪದ ಪೂರ್ವಭಾವಿಯಾಗಿ, ಏಳನೇ ತಾರೀಖಿನಂದು ಅಂಧಮಕ್ಕಳ ಸಮಾವೇಶ ನಡೆಯಿತು. ಎಂಟರಂದು ದಾದಿಯರ ಸಮಾವೇಶ ಹಾಗೂ ಗರಡಿಯಾಳು ಸಮಾವೇಶವೂ, ಒಂಭತ್ತರಂದು ತಂತ್ರ್ರಜ್ಞರ ಸಮಾವೇಶ ಮತ್ತು ನೇಕಾರರ ಸಮಾವೇಶದ ಜೊತೆಗೆ ಸಂಜೆ, ಸಂಗೀತಗಾರರ ಸಮಾವೇಶವೂ ಇತ್ತು. ಈ ಎಲ್ಲ ಸಮಾವೇಶಗಳ ಉದ್ದೇಶ, ರಾಷ್ಟ್ರ ನಿಮರ್ಾಣದಲ್ಲಿ ಶ್ರದ್ಧೆಯಿಂದ ಶ್ರಮಿಸುವ, ಘನತೆಯಿಂದ ರಾಷ್ಟ್ರದ ಶ್ರೇಷ್ಠತೆಯನ್ನು ಎತ್ತಿಹಿಡಿವ ಸಕಲರನ್ನೂ ಒಂದೇ ಧ್ಯೇಯದಡಿ ತಂದು ಪೋಣಿಸುವ ಅಭಿಮತ. ನಿಜ. ಮುತ್ತಿನ ಹಾರದಲ್ಲಿರುವ ಒಂದೊಂದು ಮುತ್ತುಗಳೂ ಹಾರದ ಸೌಂದರ್ಯಕ್ಕೆ ಸಾಟಿಯಿಲ್ಲದ ಮೆರುಗು ತಂದುಕೊಡುವವೇ!

ds

ಸಮ್ಮೇಳನದ ದಿನದ ಸೂಯರ್ೋದಯವೇ ವಿಶಿಷ್ಟ. ಅಲ್ಲಿಯವರೆಗೂ ಹಗಲಿರುಳೆನ್ನದೇ ಕೆಲಸ ಮಾಡಿದ ಯುವಾ ಸಮೂಹಕ್ಕೆ, ಇನ್ನೆರಡು ದಿನಗಳ ಕಾಲ ತಮ್ಮ ಶ್ರಮದ ಮೌಲ್ಯಮಾಪನವಾಗುವ ದಿನ. ಮೌಲ್ಯಮಾಪನ ಮಾಡಬೇಕಾದವರು ಬೇರಾರೋ ಅಲ್ಲ. ತಮ್ಮ ತಮ್ಮ ಅಂತರಂಗದಲ್ಲಿ ಸದಾ ದೇದೀಪ್ಯಮಾನವಾಗಿ ಬೆಳಗುವ ಗುರು ಮಹಾರಾಜರೇ! ಹೌದು. ಸಮಾಜದ ಕೆಲಸಕ್ಕೆ ಅದರದೇ ಘನತೆಯಿದೆ. ಒಮ್ಮೆ ಅಖಾಡಕ್ಕೆ ಇಳಿದ ಮೇಲೆ ಮುಗಿಯಿತು, ಕಾರಣಗಳನ್ನು ಕೊಡುವಂತೆಯೇ ಇಲ್ಲ. ಇದು ಸ್ವಾಮೀಜಿಯ ಕೆಲಸ. ಮಾಡಲೇಬೇಕು. ಮಾಡಿ ಯಾರನ್ನಾದರೂ ಮೆಚ್ಚಿಸಬೇಕೆಂದಿದ್ದರೆ ಅದು ಸ್ವಾಮೀಜಿಯನ್ನೇ! ಏಕೆಂದರೆ ಯುವಾ ಸಮೂಹದ ಏಕೈಕ ಗುರಿಯೇ ವಿಶ್ವಗುರು ಭಾರತದ ಕಲ್ಪನೆ. ಆ ಶ್ರೇಷ್ಠ ಕಲ್ಪನೆಗೆ ಸ್ವಾಮೀಜಿಯೇ ಕಾರಣ, ಸ್ವಾಮೀಜಿಯ ದಿವ್ಯ ಸಂದೇಶವೇ ಪ್ರೇರಣೆ! ಜಡತ್ವಕ್ಕಿಲ್ಲಿ ಸ್ಥಳವಿಲ್ಲ.. ಚಲನೆಗಿಲ್ಲಿ ತಡೆಯಿಲ್ಲ ಎಂಬಂತೆ ಪ್ರತಿಯೊಬ್ಬರೂ ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು.

ಯುವಾ ತಂಡ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ಎಲ್ಲ ಹೆಣ್ಮಕ್ಕಳು ಮೆರವಣಿಗೆಯ ಸ್ಥಳದಲ್ಲಿ ಸಂಭ್ರಮದಿಂದ ಸೇರಿದ್ದರು. ಶ್ರೀ ಚಕ್ರವತರ್ಿ ಅಣ್ಣನವರ ಮಾರ್ಗದರ್ಶನದಲ್ಲಿ ಸಮ್ಮೇಳನದ ಅತಿಥಿಗಳ ಸಮ್ಮುಖದಲ್ಲಿ ಬೆಳ್ಳಿಯ ಪಲ್ಲಕ್ಕಿಯಲ್ಲಿದ್ದ ಸ್ವಾಮೀಜಿ ಹಾಗೂ ಅಕ್ಕನ ಪವಿತ್ರ ಕೃತಿಗಳೂ, ಸಾರೋಟಿನಲ್ಲಿ ಮೆರವಣಿಗೆ ಹೊರಡಲು ಅನುವಾದ ಶ್ರೀಮದ್ಗಾಂಭೀರ್ಯದ ಸ್ವಾಮೀಜಿಯ ಸ್ನಿಗ್ಧ ಪುತ್ಥಳಿಯೂ ಏಕಕಾಲಕ್ಕೆ.. ದೇಸೀ ಸೊಗಡಿನ ನಾದದ ಉಪಾಸನೆಯೊಂದಿಗೆ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕರಿಸಿದ್ದಪ್ಪನವರ ಹಾರೈಕೆಯೊಂದಿಗೆ, ವಿವೇಕಾನಂದ ಮೆಮೊರಿಯಲ್ ಹಾಲ್ನಿಂದ ‘ಶೋಭಾಯಾತ್ರೆ’ ಹೊರಟಿದ್ದು, ಸಮಾರೋಪದಶ್ರೀಕಾರವಾಗಿತ್ತು.

DSC03560

ಮಾರ್ಗಮಧ್ಯದ ರಾಣಿ ಚನ್ನಮ್ಮನ ಸರ್ಕಲ್ನಲ್ಲಿ, ‘ಕಿತ್ತೂರು ಚನ್ನಮ್ಮ ತಾಯಿಯ’ ಶೌರ್ಯವನ್ನು ನೆನಪಿಸುವ ಬಲುಸುಂದರ ಚೆನ್ನಮ್ಮನ ಪುತ್ಥಳಿಗೆ ಗೌರವದಿಂದ ಮಾಲಾರ್ಪಣೆ ಮಾಡಿದ್ದೂ ಆಯಿತು. ಮುಗಿಲು ಮುಟ್ಟುವ ಭಾರತ ಮಾತೆಗೆ ಜೈ ಎಂಬ ಘೋಷಣೆಯೊಂದಿಗೆ ಅಲೆಅಲೆಯಾಗಿ ಹೊರಟ ವಂದೇ ಮಾತರಂ ಎಂಬ ಉದ್ಘೋಷವೂ ಸೇರಿ, ಬೆಳಗಾವಿಯ ಹಿತಕರ ಗಾಳಿಯಲ್ಲಿ ದೇಶಭಕ್ತಿಯ ಅಮಲು ಪಸರಿಸಿಬಿಟ್ಟಿತ್ತು.

IMG_8587

ಇದೇ ಸಮಯಕ್ಕೆ, ಸ್ವಾಮೀಜಿಯ ಸಾಹಿತ್ಯದ ಬಲುದೊಡ್ಡ ಗ್ರಂಥವನ್ನೇ ಬ್ಯಾಕ್ಗ್ರೌಂಡಿನಲ್ಲಿ ಹೊಂದಿದ್ದ ಅಪರೂಪದ ವೇದಿಕೆ ಸಜ್ಜಾಗಿ, ಅತಿಥಿಗಳನ್ನು ಕಾಯುತ್ತಿತ್ತು.

ಮೆರವಣಿಗೆಯು ಸಮ್ಮೇಳನದ ಸ್ಥಳಕ್ಕೆ ಬಂದ ನಂತರ ಪ್ರದಶರ್ಿನಿಯ ಉದ್ಘಾಟನೆ, ಅದರ ನಂತರ ಸಮ್ಮೇಳನದ ಉದ್ಘಾಟನೆಯೂ ನಡೆಯಿತು. ಸಮ್ಮೇಳನದ ಸಭೆಗೆ ಕೊಟ್ಟ ಹೆಸರು ಮ್ಯಾಕ್ಲಾಯ್ಡ್ ಸಭಾಂಗಣ! ಪಶ್ಚಿಮದ ಅಕ್ಕ, ಪೂರ್ವದ ನಿವೇದಿತೆಯಾಗಿ ರೂಪುಗೊಂಡ ಹಲವು ಮಜಲುಗಳಲ್ಲಿ ಮ್ಯಾಕ್ಲಾಯ್ಡ್ ಎಂಬ ಹೆಣ್ಣುಮಗಳ ಕೊಡುಗೆ ಸಾಕಷ್ಟಿದೆ ಎಂಬ ಕೃತಜ್ಞತೆಯಿಂದಲೇ, ಅಂದಿನ ಸಭೆಯ ಪ್ರಾಂಗಣಕ್ಕೆ ಅವಳದ್ದೇ ಹೆಸರು. ದಿಟ. ಕೊಟ್ಟಿದ್ದು ಮರೆತುಬಿಡಬೇಕು, ಪಡೆದದ್ದು ನೆನಪಿಡಲೇಬೇಕು.

IMG_8718

IMG_8793

ಅಕ್ಕ ನಿವೇದಿತೆ, ತಾಯಿ ಭಾರತಿಯನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಲು ಕ್ರಾಂತಿರಂಗಕ್ಕೆ ಧುಮುಕಿದ್ದು ಮರೆಮಾಚುವ ಹಾಗೆಯೇ ಇಲ್ಲ. ಆಕೆಯ ಕೊಡುಗೆಯೆಲ್ಲವೂ ಸೂರ್ಯನ ಕಿರಣಗಳಷ್ಟೇ ಸ್ಫುಟ, ತೇಜೋಮಯ! ಗಜಮುಖನ ಪ್ರಾರ್ಥನೆಯೊಂದಿಗೆ ಆರಂಭವಾದ ಸಮ್ಮೇಳನದಲ್ಲಿ ಅಕ್ಕ ತಾನೇ ಜತನದಿಂದ ರೂಪಿಸಿದ್ದ ಸ್ವತಂತ್ರ ಭಾರತದ ‘ದಾಸ್ಯದ ಸಂಕೋಲೆಯನ್ನು ಕಳಚುವ’ ಧ್ವಜವು ಆರೋಹಣಗೊಂಡದ್ದೂ ವಿಸ್ಮಯಗಳಿಗೇ ಕಲಶಪ್ರಾಯ. ರಾಷ್ಟ್ರಕ್ಕೊಂದು ಧ್ವಜವೆನ್ನುವುದು ಅದಾಗಲೇ ಪ್ರಖ್ಯಾತವಾಗಿದ್ದರೂ, ಬ್ರಿಟೀಷರ ಕಪಿಮುಷ್ಠಿಯಲ್ಲಿದ್ದ ಭಾರತಕ್ಕೆ ಧ್ವಜದ ಗರಿಮೆಯೇ ಇರಲಿಲ್ಲ. ಅಕ್ಕ ವಜ್ರಾಯುಧವನ್ನು ಚಿತ್ರಿಸಿ, ವಂದೇ ಮಾತರಂ ಎಂಬ ಅದ್ವಿತೀಯ ಮಂತ್ರವನ್ನು ಸುಂದರವಾಗಿ ಪೋಣಿಸಿ, ತನ್ನ ಭಾರತಪ್ರೇಮವನ್ನೆಲ್ಲಾ ಬಸಿದು ರೂಪಿಸಿದ ಧ್ವಜ ಎಂದಿಗೂ ಚಿರಂತನ. ಪೂಜ್ಯ ಅತಿಥಿ ಮಹೋದಯರಿಂದ ಧ್ವಜಾರೋಹಣವಾದದ್ದು ಕಾರ್ಯಕ್ರಮದ ಘನತೆಯನ್ನು ಎತ್ತಿ ಹಿಡಿದಿತ್ತು.

DSC_0281 DSC_0286

ಎಲ್ಲೆಲ್ಲೂ ಸಂಭ್ರಮ, ಎಲ್ಲೆಲ್ಲೂ ಸಡಗರ. ಬೇಲೂರು ರಾಮಕೃಷ್ಣ ಮಿಷನ್ನ ಸಹಾಯಕ ಕಾರ್ಯದಶರ್ಿಗಳಾದ ಶ್ರೀ ಸ್ವಾಮಿ ಬಲಭದ್ರಾನಂದ ಜೀ ಮಹಾರಾಜ್, ಮುಗಳಖೋಡದ ಡಾಕ್ಟರ್ ಮುರುಘರಾಜೇಂದ್ರ ಮಹಾಸ್ವಾಮಿಗಳು, ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ಸುಬ್ರಾಯ ವಾಳ್ಕೆಯವರು ಗೋಷ್ಠಿಗೆ ಪೂರ್ವಭಾವಿಯಾಗಿ ಮಾತನಾಡಿ, ನೆರೆದವರಿಗೆ ಹಿತವಚನಗಳನ್ನೂ, ಆಗಮಿಸಿದ ಸಕಲರಿಗೆ ಸ್ವಾಗತವನ್ನೂ ಕೋರಿ, ಸ್ವಾಮೀಜಿಗೆ ಪ್ರಣಾಮಗಳನ್ನೂ ಅಪರ್ಿಸಿ, ಮುಂದಿನ ಗೋಷ್ಠಿಗಳಿಗೆ ಚಾಲನೆ ನೀಡಿದರು.

DSC_0315 DSC_0342 IMG_9722

ಮೊದಲ ದಿನ ನಡೆದ ಗೋಷ್ಠಿಗಳು ಎರಡು. ಬದುಕೇ ಬೆಳಕು ಹಾಗೂ ಸ್ಪರ್ಶಮಣಿ! ಶ್ರೀ ಹರ್ಷವರ್ಧನ ಶೀಲವಂತ, ಮಾತಾ ಚೈತನ್ಯಮಯಿ, ಹಾಗೂ ಶ್ರೀಮತಿ ರೇಖಾರಾಮನ್ ಮೊದಲ ಗೋಷ್ಠಿಯನ್ನು ನಡೆಸಿಕೊಟ್ಟರೆ, ಕುಮಾರಿ ಸ್ವಾತಿ, ಶ್ರೀಮತಿ ಅರ್ಚನಾ ದತ್ತ ಹಾಗೂ ಶ್ರೀ ಚಕ್ರವತರ್ಿ ಸೂಲಿಬೆಲೆಯವರು ಎರಡನೆಯ ಗೋಷ್ಠಿಯನ್ನು ನಡೆಸಿಕೊಟ್ಟರು. ಇದರ ಜೊತೆಗೆ ಮದರ್ಾನೀ ಖೇಲ್ ಎಂಬ ಅಪ್ಪಟ ದೇಸೀ ಸೊಗಡಿನ ಸಾಹಸ ಪ್ರದರ್ಶನ ನಡೆದದ್ದೂ ವಿಶೇಷ.

1 (1) 21432949_1538777796185196_2616628486893072711_n 21616387_1538766289519680_353484580414183282_n

ಗೋಷ್ಠಿಗಳು ಪೂರಾ ಸಾಹಿತ್ಯಾಸಕ್ತರಿಗೆ, ಸ್ವಾಮೀಜಿ ಹಾಗೂ ಅಕ್ಕನನ್ನು ಅರಿಯುವ ಎಲ್ಲರಿಗೂ ರಸದೌತಣವಾದರೆ, ಅದೇ ಸಮಯಕ್ಕೆ ಮತ್ತೊಂದು ಅಂಗಳದಲ್ಲಿ ‘ಚಹಾದ್ ಜೋಡಿ ಚೂಡಾ’ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯುತ್ತಿತ್ತು. ಅದೇನೆಂದರೆ, ಉನ್ನತ ವಿಚಾರಧಾರೆಗಳನ್ನು ಹೊಂದಿದ ವಿಶಿಷ್ಟ ಅತಿಥಿಗಳೊಂದಿಗೆ ಒಂದಷ್ಟು ಹೊತ್ತು ಚಚರ್ೆ ನಡೆಸುವುದು.. ಅವರ ಮಾತುಗಳನ್ನು ಕೇಳುವುದರ ಜೊತೆಗೆ, ನೆರೆದಿದ್ದ ಯುವ ಸಮೂಹದ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಗಳನ್ನೂ ಆಲಿಸಿ, ಅತಿಥಿಗಳಿಂದ ಸಮಂಜಸ ಉತ್ತರ ಪಡೆಯುವುದು!ಶ್ರೀ ಮುನಿಯಪ್ಪ, ಶ್ರೀ ಭವರ್ಲಾಲ್ ಆರ್ಯ ಹಾಗೂ ಶ್ರೀ ತೇಜೇಂದರ್ ಬಗ್ಗ, ಚೂಡಾದೊಂದಿಗೆ, ಇಂದಿನ ಪೀಳಿಗೆಯ ಜೊತೆ ಆರೋಗ್ಯಕರ ವಿಚಾರ ವಿನಿಮಯ ಮಾಡಿಕೊಂಡ ಮಹನೀಯರು.

DSC_0662 DSC_0696 IMG_1144

ಭಾರತದ ಘನತೆಗೆ ಕಿಂಚಿತ್ ಕುಂದು ಬರದಂತೆ, ಇದ್ದನ್ನು ಮರೆಮಾಚದೇ, ವಸ್ತುನಿಷ್ಠರಾಗಿ ಸತ್ಯವಿಷಯಗಳನ್ನು ಮಾಧ್ಯಮದ ಮೂಲಕ ಜನರಿಗೆ ತಲುಪಿಸುವ ಹೊಣೆ ಹೊತ್ತ ಪತ್ರಕರ್ತರನ್ನು ಒಂದೆಡೆ ಕಲೆಹಾಕಿ, ಅವರ ಜೊತೆ ಸಂವಾದ, ಚಚರ್ೆಗಳು ನಡೆದದ್ದೂ ಇಂದಿನ ದಿನದ ಗಮನಾರ್ಹ ಅಂಶ. ಪರ್ತಕರ್ತರ ಸಮಾವೇಶ ನಡೆದದ್ದು ಖ್ಯಾತ ಪರ್ತಕರ್ತರಾದ ಶ್ರೀ ತೇಜೇಂದರ್ ಬಗ್ಗಾರ ಸಾರಥ್ಯದಲ್ಲಿ.

IMG_1112 IMG_1136 IMG_1138

ಸಮ್ಮೇಳನದ ಊಟೋಪಚಾರಗಳೂ ವಿಶೇಷವೇ. ಚಹಾ ಹಾಗೂ ಬಾದಾಮಿ ಹಾಲನ್ನು ಪ್ಲಾಸ್ಟಿಕ್ ಅಥವಾ ಕಾಗದದ ಲೋಟದಲ್ಲಿ ಕೊಡುವುದರ ಬದಲಿಗೆ, ಮಣ್ಣಿನ ಪುಟ್ಟ ಪುಟ್ಟ ಲೋಟಗಳನ್ನು ಬಳಸಿದ್ದು ವಿಶೇಷವಾಗಿತ್ತು. ಊಟದಲ್ಲೂ ದೇಸೀಯತೆಯೇ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ದೇಶಭಕ್ತರು ಸೇರಿದ್ದರೂ, ಊಟ, ತಿಂಡಿಯ ಸಮಯದಲ್ಲಿ ಗೌಜು ಗದ್ದಲವೇ ಇರಲಿಲ್ಲವೆನ್ನುವುದೂ ಸತ್ಯ.

IMG_8822

ಮೊದಲ ದಿನದ ಸಂಜೆ, ಶ್ರೀ ಚಕ್ರವತರ್ಿ ಅಣ್ಣನವರ ಸಾರಥ್ಯದಲ್ಲಿ ‘ನರೇಂದ್ರ ಭಾರತ’ಅಮೋಘವಾಗಿ ನೆರವೇರಿತು. ಕುಮಾರಿ ಹಷರ್ಿತಾ, ಶ್ರೀರಾಮನನ್ನು ಸ್ತುತಿಸುವ ನೃತ್ಯವನ್ನು ಪ್ರಸ್ತುತ ಪಡಿಸುವುದರಿಂದ ಆರಂಭವಾದ ಕಾರ್ಯಕ್ರಮದ ಪ್ರತಿಯೊಂದು ಘಟ್ಟದಲ್ಲೂ ನರನೊಳಗಿನ ಇಂದ್ರನನ್ನು ಜಾಗೃತಗೊಳಿಸಿಕೊಂಡವರನ್ನು ಪರಿಚಯಿಸಲಾಯ್ತು.

IMG_9233

IMG_9237

DSC03996

ಕಾರ್ಯಕ್ರಮದಲ್ಲಿ 108 ಗರಡಿಮನೆ ಸೂರ್ಯನಮಸ್ಕಾರಗಳನ್ನು 5 ನಿಮಿಷಕ್ಕಿಂತಲೂ ಕಡಿಮೆ ಸಮಯದಲ್ಲಿ ಮಾಡಿ ಗಿನ್ನೀಸ್ ದಾಖಲೆ ಮಾಡಿದ ಶ್ರೀ ನಿರಂಜನ ತಳ್ಳೂರ್, ಕುಬ್ಜರ ಒಲಂಪಿಕ್ನಲ್ಲಿ 15 ಚಿನ್ನದ ಪದಕಗಳನ್ನು ಪಡೆದ ಕನರ್ಾಟಕದ ಹೆಮ್ಮೆಯ ತಂಡ, 1962ರ ಭಾರತ ಹಾಗೂ ಚೈನಾದ ಯುದ್ಧ ಸಂದರ್ಭದ ಸಮಯದಲ್ಲಿ ಚೈನಾ ಮಾಡಿದ ಕುತಂತ್ರವನ್ನು ಹಿನ್ನೆಲೆಯಾಗಿಟ್ಟುಕೊಂಡು, ‘ಈಗೇನಿದ್ದರೂ ಸ್ವದೇಶೀ ಮೂಲಮಂತ್ರವನ್ನೇ ಜಪಿಸುವೆವು’ ಎಂಬುವುದನ್ನು ಸೂಚ್ಯವಾಗಿ ತೋರಿಸುವಂತೆ ಚಿತ್ರಿಸಿದ ಅತ್ಯಂತ ಪುಟ್ಟ ಟೆಲಿಫಿಲ್ಮ್ ಅನ್ನು ರೂಪಿಸಿದ ಶ್ರೀ ಮನೋಹರ್, ಎಚ್.ಐ.ವಿ. ಪಾಸಿಟಿವ್ ಇದ್ದರೂ ಎದೆಗುಂದದೇ, ಕಳೆದ ಎಂಟು ವರ್ಷದಿಂದ ಸಮಾಜಕ್ಕೆ ತಮ್ಮನ್ನು ಮುಡಿಪಾಗಿಟ್ಟು, ತನ್ನಂತೆಯೇ ಪಾಸಿಟಿವ್ ಹೊಂದಿದ ಮಕ್ಕಳ ಬದುಕಿಗಾಗಿಯೇ ಪ್ರಾರಂಭಿಸಿದ್ದ ‘ಆಶ್ರಯ ಫೌಂಡೇಶನ್ನಿನ’ ಸಂಸ್ಥಾಪಕಿಯಾದ ನಾಗರತ್ನ ಅಕ್ಕನನ್ನು ಪರಿಚಯಿಸಿ ಸನ್ಮಾನಿಸಲಾಯಿತು.

IMG_9277 IMG_9300  IMG_9335 IMG_9397 IMG_9404

ಇದೇ ಸುಸಮಯದಲ್ಲಿ, ಸೋದರಿ ನಿವೇದಿತಾ ಪ್ರತಿಷ್ಠಾನದ ಹೆಮ್ಮೆಯ ಸೋದರಿ, ಶ್ರೀಮತಿ ಉಷಾ ಜಗದೀಶ್ರವರು ಬರೆದ ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಕುರಿತಾದ ಪುಸ್ತಕದ ಜೊತೆ, ಅಕ್ಕ ನಿವೇದಿತೆಯನ್ನು ಆಕೆಯ 150ನೇ ಜಯಂತಿಯ ಸಂದರ್ಭದಲ್ಲಿ ನೆನೆಯುತ್ತಾ, ಆಕೆಯ ಶ್ರೇಷ್ಠತೆಯನ್ನು ತಿಳಿಯಪಡಿಸುವ.. ಶ್ರೀ ಚಕ್ರವತರ್ಿ ಅಣ್ಣನವರ ‘ಸೂಯರ್ೋದಯ ಕಾಣುತ್ತಿದೆ’ ಎಂಬ ಪುಸ್ತಕವೂ ಲೋಕಾರ್ಪಣೆಗೊಂಡಿತು.

IMG_9420

Untitled-3

ಅಕ್ಕನ ಪುಸ್ತಕದ ಮತ್ತೊಂದು ವಿಶೇಷತೆಯೆಂದರೆ, ಇಡಿಯ ಪುಸ್ತಕವೇ ‘ಕೇಳು ಪುಸ್ತಕ’ವಾಗಿದ್ದು! ಹೌದು. ಪುಸ್ತಕ ಓದುವ ಮೂಲಕ ಜನಗಳ ಮನಸ್ಸಿಗೆ ತಲುಪುವುದು ಒಂದು ಆಯಾಮವಾದರೆ, ಇಡೀ ಪುಸ್ತಕದ ಅಷ್ಟೂ ಅಂಶಗಳನ್ನು ತನ್ಮಯದಿಂದ ಆಲಿಸುವುದೂ ಮತ್ತೊಂದು ಆಯಾಮ. ಬಹುಶಃ ಭಾರತದಲ್ಲಿಯೇ ಇಂತಹಾ ಕೇಳು ಪುಸ್ತಕದ ಮಾದರಿ, ಪ್ರಥಮವೇ ಎನ್ನಬಹುದು.

ಶ್ರೀ ಚೇತನ್ ರವರು ‘ಮೆರಾ ರಂಗ್ ದೇ ಬಸಂತಿ’ ಹಾಡು ಹಾಡುವ ಮೂಲಕ ನೆರೆದವರಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿದರೆ, ಮಾಹೇಶ್ವರಿ ಅಂಧಮಕ್ಕಳ ಶಾಲೆಯ ಮಕ್ಕಳು ‘ವಂದೇ ಮಾತರಂ’ ಹಾಡುವ ಮೂಲಕ ನೆರೆದವರ ಕಣ್ಣಂಚಿನಲ್ಲಿ ಅಶ್ರುಬಿಂದುಗಳು ಮೂಡುವುದಕ್ಕೆ ಕಾರಣರಾದರು. ಆ ಮೂಲಕ, ಇಲ್ಲದಿರುವುದು ಕೊರತೆಯಲ್ಲ, ಇದ್ದೂ ಇಲ್ಲದಂತೆ ಬದುಕುವುದು ಮಾತ್ರ ವಿಕಲತೆ ಎಂಬುದನ್ನು ಸೂಚ್ಯವಾಗಿ ಹೇಳಿದಂತಿತ್ತು. ನಿಜ. ಸಾಣೆ ಹಿಡಿಯಬೇಕಾದ್ದು ಸಾಕಷ್ಟಿದೆ!

IMG_9445

ಸಮಾರೋಪದ ಎರಡನೆಯ ಹಾಗೂ ಕೊನೆಯ ದಿನವೇ ಸೆಪ್ಟೆಂಬರ್ 11, ದಿಗ್ವಿಜಯವನ್ನು ನೆನಪಿಸುವ ಸುಂದರ ದಿನ. ಸ್ವಾಮಿ ವಿವೇಕಾನಂದರು ಚಿಕಾಗೋದ ಸರ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಕೀತರ್ಿ ಪತಾಕೆಯನ್ನು ಮುಗಿಲೆತ್ತರ ಕೊಂಡೊಯ್ದ ಶುಭದಿನವಾಗಿ ಇಂದಿಗೆ ಭತರ್ಿ 125 ವರ್ಷಗಳು! ಅಕ್ಕನ ಜಯಂತಿಯ ಜೊತೆಗೆ ದಿಗ್ವಿಜಯ ಯಾತ್ರೆಯದ್ದೂ ಶುಭಸಂದರ್ಭ. ಹಾಗೆಂದೇ, ವೇದಿಕೆಯು ಕೂಡಾ ಹಿಂದಿನ ದಿನಕ್ಕಿಂತಾ ಭಿನ್ನವಾಗಿತ್ತು. ದಿಗ್ವಿಜಯ ಯಾತ್ರೆಯ ಬಲುಸುಂದರ ಕ್ಷಣಗಳನ್ನು ನೆನಪಿಸುವಂತಿತ್ತು.

ಮೊದಲ ದಿನ ಭಾನುವಾರವಾದ್ದರಿಂದ, ಮರುದಿನದ ಸೋಮವಾರ ಸಭೆ ಸ್ವಲ್ಪ ಕರಗಿರಬಹುದೆಂಬ ಲೆಕ್ಕಾಚಾರವು ಸ್ವಲ್ಪ ಹೊತ್ತಿನಲ್ಲೇ ಹುಸಿಯಾದದ್ದು ಗೋಚರವಾಯ್ತು. ನೆನ್ನೆಯಂತೆಯೇ ಇಂದೂ ಸಭೆಯ ಹೊರಾಂಗಣ ಹಾಗೂ ಒಳಾಂಗಣ ತುಂಬಿ ತುಳುಕುತ್ತಿರುವುದನ್ನು ಕಂಡು ಅಚ್ಚರಿಯಾದದ್ದು ಸುಳ್ಳಲ್ಲ. ಈ ದಿನವೂ ಗಜಾನನನ ಪ್ರಾರ್ಥನೆಯ ನಂತರ ಆರಂಭವಾದ ಕಾರ್ಯಕ್ರಮದಲ್ಲಿ, ನಡೆದ ಗೋಷ್ಠಿಗಳು ಮೂರು. ಪ್ರಜ್ಞಾ ಪ್ರವಾಹ, ಅಖಂಡ ದೇಶಭಕ್ತ ಹಾಗೂ ಪರಂಪರೆಯ ಬಿಂದುಗಳೆಂಬ ಘನಿಷ್ಠ ವಿಷಯಗಳು. ಇಂದಿನ ದಿನದ ಅತಿಥಿಗಳು ಸ್ವಾಮಿ ಮಂಗಳಾನಾಥಾನಂದಜೀ ಮಹಾರಾಜ್, ಶ್ರೀ ವಿವೇಕ ಉಡುಪ. ಶ್ರೀ ಟಿ.ಜಿ.ಕೆ ಮೂತರ್ಿ, ಶ್ರೀ ಗುಂಡೂರಾಯರು, ಶ್ರೀ ಜಯಂತ್ ಲೋಹಾ ಚೌಧರಿ, ಶ್ರೀ ಮಲ್ಲೇಪುರಂ ವೆಂಕಟೇಶ್, ಹಾಗೂ ಸ್ವಾಮಿ ಯುಕ್ತೇಶಾನಂದಜೀ.

DSC_0613 DSC_0614 DSC_0647 IMG_0445 IMG_9624

ಎಲ್ಲ ಗೋಷ್ಠಿಗಳ ಆದಿಯೂ ಅಂತ್ಯವೂ ಭಾರತದೊಂದಿಗೆ ಬೆಸೆದುಕೊಂಡ ಸ್ವಾಮೀಜಿ ಹಾಗೂ ಅಕ್ಕನ ಸುವಿಚಾರಗಳನ್ನೇ ಹರಡುತ್ತಿತ್ತು. ಇದರ ಜೊತೆಗೆ ಸಂತ ಸಮಾವೇಶ ಹಾಗೂ ಇಂದಿನ ದಿನವೂ ಚಹಾದ್ ಜೋಡಿ ಚೂಡಾ ಕಾರ್ಯಕ್ರಮವು ನಿವರ್ಿಘ್ನವಾಗಿ ನೆರವೇರಿತು.

ಅಪರಾಹ್ನದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಹಾಗೂ ಅಕ್ಕನ ಕುರಿತಾದ ಕವನ ವಾಚನ ನಡೆಯಿತು. ಜೊತೆಗೆ ದೇಶಭಕ್ತ ಯುವ ಸಮೂಹ ಸಮಾಜಕ್ಕೆ ಕೊಡಬಹುದಾದ ಪುಟ್ಟ ಮತ್ತು ಅಮೂಲ್ಯ ಸಲಹೆಗಳನ್ನು ಸುಂದರವಾಗಿ ಚಿತ್ರಿಸಿದ ನಾಲ್ಕೈದು ನಿಮಿಷದ ಐದು ಟೆಲಿಫಿಲ್ಮ್ಗಳನ್ನು ಕೂಡಾ ಪ್ರಸಾರ ಮಾಡಲಾಯಿತು. ಅವುಗಳಲ್ಲಿ ಒಂದು ಟೆಲಿಫಿಲ್ಮ್ಗೆ ಪ್ರಥಮ ಬಹುಮಾನ ಬಂದಿದ್ದು, ಹಾಗೂ ಆ ಬಹುಮಾನದ ಆಯ್ಕೆಯನ್ನು ಸಭೆಯ ಸಾಮಾನ್ಯರೆಲ್ಲರೂ ಮಾಡಿದ್ದೂ ಅಪರೂಪದ್ದಾಗಿತ್ತು.

ಸುಭಾಷ್ ಚಂದ್ರ ಬೋಸರ ಮೊಮ್ಮಗಳಾದ ಶ್ರೀ ರಾಜಶ್ರೀ ಚೌಧರಿಯವರೂ, ಶ್ರೀ ಸುಬ್ರಹ್ಮಣ್ಯ ಭಾರತಿಯವರ ಮರಿಮಗನಾದ ಶ್ರೀ ನಿರಂಜನ ಭಾರತಿಯವರೂ, ದಾಮೋದರ ಚಾಫೇಕರರ ಮರಿಮೊಮ್ಮಗನಾದ ಶ್ರೀ ಪ್ರಶಾಂತ್ ಚಾಫೇಕರ್ರೂ ಪರಂಪರೆಯ ಬಿಂದುಗಳೆಂಬ ಗೋಷ್ಠಿಯನ್ನು ನಡೆಸಿಕೊಟ್ಟದ್ದು ಅತ್ಯಂತ ಆಪ್ತವೂ, ವಿಶಿಷ್ಟವೂ ಆಗಿತ್ತು. ಅಪ್ರತಿಮ ದೇಶಭಕ್ತರು ಶತಶತಮಾನಗಳು ಕಳೆದರೂ ನೆನಪಿನಲ್ಲಿಡಬೇಕಾದ ಸುಂದರವ್ಯಕ್ತಿತ್ವಗಳು. ಅವರ ಮುಂದಿನ ಪೀಳಿಗೆಗೆ ಸಂದ ಗೌರವವೆಲ್ಲವೂ ಅವರ ಪೂರ್ವಜರಿಗೆ ಖಂಡಿತಾ ಹೋಗಿ ತಲುಪಿರುತ್ತದೆ ಎಂಬ ದಿವ್ಯ ನಂಬಿಕೆ ನಮ್ಮದು. ಉಸಿರು ಬಿಗಿಹಿಡಿದು ಸಮ್ಮೇಳನದ ಗೋಷ್ಠಿಗಳನ್ನು ಆಲಿಸುತ್ತಿದ್ದ ಸಭೆಯಲ್ಲಿ ಕ್ರಾಂತಿಕಾರಿಗಳ ಇಂದಿನ ಪೀಳಿಗೆಯನ್ನು ಕಂಡು ಒಮ್ಮೆಲೇ ಮೈದುಂಬಿದ ಜಲಪಾತದ ಭೋರ್ಗರೆತವನ್ನು ನೆನಪಿಸುವಂತಹಾ ಚಲನೆಯುಂಟಾಗಿದ್ದೂ,ಅದು ಅತಿಥಿಗಳ ಮನಸೂರೆಮಾಡಿದ್ದೂ ಏಕಕಾಲದ ಸತ್ಯ. ಒಟ್ಟಿನಲ್ಲಿ ಸಮ್ಮೇಳನದ ಒಂದೊಂದು ಘಟ್ಟವೂ, ಸರ್ವರೂ ನೆನಪಲ್ಲಿಡುವ ಸುಂದರ ನೆನಪಿನ ಬುತ್ತಿಯೇ ಸೈ.

IMG_9865 IMG_9904 IMG_9941

ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡುವಾಗಲೂ ಯುವಾ ತಂಡ ಆರಿಸಿಕೊಂಡದ್ದು ವಸ್ತ್ರದ ಪತ್ರದಲ್ಲಿ, ಸುಂದರವಾಗಿ ಮೂಡಿದ ಧನ್ಯವಾದಗಳನ್ನೊಳಗೊಂಡ ಅಕ್ಷರಗಳ ನಮನ, ಮಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಪೂರ್ವಭಾಗದ ಅಷ್ಟೂ ಮಾಹಿತಿಗಳನ್ನು ಒಳಗೊಂಡ ‘ಅಗ್ನಿಶಿಖೆ’ಯೆಂಬ ಸಾಹಿತ್ಯದ ಗುಚ್ಛ, ಇದರ ಜೊತೆಗೆ, ಅಕ್ಕ ನಿವೇದಿತೆಯೇ ರೂಪಿಸಿದ್ದ ಭವ್ಯಭಾರತದ ವಜ್ರಾಯುಧವನ್ನು ಒಡಲಲ್ಲಿ ಹೊಂದಿದ್ದ ಅಮೋಘ ಧ್ವಜದ ಪುಟ್ಟ ಪ್ರತಿಕೃತಿ! ಅತಿಥಿಗಳ ಶುಭಹಾರೈಕೆಗೆ ನಾವಾದರೂ ಏನು ಕೊಟ್ಟೇವು? ಪೂಜ್ಯರ ಹಿತನುಡಿಗಳಿಗೆ ಈ ಮೂರೂ ಭಾರತೀಯತೆಯ ಹೆಮ್ಮೆಯ ಪ್ರತೀಕಗಳಲ್ಲದೇ ಮತ್ಯಾವುದು ಸರಿಹೊಂದೀತು?

DSC_0786

ತದನಂತರ ನಡೆದದ್ದೇ ಸಮಾರೋಪದ ಸಂಭ್ರಮ. ಸಮಾರೋಪದಲ್ಲಿ ಭಾಗವಹಿಸಿದ್ದು ಶ್ರೀ ಅಭಿನವ ಹಾಲಶ್ರೀ ಸ್ವಾಮಿಗಳು, ಸ್ವಾಮಿ ಆತ್ಮಪ್ರಾಣಾನಂದ ಜೀ ಮಹಾರಾಜ್, ಶ್ರೀ ತರುಣ್ ವಿಜಯ್, ಶ್ರೀ ಗೋಪಾಲ ಜಿನಗೌಡರು ಹಾಗೂ ಶ್ರೀ ಬಸವರಾಜ ಪಾಟೀಲರು.

_DSC0165

_DSC0163

DSC_0311

IMG_1854

fs

ಹಿಂದಿನ ದಿನ ಬಲು ವಿಜೃಂಭಣೆಯಿಂದ ಧ್ವಜಾರೋಹಣ ಮಾಡಿದ್ದನ್ನು, ಈ ಸಮಯದಲ್ಲಿ ಧ್ವಜವನ್ನು ಅವರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯುವ ಪ್ರಕ್ರಿಯೆ ಆರಂಭವಾಯಿತು. ಎರಡೂ ದಿನಗಳ ಕಾಲ ಸಾಹಿತ್ಯವನ್ನೇ ಉಂಡು, ಸಾಹಿತ್ಯವನ್ನೇ ಉಸಿರಾಡಿದ ಅಷ್ಟೂ ಯುವ ಸಮೂಹವು ಕೆಲವೇ ಕ್ಷಣಗಳಲ್ಲಿ ತಂತಮ್ಮ ಊರುಗಳಿಗೆ ತೆರಳಬೇಕಿತ್ತು. ಅಷ್ಟಾದರೂ ಎಲ್ಲಿಯೂ ಗಡಿಬಿಡಿ ಇರಲಿಲ್ಲ, ಧಾವಂತವೂ ಕಾಣಲಿಲ್ಲ. ಎಲ್ಲರೂ ಶ್ರದ್ಧೆಯಿಂದ ಕುಳಿತು, ಕಾರ್ಯಕ್ರಮದ ಕಡೆಯಲ್ಲಿ ಪ್ರಸ್ತುತಗೊಳಿಸಿದ ರಾಮಕೃಷ್ಣ ಆಶ್ರಮದ ಪೂಜ್ಯ ಸಂತರ ‘ಸಂನ್ಯಾಸಿ ಗೀತೆ’ಯನ್ನು ಸಂಪೂರ್ಣವಾಗಿ ಆಲಿಸಿ ಪುನೀತಗೊಂಡರು.

ಪರಮಪೂಜ್ಯರ ಜೊತೆ, ಸ್ವಾಮೀಜಿಯ ಸಂನ್ಯಾಸಿ ಗೀತೆಯನ್ನು ವೇದಿಕೆಯ ಮೇಲೆಯೇ ಕುಳಿತು ದನಿಗೂಡಿಸುವ ಅವಕಾಶ ಯುವಾ ಬ್ರಿಗೇಡಿನ ತರುಣರಿಗೆ ದೊರಕಿದ್ದು ಮರೆಯಲಾರದ್ದು.

IMG_1957

ಕಾರ್ಯಕ್ರಮ ಸಂಪನ್ನಗೊಂಡ ನಂತರ ಸಕಲರೂ ಅವರವರ ಊರುಗಳಿಗೆ ತೆರಳಿದರು. ದಶದಿಕ್ಕುಗಳಿಂದಲೂ ಬಂದ ಯುವಾ ಸಮೂಹದ ತಾಣ ಬೇರೆ ಬೇರೆ ಇರಬಹುದು, ಆದರೆ ಸೇರುವ ಗಮ್ಯ ಮಾತ್ರ ಒಂದೇ. ಅದು ಸ್ವಾಮೀಜಿಯ ಸಂಕಲ್ಪವನ್ನು ತಮ್ಮ ತಮ್ಮ ಪಾತ್ರ ಮುಗಿಯುವವರೆಗೂ ಜತನದಿಂದ ಕಾಪಿಡುವ ಕೈಂಕರ್ಯ.

ಹೌದು. ಭಕ್ತಿ, ಭಜನೆ, ಬಹುಪರಾಕುಗಳೆಲ್ಲವೂ ತಾಯಿ ಭಾರತಿಯ ಚರಣಕಮಲಕ್ಕೇ!
ಎಲ್ಲವೂ ಅವಳೆಡೆಗೆ, ಎಲ್ಲವೂ ಅವಳಡಿಗೆ.

ವಂದೇ ಮಾತರಂ

Leave a Reply

Your email address will not be published. Required fields are marked *

You May Also Like

ಉದ್ಘಾಟನೆಯಾಯ್ತು ಎರಡು ದಿನದ ಮಹಾ ಯಾತ್ರೆ! ವಿವೇಕಾನಂದ ನಿವೇದಿತಾರ ಸಾಹಿತ್ಯ ಜಾತ್ರೆ!

ಫೆಬ್ರುವರಿ 11 ಬೆಳಿಗ್ಗೆ 11 ಗಂಟೆ ಕಿಕ್ಕಿರಿದು ನೆರೆದಿದ್ದ ಎರಡು ಸಾವಿರ ಜನ. ಅದರಲ್ಲಿ 80% ನಷ್ಟು 30 ವಯಸ್ಸಿಗಿಂತಾ ಕಡಿಮೆಯಿದ್ದ ತರುಣರೇ! ವೇದಿಕೆಯ ಮೇಲೆ ಅತಿರಥ ಮಹಾರಥರು! ಮುಂದಿನ ವಿಶೇಷ ಆಸನಗಳಲ್ಲಿ ಸಾಧು ಸಂತರು ಸನ್ಯಾಸಿ ಸನ್ಯಾಸಿನಿಯರು ಸಾಧಕ ಗಣ.…
View Post

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘುಸಾಹಿತ್ಯ ಸಮ್ಮೇಳನ – ವಿಜಯಪುರ

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತೆ ರಾಜ್ಯಾದ್ಯಂತ ೧೫೦ ಲಘು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅಂದು ಮಾಡಿದ ಸಂಕಲ್ಪಕ್ಕೆ ಮೊದಲ ವೇದಿಕೆ ಸಜ್ಜುಗೊಳಿಸಿದ್ದು ಬೆಂಗಳೂರಿನ ವಿಜಯಪುರ‌.! ವಿವೇಕಾನಂದರು ಜಗತ್ತಿನಲ್ಲೆಲ್ಲ ಭಾರತದ ಪರಂಪರೆ ಶ್ರೇಷ್ಠತೆಯನ್ನು ಮುಟ್ಟಿಸಿದರೆ, ನಿವೇದಿತಾ…
View Post

ಕವನ ವಾಚನದ ಕರ್ಣಾನಂದ! ಗೀತ ಗಾಯನದ ಆತ್ಮಾನಂದ! ಗೋಷ್ಠಿಯ ವಿಷಯ – ನಾದೋಪಾಸಕ ವಿವೇಕಾನಂದ!

ಫೆಬ್ರುವರಿ 12 ಗೋಷ್ಠಿ 6 ಸಮಯ ಮಧ್ಯಾಹ್ನ 2.30. ಒಬ್ಬ ಸಂತ ಮಾತ್ರ ತಾ ಏನೂ ಆಗದೇ ಎಲ್ಲಾ ಅಗಬಲ್ಲ ಎನ್ನುವ ಮಾತಿಗೆ ವಿವೇಕಾನಂದರು ಸ್ಪಷ್ಟ ಉದಾಹರಣೆಯಾಗುತ್ತಾರೆ. ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ, ಸೇವೆ ಮತ್ತು ರಾಷ್ಟ್ರ ನಿರ್ಮಾಣ ಕ್ಷೇತ್ರದಲ್ಲಿ ಹಲವಾರು…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘು ಸಾಹಿತ್ಯ ಸಮ್ಮೇಳನಗಳು

‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ. ಜಡವಾದುದನ್ನು ಆದರ್ಶವಾಗಿರಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀರ್ಣಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು.’ ಈ ಮಾತುಗಳು ವಿವೇಕಾನಂದರ ಮಾನಸ ಪುತ್ರಿ ಸೋದರಿ ನಿವೇದಿತಾಳದ್ದು. ಆಕೆಯ ಮಾತುಗಳೇ ಹಾಗೆ ಸದಾ ಬೆಂಕಿಯನ್ನುಗುಳುತ್ತಿದ್ದವು. ಆಕೆ…
View Post

ಹಿರಿ ಮನೆ

ಯುವಾ ಬ್ರಿಗೇಡ್ ನ ಹುಡುಗರ ಕೆಲಸಗಳೇ ಹಾಗೆ..! ಮಾಡುವ ಕೆಲಸವನ್ನು ಎಲ್ಲರಿಗಿಂತ ಡಿಫರೆಂಟ್ ಆಗಿ, ಪರ್ಫೆಕ್ಟ್ ಆಗಿ ಮಾಡುವಂತಹ ಜಾಯಮಾನ. ಕಳೆದ ಮೂರು ವರ್ಷಗಳಿಂದ ಇದನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅದರ ಸೊಗಡು ಗೊತ್ತಾಗುವುದು. ಹೌದು ಕಳೆದ ಮೂರು ವರ್ಷಗಳ ಹಿಂದಿನ…
View Post