ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘುಸಾಹಿತ್ಯ ಸಮ್ಮೇಳನ – ವಿಜಯಪುರ

Total
0
Shares

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತೆ ರಾಜ್ಯಾದ್ಯಂತ ೧೫೦ ಲಘು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅಂದು ಮಾಡಿದ ಸಂಕಲ್ಪಕ್ಕೆ ಮೊದಲ ವೇದಿಕೆ ಸಜ್ಜುಗೊಳಿಸಿದ್ದು ಬೆಂಗಳೂರಿನ ವಿಜಯಪುರ‌.!

ವಿವೇಕಾನಂದರು ಜಗತ್ತಿನಲ್ಲೆಲ್ಲ ಭಾರತದ ಪರಂಪರೆ ಶ್ರೇಷ್ಠತೆಯನ್ನು ಮುಟ್ಟಿಸಿದರೆ, ನಿವೇದಿತಾ ಭಾರತಕ್ಕಾಗಿ ತನ್ನನ್ನೆ ಸಮರ್ಪಿಸಿ ಕೊಂಡವಳು. ಇಂತಹ ಗುರು ಶಿಷ್ಯರ ಬದುಕನ್ನು ಅರಿಯುತ್ತಾ, ಇವರ ಹತ್ತು ಹಲವು ದಿಕ್ಕುಗಳಿಗೆ ಪಸರಿಸಿರುವ ಮೇರು ವ್ಯಕ್ತಿತ್ವವನ್ನು ಮತ್ತು ಇವರ ಸಾಹಿತ್ಯವನ್ನು ಸಮಾಜಕ್ಕೆ ಪರಿಚಯಿಸುವ ಸಲುವಾಗಿ ರೂಪುಗೊಂಡಿದ್ದೆ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ.!

ಇಂತಹುದೊಂದು ಮಹತ್ತರ ಕಾರ್ಯಕ್ಕೆ ವಿಜಯಪುರ ತನ್ನನ್ನು ತೊಡಗಿಸಿಕೊಂಡಿತು.

ಏಪ್ರೀಲ್ ೧ ವಿಜಯಪುರದ ಸಾಹಿತ್ಯ ಆಸಕ್ತರಿಗೆ ಹಬ್ಬ. ಅಂದು ವಿಜಯಪುರದ ಬೀದಿಯಲ್ಲಿ ಪಲ್ಲಕ್ಕಿಯ ಮೇಲೆ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾಳ ಸಾಹಿತ್ಯವನ್ನು ಹೊತ್ತು ತರುತ್ತಿದ್ದರೆ ಸಾಹಿತ್ಯ ಪ್ರೇಮಿಗಳಲ್ಲಿ ಧನ್ಯತಾ ಭಾವ ಮೂಡಿತ್ತು. ಸಾಹಿತ್ಯ ಜಾತ್ರೆಯಲ್ಲಿ ಭಾಗವಹಿಸಿದ ಹೆಮ್ಮೆ ಆಗುತ್ತಿತ್ತು.ಪಲ್ಲಕ್ಕಿ ಉತ್ಸವವನ್ನು ಅಂದು,ತನ್ನ ಸಂಪೂರ್ಣ ಜೀವನವನ್ನೇ ವಿವೇಕಾನಂದರ ಕಾರ್ಯಕ್ಕೆ ಮೀಸಲಿಟ್ಟ ಪರಮ ಪೂಜ್ಯ ಶ್ರೀ ಪೂರ್ಣನಂದ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮ ಚಿಕ್ಕಬಳ್ಳಾಪುರ ಇವರು ಉದ್ಘಾಟಿಸಿದರು.

17506604_1514712741882043_926263452_n

17622691_1514711161882201_769508602_o 17690131_1514713068548677_1368090306_n 17760299_1514712905215360_1521104632_n

ಪಲ್ಲಕ್ಕಿಯ ಮೇಲೆ ಹೊತ್ತು ತಂದ ಸಾಹಿತ್ಯವನ್ನು ವೇದಿಕೆಯ ಮುಂಭಾಗದಲ್ಲಿ ಇಟ್ಟು ಪುಷ್ಪಾರ್ಚನೆ ಮಾಡಲಾಯಿತು. ನಂತರ ವೇದಿಯ ಕಾರ್ಯಕ್ರಮವನ್ನು ಮಾತಾ ಅಮೃತಾನಂದಮಯಿ, ಭವತಾರಿಣಿ ಆಶ್ರಮ ವಿಜಯನಗರ ಮತ್ತು ಪರಮ ಪೂಜ್ಯ ಶ್ರೀ ಪೂರ್ಣಾನಂದ ಸ್ವಾಮೀಜಿಯವರು ಉದ್ಘಾಟಿಸಿದರು.

ಕಾರ್ಯಕ್ರಮದ ಮೊದಲ ಗೋಷ್ಠಿಯಲ್ಲಿ ‘ವಿವೇಕಾಮಯ ಜಗತ್ತು’ ಎಂಬ ವಿಷಯವನ್ನು ಯುವಾ ಬ್ರಿಗೇಡ್ನ ರಾಜ್ಯ ಸಂಚಾಲಕರಾದ ಶ್ರೀ ನಿತ್ಯಾನಂದ ವಿವೇಕವಂಶಿಯವರು ನಡೆಸಿಕೊಟ್ಟರು.ವಿವೇಕಾನಂದರು ಜಗತ್ತಿನ ತುಂಬ ಹೇಗೆ ಹರಡಿಕೊಂಡಿದ್ದಾರೆ ಎನ್ನುವುದನ್ನು ವಿಸ್ತಾರವಾಗಿ ತಿಳಿಸಿದರು.

ಮೊದಲನೆ ಗೋಷ್ಠಿಯ ಎರಡನೆಯ ವಿಷೆಯವಾದ ‘ನಿವೇದಿತಾ ಕಂಡ ಭಾರತ’ದ ಕುರಿತು ಮಾತನಾಡುತ್ತ ಡಾ. ತೇಜಸ್ವಿನಿಯವರು

ಭಾರತೀಯರಾದ ನಾವು ಭಾರತವನ್ನು ಪ್ರೀತಿಸುದಕ್ಕಿಂತ ಒಂದು ತೂಕ ಹೆಚ್ಚು ನಿವೇದಿತಾ ಭಾರತವನ್ನು ಪ್ರೀತಿಸುತ್ತಿದ್ದಳು.ಅವಳು ಐರ್ಲೆಂಡಿನಲ್ಲಿ ಹುಟ್ಟಿದವಳಾದರು ತಾಯಿಯಂತೆ ಅಪಾರವಾಗಿ ಪ್ರೀತಿಸಿದ್ದು ಭಾರತವನ್ನು.ಹೀಗೆ ನಿವೇದಿತಾಳ ಅಖಂಡ ಭಾರತ ಪ್ರೇಮವನ್ನ ಬಿಚ್ಚಿಟ್ಟರು.

ಗೋಷ್ಠಿ ಎರಡರ ಮೂರನೆ ವಿಷೆಯವಾದ ‘ಗಟ್ಟಿಯಾಗಲಿ ರಟ್ಟೆ’ಯ ಕುರಿತು ಯುವಾ ಬ್ರಿಗೇಡ್ನ ಮಾರ್ಗದರ್ಶಕರಾಗಿರುವ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಮಾತನಾಡಿದರು. ಅವರು ತಮ್ಮ ವಿಷಯವನ್ನು ಮಂಡಿಸುತ್ತ ಭಾರತದ ಬಾಹುಗಳು ಇಂದು ಜಗತ್ತಿನೆತ್ತರಕ್ಕೆ ಚಾಚಿ ನಿಂತಿದೆ. ಆ ಬಾಹುಗಳಿಗೆ ಬಲ ತುಂಬ ಬೇಕಾಗಿದೆ ಆಗಲೇ ಭಾರತದ ರಟ್ಟೆ ಗಟ್ಟಿಯಾಗೋದು ಎಂದು ಹೇಳಿದರು.

17690281_1514712845215366_1707992442_n 17742260_1514711191882198_654275811_n 17742266_1514711198548864_118748876_n

ನಂತರ ಕಾರ್ಯಕ್ರಮದಲ್ಲಿ ಕವನವಾಚನ ನಡೆಯಿತು.ಕಾರ್ಯಕ್ರಮದ ಕೊನೆಯಲ್ಲಿ ವಿವೇಕಾನಂದರು ಸಾರೋಟು ಓಡಿಸುವ ಚಿತ್ರ ಬಿಡಿಸುವ ಮೂಲಕ ಕಲಾವಿದ ಪ್ರಸನ್ನ ಬೆಂಗಳೂರು ಇವರು ಕಾರ್ಯಕ್ರಮಕ್ಕೆ ರಂಗು ತುಂಬಿದರು‌. ಅತಿಥಿಗಳಾಗಿ ಆಗಮಿಸಿದ ನಾಗರಾಜಪ್ಪ ಸ್ವಾಮಿಗಳು, ಶ್ರೀ ಬಿ.ಎ ಕೃಷ್ಣಪ್ಪನವರು, ಶ್ರೀ ಶ್ರೀನಿವಾಸ ಮೂರ್ತಿ ಎಸ್. ಸುಂಡ್ರಹಳ್ಳಿ ಇವರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದರ ಮೂಲಕ ಕಾರ್ಯಕ್ರಮವು ಸಂಪನ್ನ ಗೊಂಡಿತು.

Leave a Reply

Your email address will not be published. Required fields are marked *

You May Also Like

ವಿವೇಕ ಕುಂಭದ ಕೊನೆಯಲ್ಲಿ ನನ್ನ ಕನಸಿನ ಕರ್ನಾಟಕ!

ಸಾವಿರಾರು ವಿವೇಕಾನಂದರ ಸಮ್ಮುಖದಲ್ಲಿ ಮಾತನಾಡಿದ ಕೆಲವೇ ನಿಮಿಷಗಳಲ್ಲಿ ನರೇಂದ್ರ ಮೋದಿಯವರು ಸಿದ್ದರಾಮಯ್ಯನವರು ಐದು ವರ್ಷಗಳಲ್ಲಿ ಮಾಡಲಾಗದ್ದನ್ನು ಮಾಡಿ ತೋರಿಸಿಬಿಟ್ಟರು. ಪ್ರಧಾನಮಂತ್ರಿಯವರಿಗೆ ಚೆನ್ನಾಗಿ ಗೊತ್ತು ಹತ್ತು ಸಾವಿರ ವಿವೇಕಾನಂದ ರೂಪಧಾರಿಗಳನ್ನು ನಿಮರ್ಿಸುವ ಸಂಕಲ್ಪ ಹೊತ್ತ ಸಂತ ಮನಸು ಮಾಡಿದರೆ ಜನ ಜೀವನವನ್ನೇ ಬದಲಾಯಿಸಬಲ್ಲ…
View Post

ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ

‘ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ. ಸೆಪ್ಟೆಂಬರ್ 10, 11 ‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ, ಜಡವಾದುದನ್ನು ಆದರ್ಶವಾಗಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀಣರ್ಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು ಬೇಕಾಗಿದ್ದಾರೆ.’…
View Post

ನಂದಾದೀಪ

ಮರೆವು – ಒಂದು ಮನುಷ್ಯ ಸಹಜ ಗುಣ. ವರ್ಷಕ್ಕೊಮ್ಮೆ ಬರೋ WEDDING ANNIVERSARY ಗಂಡನಿಗೆ ನೆನಪಿರಲ್ಲ, ಗಂಡ ಕೇಳಿದ ಹೊಸ ರುಚಿ ಪಾಯಸ ಹೆಂಡತಿಗೆ ನೆನಪಿರಲ್ಲ. ಅಪ್ಪನಿಗೆ ಮಗ ಹೇಳಿದ್ದೆನೋ ನೆನೆಪಿರಲ್ಲ, ಮಗನಿಗೆ ಅಮ್ಮ ತರಲಿಕ್ಕೆ ಹೇಳಿದ್ದು ನೆನಪಿರಲ್ಲ. ಇವೆಲ್ಲವೂ ನೆನಪಿದ್ರೆ…
View Post

ಉದ್ಘಾಟನೆಯಾಯ್ತು ಎರಡು ದಿನದ ಮಹಾ ಯಾತ್ರೆ! ವಿವೇಕಾನಂದ ನಿವೇದಿತಾರ ಸಾಹಿತ್ಯ ಜಾತ್ರೆ!

ಫೆಬ್ರುವರಿ 11 ಬೆಳಿಗ್ಗೆ 11 ಗಂಟೆ ಕಿಕ್ಕಿರಿದು ನೆರೆದಿದ್ದ ಎರಡು ಸಾವಿರ ಜನ. ಅದರಲ್ಲಿ 80% ನಷ್ಟು 30 ವಯಸ್ಸಿಗಿಂತಾ ಕಡಿಮೆಯಿದ್ದ ತರುಣರೇ! ವೇದಿಕೆಯ ಮೇಲೆ ಅತಿರಥ ಮಹಾರಥರು! ಮುಂದಿನ ವಿಶೇಷ ಆಸನಗಳಲ್ಲಿ ಸಾಧು ಸಂತರು ಸನ್ಯಾಸಿ ಸನ್ಯಾಸಿನಿಯರು ಸಾಧಕ ಗಣ.…
View Post

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಮತ್ತೊಮ್ಮೆ ದಿಗ್ವಿಜಯ

ಚಿಕಾಗೋ ಸರ್ವಧರ್ಮ ಸಮ್ಮೇಳನ ಎಂದೊಡನೆ ನೆನಪಾಗೋದು ನಿಸ್ಸಂಶಯವಾಗಿ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರೇ. ಇದೆ ಸಮ್ಮೇಳನದಲ್ಲಿಯೇ ಸ್ವಾಮೀಜಿ ಸನಾತನ ಧರ್ಮವನ್ನ ಜಗತ್ತಿನ ಮುಂದೆ ಎತ್ತಿ ಹಿಡಿದಿದ್ದು. ಸರ್ವಧರ್ಮ ಸಮ್ಮೇಳನಕ್ಕೆ ಹೊರಡುವ ಮೊದಲೇ ಆ ಸಮ್ಮೇಳನ ತನಗಾಗೇ ಆಗುತ್ತಿರುವುದೆಂದಿದ್ದರು ಸ್ವಾಮೀಜಿ. ಆದರೆ ತ್ಯಾಗ…
View Post