ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ!

ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ ಪರಿಣಾಮ ೩೦೦ ವರ್ಷಗಳ ಕಾಲ ದಾಸ್ಯದಲ್ಲಿ ಕಳೆಯಬೇಕಾಯಿತು. ಪ್ಲಾಸಿ ಕದನದಿಂದ ಹಿಡಿದು ಸುಭಾಷರ I N A ತನಕ ಬ್ರಿಟಿಷರ ವಿರುದ್ಧ ಸತತ ಹೋರಾಟದ ಫಲವಾಗಿ ಸ್ವಾತಂತ್ರ್ಯ ದೊರೆಯುತು ಎನ್ನುವುದನ್ನು ಯಾವುದೇ ಕಾರಣಕ್ಕೂ ಮರೆಯುವಂತ್ತಿಲ್ಲ.

ಹೌದು ಈ ಭವ್ಯ ಭಾರತವನ್ನು ಕಟ್ಟಲು ಅದೆಷ್ಟು ವೀರರ ಪ್ರಾಣಾರ್ಪಣೆ ಆಗಿದೆ ಎಂದು ಲೆಕ್ಕ ಇಡಲಾಗದು. ಲೆಕ್ಕಕ್ಕೆ ಸಿಕ್ಕವರನ್ನು ಮರೆವುದಾದರೂ ಹೇಗೆ. ಇವರೆಲ್ಲರನ್ನು ಸ್ಮರಿಸಿಕೊಳ್ಳುವುದು ಸ್ವತಂತ್ರ ಭಾರತದ ಪ್ರಜೆಯಾಗಿ ನಮ್ಮ ಆದ್ಯ ಕರ್ತವ್ಯ. ಹೀಗಾಗಿ ಈ ಬಾರಿ ಸ್ವಾತಂತ್ರ್ಯ ದಿನದಂದು ನಮ್ಮ ಸುತ್ತಲಿನ ಸ್ವಾತಂತ್ರ್ಯಕ್ಕಾಗಿ ಮಡಿದ, ದೇಶಕ್ಕಾಗಿ ದುಡಿದ, ವೀರರು ಓಡಾಡಿದ ಭೂಮಿಯ ಮೃತ್ತಿಕೆಯನ್ನ ಸಂಗ್ರಹಿಸಿ ಆ ಪವಿತ್ರ ಮೃತ್ತಿಕೆಯನ್ನು ತಿಲಕವನ್ನಾಗಿಸಿ ಕೊಳ್ಳಬೇಕೆಂದು ಸಂಕಲ್ಪ ಮಾಡಲಾಯಿತು. ರಾಜ್ಯಾದ್ಯಂತ ತಮ್ಮೂರಿನ ವೀರರ ಹುಡುಕಾಟ ಜೋರಾಗಿ ನಡೆಯಿತು.!

ಅಖಂಡ ಭಾರತದ ಉಳಿವಿಗೆ ದೇಶದ ಸಂಘಟಿತ ಹೋರಾಟದಲ್ಲಿ ನಾಡಿನ ಕೊಡುಗೆ ಕಡಿಮೆಯೇನಲ್ಲ.
ನಾಡಿನ ಉದ್ದಗಲದಲ್ಲೂ ದಾಸ್ಯದ ಮುಕ್ತಿಗೆ ಕಹಳೆ ಮೊಳಗಿತ್ತು. ರಾಣಿ ಅಬ್ಬಕ್ಕನಿಂದ ಹಿಡಿದು ಆಲೂರು ವೆಂಕಟರಾಯರಿಗೆ ಮುಕ್ತಾಯ ಗೊಳ್ಳದೆ ಇತ್ತೀಚಿನ ಹನುಮಂತಪ್ಪ ಕೊಪ್ಪದರವರೆಗೆ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ ಕರುನಾಡಿನ ವೀರರು ಅಸಂಖ್ಯ !
ಇಂತಹ ಅಸಂಖ್ಯ ವೀರರ ಬದುಕನ್ನೊಮ್ಮೆ ಹೊಕ್ಕು ಅವರು ಓಡಾಡಿದ ನೆಲದ ಪವಿತ್ರ ಮೃತ್ತಿಕೆಯ ಸಂಗ್ರಹಕ್ಕೆ ರಾಜ್ಯದ ಮೂಲೆ ಮೂಲೆಗಳಲ್ಲಿ ಕಾರ್ಯಕರ್ತರು ಸಿದ್ಧರಾದರು.

ಉಳ್ಳಾಲ , ಮುಂಡರಗಿ, ನರಗುಂದ , ಕಿತ್ತೂರು , ಸಂಗೊಳ್ಳಿ , ಶಿವಪುರ , ಬೆಳವಾಡಿ ಹೀಗೆ ಸ್ವಾತಂತ್ರ್ಯದ ಯಜ್ಞಕ್ಕೆ ಹವಿಸ್ಸಾದ ವೀರ- ವಿರಾಂಗಿಣಿಯರು ಮೆಟ್ಟಿದ ಪುಣ್ಯ ಭೂಮಿಯನ್ನ ಸುತ್ತಿ ಆ ಪುಣ್ಯ ಭೂಮಿಯ ಇತಿಹಾಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರಗಳ ಮೂಲಕ ತಿಳಿಸುವ ಪ್ರಯತ್ನ ಮಾಡಿದರು. ಇಷ್ಟು ದಿನ ತಿಳಿಯದ ಎಷ್ಟೋ ಹೆಸರುಗಳು ಬೆಳಕಿಗೆ ಬಂತು. ಒಂದಷ್ಟು ವೀರರನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಬರಿ ಕರ್ನಾಟಕದಲ್ಲಿ ಅಲ್ಲದೆ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಗೋವಾಗಳಲ್ಲೂ ಮೃತ್ತಿಕೆಯನ್ನು ಸಂಗ್ರಹಿಸಲಾಯಿತು . ರಾಜ್ಯಾದ್ಯಂತ ಬಹಳಷ್ಟು ಸ್ಥಳಗಳಿಂದ ಮೃತ್ತಿಕೆ ಸಂಗ್ರಹವಾಯಿತು.

20707967_1206387652801192_92268276762528860_n 20708502_695436350666855_5767090393178529008_n 20729339_1375874072531607_1645709061472704373_n 20729548_10208307363716397_5106956552631598928_n 20798998_838450169652250_5443715671535086553_n 20228999_1391311994320662_3836385632542960668_n

ಸಂಗ್ರಹಿಸಿದ ಅಷ್ಟು ಮೃತ್ತಿಕೆಯನ್ನು ಉತ್ತರ ಕನ್ನಡದ ಗುಣವಂತೆಯಲ್ಲಿ ನಡೆದ ಸ್ವಾತಂತ್ರ್ಯ ಶ್ರಾವಣದ ಉತ್ಸವದಲ್ಲಿ ತಿಲಕವನ್ನಾಗಿ ಧಾರಣೆ ಮಾಡಲಾಯಿತು.!

ಯಾರು ಸ್ವತಃ ಮೃತ್ತಿಕೆಯನ್ನ ಸಂಗ್ರಹಿಸಿದರೋ ಅವರು ಎಂದಿಗೂ ಆ ವೀರರನ್ನು ಮರೆಯುವುದಿಲ್ಲ ಮತ್ತು ದೇಶದ ಮೇಲೆ ಅಪಾರವಾದ ಹೆಮ್ಮೆ ತಾಳುತ್ತಾರೇ. ಕೊನೆಯದಾಗಿ ಆಗಬೇಕಾಗಿರುವುದು ಇದೆ ತಾನೇ ರಾಷ್ಟ್ರದ ಬಗ್ಗೆ ಯಾರಾದರು ಹೆಮ್ಮೆ ಪಡುತ್ತಾರೆಂದರೆ ಮಾಡಿದ ಕೆಲಸ ಸಾರ್ಥಕ !

ಈ ಕೆಳಕಂಡ ಜಾಗಗಳಿಂದ ಮೃತ್ತಿಕೆ ಸಂಗ್ರಹಿಸಲಾಗಿದೆ

#ಹಾವೇರಿ_ಜಿಲ್ಲೆ
* ಮೈಲಾರ ಮಹದೇವಪ್ಪ
* ರಾಯಪ್ಪ ನರಗುಂದ
* ತಿರುಕಪ್ಪ ಮಡಿವಾಳ
* ಈರಯ್ಯ ಹಿರೇಮಠ
*ಮೆಣಸಿನಹಾಳ ತಿಮ್ಮನಗೌಡ
*ಹಳ್ಳಿಕೇರಿ ಗುದ್ಲೆಪ್ಪ

#ಗದಗ_ಜಿಲ್ಲೆ
*ಮುಂಡರಗಿ ಭೀಮರಾಯ
* ನರಗುಂದ ಬಾಬಾಸಾಹೇಬ

#ಬಾಗಲಕೋಟೆ
*ಸಿಂಧೂರ ಲಕ್ಷಣನ ಸಮಾಧಿ ಬೀಳಗಿ
*ಶಂಕ್ರಪ್ಪ ರಾಯಪ್ಪ ಸಂತಿ
*ಹುಚ್ಚಪ್ಪ ಬಸಪ್ಪ ಲೆಕ್ಕದ
*ರಾಜಪ್ಪ ಜಿಂತೆಪ್ಪ ಧೋತ್ರೆ
* ಮಹಾಲಿಂಗಪ್ಪ ಕಲಕಂಬ – ಬನಹಟ್ಟಿ
* ಪುಷ್ಪರಾಜ ಡಾಗಾ – ಬನಹಟ್ಟಿ
* ಶ್ರೀಶೈಲಪ್ಪ ಬೆನ್ನಿ – ರಬಕವಿ
* ಗುರುಶಿದ್ದಪ್ಪ ತಂಗಡಿ – ರಬಕವಿ
* ಡಾ. ಜಿ,ಡಿ. ಬಡಚಿಕರ್ – ಬನಹಟ್ಟಿ
* ಭಾಸ್ಕರ್ ಜೀವಾಜಿ ಕೊಪರ್ಡೆ – ಬನಹಟ್ಟಿ
* ಸುಭದ್ರತಾಯಿ ಭಾಸ್ಕರ್ ಕೊಪರ್ಡೆ – ಬನಹಟ್ಟಿ

#ಧಾರವಾಡ_ಜಿಲ್ಲೆ
*ಆಲೂರು ವೆಂಕಟರಾಯರು
*ನಾರಾಯಣ ಡೋಣಿ
*ಹನುಮಂತಪ್ಪ ಕೊಪ್ಪದ
*ಹುಯಿಲಗೋಳ ನಾರಾಯಣರಾವ್
*ಮಲಿಕಸಾಬ
*ಅಬ್ದುಲ ಗಫಾರ
*ಗೌಸು ಸಾಬ
*ಕುಸುಮಾಬಾಯಿ ದೇಶಪಾಂಡೆ

#ಬೆಳಗಾವಿ_ಜಿಲ್ಲೆ
*ಬೆಳವಡಿ ಮಲ್ಲಮ್ಮ
*ಅಮಟೂರು ಬಾಳಪ್ಪ
*ಏಣಗಿ ಬಾಳಪ್ಪ
*ಚನ್ನಮ್ಮನ ಸಮಾಧಿ ಸ್ಥಳ ಬೈಲಹೊಂಗಲ
*ಸುಬ್ಬರಾವ ಹುದ್ದಾರ
*ಸಿದ್ದರಾಮ ಗುರೂಜಿ
*ಸಂಗೊಳ್ಳಿ ರಾಯಣ್ಣನ ಸಮಾಧಿ ನಂದಗಡ
*1924 ಕಾಂಗ್ರೇಸ್ ಅಧಿವೇಶನ ನಡೆದ ಸ್ಥಳ
*ಮಡಿವಾಳಪ್ಪ ನಾಯ್ಕರ್ (ಹುತಾತ್ಮ ಯೋಧ)
*ಎ ಅರ್ ಪಂಚಗಾವಿ
*ಗಂಗಾಧರ ದೇಶಪಾಂಡೆ
*ನಾ ಸು ಹರ್ಡೇಕರ್
*ಕಾಕತಿ ಕೋಟೆ ಚೆನ್ನಮ್ಮ(ಜನ್ಮಸ್ಥಳ)
* ರಾಣಿ ಚೆನ್ನಮ್ಮ ಕೋಟೆ, ಕಿತ್ತೂರು
* ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ, ಸಂಗೋಳ್ಳಿ
* ಲೋಕಮಾನ್ಯ ಬಾಲ ಗಂಗಾಧರ ಟಿಳಕ ಸ್ಮಾರಕ ಮಂದಿರ, ಅಥಣಿ
* ನೂರಂದಪ್ಪ ಶೆಟ್ಟಿ, ಅಥಣಿ
* ಬಸವರಾಜ ಚೌಗಲಾ, ವೀರಯೋಧ, ದರೂರ – ಅಥಣಿ

#ದಕ್ಷಿಣ ಕನ್ನಡ
* ರಾಣಿ ಅಬ್ಬಕ್ಕ ಉಳ್ಳಾಲ
* ಬ್ಯಾರಿಸ್ಟರ್ ಯಲ್ಲಪ್ಪ ತೊಕ್ಕೊಟ್ಟು

#ಉಡುಪಿ
* ಶ್ರೀ ಗೋವಿಂದ ನಾಯಕ್ ಕುಕ್ಕಿಕಟ್ಟೆ
* ಶ್ರೀ ಕೆ ಲಕ್ಷ್ಮಿನಾರಾಯಣ ಶರ್ಮ ಬಂಟಕಲ್ಲು
* ಶ್ರೀ ಶಂಕರನಾರಾಯಣ ಸಾಮಗ ಮಲ್ಪೆ

#ಶಿವಮೊಗ್ಗ
* ಬಿದನೂರು ಪ್ರಾಂತ್ಯದ ಶಿವಪ್ಪನಾಯಕನ ಕೋಟೆ
* ರಾಜಸ್ಥಾನದ ಹಳದಿಘಾಟಿನಲ್ಲಿರುವ ರಾಣಪ್ರತಾಪರ ಮೃತಿಕೆ
* ಶಿವಮೊಗ್ಗದಲ್ಲಿ ವೀರ ಸಾವರ್ಕರರು ತಂಗಿದ್ದ ಶ್ರೀ ಮಂಜುನಾಥ್ ರಾವ್ ಅವರ ಮನೆಯ ಅಂಗಳದ ಮೃತಿಕೆ
* ಜಲಿಯನ್ ವಾಲಾಬಾಗ್ ನಿಂದ ತಂದ ಮೃತಿಕೆ

# ಉತ್ತರ ಕನ್ನಡ
* ಕಾರವಾರ
ರಾಮಾ ರಾಘೋಬಾ ರಾಣೆ (param veer chakra Vijeta)
* ಹೆಂಜಾ ನಾಯ್ಕ (fought against British under keladi rule)
* ಸಿಪಾಯ ವಿನೋದ್ ನಾಯ್ಕ (battle casualty )
* ಸಿಪಾಯ ರಾಜನ ಕೋಠಾರಕರ (Battle casualty )
Vishnu Pai ( freedom fighter)

* ಕುಮಟಾ
ನಾರಾಯಣ ಕುಸ್ಲಪ್ಪ ಬೆಟ್ಕಳಿ (ಸ್ವಾತಂತ್ರ್ಯ ಹೊರಾಟಗಾರರು)

* ಹಳಿಯಾಳ
ಮಾರುತಿ ಬಿ ಪಾಟೀಲ್ – ಹುತಾತ್ಮ ಯೋಧ

#ಮಹಾರಾಷ್ಟ್ರ
* ಬಾಲಗಂಗಾಧರ_ತಿಲಕ ಅವರು ಜೀವಿಸಿದ ಮನೆಯ ಮೃತ್ತಿಕೆ ಕೇಸರಿವಾಡಾ

* ಮರಾಠಾ ಸಾಮ್ರಾಜ್ಯದ ಮೊದಲನೆ
ಬಾಜೀರಾವ್ ಪೇಶ್ವೆ ಕಟ್ಟಿಸಿದ ಮತ್ತು ಜೀವಿಸಿದ ಸ್ಥಳದ ಮೃತ್ತಿಕೆ ಶನಿವಾರವಾಡಾ
* ಹುತಾತ್ಮ ಚೌಕ – ಸೋಲಾಪುರ

#ಗೋವಾ
* ಕಂಕೋಲಿ – ಪೋರ್ಚುಗೀಸ ಹೋರಾಟದಲ್ಲಿ ಮಡಿದ ಸ್ಮಾರಕ
#ಮಂಡ್ಯ
* ಸತ್ಯಾಗ್ರಹ ಸೌದ ಶಿವಪುರ, ಮದ್ದೂರು

#ವಿಜಯಪುರ
* ವೀರಯೋಧ ರಾಮಪ್ಪ. ತೇಲಿ ಮಮದಾಪುರ
* ಸ್ವಾತಂತ್ರ್ಯಯೋಧರು ತಿರುಗಾಡಿದ ನೆಲ ಕನ್ನೂರ
* ಮಲ್ಲಿಕಾರ್ಜುನ. ಮಾರಬಂಡಿ ಮಮದಾಪುರ
* ಸ್ವಾತಂತ್ರ್ಯಯೋಧರು ತಿರುಗಾಡಿದ ನೆಲ ಇಂಚಗೇರಿ
* ವೀರಯೋಧ ಮಂಜುನಾಥ.ಗೂಂದಳಿ
* ಬಾಬಾಸಾಹೇಬ ಬಾಗೇವಾಡಿ
* ಸಹದೇವ.ಮೋರೆ ಹೊರ್ತಿ
* ಅಶೋಕ್. ದೊಡ್ಡಮನಿ ಹೀರೆಮಸಳಿ
* ಗಣಪತಿ. ಹೊನಕೋರೆ ಇಂಗಳಗಿ
* ಮುಗ್ತಮ್.ಪಟೇಲ್ ಚಿಕ್ಕಮಸಳಿ
* ಶಿವಾನಂದ. ಹರವಾಳ ಸಾಲೋಟಗಿ
* ದಾವಲಸಾಬ.ಕಂಬಾರ ಮುದ್ದೇಬಿಹಾಳ
* ಚಂದ್ರಶೇಖರ.ನಾವಿ ಖೇಡಗಿ
* ಅಶೋಕ್. ಹಂಜಗಿ

#ಕಲ್ಬುರ್ಗಿ

* ವಿದ್ಯಾಧರ ಗುರೂಜಿ ಕಲ್ಬುರ್ಗಿ
* ರುದ್ರಗೌಡ ಪಾಟೀಲ್ ಉಡಗಿ ಸೇಡಂ
* ತುಳಜರಾಮ್ ಖೇವಜಿ(ಮಾಮಜಿ) ಮುದೋಳ್ ಸೇಡಂ
* ವೆಂಕಟರಾವ್ ತಿರುಮಲ,ಮುದೋಳ್ ಸೇಡಂ
* ಗೋವಿಂದ ರಾವ್ ಕ್ಷೀರಸಾಗರ ಮುದೋಳ್,ಸೇಡಂ
* ಬಸವಣಪ್ಪ ಗೌಡ ಪಾಟೀಲ್ ಕುಕ್ಕುಂದ ಸೇಡಂ
* ಶಿವಬಸಯ್ಯ ಸ್ವಾಮಿ ಕುಕ್ಕುಂದಾ,ಸೇಡಂ
* ಪೀತಾಂಬರ ರಾವ್ ಗಡಾಳೆ ಸೇಡಂ
* ನೀಲಕಂಠೇಶ್ವರ ಕವಲಗಿ ಜೇವರ್ಗ

Leave a Reply

Your email address will not be published. Required fields are marked *

You May Also Like

ವಿವೇಕ ಕುಂಭದ ಕೊನೆಯಲ್ಲಿ ನನ್ನ ಕನಸಿನ ಕರ್ನಾಟಕ!

ಸಾವಿರಾರು ವಿವೇಕಾನಂದರ ಸಮ್ಮುಖದಲ್ಲಿ ಮಾತನಾಡಿದ ಕೆಲವೇ ನಿಮಿಷಗಳಲ್ಲಿ ನರೇಂದ್ರ ಮೋದಿಯವರು ಸಿದ್ದರಾಮಯ್ಯನವರು ಐದು ವರ್ಷಗಳಲ್ಲಿ ಮಾಡಲಾಗದ್ದನ್ನು ಮಾಡಿ ತೋರಿಸಿಬಿಟ್ಟರು. ಪ್ರಧಾನಮಂತ್ರಿಯವರಿಗೆ ಚೆನ್ನಾಗಿ ಗೊತ್ತು ಹತ್ತು ಸಾವಿರ ವಿವೇಕಾನಂದ ರೂಪಧಾರಿಗಳನ್ನು ನಿಮರ್ಿಸುವ ಸಂಕಲ್ಪ ಹೊತ್ತ ಸಂತ ಮನಸು ಮಾಡಿದರೆ ಜನ ಜೀವನವನ್ನೇ ಬದಲಾಯಿಸಬಲ್ಲ…
View Post

ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ

‘ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ. ಸೆಪ್ಟೆಂಬರ್ 10, 11 ‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ, ಜಡವಾದುದನ್ನು ಆದರ್ಶವಾಗಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀಣರ್ಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು ಬೇಕಾಗಿದ್ದಾರೆ.’…
View Post

ನಂದಾದೀಪ

ಮರೆವು – ಒಂದು ಮನುಷ್ಯ ಸಹಜ ಗುಣ. ವರ್ಷಕ್ಕೊಮ್ಮೆ ಬರೋ WEDDING ANNIVERSARY ಗಂಡನಿಗೆ ನೆನಪಿರಲ್ಲ, ಗಂಡ ಕೇಳಿದ ಹೊಸ ರುಚಿ ಪಾಯಸ ಹೆಂಡತಿಗೆ ನೆನಪಿರಲ್ಲ. ಅಪ್ಪನಿಗೆ ಮಗ ಹೇಳಿದ್ದೆನೋ ನೆನೆಪಿರಲ್ಲ, ಮಗನಿಗೆ ಅಮ್ಮ ತರಲಿಕ್ಕೆ ಹೇಳಿದ್ದು ನೆನಪಿರಲ್ಲ. ಇವೆಲ್ಲವೂ ನೆನಪಿದ್ರೆ…
View Post

ಉದ್ಘಾಟನೆಯಾಯ್ತು ಎರಡು ದಿನದ ಮಹಾ ಯಾತ್ರೆ! ವಿವೇಕಾನಂದ ನಿವೇದಿತಾರ ಸಾಹಿತ್ಯ ಜಾತ್ರೆ!

ಫೆಬ್ರುವರಿ 11 ಬೆಳಿಗ್ಗೆ 11 ಗಂಟೆ ಕಿಕ್ಕಿರಿದು ನೆರೆದಿದ್ದ ಎರಡು ಸಾವಿರ ಜನ. ಅದರಲ್ಲಿ 80% ನಷ್ಟು 30 ವಯಸ್ಸಿಗಿಂತಾ ಕಡಿಮೆಯಿದ್ದ ತರುಣರೇ! ವೇದಿಕೆಯ ಮೇಲೆ ಅತಿರಥ ಮಹಾರಥರು! ಮುಂದಿನ ವಿಶೇಷ ಆಸನಗಳಲ್ಲಿ ಸಾಧು ಸಂತರು ಸನ್ಯಾಸಿ ಸನ್ಯಾಸಿನಿಯರು ಸಾಧಕ ಗಣ.…
View Post

ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ

ಮಾರ್ಚ್ 25ರ “ದೀಕ್ಷಾ ದಿವಸದ” ಭರ್ಜರಿ ಕಾರ್ಯಕ್ರಮಗಳ ಪ್ರತಿಫಲ ಬೇಸಿಗೆ ಶಿಬಿರಗಳು. ಮಕ್ಕಳ ಶಾಲೆ ಮುಗಿದಿತ್ತು, ಏಪ್ರಿಲ್ ತಿಂಗಳ ಪ್ರಖರ ಸೂರ್ಯನ ಶಾಖ ಅವರನ್ನು ಹೊರಗೆ ಬರದಂತೆ ಮಾಡಿತ್ತು. ಎಲ್ಲಾ ಕಡೆಗಳಲ್ಲಿ ಬೇಸಿಗೆ ಶಿಬಿರಗಳು ಮಕ್ಕಳನ್ನು ಆಕರ್ಷಿಸುತ್ತಿದ್ದವು. ಆದರೆ ಶಿಬಿರಗಳ ಪ್ರವೇಶಕ್ಕೆ…
View Post

ದೀಕ್ಷಾ ದಿವಸ್

ಅಂದು ಮಾರ್ಚ 25, 1898. ಶುಕ್ರವಾರದ ಶುಭ ದಿನ. ಮಾರ್ಗರೆಟ್ ಸೂರ್ಯೋದಯದ ಮುನ್ನವೇ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು ತನ್ನ ಗುರುವಿನ ಮುಂದೆ ಉತ್ಸಾಹ, ಕುತೂಹಲಗಳಿಂದ ನಿಂತಿದ್ದಳು. ಆ ದಿನ ಸ್ವಾಮೀಜಿ ಆಕೆಗೆ ಶಿವ ಪೂಜೆ ಮಾಡುವ ವಿಧಾನ ಹೇಳಿಕೊಟ್ಟರು. ಗಮನವಿಟ್ಟು,…
View Post