ಸಮಾರೋಪ ಅಂದ್ರೆ ಅಂತ್ಯ ಅಲ್ಲ! ಹೊಸಾ ಕ್ರಾಂತಿ ಕಾರ್ಯದ ಆರಂಭ!

Total
0
Shares

ಪೆಬ್ರುವರಿ 12 ಸಂಜೆ 5 ಗಂಟೆ

ಎರಡು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಬಹಳಷ್ಟು ವಿಚಾರಗಳನ್ನು ಕಲಿತ ಸಾಹಿತ್ಯಾಸಕ್ತರಿಗೆ ಸಮಾರೋಪ ಕಾರ್ಯಕ್ರಮವು ಹೊಸ ಕ್ರಾಂತಿ ಕಾರ್ಯದ ಆರಂಭವೆನಿಸಿತು. ಕಾರಣ ಸಮಾರೋಪ ಸಮಾರಂಭದ ಒಂದೊಂದು ಭಾಗವೂ ಹೊಸ ಸ್ಫೂರ್ತಿಯನ್ನು ನೀಡಿ ನೆರೆದಿದ್ದವರಲ್ಲಿ ವಿದ್ಯುತ್‌ ಸಂಚಾರ ಮೂಡಿಸುವಂತಿತ್ತು. ಸಮಾರೋಪ ಸಮಾರಂಭದ ಕೊನೆಯಲ್ಲಿ ಎಲ್ಲ ಸಾಧು ಸಂತರೂ ವೇದಿಕೆಯ ಮೇಲೇರಿ ಒಟ್ಟಿಗೆ ಕುಳಿತು ಹಾಡಿದ ಉತ್ತಿಷ್ಠತ ಜಾಗ್ರತ ಮತ್ತು ಸ್ವಾಮಿ ವಿವೇಕಾನಂದರೇ ಬರೆದಂತಹ ಚಾಗಿಯ ಹಾಡನ್ನು ಹಾಡುವಾಗ ಒಂದು ಅಲೌಕಿಕ ಧ್ಯಾನಮಯ ವಾತಾವರಣ ಅಲ್ಲಿ ನಿರ್ಮಾಣಗೊಂಡು ಸಮ್ಮೇಳನಕ್ಕೆ ಒಂದು ಅದ್ಭುತವಾದ ಮುಕ್ತಾಯವನ್ನು ನೀಡಿ ಹೊಸ ಕ್ರಾಂತಿಗೆ ಸ್ಪೂರ್ತಿ ನೀಡಿತು.

ಸಮಾರೋಪದಲ್ಲಿ ಭಾಗವಹಿಸಿದ್ದ ಗಣ್ಯರು ಹೇಳಿದ್ದು…

ಸ್ವಾಮಿ ಸರ್ವಸ್ಥಾನಂದ ಜೀ ಮಹಾರಾಜ್, ಅಧ್ಯಕ್ಷರು, ರಾಮಕೃಷ್ಣ ಆಶ್ರಮ, ರಾಜಕೋಟ್, ಗುಜರಾತ್. –

“ಈ ಸಮ್ಮೇಳನವು ಕರ್ನಾಟಕದಲ್ಲಿ ಅಷ್ಟೇ ಏಕೆ? ಇಡೀ ದೇಶದಲ್ಲಿ ಹೊಸದೊಂದು ಅಲೆಯನ್ನು ಹುಟ್ಟುಹಾಕಿದೆ. ಇದರ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಸ್ವಾಮಿ ವಿವೇಕಾನಂದರ ಸೋದರಿ ನಿವೇದಿತಾರ ಸಾಹಿತ್ಯ ವ್ಯಾಪಕವಾಗಿ ಪ್ರಚಾರಗೊಳ್ಳಲಿದೆ.”

ಸ್ವಾಮಿ ನಿರ್ಭಯಾನಂದಜೀ ಮಹಾರಾಜ್, ಅಧ್ಯಕ್ಷರು, ರಾಮಕೃಷ್ಣ ವಿವೇಕಾನಂದ ಆಶ್ರಮ, ಗದಗ –

“ಸೋದರಿ ನಿವೇದಿತಾ ಸ್ವಾಮಿ ವಿವೇಕಾನಂದರ ಕನಸನ್ನು ನನಸು ಮಾಡಲು ಭಾರತಕ್ಕೆ ಬಂದವಳು. ಬಹುಶಃ ಅವಳಿಗೆ ಆ ಜನ್ಮದಲ್ಲಿ ಅದನ್ನು ಪೂರ್ಣ ಮಾಡಲು ಸಾಧ್ಯವಾಗದ ಕಾರಣ ರೂಪದಲ್ಲಿ ಮತ್ತೆ ಭೂಮಿಗೆ ಬಂದಿದೆಯೇನೋ ಎಂದು ಬಹುವಾಗಿ ಅನಿಸುತ್ತದೆ. ಇಂಥಾ ಸಾಹಸವನ್ನು ಮಾಡುವುದು ಬಹಳ ಕಷ್ಟದ ಕೆಲಸ ಆದರೆ ಇದನ್ನು ಯಶಸ್ವಿಗೊಳಿಸಿದ ಶ್ರೀ ಚಕ್ರವರ್ತಿ ಮತ್ತು ಯುವಾ ಬ್ರಿಗೇಡ್ ಗೆ ನಮ್ಮ ಅನಂತ ಅನಂತ ಆಶೀರ್ವಾದಗಳು.”

ಪೂಜ್ಯ ಅಭಿನವ ಹಾಲಶ್ರೀ, ಹೂವಿನ ಹಡಗಲಿ, ಬಳ್ಳಾರಿ –

“ಸ್ವಾಮಿ ವಿವೇಕಾನಂದ ಮತ್ತು ಸೋದರಿ ನಿವೇದಿತಾರ ಸಾಹಿತ್ಯದ ಪ್ರಸಾರಕ್ಕಾಗಿ ಯುವಾ ಬ್ರಿಗೇಡ್ ಹಮ್ಮಿಕೊಂಡಿರುವ ಈ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯವಾಗುತ್ತಿರುವುದು ಬಹಳ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ನಾವು ಪೂರ್ಣ ಮಟ್ಟದ ಸಹಕಾರ ನೀಡುತ್ತೇವೆ.”

ಶ್ರೀ ಚಕ್ರವರ್ತಿ ಸೂಲಿಬೆಲೆ, ಮಾರ್ಗದರ್ಶಕರು, ಯುವಾ ಬ್ರಿಗೇಡ್ –

“ಮಂಗಳೂರು ನಗರವು ಸ್ವಾಮಿ ವಿವೇಕಾನಂದ ಮತ್ತು ಅಕ್ಕ ನಿವೇದಿತಾ ರ ಕುರಿತ ದೇಶದ ಪ್ರಪ್ರಥಮ ಸಾಹಿತ್ಯ ಸಮ್ಮೇಳನದ ಅತಿಥೇಯ ಸ್ಥಳವಾಗಿದ್ದು ಬಹಳ ಹೆಮ್ಮೆಯ ಸಂಗತಿ. ಸಮ್ಮೇಳನದ ಯಶಸ್ಸಿಗಾಗಿ ಕೇಳಿದ್ದೆಲ್ಲವನ್ನೂ ಇಲ್ಲವೆನ್ನದೇ ನೀಡಿದ ಮಂಗಳೂರಿಗೆ ನನ್ನ ಅನಂತ ಕೃತಜ್ಞತೆಗಳು. ಇಂಥಾ ಹಲವಾರು ಕಾರ್ಯಕ್ರಮಗಳನ್ನು ಹೊತ್ತು ಮತ್ತೊಮ್ಮೆ ಮಂಗಳೂರಿಗೆ ಬರುತ್ತೇವೆ. ಈ ಕಾರ್ಯಕ್ರಮಕ್ಕೆ ಆಗಮಿಸಿ ನಮಗೆ ಅದಮ್ಯ ಧೈರ್ಯ ಮತ್ತು ನೈತಿಕ ಸ್ಥೈರ್ಯ ತುಂಬಿದ ಸಾಧು ಸಂತರಿಗೆ ವಿಶೇಷ ಕೃತಜ್ಞತೆಗಳು.”

ಪೂಜ್ಯ ಯತೀಶ್ವರಿ ಕೃಷ್ಣಪ್ರಿಯ ಅಂಬಾಜಿ, ಅಧ್ಯಕ್ಷರು, ಶಾರದಾಶ್ರಮ, ತಿರುವಣ್ಣಾಮಲೈ.

“ಸೋದರಿ ನಿವೇದಿತಾ ಇಂದಿನ ಯುವ ಜನರ ಆದರ್ಶವಾಗಬೇಕು. ಅವಳ ತ್ಯಾಗ ಮತ್ತು ಸೇವೆಯ ಆದರ್ಶಗಳನ್ನು ಅಳವಡಿಸಿಕೊಂಡು ದೇಶದ ಹಿತಕ್ಕಾಗಿ ದುಡಿಯುವುದು ಯುವಜನರ ಆದ್ಯ ಕರ್ತವ್ಯವಾಗಿದೆ. ಸ್ವಾಮಿ ವಿವೇಕಾನಂದರಿಂದ ಪ್ರೇರಿತರಾಗಿ ಯುವ ಜನರು ಈ ಕಾಲದಲ್ಲೂ ಈ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುವುದು ಬಹಳ ಆಶಾದಾಯಕ ಬೆಳವಣಿಗೆ. ಇಲ್ಲಿಗೆ ಬಂದು ಎರಡು ದಿನಗಳ ಕಾಲ ಸಮ್ಮೇಳನದಲ್ಲಿ ಭಾಗವಹಿಸಿದ್ದು ನನಗೆ ಬಹಳ ಆನಂದವನ್ನು ಉಂಟುಮಾಡಿದೆ.”

ಇದೇ ಸಂದರ್ಭದಲ್ಲಿ ವಿವೇಕಾನಂದ ಮತ್ತು ನಿವೇದಿತಾರ ಸಾಹಿತ್ಯವನ್ನು ಕನ್ನಡಕ್ಕೆ ತರಲು ಅಪಾರವಾಗಿ ಶ್ರಮಿಸಿದ ಡಾ ಪ್ರಭುಶಂಕರರನ್ನು ಯುವಾ ಬ್ರಿಗೇಡ್ ವತಿಯಿಂದ ಸನ್ಮಾನಿಸಿದ ವೀಡಿಯೋವನ್ನು ಪ್ರದರ್ಶಿಸಲಾಯಿತು. ವೇದಿಕೆಯಲ್ಲಿ ಸಮ್ಮೇಳನದ ಸಮಿತಿಯ ಅಧ್ಯಕ್ಷರಾದ ಶ್ರೀ ಗಿರಿಧರ್ ರವರು ಮತ್ತು ರಾಜ್ಯ ಸಂಚಾಲಕರಾದ ನಿತ್ಯಾನಂದ ವಿವೇಕವಂಶಿ ಹಾಜರಿದ್ದರು. ಎರಡು ದಿನಗಳು ಹೇಗೆ ಕಳೆಯಿತೋ ಯಾರಿಗೂ ತಿಳಿಯಲಿಲ್ಲ. ಆದರೆ ಸಮ್ಮೇಳನದ ಸಂಕಲ್ಪವಾದ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ತೀರ್ಮಾನ ಕೈಗೊಂಡ ತರುಣರು ತಮ್ಮ ಊರಿನ ಕಡೆ ಹೊಸ ಸ್ಪೂರ್ತಿಯೊಂದಿಗೆ ಹೆಜ್ಜೆ ಹಾಕಿದರು.

Leave a Reply

Your email address will not be published. Required fields are marked *

You May Also Like

ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ

‘ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ. ಸೆಪ್ಟೆಂಬರ್ 10, 11 ‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ, ಜಡವಾದುದನ್ನು ಆದರ್ಶವಾಗಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀಣರ್ಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು ಬೇಕಾಗಿದ್ದಾರೆ.’…
View Post

ಉದ್ಘಾಟನೆಯಾಯ್ತು ಎರಡು ದಿನದ ಮಹಾ ಯಾತ್ರೆ! ವಿವೇಕಾನಂದ ನಿವೇದಿತಾರ ಸಾಹಿತ್ಯ ಜಾತ್ರೆ!

ಫೆಬ್ರುವರಿ 11 ಬೆಳಿಗ್ಗೆ 11 ಗಂಟೆ ಕಿಕ್ಕಿರಿದು ನೆರೆದಿದ್ದ ಎರಡು ಸಾವಿರ ಜನ. ಅದರಲ್ಲಿ 80% ನಷ್ಟು 30 ವಯಸ್ಸಿಗಿಂತಾ ಕಡಿಮೆಯಿದ್ದ ತರುಣರೇ! ವೇದಿಕೆಯ ಮೇಲೆ ಅತಿರಥ ಮಹಾರಥರು! ಮುಂದಿನ ವಿಶೇಷ ಆಸನಗಳಲ್ಲಿ ಸಾಧು ಸಂತರು ಸನ್ಯಾಸಿ ಸನ್ಯಾಸಿನಿಯರು ಸಾಧಕ ಗಣ.…
View Post

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘುಸಾಹಿತ್ಯ ಸಮ್ಮೇಳನ – ವಿಜಯಪುರ

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತೆ ರಾಜ್ಯಾದ್ಯಂತ ೧೫೦ ಲಘು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅಂದು ಮಾಡಿದ ಸಂಕಲ್ಪಕ್ಕೆ ಮೊದಲ ವೇದಿಕೆ ಸಜ್ಜುಗೊಳಿಸಿದ್ದು ಬೆಂಗಳೂರಿನ ವಿಜಯಪುರ‌.! ವಿವೇಕಾನಂದರು ಜಗತ್ತಿನಲ್ಲೆಲ್ಲ ಭಾರತದ ಪರಂಪರೆ ಶ್ರೇಷ್ಠತೆಯನ್ನು ಮುಟ್ಟಿಸಿದರೆ, ನಿವೇದಿತಾ…
View Post

ಕವನ ವಾಚನದ ಕರ್ಣಾನಂದ! ಗೀತ ಗಾಯನದ ಆತ್ಮಾನಂದ! ಗೋಷ್ಠಿಯ ವಿಷಯ – ನಾದೋಪಾಸಕ ವಿವೇಕಾನಂದ!

ಫೆಬ್ರುವರಿ 12 ಗೋಷ್ಠಿ 6 ಸಮಯ ಮಧ್ಯಾಹ್ನ 2.30. ಒಬ್ಬ ಸಂತ ಮಾತ್ರ ತಾ ಏನೂ ಆಗದೇ ಎಲ್ಲಾ ಅಗಬಲ್ಲ ಎನ್ನುವ ಮಾತಿಗೆ ವಿವೇಕಾನಂದರು ಸ್ಪಷ್ಟ ಉದಾಹರಣೆಯಾಗುತ್ತಾರೆ. ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ, ಸೇವೆ ಮತ್ತು ರಾಷ್ಟ್ರ ನಿರ್ಮಾಣ ಕ್ಷೇತ್ರದಲ್ಲಿ ಹಲವಾರು…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘು ಸಾಹಿತ್ಯ ಸಮ್ಮೇಳನಗಳು

‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ. ಜಡವಾದುದನ್ನು ಆದರ್ಶವಾಗಿರಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀರ್ಣಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು.’ ಈ ಮಾತುಗಳು ವಿವೇಕಾನಂದರ ಮಾನಸ ಪುತ್ರಿ ಸೋದರಿ ನಿವೇದಿತಾಳದ್ದು. ಆಕೆಯ ಮಾತುಗಳೇ ಹಾಗೆ ಸದಾ ಬೆಂಕಿಯನ್ನುಗುಳುತ್ತಿದ್ದವು. ಆಕೆ…
View Post