ಯುವಾ ಬ್ರಿಗೇಡ್ ನ ಆಧುನಿಕ ಭಗೀರಥರು

Total
0
Shares

ಮನಷ್ಯ ಜಗತ್ತಿನಲ್ಲಿ ಭೂಮಿಯಿಂದ ನೀರನ್ನು ಹೊರ ತೆಗೆಯುವುದನ್ನು ಮಾತ್ರ ಕಲೆತಿದ್ದಾನೆ. ಆದರೆ, ನೀರನ್ನು ಮರಳಿ ಭೂಮಿಗೆ ಇಂಗಿಸುವ ಕೆಲಸವನ್ನು ಮರೆತೇ ಬಿಟ್ಟಿದ್ದಾನೆ. ತಾಯಿ ವಸುಂಧರೆಯನ್ನು ತಂಪಾಗಿಸಲೆಂದೇ ಯುವಾ ಬ್ರಿಗೇಡ್ ಮಳೆನೀರು ಕೊಯ್ಲು ಹಾಗೂ ಕಲ್ಯಾಣಿಗಳ ಸ್ವಚ್ಛತಾ ಕೆಲಸವನ್ನು ಕೈಗೆತ್ತಿಕೊಂಡಿತು.

ಹೌದು ನನಗೆ ಸರಿಯಾಗಿ ನೆನಪಿದೆ ಅದು 2015 ಏಪ್ರೀಲ್ 10, ಹೊಸಪೇಟೆ ಶ್ರೀರಾಮಕೃಷ್ಣ ಗೀತಾಶ್ರಮದಲ್ಲಿ ನಾವೆಲ್ಲ ಯುವಾ ಬ್ರಿಗೇಡ್ ಸ್ನೇಹಿತರು ಚಕ್ರವರ್ತಿ ಅಣ್ಣನ ಬರುವಿಕೆಗಾಗಿ ಇದಿರು ನೋಡುತ್ತಿದ್ದೆವು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಹತ್ವದ ಸಭೆಯೊಂದಕ್ಕೆ ಬಂದಿದ್ದ ಅಣ್ಣ ನಮ್ಮೆಲ್ಲರನ್ನು ಭೇಟಿ ಮಾಡುವುದಾಗಿ ಹೇಳಿದ್ದರು. ಅಷ್ಟೊತ್ತಿಗೆ ಯುವಾ ಬ್ರಿಗೇಡ್ ನ ಕೆಲವು ಕೆಲಸಗಳನ್ನು ಮಾಡಿದ್ದ ನಾವೆಲ್ಲರೂ ಅದು ಒಂದು ಸಹಜ ಭೇಟಿ ಎಂದು ಎಲ್ಲರೂ ಅಂದುಕೊಂಡಿದ್ದೆವು. ಏನೋ ಹೊಸದಾಗಿ ಮಾಡುತ್ತಿದ್ದೇವೆ ಅನ್ನೋ ಹೆಮ್ಮೆ ಜೊತೆಗೆ ಇನ್ನೂ ಹೊಸದನ್ನೂ ಏನಾದರು ಮಾಡುವ ತುಡಿತ. ಇವೆರಡರ ನಡುವೆ ಅಣ್ಣನ ಭೇಟಿ ನಮಗೆ ಆಪ್ಯಾಯಮಾನವಾಗಿತ್ತು.

ಸರಿಯಾಗಿ ಸಂಜೆ 6.00ಕ್ಕೆ ಬಂದರು, ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿದರು. ನಾವು ಮಾಡಿದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಂ..! ಅಣ್ಣನ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಯುವಾ ಬ್ರಿಗೇಡ್ ನ ಎಲ್ಲ ಮಹತ್ವದ ಕಾರ್ಯಕ್ಕೆ ಅಣ್ಣನೇ ಮುನ್ನುಡಿ. ನಾವೆಲ್ಲರು ಆ ಹೂವಿನ ಜೊತೆ ಸ್ವರ್ಗಕ್ಕೆ ಹೋಗುವ ನಾರು ಮಾತ್ರ. ನಂತರ ಶುರುವಾಗಿದ್ದೇ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚೆ. ಅದುವೇ ರಾಜ್ಯದಲ್ಲಿ ಅಂದು ಪಳಿಯುಳಿಕೆಗಳಾದ(ಇಂದು ಸಾಕಷ್ಟು ಕಲ್ಯಾಣಿಗಳು ಪುನರುಜ್ಜೀವನಗೊಂಡಿವೆ) ಕಲ್ಯಾಣಿಗಳ ಸ್ವಚ್ಛತೆ. ಈ ಕಲ್ಯಾಣಿಗಳ ಬಗ್ಗೆ ಇವತ್ತಿನ ಪೀಳಿಗೆಯ ಅನೇಕರಿಗೆ ಪರಿಚಯವೇ ಇರಲಿಲ್ಲ. ಕಲ್ಯಾಣಿಗಳು ಅಥವಾ ಪುಷ್ಕರಣಿ ಅಥವಾ ಹೊಂಡ ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುವ ಇವುಗಳು ನಮ್ಮ ಪೂರ್ವಜರು ಕೊಟ್ಟು ಹೋದ ಅತ್ಯಂತ ಮಹತ್ವದ ಕೊಡುಗೆಗಳು.

ಪ್ರಾಯಶಃ ಎರಡು ತಲೆಮಾರುಗಳ ಹಿಂದೆ ಈ ಕಲ್ಯಾಣಿಗಳು ಅಸ್ತಿತ್ವದಲ್ಲಿದ್ದವು ಕ್ರಮೇಣ ಅವುಗಳ ಮಿತವಾದ ಬಳಕೆಯೇ ಅವುಗಳನ್ನು ಪಳಿಯುಳಿಕೆಯನ್ನಾಗಿ ಮಾಡಿದವು. ಬಹುತೇಕ ಇಂತಹ ಕಲ್ಯಾಣಿಗಳು ದೇವಸ್ಥಾನಗಳ ಅಕ್ಕಪಕ್ಕದಲ್ಲೇ ಇರುತ್ತಿದ್ದವು. ಅದರ ಉದ್ದೇಶ ಇಷ್ಟೆ, ಅವುಗಳು ಸದಾ ಶುದ್ಧವಾಗಿರಲಿ ಎಂದು ಅದಕ್ಕೊಂದು ಆಧ್ಯಾತ್ಮಿಕ ಸ್ಪರ್ಶಕೊಟ್ಟು, ನಮ್ಮ ಪೂರ್ವಜರು ಈ ಕಲ್ಯಾಣಿಗಳನ್ನು ದಿನನಿತ್ಯದ ಕರ್ಮಗಳಿಗೆ ಉಪಯೋಗಿಸುತ್ತಿದ್ದರು. ಬಹುತೇಕ ಕಲ್ಯಾಣಿಗಳು ಚೌಕಾಕೃತಿಗಳಾಗಿದ್ದವು. ನಾಲ್ಕು ಪಾರ್ಶ್ವಗಳಲ್ಲಿ ಪಾವಟಿಗೆಗಳಿದ್ದು ವಿಶಾಲವಾಗಿರುತ್ತಿದ್ದವು. ಇವುಗಳ ಮೂಲ ಉದ್ದೇಶವೆಂದರೆ ಮಳೆಗಾಲದಲ್ಲಿ ಬಿದ್ದ ಮಳೆಯನ್ನು ಭೂಮಿಯ ಕೆಳಗಿನ ನದಿಗಳಿಗೆ ನೀರನ್ನು ಇಂಗಿಸುತ್ತಿದ್ದವು. ಆ ಭಾಗದ ಅಂತರ್ಜಲ ತುಂಬಿದ ಮೇಲೆ, ಕಲ್ಯಾಣಿಗಳಲ್ಲಿ ನಿಲ್ಲುವ ನೀರನ್ನು ಕುಡಿಯಲು, ಇತರೆ ಕಾರ್ಯಗಳಿಗೆ ಹಾಗೂ ಪ್ರಾಣಿ ಪಕ್ಷಿಗಳಿಗಾಗಿ ಮೀಸಲು ಇಡುತ್ತಿದ್ದರು. ಇದು ಈ ಕಲ್ಯಾಣಿಗಳ ಸಂಕ್ಷಿಪ್ತ ಉದ್ದೇಶ.

ಇಂತಹ ಅಮೂಲ್ಯವಾದ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲೆಂದೇ ಯುವಾ ಬ್ರಿಗೇಡ್ ರೂಪುರೇಷೆಯೊಂದನ್ನು ಹಾಕಿಕೊಂಡಿತು. ಜಲ ಪತ್ರಕರ್ತರೆಂದೇ ಹೆಸರುವಾಸಿಯಾಗಿರುವ ಶ್ರೀ ರಾಧಾಕೃಷ್ಣ ಬಡ್ತಿ ಹಾಗೂ ಮೊದಲಾದ ತಜ್ಞರು, ಚಿಂತಕರನ್ನು ಸೇರಿಸಿಕೊಂಡು ಎಲ್ಲ ಯುವಕರಿಗೆ ಮಾಹಿತಿ ನೀಡಲು ಮೈಸೂರಿನಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಏರ್ಪಡಿಸಲಾಯಿತು. ಮತ್ತು ದೂರದ ಊರಿನಿಂದ ಬರದೇ ಇರುವ ಕಾರ್ಯಕರ್ತರಿಗಾಗಿಯೇ ಇದೇ ಮಾದರಿಯ ಕಾರ್ಯಾಗಾರಗಳನ್ನು ರಾಜ್ಯದ ನಾಲ್ಕು ಭಾಗಗಳಲ್ಲಿಯೂ ಮಾಡಲಾಯಿತು.

ತದನಂತರ ಶುರುವಾಗಿದ್ದೇ ಕಲ್ಯಾಣಿಗಳ ಹುಡುಕಾಟ, ರಾಜ್ಯದ ಮೂಲೆ ಮೂಲೆಗಳಲ್ಲೂ ಯುವಾ ಬ್ರಿಗೇಡ್ ನ ತರುಣರು ತಮ್ಮ ತಮ್ಮ ಊರಿನ ಸುತ್ತಮುತ್ತಲೂ ಇರುವ ಕಲ್ಯಾಣಿಗಳನ್ನು ಹುಡುಕಿದರು. ತಮ್ಮ ಮನೆಗಳಲ್ಲಿಯೇ ಇರುವ ಸಲಿಕೆ, ಗುದ್ದಲಿ, ಹಾರಿಗಳನ್ನು, ಬುಟ್ಟಿ ಇನ್ನಿತರೆ ಸಲಕರಣೆಗಳನ್ನು ತೆಗೆದುಕೊಂಡು ಸ್ವಯಂಪ್ರೇರಿತರಾಗಿ ಕೆಲಸ ಶುರು ಹಚ್ಚಿಕೊಂಡರು. ನೋಡ ನೋಡುತ್ತಿದ್ದಂತೆಯೇ ಬೇಸಿಗೆಯ ದಿನಗಳಾದ ಏಪ್ರಿಲ್ ಮತ್ತು ಮೇ ಎರಡು ತಿಂಗಳಲ್ಲಿ ರಾಜ್ಯಾದಂತ 40ಕ್ಕೂ ಹೆಚ್ಚು ಕಲ್ಯಾಣಿಗಳು ಸ್ವಚ್ಛಗೊಂಡವು. ಸ್ವಚ್ಚಗೊಂಡ ಈ ಕಲ್ಯಾಣಿಗಳು ಜೂನ್ ಮೊದಲ ವಾರದಲ್ಲಿ ಬಂದ ಭರಪೂರ ಮಳೆಗೆ ಭರ್ತಿಯಾದವು. ನಂತರ ನಮ್ಮ ಕಾರ್ಯಕರ್ತರು ಭರ್ತಿಗೊಂಡ ಕಲ್ಯಾಣಿಗಳಲ್ಲಿ ದೀಪೋತ್ಸವ, ಗಂಗಾಪೂಜೆಗಳನ್ನು ನೆರವೇರಿಸಿ ವಸುಂಧರೆಯ ಮನ ತಣಿಸಿದರು.

ನೆನಪಿರಲಿ ಮಿತ್ರರೇ ಮಳೆ ಬಂದ ದಿನ ತುಂಬಿದ ಕಲ್ಯಾಣಿಗಳು ಮಾರನೆಯ ದಿನವೇ ಆ ಎಲ್ಲಾ ನೀರು ಇಂಗಿ ಬರಿದಾದವು. ಅದರರ್ಥ ನಮ್ಮ ಭೂಮಿತಾಯಿಗೆ ಎಷ್ಟು ದಾಹ ಆಗಿರಬೇಕು ಒಮ್ಮೆ ಊಹಿಸಿ..!? ಈ ಕಾರ್ಯಕ್ಕೆ ಯುವಾ ಬ್ರಿಗೇಡ್ ರಾಷ್ಟ್ರಮಟ್ಟದಲ್ಲಿ ಶ್ಲಾಲಘನೆಗೆ ಪಾತ್ರವಾಯಿತು. ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಯವರುಯ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ “ಕರ್ನಾಟಕದ ಕಲ್ಯಾಣಿ ಯೋಜನೆ ಇಡೀ ರಾಷ್ಟ್ರಕ್ಕೆ ಮಾದರಿ ಅದರಂತೆಯೇ ಉತ್ತರ ಪ್ರದೇಶವೂ ಸಹ ಜಲ ಧಾರಾ ಯೋಜನೆಯ ಮೂಲಕ ನೀರನ್ನು ಸಂರಕ್ಷಿಸಬೇಕು” ಎಂದು ರಾಷ್ಟ್ರಕ್ಕೆ ಕರೆ ನೀಡಿದರು. ಇದಾದ ಮೇಲೆ ಕರ್ನಾಟಕ ಸರ್ಕಾರವು ಎಚ್ಚೆತ್ತುಕೊಂಡು ಕಲ್ಯಾಣಿಗಳ ಸ್ವಚ್ಛತೆಗೆ ಗಮನ ಹರಿಸಿತು. ಆದರೆ ಹಲವು ”ಭಾಗ್ಯ”ಗಳ ನಡುವೆ ಆ ಕಾರ್ಯಕ್ರಮ ಕಣ್ಮರೆಯಾಯಿತು.

ಪ್ರಸ್ತುತ ಯುವಾ ಬ್ರಿಗೇಡ್ ಮೂರನೇ ವರ್ಷದ ಕಲ್ಯಾಣಿ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸಿದೆ. ಈ ರೀತಿಯಾಗಿ ಸಮಾಜಕ್ಕೆ ಹಾಗೂ ಪರಿಸರಕ್ಕೆ ಒಳಿತು ಮಾಡಿದ ಹೆಮ್ಮೆ ಯುವಾ ಬ್ರಿಗೇಡ್ ಗೆ ಇದೆ. ಮಿತ್ರರೇ, ಇಂದು ನಮ್ಮ ಇಡೀ ರಾಜ್ಯ ಬರದಿಂದ ಬೆಂದುಹೋಗಿದೆ. ಕೆರೆಗಳು, ನದಿಗಳು, ಬಾವಿಗಳು ಅಷ್ಟೇ ಏಕೆ ಕೊಳವೆಬಾವಿಗಳೂ ಸಹ ಬತ್ತಿಹೋಗಿವೆ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ತಿನ್ನಲು ಮೇವಿಲ್ಲ. ಎಷ್ಟೋ ಹಳ್ಳಿಗಳಲ್ಲಿ ನೀರಿನ ಅಭಾವಕ್ಕೆ ಜನ ಗುಳೆ ಹೋಗಿದ್ದಾರೆ. ನಗರ ಪ್ರದೇಶಗಳಲ್ಲಿ 10-15ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದೆ. ರಾಜಕಾರಿಣಿಗಳು ಅವರ ಬೇಳೆ ಬೇಯಿಸಿಕೊಳ್ಳಲು ರಾಜ್ಯ ಸರ್ಕಾರವನ್ನು ದೂರುತ್ತಿದ್ದಾರೆಯೇ ಹೊರತು ಜನರಿಗೆ ಒಳಿತು ಮಾಡುವ ಕನಿಷ್ಠ ಕಾಳಜಿಯನ್ನು ತೋರಿಲ್ಲ. ಇಂತಹುದರಲ್ಲಿ ಯುವಾ ಬ್ರಿಗೇಡ್ ನ ಕಾರ್ಯಕರ್ತರು ದೂರುವುದನ್ನು ಬಿಟ್ಟು ಕಲ್ಯಾಣಿಗಳ ಸ್ವಚ್ಚತೆಯ ಮೂಲಕ ಜಲಕ್ಷಾಮಕ್ಕೆ ಪರಿಹಾರವಾಗಿದ್ದಾರೆ. ಇವರಲ್ಲವೇ ಆಧುನಿಕ ಭಗೀರಥರು..! ಬನ್ನಿ ಸಾಧ್ಯವಾದಷ್ಟು ನೀರನ್ನು ಮಿತವಾಗಿ ಬಳಸೋಣ, ಹೊಸದಾಗಿ ಮನೆ ಕಟ್ಟುವವರಿಗೆ ಮಳೆನೀರಿನ ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡೋಣ, ಕಲ್ಯಾಣಿಗಳನ್ನು, ಭಾವಿಗಳನ್ನು ರಕ್ಷಿಸಿ ನೀರನ್ನು ಇಂಗಿಸುವ ಕಾರ್ಯಕ್ಕೆ ಜೊತೆಯಾಗೋಣ, ಭವಿಷ್ಯದ ಪೀಳಿಗೆಗೆ ನೀರನ್ನು ಕಾಪಿಟ್ಟು ಹೋಗೋಣ. ಏಕೆಂದರೆ ಹನಿ ಹನಿ ನೀರು ಅಮೂಲ್ಯ.

Leave a Reply

Your email address will not be published. Required fields are marked *

You May Also Like

ಸ್ವಚ್ಛ ಸೌಪರ್ಣಿಕಾ

ಕೊಲ್ಲೂರಿನಲ್ಲಿ ಹರಿಯುವ ನದಿ ಸೌಪರ್ಣಿಕಾ. ಯುವಾ ಬ್ರಿಗೇಡ್ ನ 20 ಜನ ಕಾರ್ಯಕರ್ತರು ದಿನವಿಡೀ ಕೆಲಸ ಮಾಡಿ 10 ಟನ್ ಕಸವನ್ನು ಹೊರತೆಗೆಯಲಾಯಿತು. Post Views: 322
View Post

ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ

‘ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ. ಸೆಪ್ಟೆಂಬರ್ 10, 11 ‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ, ಜಡವಾದುದನ್ನು ಆದರ್ಶವಾಗಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀಣರ್ಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು ಬೇಕಾಗಿದ್ದಾರೆ.’…
View Post

ಜೀವನದಿಗೆ ಜೀವತುಂಬಿ

ಕಾವೇರಿಗಾಗಿ ಯಾವ ಕದನ ಶುರುವಾಗತ್ತೋ ಹೇಳಲು ಬರುವುದಿಲ್ಲ. ರಾಜಕೀಯದ ಪಡಸಾಲೆಯಲ್ಲಿ ಮತ ಬಾಚಬೇಕು ಎನಿಸಿದಾಗಲೆಲ್ಲ ಕಾವೇರಿಯೇ ಅಸ್ತ್ರ. ಈ ಬಾರಿ ಈ ಹೋರಾಟದಲ್ಲಿ ಕಮಲ್ಹಾಸನ್ ಮತ್ತು ರಜನೀಕಾಂತ್ ಭಾಗವಹಿಸಿರುವುದು ಅಪ್ಪಟ ರಾಜಕೀಯವಲ್ಲದೇ ಮತ್ತೇನೂ ಅಲ್ಲ. ಇಷ್ಟೂ ದಿನ ಈ ಪರಿಯ ಕದನಗಳಿಂದ…
View Post

ಉದ್ಘಾಟನೆಯಾಯ್ತು ಎರಡು ದಿನದ ಮಹಾ ಯಾತ್ರೆ! ವಿವೇಕಾನಂದ ನಿವೇದಿತಾರ ಸಾಹಿತ್ಯ ಜಾತ್ರೆ!

ಫೆಬ್ರುವರಿ 11 ಬೆಳಿಗ್ಗೆ 11 ಗಂಟೆ ಕಿಕ್ಕಿರಿದು ನೆರೆದಿದ್ದ ಎರಡು ಸಾವಿರ ಜನ. ಅದರಲ್ಲಿ 80% ನಷ್ಟು 30 ವಯಸ್ಸಿಗಿಂತಾ ಕಡಿಮೆಯಿದ್ದ ತರುಣರೇ! ವೇದಿಕೆಯ ಮೇಲೆ ಅತಿರಥ ಮಹಾರಥರು! ಮುಂದಿನ ವಿಶೇಷ ಆಸನಗಳಲ್ಲಿ ಸಾಧು ಸಂತರು ಸನ್ಯಾಸಿ ಸನ್ಯಾಸಿನಿಯರು ಸಾಧಕ ಗಣ.…
View Post

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಗದಗ ಕೋನೆರಿ ಹೊಂಡದ ದೀಪೋತ್ಸವ ಕಾರ್ಯಕ್ರಮ

ಕೋನೇರಿ ಕಲ್ಯಾಣಿ ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಸಂಬಂಧಿಸಿದ ಪುಷ್ಕರಣಿಯಾಗಿದ್ದು, ಕ್ರಿ.ಶ ೧೧೧೭ ರಲ್ಲಿ ಹೊಯ್ಸಳ ಅರಸ ವಿಷ್ಣುವರ್ಧನನು ಈ ದೇವಸ್ಥಾನ ನಿರ್ಮಿಸಿದನು. ಗದುಗಿನ ಇತಿಹಾಸ ವರ್ಣಿಸುವ ಪುರಾಣ-ಪುಸ್ತಕಗಳು ಹೇಳುವಂತೆ ಈಗಿನ ಕೊನೇರಿ ಕಲ್ಯಾಣಿಯು ಕೂಡ ಅದೇ ಕಾಲದಲ್ಲಿ ನಿರ್ಮಿತವಾಯಿತು. ಇಲ್ಲಿನ ಆಚಾರ್ಯರ…
View Post