ಮಾಧ್ಯಮಗಳ ಮೂಲಕ ಪ್ರಚಾರ

Total
0
Shares

ಅಕ್ಕ ನಿವೇದಿತಾ ಯಾರಿಗೆ ತಾನೆ ಸ್ಫೂರ್ತಿ ಅಲ್ಲ ಹೇಳಿ. ಭಾರತದ ಪ್ರತಿಯೊಂದು ವರ್ಗದ ಜನರ ಸಂಪರ್ಕದಲ್ಲಿದ್ದಾಕೆ ಅಕ್ಕ. ಪ್ರತಿಷ್ಠಿತ ಠಾಗೋರ್ ಮನೆತನದಿಂದ ಹಿಡಿದು ಬೆಸ್ತರ ಬಸ್ತಿಯವರೆಗೂ ಆಕೆ ಕೆಲಸ ಮಾಡಿದ್ದಾಳೆ. ಸ್ವಾತಂತ್ರ್ಯ ಹೋರಾಟಕ್ಕೆ ನಿಂತ ಅಹಿಂಸಾವಾದಿಗಳಿಂದ ಹಿಡಿದು ರೆವಲ್ಯೂಷನರಿಗಳವರೆಗೆ ಎಲ್ಲರಿಗೂ ಪ್ರೇರಣೆ ನೀಡಿದ್ದಾಳೆ. ವಿಜ್ಞಾನಿಯಾದ ಜಗದೀಶ್ ಚಂದ್ರ ಬೋಸ್ ನಿಂದ ಕವಿಯಾದ ಸುಬ್ರಹ್ಮಣ್ಯ ಭಾರತಿಯವರೆಗೆ ಎಲ್ಲರಿಗೂ ದಾರಿ ತೋರುವ ಗುರುವಾಗಿದ್ದಾಳೆ. ಕೆಲವರಿಗೆ ಪ್ರೇರಣೆ ನೀಡಿದರೆ ಹಲವರಿಗೆ ತಾನೇ ಸವೆದು ಸೇವೆ ಸಲ್ಲಿಸಿದ್ದಾಳೆ. ಅಕ್ಕ ನಿವೇದಿತಾ ಎಲ್ಲರಲ್ಲೂ ಶಕ್ತಿಯಾಗಿ ಹರಿಯಲಿ ಎಂದು ಹೆಚ್ಚಿನ ಜನರನ್ನು ತಲುಪುವ ಯೋಜನೆಯನ್ನು ಸೋದರಿ ನಿವೇದಿತಾ ಪ್ರತಿಷ್ಠಾನದ ಸೋದರಿಯರು ಹಾಕಿಕೊಂಡೆವು. ಮಾಧ್ಯಮಗಳ ಮೂಲಕ ನಾವು ಮನೆ-ಮನೆಗೆ ಅಕ್ಕನನ್ನು ಕರೆದೊಯ್ಯಬಹುದು ಎಂದೆನಿಸಿ ಆಕಾಶವಾಣಿ ಶಿವಮೊಗ್ಗ, ಮಂಗಳೂರು ಹಾಗೂ ಕೆ.ಎಲ್.ಇ ಅವರ ಧ್ವನಿ ರೆಡಿಯೋ, ಸರಳ ಜೀವನ ಟಿವಿ ಚ್ಯಾನಲ್‌, ನ್ಯೂಸ್ ಅವರ್ 13 ಮುಂತಾದ ಮಾಧ್ಯಮಗಳ ಮೂಲಕ ಕಾರ್ಯಕ್ರಮ ನೀಡಿದೆವು. ಸತತವಾಗಿ 6 ತಿಂಗಳುಗಳ ಕಾಲ ಅಕ್ಕನ ಜೀವನದ ವಿಶೇಷ ಘಟನೆಗಳನ್ನು ರೇಡಿಯೋ ಮೂಲಕ ಪ್ರಸಾರ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಕೆ.ಎಲ್.ಇ. ಅವರ ಧ್ವನಿ ರೆಡಿಯೋ ಮೂಲಕ ಯುವ ಪೀಳಿಗೆಗೆ ಪ್ರತಿ ವಾರ ಅಕ್ಕನ ಜೀವನದ ಮುಖ್ಯ ಘಟನೆಗಳನ್ನು ಸಂಭಾಷಣೆ ಮೂಲಕ ಹೇಳುವುದು, ನ್ಯೂಸ್ ಅವರ್ 13 ಮತ್ತು ಶಿವಮೊಗ್ಗದ ಪತ್ರಿಕೆ ಮಲೆನಾಡು ಮಿತ್ರದಲ್ಲಿ ಪ್ರತಿ ದಿನ ಒಂದು ಅಕ್ಕ ಸುಭಾಷಿತ ಪಕಟಿಸಲಾಗುತ್ತಿದೆ.

ಈ ಮಹತ್ತರದ ಉದ್ದೇಶ ಸಾಕಾರಗೊಳ್ಳುವಲ್ಲಿ ನಮ್ಮ ಪರಿಶ್ರಮ ಎಷ್ಟಿದೆಯೋ ಅದರ ಎರಡು ಪಟ್ಟು ನಮಗೆ ಸಹಕರಿಸಿದ ಹಿರಿಯರ ವಿಶ್ವಾಸ ಹಾಗೂ ಆಶಿರ್ವಾದ ಇದೆ. ಅವರೆಲ್ಲರಿಗೂ ನಮ್ಮ ಹೃದಯ ಪೂರ್ವಕ ಧನ್ಯವಾದಗಳು.

Leave a Reply

Your email address will not be published. Required fields are marked *

You May Also Like

ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ

‘ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ. ಸೆಪ್ಟೆಂಬರ್ 10, 11 ‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ, ಜಡವಾದುದನ್ನು ಆದರ್ಶವಾಗಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀಣರ್ಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು ಬೇಕಾಗಿದ್ದಾರೆ.’…
View Post

ಉದ್ಘಾಟನೆಯಾಯ್ತು ಎರಡು ದಿನದ ಮಹಾ ಯಾತ್ರೆ! ವಿವೇಕಾನಂದ ನಿವೇದಿತಾರ ಸಾಹಿತ್ಯ ಜಾತ್ರೆ!

ಫೆಬ್ರುವರಿ 11 ಬೆಳಿಗ್ಗೆ 11 ಗಂಟೆ ಕಿಕ್ಕಿರಿದು ನೆರೆದಿದ್ದ ಎರಡು ಸಾವಿರ ಜನ. ಅದರಲ್ಲಿ 80% ನಷ್ಟು 30 ವಯಸ್ಸಿಗಿಂತಾ ಕಡಿಮೆಯಿದ್ದ ತರುಣರೇ! ವೇದಿಕೆಯ ಮೇಲೆ ಅತಿರಥ ಮಹಾರಥರು! ಮುಂದಿನ ವಿಶೇಷ ಆಸನಗಳಲ್ಲಿ ಸಾಧು ಸಂತರು ಸನ್ಯಾಸಿ ಸನ್ಯಾಸಿನಿಯರು ಸಾಧಕ ಗಣ.…
View Post

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ

ಮಾರ್ಚ್ 25ರ “ದೀಕ್ಷಾ ದಿವಸದ” ಭರ್ಜರಿ ಕಾರ್ಯಕ್ರಮಗಳ ಪ್ರತಿಫಲ ಬೇಸಿಗೆ ಶಿಬಿರಗಳು. ಮಕ್ಕಳ ಶಾಲೆ ಮುಗಿದಿತ್ತು, ಏಪ್ರಿಲ್ ತಿಂಗಳ ಪ್ರಖರ ಸೂರ್ಯನ ಶಾಖ ಅವರನ್ನು ಹೊರಗೆ ಬರದಂತೆ ಮಾಡಿತ್ತು. ಎಲ್ಲಾ ಕಡೆಗಳಲ್ಲಿ ಬೇಸಿಗೆ ಶಿಬಿರಗಳು ಮಕ್ಕಳನ್ನು ಆಕರ್ಷಿಸುತ್ತಿದ್ದವು. ಆದರೆ ಶಿಬಿರಗಳ ಪ್ರವೇಶಕ್ಕೆ…
View Post

ದೀಕ್ಷಾ ದಿವಸ್

ಅಂದು ಮಾರ್ಚ 25, 1898. ಶುಕ್ರವಾರದ ಶುಭ ದಿನ. ಮಾರ್ಗರೆಟ್ ಸೂರ್ಯೋದಯದ ಮುನ್ನವೇ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು ತನ್ನ ಗುರುವಿನ ಮುಂದೆ ಉತ್ಸಾಹ, ಕುತೂಹಲಗಳಿಂದ ನಿಂತಿದ್ದಳು. ಆ ದಿನ ಸ್ವಾಮೀಜಿ ಆಕೆಗೆ ಶಿವ ಪೂಜೆ ಮಾಡುವ ವಿಧಾನ ಹೇಳಿಕೊಟ್ಟರು. ಗಮನವಿಟ್ಟು,…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘುಸಾಹಿತ್ಯ ಸಮ್ಮೇಳನ – ವಿಜಯಪುರ

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತೆ ರಾಜ್ಯಾದ್ಯಂತ ೧೫೦ ಲಘು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅಂದು ಮಾಡಿದ ಸಂಕಲ್ಪಕ್ಕೆ ಮೊದಲ ವೇದಿಕೆ ಸಜ್ಜುಗೊಳಿಸಿದ್ದು ಬೆಂಗಳೂರಿನ ವಿಜಯಪುರ‌.! ವಿವೇಕಾನಂದರು ಜಗತ್ತಿನಲ್ಲೆಲ್ಲ ಭಾರತದ ಪರಂಪರೆ ಶ್ರೇಷ್ಠತೆಯನ್ನು ಮುಟ್ಟಿಸಿದರೆ, ನಿವೇದಿತಾ…
View Post