ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದರ ಹಾಗೂ ಅಕ್ಕಾ ನಿವೇದಿತಾ ಸಾಹಿತ್ಯಸಮ್ಮೇಳನದ ಬಗ್ಗೆ..

Total
0
Shares

ವ್ಯಕ್ತಿಗಳನ್ನು ಹೊತ್ತು ಮೆರವಣಿಗೆ ಮಾಡುವ ಸಮ್ಮೇಳನಗಳನ್ನು ಕಂಡ ನಮಗೆ ವಿಚಾರವನ್ನು ಪಲ್ಲಕ್ಕಿಯ ಮೆರವಣಿಗೆಯ ಮೂಲಕ ಹೊತ್ತು ಉದ್ಘಾಟನೆಗೊಂಡು,ಸಂತರುಗಳೆಲ್ಲ ಒಂದೇ ವೇದಿಕೆಯಲ್ಲಿ ಕೂತು ತಮ್ಮ ಅದ್ಭುತ ಕಂಠದೊಂದಿಗೆ,ಭಕ್ತಿಯ ಅಲೆಯಲ್ಲಿ,ಭಾರತ ಮಾತೆಯ ಜೈಕಾರದೊಂದಿಗೆ, ಮೈಮರೆಯುವಂತೆ ಮಾಡಿದ ಹಾಗೂ ಪೂಜಿಸಿದ ಪುಸ್ತಕಗಳನ್ನು ಸ್ವಾಮಿ ವಿವೇಕಾನಂದರ ಹೆಸರಿರುವ ವಿಧ್ಯಾಕೇಂದ್ರದ ಪುಸ್ತಕ ಭಂಡಾರಕ್ಕೆ ಕೊಟ್ಟ ಸ್ವಾಮಿ ವಿವೇಕಾನಂದ ಹಾಗೂ ಅಕ್ಕಾ ನಿವೇದಿತಾ ಸಮ್ಮೇಳನದ ವಿಶಿಷ್ಟ ಅನುಭವದ ಬರಹ..

ಫೆಬ್ರವರಿ 11 ಮತ್ತು 12 ಮಂಗಳೂರಿನ ಕೇಂದ್ರಮೈದಾನದಲ್ಲಿ ಭಾರತದಲ್ಲಿಯೇ ಮೊದಲಾಗಿ ವಿಶಿಷ್ಟ ಸಾಹಿತ್ಯ ಸಮ್ಮೇಳನವು ಹಲವು ವೈಶಿಷ್ಟ್ಟ್ಯತೆಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಿತು.ಸಾಮಾನ್ಯವಾಗಿ ಸಾಹಿತ್ಯಸಮ್ಮೇಳನವೆಂದರೆ ಅಲ್ಲಿ ಯಾವುದೇ ದೇಶದ ಪರ ಅಥವಾ ಯುವ ಶಕ್ತಿಗಳ ಸಮಾಗಮವನ್ನು ನಾವು ನೋಡುವುದೇ ಅಪರೂಪ.ಬಿಳಿ ಕೂದಲಿನ ಹೆಗಲಿನಲ್ಲಿ ಚೀಲವೇರಿಸಿ ಯಾವುದು ಉಪಯುಕ್ತವಿಲ್ಲದ ವಿಷಯಗಳಿವೆಯೋ ಅದರ ಚರ್ಚೆ ಹಾಗೂ ಸಂಬಂಧವಿಲ್ಲದ ಬೇರೆ ಯಾವುದೋ ರಾಜ್ಯದ ಯಾವುದೋ ಋಣಾತ್ಮಕ ವಿಚಾರಗಳ ಬಗ್ಗೆ ಚರ್ಚೆ,ಹಾಗೂ ದೇಶದ ಧರ್ಮದ,ಹಾಗೂ ಸಂಸ್ಕಾರದ ಬಗ್ಗೆ ಮಾತನಾಡುವವರನ್ನು ಕೋಮುವಾದಿಗಳಂತೆ ಚಿತ್ರಿಸುವ ಹಲವು ಸಾಹಿತ್ಯ ಸಮ್ಮೇಳನಗಳ ಬಗ್ಗೆ ಕಂಡು,ಕೇಳಿ,ನೋಡಿ ಓದಿ ತಿಳಿದಿರುವ ನಮಗೆ ಮಂಗಳೂರಿನ ಕೇಂದ್ರಮೈದಾನದಲ್ಲಿ ನಡೆದ ಈ ಸಮ್ಮೇಳನವಂತೂ ಒಂದು ಯಾವುದೋ ದೈವಿಕ ಶಕ್ತಿಯೊಂದು ಬೆನ್ನೆಲುಬಾಗಿ ನಿಂತು ಸಂಪೂರ್ಣವಾಗಿ ನಡೆಸಿದಂತೆ ಕಂಡದ್ದಂತೂ ಸುಳ್ಳಲ್ಲ.

ದಿನಾಂಕ 11ರ ಬೆಳಗ್ಗೆ ಒಂಬತ್ತು ಗಂಟೆಗೆ ಸ್ವಾಮಿ ವಿವೇಕಾನಂದರ ಹಾಗೂ ಭಾರತಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಗುರುವಿನೊಡನೆ ಭಾರತದ ಸೇವೆಗೆ ತನ್ನ ಜೀವನವನ್ನು ಸವೆಸಿದ ಅಕ್ಕಾ ನಿವೇದಿತಾರ ಕೃತಿಗಳನ್ನೂ ಶಾರದಾದೇವಿಯ ಭಾವಚಿತ್ರದ ಸಮೇತ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಸ್ವಾಮಿ ವಿವೇಕಾನಂದರನ್ನು ಹೃದಯದಲ್ಲಿ ಕುಳ್ಳಿರಿಸಿ, ಸಹೋದರ ಸಹೋದರಿ ಸಂಬಂಧದಿಂದ ಒಂದು ಕುಟುಂಬದಂತೆ ದೇಶಸೇವೆಯಲ್ಲಿ ತೊಡಗಿರುವ ಯುವ ಶಕ್ತಿ ಎಂದೇ ಕರೆಯಲ್ಪಡುವ ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ನಡೆಸಲ್ಪಡುವ ಯುವಾಬ್ರಿಗೇಡ್ ಎಂಬ ಸಂಘಟನೆಯ ಹಾಗೂ ಸೋದರಿ ನಿವೇದಿತಾ ಸಂಘಟನೆಯ ಸಹೋದರಿಯರು ಹಾಗೂ ದೇಶ,ಸಾಹಿತ್ಯ ಸ್ವಾಮೀಜಿಯ ಚಿಂತನೆಗಳು ಬೀದಿಯಲ್ಲಿ ಒಟ್ಟೊಟ್ಟಾಗಿ ಹೆಜ್ಜೆಹಾಕಿ,ಮಂಟಪದಲ್ಲಿ ಇಡೀ ಸಮ್ಮೇಳನದ ಪ್ರಾರಂಭದಿಂದ ಅಂತ್ಯದವರೆಗೆ ಮಂಟಪದಲ್ಲಿ ಪೂಜಿಸಲ್ಪಟ್ಟಿತು.

ರಾಮಕೃಷ್ಣ ಮಿಷನ್ ನ ಸಂತರು,ಹಲವು ಸಂಘಟನೆಗಳ ನೇತಾರರು,ದೇಶದ ವಿವಿಧರಾಜ್ಯದ ಸಂತರು,ಸಾಹಿತ್ಯ ಬರಹ ಪ್ರೇರಣಾ ಮಾತುಗಳಿಂದ ಜನಮನ್ನಣೆಗಳಿಸಿದವರು,ವಿವಿಧ ಕ್ಷೇತ್ರಗಳಲ್ಲಿ ಸ್ವಾಮೀಜಿಗಳ ಚಿಂತನೆಗಳನ್ನು ಮೈಗೂಡಿಸಿಕೊಂಡು ಯಶಸ್ವಿಗಳಿಸಿದವರು,ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಯುವಕರ ದಂಡು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳ ಉಪಸ್ಥಿತಿ ಹಾರೈಕೆ ಆಶೀರ್ವಾದ ಸೇರಿದ್ದ ಯುವ ಸಮೂಹವನ್ನು ರೋಮಾಂಚನಗೊಳಿಸಿತು.

ಕಾವಿಯುಟ್ಟವರು,ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಸ್ವಾರ್ಥ,ಅಸೂಯೆ ಬಿಟ್ಟು ಕೇವಲ ತ್ಯಾಗ ಸೇವೆಗಳಲ್ಲಿ ತೊಡಗಿಕೊಂಡಾಗ ಇಡೀ ಭಾರತ ಮತ್ತೊಮ್ಮೆ ವಿಶ್ವಗುರುವಾಗುವುದರಲ್ಲಿ ಸಂಶಯವಿಲ್ಲವೆಂದು ಹಲವುಗಣ್ಯರು ಆಶಿಸಿದರು.ಯಾವುದೇ ರಾಜಕೀಯ,ಸರಕಾರದ ಸಹಾಯವಿಲ್ಲದೇ ಕೇವಲ ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ಏನನ್ನೂ ಸಾಧಿಸಬಹುದು ಸ್ವಾಭಿಮಾನವಿದ್ದಲ್ಲಿ ಸ್ವಾಮೀಜಿಯಿರುತ್ತಾರೆ ಎಂದು ಸಾಕ್ಷ್ಯ ಸಮೇತ ವೇದಿಕೆಯಲ್ಲಿ ನಿರೂಪಿಸಲ್ಪಾಟ್ಟಾಗ ಪ್ರತೀ ಗಣ್ಯರ ಮಾತಿಗೂ ಸಾಧಕರ ಸಾಧನೆಗೂ ಇಡೀ ವೇದಿಕೆ ಎದ್ದುನಿಂತು ಚಪ್ಪಾಳೆ ತಟ್ಟುತ್ತಿದ್ದಾಗ ಮೈರೋಮಾಂಚನ ಹಾಗೂ ಕಣ್ಣಂಚಿನಲ್ಲಿ ಖುಷಿಯಲ್ಲಿ ನೀರು ಬರುತ್ತಿತ್ತು.

16649384_1209769169121075_2617842397248553932_n

ಪ್ರತಿಯೊಂದು ಕಾರ್ಯಕ್ರಮವೂ ಸ್ವಾಮಿ ವಿವೇಕಾನಂದರೆ ನಿಂತು ನಡೆಸಿದರೆಂದು ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರು ಪ್ರತಿಸಲವೂ ಹೇಳುತ್ತಿದ್ದ ಮಾತುಗಳು ಅಕ್ಷರಶ: ಸತ್ಯವೆಂಬಂತೆ ಲಕ್ಷಾಂತರ ಯುವ ಮನಸ್ಸುಗಳಿಗೆ ಲಗ್ಗೆಯಿಟ್ಟು ದೇಶಭಕ್ತಿ ಹಾಗೂ ಪ್ರೇರಣೆ ತುಂಬಿದ ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರು ಸಾಮಾನ್ಯನಂತೆ ಅಲ್ಲಲ್ಲಿ ಓಡಾಡುತ್ತಾ ಸೇರಿದ ಪ್ರತಿ ಗಣ್ಯರಿಂದ ಹಿಡಿದು ಸಾಮಾನ್ಯಲ್ಲಿಯೂ ಮಾತನಾಡುತ್ತಾ ಓಡಾಡುತ್ತಿದ್ದುದ್ದನ್ನು ಕಂಡವರು ದಂಗಾಗಿ ಹೋಗಿದ್ದರು.

ಈ ಸಮ್ಮೇಳನದ ಸಮಾರೋಪವೂ ಸಂಪೂರ್ಣ ವೈಶಿಷ್ಟ್ಯದಿಂದ ಕೂಡಿತ್ತು.ಹಲವು ಸಂತರ ಆಶೀರ್ವಾದ,ಹಾರೈಕೆ ವಿವಿಧ ಧಾಖಲೆಗಳೊಂದಿಗೆ,ಗಿನ್ನಿಸ್ ರೆಕಾರ್ಡ್ ಪಟ್ಟಿಗೆ ಹೊಸ ಸೇರ್ಪಡೆಯೊಂದಿಗೆ,ದೂರದಿಂದ ಬಂದವರಿಗೆ ವಸತಿ,ಪ್ರತಿಯೊಬ್ಬ ಪ್ರತಿನಿಧಿ,ಕಾರ್ಯಕರ್ತ ಹಾಗೂ ಪ್ರತೀ ಕಾರ್ಯಕ್ರಮದ ವೀಕ್ಷಕರಿಗೂ ಊಟ ಉಪಚಾರ,ಕೇಳುಗನ ಕಿವಿಯಿಂಪು,ಅನುಸರಿಸುವವನಿಗೆ ಪ್ರೇರಣೆ,ಪುಸ್ತಕ ಪ್ರೇಮಿ ಸಾಹಿತ್ಯಪ್ರೇಮಿಗಳಿಗೆ ವಿಶಿಷ್ಟ ಸಂಗ್ರಹ,ಸ್ವಾಮೀಜಿ ಭಕ್ತರಿಗೆ ಮತ್ತೊಮ್ಮೆ ಹೊಸರೂಪದಲ್ಲಿ ದರ್ಶನ ನೀಡಿದ ಸ್ವಾಮೀಜಿ ಹಾಗೂ ಅಕ್ಕಾ ನಿವೇದಿತೆಯರ ಬಗೆಗಿರುವ ಮಾತು,ಚಿತ್ರ ವೀಡಿಯೋ,ಫೋಟೋ ಗ್ಯಾಲರಿ ಎಲ್ಲವೂ ಅದ್ಬುತ.ಸೇರಿದ ಪ್ರತೀಯೊಬ್ಬನಲ್ಲೂ ಸೋದರ ಸೋದರಿ ಭಾವದಿಂದ ಪ್ರೀತಿಯಿಂದ ಮಾತನಾಡಿಸುತ್ತಿದ್ದ ಯುವಾಬ್ರಿಗೇಡ್ ಸಹೋದರರು ಹಾಗೂ ಸೋದರಿ ನಿವೇದಿತಾಪ್ರತಿಷ್ಟಾನ ಸಹೋದರಿಯರು ಅಬ್ಬಾ ಎಲ್ಲವನ್ನೂ ಸ್ವಾಮೀಜಿಯೇ ಎಲ್ಲರ ಬೆನ್ನ ಹಿಂದೆ ಮಾಡಿಸುತ್ತಿದ್ದಾರೆ ಎನ್ನಿಸಿತು. ಸಮ್ಮೇಳನದ ಕೊನೆಯಲ್ಲಿ ಎಲ್ಲಾ ಸ್ವಾಮೀಜಿಗಳೂ ಒಟ್ಟಿಗೆ ಕೂತು ಹಾಡಿದ ಹಾಡು ಹಾಗೂ ಕಾರ್ಯಕ್ರಮದಲ್ಲಿ ಉದ್ಘಾಟನೆಗೆ ಪಲ್ಲಕ್ಕಿಯಲ್ಲಿ ಬಂದ ಕೃತಿಗಳು ಪುತ್ತೂರಿನ ಸ್ವಾಮಿ ವಿವೇಕಾನಂದ ವಿಧ್ಯಾಕೇಂದ್ರದ ಪುಸ್ತಕ ಸಂಗ್ರಹಾಲಯಕ್ಕೆ ಕೊಡುಗೆಯಾಗಿ ನೀಡಲ್ಪಟ್ಟಿತು.

ಈ ಕಾರ್ಯಕ್ರಮದ ಯಶಸ್ವಿಯಲ್ಲಿ ಯುವ ಪಡೆಯೊಂದು ಹಗಲಿರುಳು ಶ್ರಮಪಟ್ಟಿತ್ತು ಹಾಗೂ ಕಂಡುಕಾಣದ ಹಲವಾರು ಕೈಗಳ ಪರಿಶ್ರಮ ಉತ್ತಮ ಮಾರ್ಗದರ್ಶನ ಎಲ್ಲವೂ..ಎಲ್ಲಾ ಸಹೋದರ ಸಹೋದರರಿಗೂ ಪ್ರೀತಿಪೂರ್ವಕ ಧನ್ಯವಾದಗಳು.

Leave a Reply

Your email address will not be published. Required fields are marked *

You May Also Like

ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ

‘ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ. ಸೆಪ್ಟೆಂಬರ್ 10, 11 ‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ, ಜಡವಾದುದನ್ನು ಆದರ್ಶವಾಗಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀಣರ್ಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು ಬೇಕಾಗಿದ್ದಾರೆ.’…
View Post

ಉದ್ಘಾಟನೆಯಾಯ್ತು ಎರಡು ದಿನದ ಮಹಾ ಯಾತ್ರೆ! ವಿವೇಕಾನಂದ ನಿವೇದಿತಾರ ಸಾಹಿತ್ಯ ಜಾತ್ರೆ!

ಫೆಬ್ರುವರಿ 11 ಬೆಳಿಗ್ಗೆ 11 ಗಂಟೆ ಕಿಕ್ಕಿರಿದು ನೆರೆದಿದ್ದ ಎರಡು ಸಾವಿರ ಜನ. ಅದರಲ್ಲಿ 80% ನಷ್ಟು 30 ವಯಸ್ಸಿಗಿಂತಾ ಕಡಿಮೆಯಿದ್ದ ತರುಣರೇ! ವೇದಿಕೆಯ ಮೇಲೆ ಅತಿರಥ ಮಹಾರಥರು! ಮುಂದಿನ ವಿಶೇಷ ಆಸನಗಳಲ್ಲಿ ಸಾಧು ಸಂತರು ಸನ್ಯಾಸಿ ಸನ್ಯಾಸಿನಿಯರು ಸಾಧಕ ಗಣ.…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘುಸಾಹಿತ್ಯ ಸಮ್ಮೇಳನ – ವಿಜಯಪುರ

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತೆ ರಾಜ್ಯಾದ್ಯಂತ ೧೫೦ ಲಘು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅಂದು ಮಾಡಿದ ಸಂಕಲ್ಪಕ್ಕೆ ಮೊದಲ ವೇದಿಕೆ ಸಜ್ಜುಗೊಳಿಸಿದ್ದು ಬೆಂಗಳೂರಿನ ವಿಜಯಪುರ‌.! ವಿವೇಕಾನಂದರು ಜಗತ್ತಿನಲ್ಲೆಲ್ಲ ಭಾರತದ ಪರಂಪರೆ ಶ್ರೇಷ್ಠತೆಯನ್ನು ಮುಟ್ಟಿಸಿದರೆ, ನಿವೇದಿತಾ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘು ಸಾಹಿತ್ಯ ಸಮ್ಮೇಳನಗಳು

‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ. ಜಡವಾದುದನ್ನು ಆದರ್ಶವಾಗಿರಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀರ್ಣಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು.’ ಈ ಮಾತುಗಳು ವಿವೇಕಾನಂದರ ಮಾನಸ ಪುತ್ರಿ ಸೋದರಿ ನಿವೇದಿತಾಳದ್ದು. ಆಕೆಯ ಮಾತುಗಳೇ ಹಾಗೆ ಸದಾ ಬೆಂಕಿಯನ್ನುಗುಳುತ್ತಿದ್ದವು. ಆಕೆ…
View Post

ಕವನ ವಾಚನದ ಕರ್ಣಾನಂದ! ಗೀತ ಗಾಯನದ ಆತ್ಮಾನಂದ! ಗೋಷ್ಠಿಯ ವಿಷಯ – ನಾದೋಪಾಸಕ ವಿವೇಕಾನಂದ!

ಫೆಬ್ರುವರಿ 12 ಗೋಷ್ಠಿ 6 ಸಮಯ ಮಧ್ಯಾಹ್ನ 2.30. ಒಬ್ಬ ಸಂತ ಮಾತ್ರ ತಾ ಏನೂ ಆಗದೇ ಎಲ್ಲಾ ಅಗಬಲ್ಲ ಎನ್ನುವ ಮಾತಿಗೆ ವಿವೇಕಾನಂದರು ಸ್ಪಷ್ಟ ಉದಾಹರಣೆಯಾಗುತ್ತಾರೆ. ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ, ಸೇವೆ ಮತ್ತು ರಾಷ್ಟ್ರ ನಿರ್ಮಾಣ ಕ್ಷೇತ್ರದಲ್ಲಿ ಹಲವಾರು…
View Post

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post