ಎಂದೆಂದೂ ಮಾಸದ ರಂಗು ಬೀರಿದ ಸ್ವಾತಂತ್ರ್ಯ ಶ್ರಾವಣ

Total
0
Shares

ಯುವಾ ಬ್ರಿಗೇಡ್ ಕಳೆದ ಮೂರು ವರ್ಷಗಳಿಂದಲೂ ಆಗಷ್ಟ್ 15ರ ಸ್ವಾತಂತ್ರ್ಯ ದಿನವನ್ನು ತನ್ನದೇ ಆದ ರೀತಿಯಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಾ ಬಂದಿದೆ .ರಾಜ್ಯದ ಮೂಲೆ ಮೂಲೆಯಿಂದ ಬರುವ ನಮ್ಮ ಕಾರ್ಯಕರ್ತರು ಒಂದೆಡೆ ಸೇರಿ ಈ ರಾಷ್ಟ್ರೀಯ ಪರ್ವವನ್ನು ಸಂಭ್ರಮಿಸುವ ಕ್ಷಣಗಳು ಬಹಳ ವಿಶೇಷ. ವರ್ಷದಿಂದ ವರ್ಷಕ್ಕೆ ಈ ಆಚರಣೆ ತನ್ನ ಆಕರ್ಷಣೆ ಹಾಗೂ ತನ್ನ ಅರ್ಥಪೂರ್ಣತೆಯನ್ನು ಹೆಚ್ಚಿಸಿ ಕೊಂಡು ನಮ್ಮೆಲ್ಲರನ್ನೂ ಈ ದಿನಕ್ಕಾಗಿ ವರ್ಷಪೂರ್ತಿ ಕಾಯುವಂತೆ ಮಾಡಿದೆ ಎಂದರೆ ಅತಿಶಯೋಕ್ತಿ ಆಗಲಾರದು.ಈ ವರ್ಷ ನಮ್ಮ ಸ್ವಾತಂತ್ರ್ಯ ಶ್ರಾವಣ ನಡೆದದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ! ಕಡಲ ಕಿನಾರೆ ಹಾಗು ಹಸಿರಿನ ಮಲೆನಾಡಿನ ಸಂಯೋಗದ ಹೊನ್ನಾವರ ಬಲು ಅಪರೂಪದ ಪರಿಸರ! ಅಲ್ಲಿನ ಖ್ಯಾತ ಯಕ್ಷಗಾನದ ಮೇರು ಪ್ರತಿಭೆ ಶಂಭು ಹೆಗಡೆಯವರ ಯಕ್ಷಗಾನ ಅಕಾಡಮಿ ಶ್ರೀಮಯ ಕಲಾಕೇಂದ್ರದಲ್ಲಿ ನಮ್ಮ ಸ್ವಾತ೦ತ್ರ್ಯ ಸಂಭ್ರಮಾಚರಣೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಭಾರತೀಯ ಕಲೆಗಳ ಮೂಲಕ ಪ್ರಪಂಚದಾದ್ಯಂತ ಭಾರತೀಯ ಸಂಸ್ಕೃತಿಯನ್ನು ಪಸರಿಸುತ್ತಿರುವ ಕಲಾವಿದರಿಗೆ ಸಮರ್ಪಿತವಾದ ನಮ್ಮ ಈ ಬಾರಿಯ ಸ್ವಾತಂತ್ರ್ಯ ಶ್ರಾವಣಕ್ಕೆ ಕೆರೆಮನೆ ಶಂಭುಹೆಗಡೆ ಯಕ್ಷಗಾನ ಅಕಾಡಮಿಯ ಪರಿಸರ ಅತ್ಯಂತ ಸೂಕ್ತವಾಗಿ ಒದಗಿ ಬಂದಿತ್ತು. ತಮ್ಮ ಭರತನಾಟ್ಯ ಕಲೆಯ ಮೂಲಕ ವಿಶ್ವದಾದ್ಯಂತ ಭಾರತೀಯ ಶಾಸ್ತ್ರೀಯ ಕಲೆಯ ಹಿರಿಮೆ ಗರಿಮೆಯನ್ನು ಸಮರ್ಥವಾಗಿ ಸಾರುತ್ತಿರುವ ಕನ್ನಡ ಚಲನಚಿತ್ರ ರ೦ಗದ ನಟ ಶ್ರೀಧರ್ ನಮ್ಮ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು ಕಾರ್ಯಕ್ರಮದ ಸೊಗಸನ್ನು ಹೆಚ್ಚಿಸಿತ್ತು. ವಿವಿಧ ಪುಷ್ಪಗಳಿಂದ ಸಿಂಗಾರಗೊಂಡ ರಥದಲ್ಲಿ ಭಾರತ ಮಾತೆಯ ಪುತ್ಥಳಿಯನ್ನಿಟ್ಟು ಜಯಘೋಷದೊಡನೆ ರಥವನ್ನು ಎಳೆಯುವಾಗಿನ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿತ್ತು.

20841714_1769540679725997_5361274715041963226_n

20819279_1769495173063881_896095414995268305_o

20934200_1769489396397792_7144947568330425573_o

ಬೇರೆಲ್ಲೂ ಕಾಣ ಸಿಗದ ರಥಾರೂಡ ಭಾರತಾಂಭೆಯ ಶೋಭಯಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಉತ್ತರ ಕನ್ನಡದ ಸಂಸ್ಕೃತಿಯನ್ನು ಬಿಂಬಿಸುವಂತೆ ಅಣಿಯಾಗಿದ್ದ ಬಯಲು ರಂಗ ಮಂದಿರದ ವೇದಿಕೆಯಲ್ಲಿ ಕಲಾವಿದ ಶ್ರೀಧರ್ ಧ್ವಜರೋಹಣ ನೆರವೇರಿಸಿದರು . ಅಲ್ಲಿ ಸೇರಿದ್ದ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಂದ ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ 500ರಕ್ಕೂ ಹೆಚ್ಚು ಕಾರ್ಯಕರ್ತರು ಒಕ್ಕೊರಲಿನಿಂದ ರಾಷ್ಟ್ರಗೀತೆ ಹಾಡಿ ಧ್ವಜಕ್ಕೆ ಗೌರವ ಸಲ್ಲಿಸಿದರು.

20819179_1769487639731301_6605806922490175074_o

20861818_1769472186399513_6404724640965661462_o

20863218_1769549316391800_5374123072242645476_o

20900763_1769477603065638_4960893914568296184_o

20799564_1769498813063517_3611910533765979134_n

ತದನಂತರದ ಕಾರ್ಯಕ್ರಮಗಳು ಯಕ್ಷಗಾನ ಅಕಾಡಮಿಯ ಒಳಾಂಗಣ ವೇದಿಕೆಯಲ್ಲಿ ನಡೆದವು. ಕಲಾವಿದ ಶ್ರೀಧರ್ ಮಾತನಾಡಿ ಇನ್ನಿತರ ದೇಶಗಳ ಕಲೆಗಳು ಇ೦ದ್ರಿಯ ವೈಭೋಗಕ್ಕೆ ,ಚಮತ್ಕಾರಕ್ಕೆ ಮಹತ್ವ ಕೊಟ್ಟರೆ ಭಾರತೀಯ ಕಲೆಗಳು ಇದಕ್ಕೆ ಹೊರತಾಗಿ ಆತ್ಮದ ಆನಂದಕ್ಕೆ ಮಹತ್ವ ಕೊಟ್ಟು ಆಧ್ಯಾತ್ಮಿಕ ಅನುಭೂತಿ ಕೊಡುವಲ್ಲಿ ಶಕ್ತವಾಗಿವೆ. ಅಂತೆಯೇ ಭಾರತೀಯ ಕಲೆಗಳು ಪ್ರಸಕ್ತ ಜಗತ್ತಿನಾದ್ಯಂತ ಜನಪ್ರಿಯವಾಗಿವೆ . ಹಾಗಾಗಿ ಇದನ್ನು ಉಳಿಸುವ ,ಬೆಳೆಸುವ ಜವಬ್ದಾರಿ ನಮ್ಮೆಲ್ಲರದು ಎಂದು ಅಭಿಪ್ರಾಯ ಪಟ್ಟರು . ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಸಂಸ್ಕೃತ ಭಾಷೆಯನ್ನು ವಿಶ್ವವು ಅಪ್ಪಿಕೊಳ್ಳುತ್ತಿರುವತ್ತ ನಮ್ಮ ಗಮನ ಸೆಳೆದು ನಾವು ಸಂಸ್ಕೃತ ಕಲಿಯುವಂತೆ ಪ್ರೆರೇಪಿಸಿದರು. ನಂತರ ಮಾತನಾಡಿದ ಯಕ್ಷಗಾನ ಅಕಾಡಮಿಯ ಮುಖ್ಯಸ್ಠ ಹಾಗು ಕೆರೆಮನೆ ಶಂಭು ಹೆಗಡೆಯ ಪುತ್ರ ಶ್ರೀ ಶಿವಾನಂದ ಹೆಗಡೆಯವರು ನೂರಾರು ಯುವಕ ಯುವತಿಯರು ದೇಶಪ್ರೇಮದ ಒಂದು ಕಾರಣಕ್ಕಾಗಿ ಒಂದೆಡೆ ಸೇರಿ ಸಂಭ್ರಮಿಸುತ್ತಿರುವುದು ಅತ್ಯಂತ ಸಂತಸ ತಂದಿದೆ ಹಾಗು ಅಕಾಡಮಿಯ ಜಾಗ ಇಂದು ಸದ್ವಿನಿಯೋಗವಾಗಿದೆ ಎಂದು ಹೃದಯ ತುಂಬಿ ನುಡಿದರು .

20900626_1769568919723173_5493033523459393827_o

20819621_1769550136391718_4750308162201214084_o

20786042_1769585036388228_3318889655896300001_o

20818803_1769616526385079_3755939781501848143_o

20819127_1769608199719245_5500336328285540499_o

ಯುವಾ ಬ್ರಿಗೇಡಿನ ಮಾರ್ಗ ದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಮಾತನಾಡಿ ರಾಷ್ಟ್ರೀಯ ಪರ್ವಗಳನ್ನು ಔಚಿತ್ಯಪೂರ್ಣವಾಗಿ ಆಚರಿಸುವುದರಲ್ಲಿ ಯುವಾಬ್ರಿಗೇಡ್ ಸದಾ ಮುಂದು ಎಂದು ನುಡಿದರು. ಮಧ್ಯಾಹ್ನದ ಭೋಜನ ಬಹಳ ವಿಷೇಶವಾಗಿ ಉತ್ತರ ಕನ್ನಡ ಜಿಲ್ಲೆಯ ತರಾವರಿ ಶ್ರೀಮಂತ ಆಹಾರವನ್ನು ನಮ್ಮ ಉತ್ತರ ಕನ್ನಡ ಜಿಲ್ಲೆಯ ಕಾರ್ಯಕರ್ತರು ಆತ್ಮೀಯವಾಗಿ ಉಣಬಡಿಸಿದರು . ಭಾರತಾದಾದ್ಯಂತ ದೇಶಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿದ ಹುತಾತ್ಮರ ನೆಲದಿಂದ ಆಯ್ದು ತಂದ ಮೃತ್ತಿಕೆಯನ್ನು ನಾವೆಲ್ಲರೂ ಸ್ವಾತಂತ್ರ್ಯ ತಿಲಕವೆಂದು ಹೆಮ್ಮೆಯಿಂದ ಹಣೆಯಲ್ಲಿ ಧರಿಸಿ ಪುನೀತರಾದೆವು . ಆನಂತರ ಒಂದಿಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ,ಮೊಸರು ಕುಡಿಕೆಯಂತಹ ದೇಸಿ ಕ್ರೀಡೆಗಳು ….. ಅಬ್ಬಾ! ದಿನ ಕಳೆದದ್ಡೆ ಗೊತ್ತಾಗಲಿಲ್ಲ !! ಒಟ್ಟಿನಲ್ಲಿ ಸ್ವಾತಂತ್ರ್ಯ ಎಂದರೆ ಮನಸ್ಸಿಗೆ ತೋಚಿದಂತೆ ಇರುವ ಸ್ವೇಛ್ಛೆಯಲ್ಲ. ಅದು ಸಮಾಜವನ್ನು ನಿರಂತರವಾಗಿ ಕಟ್ಟುವ ಜವಾಬ್ಧಾರಿಯ ಕರ್ತವ್ಯ ಎಂಬ ತುಂಬುಭಾವದಿಂದ ದಿನ ಕಳೆದ ಸಾರ್ಥಕತೆ ನಮ್ಮೆಲ್ಲರಲ್ಲಿ ನೆಲೆಸಿತ್ತು.

Leave a Reply

Your email address will not be published. Required fields are marked *

You May Also Like

ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ

‘ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ. ಸೆಪ್ಟೆಂಬರ್ 10, 11 ‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ, ಜಡವಾದುದನ್ನು ಆದರ್ಶವಾಗಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀಣರ್ಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು ಬೇಕಾಗಿದ್ದಾರೆ.’…
View Post

ನಂದಾದೀಪ

ಮರೆವು – ಒಂದು ಮನುಷ್ಯ ಸಹಜ ಗುಣ. ವರ್ಷಕ್ಕೊಮ್ಮೆ ಬರೋ WEDDING ANNIVERSARY ಗಂಡನಿಗೆ ನೆನಪಿರಲ್ಲ, ಗಂಡ ಕೇಳಿದ ಹೊಸ ರುಚಿ ಪಾಯಸ ಹೆಂಡತಿಗೆ ನೆನಪಿರಲ್ಲ. ಅಪ್ಪನಿಗೆ ಮಗ ಹೇಳಿದ್ದೆನೋ ನೆನೆಪಿರಲ್ಲ, ಮಗನಿಗೆ ಅಮ್ಮ ತರಲಿಕ್ಕೆ ಹೇಳಿದ್ದು ನೆನಪಿರಲ್ಲ. ಇವೆಲ್ಲವೂ ನೆನಪಿದ್ರೆ…
View Post

ಉದ್ಘಾಟನೆಯಾಯ್ತು ಎರಡು ದಿನದ ಮಹಾ ಯಾತ್ರೆ! ವಿವೇಕಾನಂದ ನಿವೇದಿತಾರ ಸಾಹಿತ್ಯ ಜಾತ್ರೆ!

ಫೆಬ್ರುವರಿ 11 ಬೆಳಿಗ್ಗೆ 11 ಗಂಟೆ ಕಿಕ್ಕಿರಿದು ನೆರೆದಿದ್ದ ಎರಡು ಸಾವಿರ ಜನ. ಅದರಲ್ಲಿ 80% ನಷ್ಟು 30 ವಯಸ್ಸಿಗಿಂತಾ ಕಡಿಮೆಯಿದ್ದ ತರುಣರೇ! ವೇದಿಕೆಯ ಮೇಲೆ ಅತಿರಥ ಮಹಾರಥರು! ಮುಂದಿನ ವಿಶೇಷ ಆಸನಗಳಲ್ಲಿ ಸಾಧು ಸಂತರು ಸನ್ಯಾಸಿ ಸನ್ಯಾಸಿನಿಯರು ಸಾಧಕ ಗಣ.…
View Post

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ

ಮಾರ್ಚ್ 25ರ “ದೀಕ್ಷಾ ದಿವಸದ” ಭರ್ಜರಿ ಕಾರ್ಯಕ್ರಮಗಳ ಪ್ರತಿಫಲ ಬೇಸಿಗೆ ಶಿಬಿರಗಳು. ಮಕ್ಕಳ ಶಾಲೆ ಮುಗಿದಿತ್ತು, ಏಪ್ರಿಲ್ ತಿಂಗಳ ಪ್ರಖರ ಸೂರ್ಯನ ಶಾಖ ಅವರನ್ನು ಹೊರಗೆ ಬರದಂತೆ ಮಾಡಿತ್ತು. ಎಲ್ಲಾ ಕಡೆಗಳಲ್ಲಿ ಬೇಸಿಗೆ ಶಿಬಿರಗಳು ಮಕ್ಕಳನ್ನು ಆಕರ್ಷಿಸುತ್ತಿದ್ದವು. ಆದರೆ ಶಿಬಿರಗಳ ಪ್ರವೇಶಕ್ಕೆ…
View Post

ದೀಕ್ಷಾ ದಿವಸ್

ಅಂದು ಮಾರ್ಚ 25, 1898. ಶುಕ್ರವಾರದ ಶುಭ ದಿನ. ಮಾರ್ಗರೆಟ್ ಸೂರ್ಯೋದಯದ ಮುನ್ನವೇ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು ತನ್ನ ಗುರುವಿನ ಮುಂದೆ ಉತ್ಸಾಹ, ಕುತೂಹಲಗಳಿಂದ ನಿಂತಿದ್ದಳು. ಆ ದಿನ ಸ್ವಾಮೀಜಿ ಆಕೆಗೆ ಶಿವ ಪೂಜೆ ಮಾಡುವ ವಿಧಾನ ಹೇಳಿಕೊಟ್ಟರು. ಗಮನವಿಟ್ಟು,…
View Post