ಉದ್ಘಾಟನೆಯಾಯ್ತು ಎರಡು ದಿನದ ಮಹಾ ಯಾತ್ರೆ! ವಿವೇಕಾನಂದ ನಿವೇದಿತಾರ ಸಾಹಿತ್ಯ ಜಾತ್ರೆ!

Total
0
Shares

ಫೆಬ್ರುವರಿ 11 ಬೆಳಿಗ್ಗೆ 11 ಗಂಟೆ

ಕಿಕ್ಕಿರಿದು ನೆರೆದಿದ್ದ ಎರಡು ಸಾವಿರ ಜನ. ಅದರಲ್ಲಿ 80% ನಷ್ಟು 30 ವಯಸ್ಸಿಗಿಂತಾ ಕಡಿಮೆಯಿದ್ದ ತರುಣರೇ! ವೇದಿಕೆಯ ಮೇಲೆ ಅತಿರಥ ಮಹಾರಥರು! ಮುಂದಿನ ವಿಶೇಷ ಆಸನಗಳಲ್ಲಿ ಸಾಧು ಸಂತರು ಸನ್ಯಾಸಿ ಸನ್ಯಾಸಿನಿಯರು ಸಾಧಕ ಗಣ. ಅದ್ಭುತ ಕಾರ್ಯಕ್ರಮವೊಂದರ ಚಾಲನೆಯು ದೀಪಕ್ಕೆ ತೈಲವೆರೆಯುವ ಮೂಲಕ ಪೂಜ್ಯ ಸ್ವಾಮಿ ನಿಖಿಲೇಶ್ವರಾನಂದಜೀ ಮಹಾರಾಜ್, ಪೂಜ್ಯ ಪೂಜ್ಯ ಸ್ವಾಮಿ ನಿರ್ಭಯಾನಂದ ಜೀ ಮಹಾರಾಜ್, ಪೂಜ್ಯ ಸ್ವಾಮಿ ವಿಜಯಾನಂದ ಸರಸ್ವತಿ ಮಹಾರಾಜ್, ಪೂಜ್ಯ ಸ್ವಾಮಿ ವಿವೇಕಚೈತನ್ಯ ಮಹಾರಾಜ್ ರವರಿಂದಾಯಿತು. ಪಲ್ಲಕ್ಕಿಯಿಂದ ವಿವೇಕಾನಂದ ಮತ್ತು ನಿವೇದಿತಾರ ಸಾಹಿತ್ಯಗಳನ್ನು ತೆಗೆದು ವೇದಿಕೆಯ ಮೇಲಿದ್ದ ಗುಡಿಯೊಳಗೆ ಪ್ರತಿಷ್ಠಾಪಿಸಲಾಯಿತು.

16708299_1209769705787688_4843534925690951853_n
16711573_1209769579121034_8091460952960993812_n
16730187_1209769935787665_3296337555446918499_n
16729040_1209769769121015_5254490822020345044_n
16712017_1209769645787694_1532318628387917037_n
16681962_1209770045787654_8784249538832770611_n
16603050_1209769872454338_1146348636756817289_n

ಉದ್ಘಾಟನಾ ಭಾಷಣ ಮಾಡಿದ ಪೂಜ್ಯ ಸ್ವಾಮಿ ನಿಖಿಲೇಶ್ವರಾನಂದಜಿ ಮಹಾರಾಜ್, ಅಧ್ಯಕ್ಷರು, ರಾಮಕೃಷ್ಣ ಆಶ್ರಮ, ಬರೋಡ, ಗುಜರಾತ್ ಇವರು “ಈ ಸಾಹಿತ್ಯ ಸಮ್ಮೇಳನದ ಹಬ್ಬದಿಂದ ನಿವೇದಿತಾ ಮತ್ತು ವಿವೇಕಾನಂದರ ಸಾಹಿತ್ಯ ಮನೆ ಮನೆಗೆ ತಲುಪಲಿ” ಎಂದು ಹರಸಿದರು. “ಸ್ವಾಮಿ ವಿವೇಕಾನಂದ ಮತ್ತು ಸೋದರಿ ನಿವೇದಿತಾರ ಸಾಹಿತ್ಯವು ಬೆಂಕಿಯಂತೆ ಬಹಳಷ್ಟು ಜನ ಕ್ರಾಂತಿಕಾರಿಗಳು ಈ ಸಾಹಿತ್ಯವನ್ನು ಓದಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮ ಚಳುವಳಿಯಲ್ಲಿ ಪಾಲ್ಗೊಂಡರು. ಇಂದಿನ ಯುವಕರು ಸಹಾ ಅವರ ಸಾಹಿತ್ಯವನ್ನು ಓದಿ ಸಮಾಜಕ್ಕೆ ಬೆಳಕಾಗಲಿ. ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲಿ ಈ ಸಾಹಿತ್ಯ ಸಮ್ಮೇಳನದ ಹಬ್ಬದಿಂದ ನಿವೇದಿತಾ ಮತ್ತು ವಿವೇಕಾನಂದರ ಸಾಹಿತ್ಯ ಮನೆ ಮನೆಗೆ ತಲುಪಲಿ.” ಎಂದು ಆಶಿಸಿದರು.

ನಂತರ ಮಾತನಾಡಿದ ಸ್ವಾಮಿ ವಿಜಯಾನಂದ ಸರಸ್ವತಿ, ರಾಮಕೃಷ್ಣ ವಿವೇಕಾನಂದ ಆಶ್ರಮ, ಧಾರವಾಡ ಇವರು “ಸೋದರಿ ನಿವೇದಿತಾ ದೇಶಪ್ರೇಮಿ ಭಾರತೀಯರ ಸ್ಫೂರ್ತಿ ಸ್ರೋತವಾಗಿದ್ದರು. ಅವರ 150 ನೇ ಜಯಂತಿಯ ಸಂದರ್ಭದಲ್ಲಿ ಆಯೋಜಿಸಿರುವ ಈ ಸಮ್ಮೇಳನಕ್ಕೆ ನಮ್ಮ ಪೂರ್ಣ ಆಶೀರ್ವಾದವಿದೆ” ಎಂದರು. “ಸೋದರಿ ನಿವೇದಿತಾರಷ್ಟು ಭಾರತವನ್ನು ಪ್ರೀತಿಸಿದ ವ್ಯಕ್ತಿ ಸಿಗುವುದು ಬಹಳ ಕಷ್ಟ. ಜಗದೀಶ್ ಚಂದ್ರ ಬೋಸ್, ಸುಬ್ರಹ್ಮಣ್ಯ ಭಾರತಿ, ಬಂಕಿಮಚಂದ್ರೂ ಸೇರಿದಂತೆ ಬಹಳಷ್ಟು ಜನ ದೇಶಪ್ರೇಮಿಗಳಿಗೆ ಸೋದರಿ ನಿವೇದಿತಾ ಅತ್ಯಂತ ಶ್ರೇಷ್ಠ ಮಟ್ಟದ ಸ್ಫೂರ್ತಿ ನೀಡಿದ್ದರು. ಇಂತಹಾ ಶ್ರೇಷ್ಠ ಮಹಿಳೆಯ ಸಾಹಿತ್ಯವನ್ನು ನಾವೆಲ್ಲರೂ ಅಧ್ಯಯನ ಮಾಡಿ ಸ್ಫೂರ್ತಿಯನ್ನು ಪಡೆಯಬೇಕು ಎಂದರು.

ಶ್ರೀ ಚಕ್ರವರ್ತಿ ಸೂಲಿಬೆಲೆ, ಮಾರ್ಗದರ್ಶಕರು, ಯುವಾ ಬ್ರಿಗೇಡ್ ಇವರು ಮಾತನಾಡಿ “ಸಾಹಿತ್ಯ ಸಮ್ಮೇಳನಗಳು ಸಾಹಿತ್ಯದ ಅಧ್ಯಯನ ಮತ್ತು ಆರಾಧನೆಯ ದೇಗುಲಗಳಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಸಮ್ಮೇಳನಗಳೆಂದರೆ ಸಾಹಿತ್ಯವನ್ನು ಬಿಟ್ಟು ಉಳಿದೆಲ್ಲದರ ಬಗ್ಗೆ ಗಮನಕೊಡುವಂತಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂತಹಾ ಪರಿಸ್ಥಿತಿಯಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನವು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ರೀತಿಯ ಮೇಲ್ಪಂಕ್ತಿಯನ್ನು ಹಾಕಿಕೊಡಲಿದೆ. ಮುಂದಿನ ದಿನಗಳಲ್ಲಿ ಈ ಸಮ್ಮೇಳನದ ಮಾದರಿಯಲ್ಲಿ ರಾಜ್ಯದಾದ್ಯಂತ ಮಿನಿ ಸಾಹಿತ್ಯ ಸಮ್ಮೇಳನಗಳನ್ನು ಯುವಾ ಬ್ರಿಗೇಡ್ ಹಮ್ಮಿಕೊಳ್ಳಲಿದೆ.” ಎಂದರು.

ಸಮಾರಂಭದ ಸರ್ವಾಧ್ಯಕ್ಷರಾದ ಮಾತಾಜಿ ಯತೀಶ್ವರಿ ಕೃಷ್ಣ ಪ್ರಿಯ ಅಂಬಾಜಿಯವರು, ಪೂಜ್ಯ ವಿವೇಕ ಚೈತನ್ಯ ಮಹಾರಾಜ್, ರಾಮಕೃಷ್ಣ ತಪೋವನ, ಪೊಳಲಿ ರವರು, ಸಾಹಿತ್ಯ ಸಮ್ಮೇಳನ ಸಮಿತಿಯ ಸಂಚಾಲಕರಾದ ಶ್ರೀ ಗಿರಿಧರ್ ರವರು ಮತ್ತು ರಾಜ್ಯ ಸಂಚಾಲಕರಾದ ನಿತ್ಯಾನಂದ ವಿವೇಕವಂಶಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಮಧ್ಯೆ ಶಿವಮೊಗ್ಗ ಎಸ್ ಎನ್ ಪಿ ಕಾರ್ಯಕರ್ತೆ ಕು. ಪ್ರಿಯಾ ರವರು ಸ್ವಾಮಿ ವಿವೇಕಾನಂದ ಮತ್ತು ನಿವೇದಿತಾರ ಜೀವನದ ಕುರಿತಂತೆ ಬರೆದ “ಗುರು – ಶಿಷ್ಯೆ” ಎಂಬ ಕೃತಿ ಮತ್ತು ನಿತ್ಯಾನಂದ ವಿವೇಕವಂಶಿ ರವರು ಸಂಗ್ರಹಿಸಿರುವ “ಸಾಗರದಾಚೆ ವಿವೇಕಾನಂದ” ಎಂಬ ಕೃತಿಗಳು ಪೂಜ್ಯರ ಅಮೃತ ಹಸ್ತಗಳಿಂದ ಬಿಡುಗಡೆಯಾಯಿತು.

#SVANSS
#Mangaluru
#ReportNo3

Leave a Reply

Your email address will not be published. Required fields are marked *

You May Also Like

ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ

‘ಸ್ವಾಮಿ ವಿವೇಕಾನಂದ, ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ, ಬೆಳಗಾವಿ. ಸೆಪ್ಟೆಂಬರ್ 10, 11 ‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ, ಜಡವಾದುದನ್ನು ಆದರ್ಶವಾಗಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀಣರ್ಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು ಬೇಕಾಗಿದ್ದಾರೆ.’…
View Post

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘುಸಾಹಿತ್ಯ ಸಮ್ಮೇಳನ – ವಿಜಯಪುರ

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತೆ ರಾಜ್ಯಾದ್ಯಂತ ೧೫೦ ಲಘು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅಂದು ಮಾಡಿದ ಸಂಕಲ್ಪಕ್ಕೆ ಮೊದಲ ವೇದಿಕೆ ಸಜ್ಜುಗೊಳಿಸಿದ್ದು ಬೆಂಗಳೂರಿನ ವಿಜಯಪುರ‌.! ವಿವೇಕಾನಂದರು ಜಗತ್ತಿನಲ್ಲೆಲ್ಲ ಭಾರತದ ಪರಂಪರೆ ಶ್ರೇಷ್ಠತೆಯನ್ನು ಮುಟ್ಟಿಸಿದರೆ, ನಿವೇದಿತಾ…
View Post

ಕವನ ವಾಚನದ ಕರ್ಣಾನಂದ! ಗೀತ ಗಾಯನದ ಆತ್ಮಾನಂದ! ಗೋಷ್ಠಿಯ ವಿಷಯ – ನಾದೋಪಾಸಕ ವಿವೇಕಾನಂದ!

ಫೆಬ್ರುವರಿ 12 ಗೋಷ್ಠಿ 6 ಸಮಯ ಮಧ್ಯಾಹ್ನ 2.30. ಒಬ್ಬ ಸಂತ ಮಾತ್ರ ತಾ ಏನೂ ಆಗದೇ ಎಲ್ಲಾ ಅಗಬಲ್ಲ ಎನ್ನುವ ಮಾತಿಗೆ ವಿವೇಕಾನಂದರು ಸ್ಪಷ್ಟ ಉದಾಹರಣೆಯಾಗುತ್ತಾರೆ. ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ, ಸೇವೆ ಮತ್ತು ರಾಷ್ಟ್ರ ನಿರ್ಮಾಣ ಕ್ಷೇತ್ರದಲ್ಲಿ ಹಲವಾರು…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘು ಸಾಹಿತ್ಯ ಸಮ್ಮೇಳನಗಳು

‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ. ಜಡವಾದುದನ್ನು ಆದರ್ಶವಾಗಿರಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀರ್ಣಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು.’ ಈ ಮಾತುಗಳು ವಿವೇಕಾನಂದರ ಮಾನಸ ಪುತ್ರಿ ಸೋದರಿ ನಿವೇದಿತಾಳದ್ದು. ಆಕೆಯ ಮಾತುಗಳೇ ಹಾಗೆ ಸದಾ ಬೆಂಕಿಯನ್ನುಗುಳುತ್ತಿದ್ದವು. ಆಕೆ…
View Post

ಹಿರಿ ಮನೆ

ಯುವಾ ಬ್ರಿಗೇಡ್ ನ ಹುಡುಗರ ಕೆಲಸಗಳೇ ಹಾಗೆ..! ಮಾಡುವ ಕೆಲಸವನ್ನು ಎಲ್ಲರಿಗಿಂತ ಡಿಫರೆಂಟ್ ಆಗಿ, ಪರ್ಫೆಕ್ಟ್ ಆಗಿ ಮಾಡುವಂತಹ ಜಾಯಮಾನ. ಕಳೆದ ಮೂರು ವರ್ಷಗಳಿಂದ ಇದನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅದರ ಸೊಗಡು ಗೊತ್ತಾಗುವುದು. ಹೌದು ಕಳೆದ ಮೂರು ವರ್ಷಗಳ ಹಿಂದಿನ…
View Post