ವಿನಮ್ರ ಆಗ್ರಹ

Total
0
Shares

ಭಾರತ ಎಂದರೆ ಸಮಸ್ಯೆಗಳ ಕೂಪ. ಇದನ್ನು ಯಾರಿಂದಲೂ ಸರಿ ಮಾಡಲು ಸಾಧ್ಯವಿಲ್ಲ. ಇಲ್ಲಿನ ವ್ಯವಸ್ಥೆ ಹದಗೆಟ್ಟುಹೋಗಿದೆ. ಭೃಷ್ಟಾಚಾರ, ಶ್ರೀಮಂತರ ಹಗರಣಗಳು ದೇಶದ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಬಡವ ಬಡವನಾಗಿಯೇ ಸಾಯಬೇಕು. ಕಾಳಧನಿಕ ಮತ್ತಷ್ಟು ಸಂಪತ್ತನ್ನು ಗಳಿಸುತ್ತಿದ್ದಾನೆ. ಹೀಗೆ ದೇಶವನ್ನು ಜರಿಯುತ್ತಲೇ ತಮ್ಮ ಅಸಹಾಯಕತೆಯನ್ನು, ಆಕ್ರೋಶವನ್ನು ಹೊರಹಾಕುತ್ತಲೇ ಬಂದಿದ್ದೆವು. ಆದರೆ ಇದಕ್ಕೆಲ್ಲ ಪರಿಹಾರ ಇಲ್ಲವೇ ಎಂದು ಯೋಚಿಸುತ್ತಿರುವಾಗಲೇ ಅರ್ಥಕ್ರಾಂತಿ ಅನುಷ್ಠಾನದ ಪರಿಚಯವಾಗಿ, ದೇಶದ ಎಲ್ಲಾ ಸಮಸ್ಯಗಳಿಗೆ ರಾಮಬಾಣವಾಗುವಂತಹ ಪ್ರಸ್ತಾವನೆಗಳ ಪರಿಚವಾಗಿದ್ದು.

7

ಅರ್ಥಕ್ರಾಂತಿ ಅನುಷ್ಠಾನದ ರೂವಾರಿ ಅನಿಲ್ ಬೊಕಿಲ್ ರ 15 ವರ್ಷಗಳ ಅಧ್ಯಯನದ ಫಲಿತಾಂಶವೇ ಅರ್ಥಕ್ರಾಂತಿ ಪ್ರಸ್ತಾವನೆ. ಅರ್ಥಕ್ರಾಂತಿ ಅನುಷ್ಠಾನದ ಕರ್ನಾಟಕದ ಸಂಚಾಲಕರಾದ ಶ್ರೀ ಮುಕೇಶ್ ಹೆಗ್ಡೆಯವರ ನೇತೃತ್ವದಲ್ಲಿ ಯುವಾಬ್ರಿಗೇಡ್ ನ ಕಾರ್ಯಕರ್ತರಿಗೋಸ್ಕರ ಅರ್ಥಕ್ರಾಂತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಕಾರ್ಯಾಗಾರದಲ್ಲಿ ಅರ್ಥಕ್ರಾಂತಿಯ ಐದು ಪ್ರಸ್ತಾವನೆಗಳ ಕುರಿತು ಮಾಹಿತಿ ನೀಡಲಾಗಿತ್ತು. ಆದರೆ ಭಾರತದಲ್ಲಿ ಅವೆಲ್ಲದರ ಅನುಷ್ಠಾನ ಸದ್ಯದ ಮಟ್ಟಿಗೆ ಕಷ್ಟಸಾಧ್ಯ ಅನ್ನಿಸಿದ್ದಂತೂ ನಿಜ. ಆದರೂ ಇವೆಲ್ಲವೂ ಅನುಷ್ಠಾನಕ್ಕೆ ಬಂದರೆ ಭೃಷ್ಟಾಚಾರ, ಕಪ್ಪುಹಣದ ಸಮಸ್ಯೆ ನಿವಾರಣೆಯಾಗಬಹುದೆಂಬ ಆಸೆಯಂತೂ ಇತ್ತು. ಆದ ಕಾರಣ ಸೆಪ್ಟೆಂಬರ್ 13 ರಂದು ಬೆಂಗಳೂರು ಮತ್ತು ಮಂಗಳೂರಿನಲ್ಲಿ “ವಿನಮ್ರ ಆಗ್ರಹ” ಎಂಬ ಸಾರ್ವಜನಿಕ ಕಾರ್ಯಕ್ರಮದ ಮೂಲಕ ಅರ್ಥಕ್ರಾಂತಿಯ ಅನುಷ್ಠಾನಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಆಗ್ರಹಿಸಲಾಯಿತು.

44

3

“ನಾಡಿನ ಉಪಯೋಗಕ್ಕೆ ಬರದ ಕೂಡಿಟ್ಟ ಹಣ ರೋಗಗ್ರಸ್ತ ಹಣ. ಬಚ್ಚಿಟ್ಟಿದ್ದನ್ನು ಬೆಳಕಿಗೆ ತರುವ ಅರ್ಥವ್ಯವಸ್ಥೆಯ ಕುರಿತು ವಿನಮ್ರವಾಗಿ ಆಗ್ರಹಿಸುವ ಸಮಯ! ಈ ದೇಶದ ಸೂತ್ರವನ್ನು ಜತನದಿಂದ ಕೈಲಿ ಹಿಡಿದಿರುವ ಹರಿಕಾರರಾದ ಶ್ರೀಯುತ ನರೇಂದ್ರ ಮೋದಿಯವರ ಮುಂದೆ, ಇಡೀ ರಾಜ್ಯದಲ್ಲಿ ‘ವಿನಮ್ರ ಆಗ್ರಹದ’ ಮೂಲಕ ಸಮಾರಂಭಗಳನ್ನು ನಡೆಸಿ, ಅರ್ಥವ್ಯವಸ್ಥೆಯ ಒಳಹೊರಗನ್ನು ಜನಸಾಮಾನ್ಯರಿಗೆ ಅರ್ಥ ಮಾಡಿಸುತ್ತಾ, ಆ ಮೂಲಕ ಬದಲಾವಣೆಗಾಗಿ ಎಲ್ಲರ ಉಪಸ್ಥಿತಿಯಲ್ಲಿ ವಿನೀತರಾಗಿ ಬೇಡಿಕೊಳ್ಳುವ ಪ್ರಯತ್ನ!

ಅರ್ಥಕ್ರಾಂತಿ ಅನುಷ್ಟಾನದ ಪ್ರಸ್ತಾವನೆಗಳು :
1. ರೂ 50 ಮುಖಬೆಲೆಗಿಂತಲೂ ಹೆಚ್ಚಿನ ಮುಖಬೆಲೆಯ ಎಲ್ಲಾ ನೋಟುಗಳನ್ನೂ ಚಲಾವಣೆಯಿಂದ ಹಿಂಪಡೆಯಬೇಕು.

2. ಎರಡನೆಯದಾಗಿ, ದೇಶದ ವರ್ತಮಾನದಲ್ಲಿರುವ ಅಷ್ಟೂ ತೆರಿಗೆಗಳನ್ನು ತೆಗೆದು, ನಗದುರಹಿತ ವ್ಯವಹಾರಗಳಿಗೆ ಕೇವಲ 2% ಬ್ಯಾಂಕು ವಹಿವಾಟು ತೆರಿಗೆಯನ್ನು ಮಾತ್ರ ವಿಧಿಸುವುದು.

3. ಮೂರನೆಯದಾಗಿ, ಎಲ್ಲಾ ಹಣಕಾಸು ವ್ಯವಹಾರಗಳು ಬ್ಯಾಂಕ್‍ನಲ್ಲಿ ಮಾತ್ರವೇ ನಡೆಯಬೇಕೆಂಬ ಪ್ರಣಾಳಿಕೆ ಹೊರಡಿಸುವುದು.

4. ನೇರ ಹಣಕಾಸಿನ ವ್ಯವಹಾರದಲ್ಲಿ ಯಾವ ತೆರಿಗೆಯೂ ಇರಬಾರದು. ಹಾಗೂ ರೂ 2000ದ ಮೇಲ್ಪಟ್ಟ ಯಾವ ವ್ಯವಹಾರಗಳೂ ನಗದಿನಲ್ಲಿ ನಡೆಯಬಾರದು.

5. ವಿಶಿಷ್ಟ ಮೌಲ್ಯದ ರೇಖೆಗಿಂತಾ ಹೆಚ್ಚಿನ ನೇರ ಹಣಕಾಸು ವ್ಯವಹಾರಕ್ಕೆ, ಕಾನೂನಿನ ಸುರಕ್ಷತೆಯನ್ನು ನೀಡಬಾರದು.

ಈ ಐದು ಪ್ರಸ್ತಾವನೆಗಳ ಅನುಷ್ಠಾನಕ್ಕಾಗಿ ಯುವಾ ಬ್ರಿಗೇಡ್, ಜಿಲ್ಲೆ ಜಿಲ್ಲೆಗಳಲ್ಲೂ, ತಾಲೂಕು ಕೆಂದ್ರಗಳಲ್ಲೂ ಕಾರ್ಯಕ್ರಮವನ್ನು ಮಾಡಿ, ಸರ್ಕಾರದ ಮುಂದೆ ವಿನಮ್ರವಾಗಿಯೇ ಈ ಅಹವಾಲನ್ನಿಟ್ಟಿತು.

ಹಣವೆನ್ನುವುದು ಬಳಸಲು ಯೋಗ್ಯವಾಗುವುದು ಚಲಾವಣೆಯಲ್ಲಿರುವಾಗ ಮಾತ್ರ, ಕೂಡಿಟ್ಟಾಗಲೂ, ಮುಚ್ಚಿಟ್ಟಾಗಲೂ ಅಲ್ಲ. ನಿರಂತರ ಚಲನೆಯಿಲ್ಲದಿದ್ದರೆ ಹಣವೂ ಮುಗ್ಗಲು ಹಿಡಿಯುತ್ತದೆ, ನಿಂತ ನೀರಿನಂತೆ ಕ್ರಿಮಿಗಳ ಸಂತತಿಗೆ ಕಾರಣವಾಗುತ್ತದೆ. ಭಾರತ ಬಡದೇಶವಲ್ಲ.. ಬಲಿಷ್ಠದೇಶ ಎಂಬುದನ್ನು ಸಾಬೀತುಪಡಿಸಲು ಇದೇ ಸುಸಮಯ! ಕೈಜೋಡಿಸಿರೆನ್ನುವುದೇ ನಾಗರೀಕರಲ್ಲಿ ನಮ್ಮ ವಿನಮ್ರ ಆಗ್ರಹ.

ಬೆಳಗಾಂ, ಗೋಕಾಕ್, ಉತ್ತರ ಕನ್ನಡದ ಮುಂಡಗೋಡು, ಬಾಗಲಕೋಟೆಯ ತೇರದಾಳ, ವಿಜಯಪುರದ ಜಿಲ್ಲಾಕೇಂದ್ರ, ಹಗರಿ ಬೊಮ್ಮನ ಹಳ್ಳಿ, ಕುಮಟಾ, ಚಿಕ್ಕಬಳ್ಳಾಪುರ, ಸಂಡೂರು, ಗದಗ್‍ನ ಜಿಲ್ಲಾ ಕೇಂದ್ರ, ಬೆಳಗಾಂ, ಹಾವೇರಿ, ಸವಣೂರು, ರಾಣಿಬೆನ್ನೂರು, ತುಮಕೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ಮುಂತಾದ ಕಡೆಗಳಲ್ಲಿ ವಿನಮ್ರ ಆಗ್ರಹವು ನಡೆದಿದೆ.

5

71

ಆದರೆ ಅದಕ್ಕಿಂತ ಮುಂಚಿತವಾಗಿಯೇ ಅಂದರೆ ನವೆಂಬರ್ 8 ರಂದು ಗರಿಷ್ಠ ಮುಖಬೆಲೆಯ ಐನೂರು ಮತ್ತು ಸಾವಿರದ ನೋಟುಗಳನ್ನು ಅಮಾನ್ಯಗೊಳಿಸಿ ದೇಶವನ್ನೇ ಚಕಿತಗೊಳಿಸಿದರು. ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವುದು ಅರ್ಥಕ್ರಾಂತಿ ಅನುಷ್ಠಾನದ ಐದು ಪ್ರಸ್ತಾವನೆಗಳಲ್ಲಿ ಬಹುಮುಖ್ಯವಾದುದು.

70 ವರ್ಷಗಳಿಂದ ಈ ದೇಶವನ್ನು ಲೂಟಿ ಮಾಡಿ ಕಪ್ಪು ಹಣವನ್ನು ಸಂಗ್ರಹಿಸಿ ಕೂಡಿಟ್ಟಿದ್ದ ಭ್ರಷ್ಟರನ್ನು ಮಟ್ಟಹಾಕಲು ಹೊರಟಿರುವ ಈ ದೇಶದ ಪ್ರಧಾನಿಯವರು 500 ಮತ್ತು 1000 ರೂ ನೋಟುಗಳನ್ನು ನಿಷೇಧಿಸಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಜನರೂ ಸಹ ಈ ನಿರ್ಧಾರದಿಂದ ಹರ್ಷಗೊಂಡಿದ್ದಾರೆ. ದೇಶ ಉಜ್ವಲ ಭವಿಷ್ಯದೆಡೆಗೆ ನಡೆಯುವುದನ್ನು ನೋಡಲು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಆದರೆ ದೇಶವನ್ನು ಲೂಟಿ ಮಾಡಿ ಕಪ್ಪು ಹಣವನ್ನು ಸಂಗ್ರಹಿಸಿ ಕೂಡಿಟ್ಟಿದ್ದ ಭ್ರಷ್ಟರಿಗೆ ಮಾತ್ರ ಈ ನಿರ್ಧಾರದಿಂದ ಬೆಂಕಿ ಹತ್ತಿಕೊಂಡಿದೆ. ಆ ಕಾರಣ ಹೇಗಾದರೂ ಮಾಡಿ ಈ ನಿರ್ಧಾರವನ್ನು ಹಿಂದಿರುಗಿ ಪಡೆಯುವಂತೆ ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅದಾಗದಿದ್ದಲ್ಲಿ ದೇಶದೊಳಗೆ ಅಸಹಿಷ್ಣುತೆಯನ್ನು ಸೃಷ್ಟಿಸಿ ಕಾನೂನು ಸುವ್ಯವಸ್ಥೆಯನ್ನು ಕದಡಲು ಯತ್ನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವುಗಳು ಪ್ರಧಾನಿಯವರ ಬೆಂಬಲಕ್ಕೆ ನಿಲ್ಲಬೇಕಿದೆ.

ಈ ನಿಟ್ಟಿನಲ್ಲಿ ಯುವಾ ಬ್ರಿಗೇಡ್ ತಡಮಾಡದೇ ಕಾರ್ಯಪ್ರವೃತ್ತವಾಗಿದೆ. ಮೋದಿಯವರ ಅರ್ಥಕ್ರಾಂತಿಯ ಹಿಂದಿನ ಉದ್ದೇಶವನ್ನು ಎಳೆ ಎಳೆಯಾಗಿ ಬಿಚ್ಚಿಡುವ “ಬ್ಲ್ಯಾಕ್ ಅಂಡ್ ವೈಟ್ – ಅರ್ಥಕ್ರಾಂತಿ ಪ್ರಸ್ತಾವನೆ” ಎಂಬ ಹೆಸರಿನ ಉಪನ್ಯಾಸ ಕಾರ್ಯಕ್ರಮವನ್ನು ಬೆಂಗಳೂರು, ಮಂಗಳೂರು ಮತ್ತು ಉಡುಪಿಯಲ್ಲಿ ಆಯೋಜಿಸಿ ವ್ಯಾಪಕ ಜನಬೆಂಬಲವನ್ನು ಪಡೆದಿದೆ. ರಾಜ್ಯದ 30 ಕ್ಕೂ ಹೆಚ್ಚು ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ, ಮತ್ತು ತಾಲ್ಲೂಕು ಅಧಿಕಾರಿಗಳಿಗೆ “ಅರ್ಥಕ್ರಾಂತಿ ಪ್ರಸ್ತಾವನೆ – ವಿನಮ್ರ ಆಗ್ರಹ” ದ ಮನವಿ ಪತ್ರ ಸಲ್ಲಿಸಿದೆ.

ಅದರ ಮುಂದಿನ ಹಂತವಾಗಿ ಇಡೀ ಕರ್ನಾಟಕ ರಾಜ್ಯದಲ್ಲಿ ಈ ಕಾರ್ಯಕ್ರಮವನ್ನು ನಡೆಸುವ ದಿಟ್ಟ ನಿರ್ಧಾರ ಕೈಗೊಂಡು ರಾಜ್ಯಾದ್ಯಂತ 12 ಕಡೆಗಳಲ್ಲಿ “ಬ್ಲ್ಯಾಕ್ ಅಂಡ್ ವೈಟ್ – ಅರ್ಥಕ್ರಾಂತಿ ಪ್ರಸ್ತಾವನೆ” ಸರಣಿ ಕಾರ್ಯಕ್ರಮಗಳನ್ನು ಮಾಡಿದ್ದಲ್ಲದೇ, ಅದರ ಮುಂದುವರಿದ ಭಾಗವಾಗಿ “ಕ್ಯಾಶ್ಲೆಸ್ ದುನಿಯಾ” ಕಾರ್ಯಕ್ರಮದ ಮೂಲಕ ಎಲ್ಲರೂ ನಗದುರಹಿತ ವಹಿವಾಟನ್ನು ಮಾಡುವುದರ ಮೂಲಕ ಭಾರತವನ್ನು ಕ್ಯಾಶ್ಲೆಸ್ ಮಾಡಬೇಕೆಂದು ಆಗ್ರಹಿಸಲಾಗುತ್ತಿದೆ. ರಾಜ್ಯಾದ್ಯಂತ ಯುವಾಬ್ರಿಗೇಡ್ ನ ಕಾರ್ಯಕರ್ತರು ಜನರ ಬಳಿಗೆ ಹೋಗಿ ಡಿಜಿಟಲ್ ಪೇಮೆಂಟ್ ನ ಕುರಿತಂತೆ ಮಾಹಿತಿಯನ್ನು ನೀಡುತ್ತಿದ್ದಾರೆ.

 

Leave a Reply

Your email address will not be published. Required fields are marked *

You May Also Like

ನಿವೇದಿತಾ ಸೇವಾಕೇಂದ್ರ

ಅದ್ವೈತ ತತ್ತ್ವದ ಶ್ರೇಷ್ಠ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರ ಜಯಂತಿಯಂದು ಅಂದರೆ ಏಪ್ರಿಲ್ 30 ರಂದು ಕಲ್ಲೋಳಿಯಲ್ಲಿ ಪ್ರಾರಂಭಗೊಂಡ ‘ನಿವೇದಿತಾ ಸೇವಾಕೇಂದ್ರ’ ಯಶಸ್ವಿಯಾಗಿ ನಡೆಯುತ್ತಿದೆ. ಆರ್ಥಿಕವಾಗಿ ಹಿಂದುಳಿದ, ಶೋಷಿತ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗುವಂತೆ ರೂಪಿಸಿದ ಈ ಯೋಜನೆ ಫಲ ಕೊಡುತ್ತಿದೆ. ಲಘು ಉದ್ಯೋಗ ಭಾರತಿಯ…
View Post

ಅರ್ಥಪೂರ್ಣ ಅರ್ಥಕ್ರಾಂತಿ

ಹುಬ್ಬಳ್ಳಿಯ ಜಯಚಾಮರಾಜೇಂದ್ರ. ಮಹಿಳಾ   ಕಾಲೇಜಿನಲ್ಲಿ 14 ರ ಭಾನುವಾರ ನಡೆದ ಅರ್ಥಕ್ರಾಂತಿಯ ಅಭ್ಯಾಸವರ್ಗವು ನಮ್ಮ ರಾಜ್ಯದ ಮಟ್ಟಿಗಂತೂ ಒಂದು ಹೊಸವಿಚಾರದ ಶುಭಾರಂಭವೆಂದರೆ ಹೆಚ್ಚಲ್ಲ. ಆ ಅಭ್ಯಾಸವರ್ಗವು ಹಿರಿಯ ಸಾಧಕರಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿಯೂ, ಯುವ ಸಾಧಕರಿಗೆ ಅವರಿಂದ ಮಾರ್ಗದರ್ಶನ ಪಡೆಯಬಹುದಾದ…
View Post