ನಿವೇದಿತಾ ಸೇವಾಕೇಂದ್ರ

Total
0
Shares

ಅದ್ವೈತ ತತ್ತ್ವದ ಶ್ರೇಷ್ಠ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರ ಜಯಂತಿಯಂದು ಅಂದರೆ ಏಪ್ರಿಲ್ 30 ರಂದು ಕಲ್ಲೋಳಿಯಲ್ಲಿ ಪ್ರಾರಂಭಗೊಂಡ ‘ನಿವೇದಿತಾ ಸೇವಾಕೇಂದ್ರ’ ಯಶಸ್ವಿಯಾಗಿ ನಡೆಯುತ್ತಿದೆ. ಆರ್ಥಿಕವಾಗಿ ಹಿಂದುಳಿದ, ಶೋಷಿತ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗುವಂತೆ ರೂಪಿಸಿದ ಈ ಯೋಜನೆ ಫಲ ಕೊಡುತ್ತಿದೆ.

19749763_836836309808208_1121804493_o

ಲಘು ಉದ್ಯೋಗ ಭಾರತಿಯ ಸದಸ್ಯೆಯಾಗಿರುವ ಭಾರತಿ ಅಕ್ಕ ಇಲ್ಲಿನ ಮಹಿಳೆಯರಿಗೆ ಹೊಲಿಗೆಯ ತರಬೇತಿಯನ್ನು ನೀಡಿದ್ದಾರೆ. ಆಕೆಯೂ ಒಬ್ಬ ಅದ್ಭುತ ಮಹಿಳೆ. ಫ್ಯಾಷನ್ ಡಿಸೈನಿಂಗ್ನಲ್ಲಿ ಪದವಿಯನ್ನು ಪಡೆದಿರುವ ಇವರು ಕಳೆದ 20 ವರ್ಷಗಳಿಂದ ಇಂಥದ್ದೇ ಕಾರ್ಯದಲ್ಲಿ ನಿರತರಾಗಿದ್ದಾರೆ. ಅತ್ಯಂತ ಸರಳ ಜೀವಿ ಭಾರತಿ ಅಕ್ಕ. ಕಲ್ಲೋಳಿಯ ಮಹಿಳೆಯರಿಗೆ ಬಹು ಆತ್ಮೀಯರಾಗಿಬಿಟ್ಟಿದ್ದಾರೆ. ಸೇವಾಕೇಂದ್ರಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ಕೊಂಡುಕೊಳ್ಳುವುದರಲ್ಲಿಯೂ ಭಾರತಿ ಅಕ್ಕನ ಸಹಾಯ ಅಮೂಲ್ಯ. ಯುವಾಬ್ರಿಗೇಡ್ ಭಾರತಿ ಅಕ್ಕನಿಗೆ ಚಿರ ಋಣಿ. ಅಕ್ಕ ಅತ್ಯಂತ ಸರಳವಾಗಿ ಮತ್ತು ಪ್ರೀತಿಯಿಂದ ಹೊಲಿಗೆಯನ್ನು ಹೇಳಿಕೊಡುತ್ತಾರೆ ಮತ್ತು ಎಲ್ಲರೊಡನೆ ಬೆರೆಯುತ್ತಾರೆ ಎಂಬುದು ಕಲ್ಲೋಳಿಯ ಮಹಿಳೆಯರ ಮತ್ತು ಕಾರ್ಯಕರ್ತರ ಅಭಿಪ್ರಾಯ. ಇಲ್ಲಿಯವರೆಗೂ ಮೂರು ಬಾರಿ ಭೇಟಿ ನೀಡಿ ತರಬೇತಿಯನ್ನು ನೀಡಿದ್ದಾರೆ.

19679748_836836029808236_1378820125_n 19720148_836836046474901_1253248136_o 19749699_836837046474801_1428997148_o 19756213_836836126474893_804574088_n

ಪ್ರಸ್ತುತ ನಿವೇದಿತಾ ಸೇವಾಕೇಂದ್ರದಲ್ಲಿ 4 ಹೊಲಿಗೆ ಯಂತ್ರ ಮತ್ತು 1 ಕಟಿಂಗ್ ಯಂತ್ರವಿದೆ. 6 ಮಹಿಳೆಯರು ಸೇವಾಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಸುಮಾರು 30,000 ರೂ.ಗಳವರೆಗೆ ಆದಾಯ ಸಂದಿದೆ. ಕಲ್ಲೋಳಿಯ ಮಹಿಳೆಯರು ಸ್ವಾವಲಂಬಿಗಳಾಗಿ ದುಡಿಯುವಲ್ಲಿ ಉತ್ಸಾಹ ತೋರುತ್ತಿದ್ದಾರೆ. ಜೂನ್ 7 ರಂದು ಯುವಾಬ್ರಿಗೇಡ್ ನ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಸೇವಾಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಕೆಲಸಗಳನ್ನು ಪರಿಶೀಲಿಸಿ, ಮಹಿಳೆಯರೊಂದಿಗೆ ಉತ್ಸಾಹದ ನುಡಿಗಳನ್ನು ಹಂಚಿಕೊಂಡರು.

19668005_836836963141476_2102159544_n 19668429_836837036474802_1146229138_n

ಸೋದರಿ ನಿವೇದಿತಾ ಪ್ರತಿಷ್ಠಾನದ ಸೋದರಿಯರು ನಿವೇದಿತಾ ಸೇವಾಕೇಂದ್ರದಲ್ಲಿ ತಯಾರಾದ ಬ್ಯಾಗ್ ಗಳನ್ನೇ ಬಳಸುವುದಾಗಿ ನಿಶ್ಚಯಿಸಿದ್ದಾರೆ. ಕ್ಯಾಲಿಫೋರ್ನಿಯಾದ ಮಹಿಳೆಯೊಬ್ಬರು ಯುವಾಬ್ರಿಗೇಡಿಗೆ ಏನಾದರು ಸಹಾಯ ಮಾಡುವುದಾಗಿ ತಿಳಿಸಿದ್ದರು. ಆಕೆಗೆ ನಿವೇದಿತಾ ಸೇವಾಕೇಂದ್ರದ ವಿಷಯವನ್ನು ತಿಳಿಸಿದಾಗ ತಮಗೆ ಪರಿಚಯವಿದ್ದ ಸಂಸ್ಥೆಯ ಬ್ಯಾಗ್ ಗಳನ್ನು ಸೇವಾಕೇಂದ್ರದಲ್ಲಿಯೇ ಮಾಡಿಸಿದ್ದಾರೆ.

ನಿವೇದಿತಾ ಸೇವಾಕೇಂದ್ರದಲ್ಲಿ ಮಹಿಳೆಯರು ಉತ್ಸಾಹದಿಂದ ದುಡಿಯುತ್ತಿದ್ದಾರೆ. ಈಗ ಆ ವಸ್ತುಗಳನ್ನು ಕೊಂಡುಕೊಳ್ಳುವವರ ಅವಶ್ಯಕತೆಯಿದೆ. ದಲಿತ ಕೇರಿಯ ಹೆಣ್ಣುಮಕ್ಕಳು ಮುಂದೆ ಬಂದು ಮಾಡುತ್ತಿರುವ ಈ ಅದ್ಭುತ ಕಾರ್ಯಕ್ಕೆ ಎಲ್ಲರ ಬೆಂಬಲ ಅಗತ್ಯವಿದೆ. ಈ ಹೆಣ್ಣುಮಕ್ಕಳ ಸಾಧನೆಗೆ ತಕ್ಕ ಫಲ ದಕ್ಕುವುದು ನಾವದನ್ನು ಹೆಮ್ಮೆಯಿಂದ ಉಪಯೋಗಿಸಿದಾಗಲೇ. ಬನ್ನಿ, ನಮ್ಮೊಡನೆ ಕೈ ಜೋಡಿಸಿ.

Leave a Reply

Your email address will not be published. Required fields are marked *

You May Also Like

ನನ್ನ ಕನಸಿನ ಕರ್ನಾಟಕ

ಕನಸು ಕಾಣುವುದಕ್ಕೆ ದುಡ್ಡು ಕೊಡಬೇಕೇ?’ ಇದು ಸಾಮಾನ್ಯವಾಗಿ ನಾವು ನೀವೆಲ್ಲ ಏನಾದರೂ ಕನಸು ಕಂಡದ್ದನ್ನು ಇನ್ನೊಬ್ಬರ ಹೇಳೋವಾಗ ಬಳಸುವಂತಹ ಒಂದು ಸರ್ವೇ ಸಾಮಾನ್ಯವಾದ ಮಾತು. ಹೌದು ಕನಸು ಕಾಣೋದಕ್ಕೆ ಕಾಸು ಕೊಡೋದು ಬೇಡ ನಿಜ. ಹಾಗಂತ ಕಂಡ ಕನಸನ್ನು ನನಸು ಮಾಡುವಂತ…
View Post

ಮತದಾನ ನಮ್ಮ‌ ಹಕ್ಕು

ಸಮರ್ಥನ ಆಯ್ಕೆ ನಮ್ಮ ಕರ್ತವ್ಯ.. ಪ್ರಜಾಪ್ರಭುತ್ವ ಅತ್ಯಂತ ಸುಂದರವಾದ ವ್ಯವಸ್ಥೆಗಳಲ್ಲೊಂದು. ಇದು ಪ್ರಜೆಗಳಿಗೆ ಆಳುವ ಹಕ್ಕನ್ನು ದಯಪಾಲಿಸುತ್ತದೆ. ತನ್ನ ಪ್ರತಿನಿಧಿಯಾಗುವ ಯೋಗ್ಯತೆ ಉಳ್ಳವರನ್ನು ತಾನೇ ಆರಿಸಿಕೊಳ್ಳುವ ಅವಕಾಶವನ್ನು ಕೊಡುವುದು ಪ್ರಜಾಪ್ರಭುತ್ವ ಮಾತ್ರ. ರಾಜಪ್ರಭುತ್ವದಲ್ಲಿ ಹಾಗಿರಲಿಲ್ಲ. ಅಲ್ಲಿ ರಾಜನೇ ತನ್ನ ಉತ್ತರಾಧಿಕಾರಿಯನ್ನು ಗುರುತಿಸುತ್ತಾನೆ,…
View Post

“ಆಲ್ ದ ಬೆಸ್ಟ್”

“ಆಲ್ ದ ಬೆಸ್ಟ್” ಒಂದು ಸ್ವಪ್ರೇರಣಾ, ಸ್ವಪ್ರಚೋದನಾ ತಂತ್ರ. ಕೆಲವು ಸುಲಭವಾಗಿ ಮತ್ತು ಸುಲಭವಾದ ಬದಲಾವಣೆಗಳನ್ನು ನಮ್ಮ ನಡೆ, ನುಡಿ ಹಾಗೂ ಅಚರಣೆಗಳಲ್ಲಿ ಮಾಡಿಕೊಳ್ಳುವುದರ ಮೂಲಕ ಹೇಗೆ ನಾವು ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದಾಗಿದೆ ಎಂಬುದನ್ನು ಅರಿತುಕೊಳ್ಳುವುದೇ ಆಗಿದೆ. ಇವುಗಳನ್ನು ಕಳೆದ ಬಾರಿ…
View Post

ಸ್ವಚ್ಛ ರಾಜಮಾರ್ಗ

ಮಂಗಳೂರು ರಾಷ್ಟ್ರ ಮಟ್ಟದಲ್ಲಿ ಸ್ವಚ್ಛ ನಗರ ಎಂಬ ಹೆಸರು ಪಡೆದುಕೊಂಡಿದ್ದೇನೋ ನಿಜ. ಆದರೆ ಮಂಗಳೂರಿನ ಹೊರವಲಯದ ಕೆ.ಸಿ.ರಸ್ತೆ, ತಲಪಾಡಿ, ತೊಕ್ಕೊಟ್ಟುವಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳು ತುಂಬಿ ಹೋಗಿ ಸ್ವಚ್ಛ ನಗರಕ್ಕೆ ಕಪ್ಪು ಚುಕ್ಕೆಯಾಗಿ ನಿಂತಿತ್ತು.ಈ ರಸ್ತೆ ಕೇರಳದಿಂದ…
View Post

“ವಿಕಾಸ ಪರ್ವ”

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಜಾತಿ ವ್ಯವಸ್ಥೆ ಇರಲೇ ಇಲ್ಲ. ಅದೆಲ್ಲ ಹುಟ್ಟಿದ್ದು ನಂತರದ ದಿನಗಳಲ್ಲೇ! ಶ್ರೇಷ್ಠ ಪರಂಪರೆಯೊಂದು ಕಾಲಘಟ್ಟದ ಬದಲಾವಣೆಯಲ್ಲಿ ಜಾತಿ ಎಂಬ ಅನಿಷ್ಠ ಪದ್ಧತಿಯಾಗಿ ರೂಪುಗೊಂಡಿತು. ಈಗ ನಾವು ಭಾರತವನ್ನು ಮತ್ತದೇ ಪಟ್ಟಕ್ಕೆ ಕೊಂಡೊಯ್ಯುವ ಕೆಲಸಕ್ಕೆ ಮುನ್ನುಡಿ ಬರೆಯಬೇಕಾಗಿದೆ.ಜಾತಿಯನ್ನು ಮೀರಿ…
View Post

ಸ್ವಚ್ಛತೆಯೇ ಆರೋಗ್ಯ

ಸ್ವಚ್ಛತೆ ಆರೋಗ್ಯದೆಡೆಗಿನ ಮೊದಲ ಹೆಜ್ಜೆ. ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದರಿಂದ ರೋಗ-ರುಜಿನಗಳು ಹರಡುವುದನ್ನು ತಡೆಗಟ್ಟಬಹುದು. ಆದರೆ, ಆರೋಗ್ಯ ಹದಗೆಟ್ಟಲ್ಲಿ ನೋಡಿಕೊಳ್ಳಬೇಕಾದ ಸರ್ಕಾರಿ ಆಸ್ಪತ್ರೆಗಳೇ ಸ್ವಚ್ಛವಾಗಿರುವುದಿಲ್ಲ! ಸರ್ಕಾರಿ ಆಸ್ಪತ್ರೆಗಳ ಈ ದೈನೀಸಿ ಸ್ಥಿತಿಯನ್ನು ಕಂಡು ಯುವಾಬ್ರಿಗೇಡ್ ‘ಸ್ವಚ್ಛತೆಯೇ ಆರೋಗ್ಯ’ ಎಂಬ ಹೆಸರಿನಡಿಯಲ್ಲಿ ಹಲವು…
View Post