ಅರ್ಥಪೂರ್ಣ ಅರ್ಥಕ್ರಾಂತಿ

Total
0
Shares
ಹುಬ್ಬಳ್ಳಿಯ ಜಯಚಾಮರಾಜೇಂದ್ರ. ಮಹಿಳಾ   ಕಾಲೇಜಿನಲ್ಲಿ 14 ರ ಭಾನುವಾರ ನಡೆದ ಅರ್ಥಕ್ರಾಂತಿಯ ಅಭ್ಯಾಸವರ್ಗವು ನಮ್ಮ ರಾಜ್ಯದ ಮಟ್ಟಿಗಂತೂ ಒಂದು ಹೊಸವಿಚಾರದ ಶುಭಾರಂಭವೆಂದರೆ ಹೆಚ್ಚಲ್ಲ. ಆ ಅಭ್ಯಾಸವರ್ಗವು ಹಿರಿಯ ಸಾಧಕರಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿಯೂ, ಯುವ ಸಾಧಕರಿಗೆ ಅವರಿಂದ ಮಾರ್ಗದರ್ಶನ ಪಡೆಯಬಹುದಾದ ದಾರಿಯಾಗಿಯೂ ಸಂಭವಿಸಿತು.
84a7138f-0667-480f-8357-62d8e2678b54
ಖ್ಯಾತ ವೈದ್ಯರೂ ಪ್ರಸ್ತುತ ಆರ್.ಟಿ.ಐ. ಕಾರ್ಯರ್ಕತರೂ ಆಗಿರುವ ಡಾ.ರವೀಂದ್ರ ಶಾನುಭಾಗ್, ಅರ್ಥಕ್ರಾಂತಿ ಪ್ರತಿಷ್ಠಾನದ ಹೈದರಾಬಾದ್ ಶಾಖೆಯ ಪ್ರಮುಖರಾಗಿರುವ ಶ್ರೀಮತಿ ಲೀಲಾ, ನಿವೃತ್ತ ತೆರಿಗೆ ಅಧಿಕಾರಿಗಳಾದ ಬೆಳಗಾವಿಯ ವಿನಾಯಕ ಕುಲಕರ್ಣೀ ಹಾಗೂ ಬೆಳಗಾವಿಯ ಉದ್ಯಮಿಗಳಾದ ಸಂಜಯ ನಡ್ಗೆ ಯವರು ವೇದಿಕೆಯಲ್ಲುಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಆಗಲೇ ಬೆಳಗುತ್ತಿದ್ದ ದೀಪಜ್ಯೋತಿಗೆ ತೈಲವನ್ನೆರೆಯುವ ಮೂಲಕ. ತ್ಯಾಗ ಬಲಿದಾನಗಳ ಮೂಲಕ ಈಗಾಗಲೇ ಹಚ್ಚಲಾಗಿರುವ ಸ್ವಾತಂತ್ರ್ಯ ಜ್ಯೋತಿಗೆ ಅದು ಆರಿಹೋಗದಂತೆ ಧ್ಯೇಯದ ತೈಲವೆರೆಯುವುದು ಮಾತ್ರ ಕಾರ್ಯಕರ್ತರಾದ ತಮ್ಮ ಕೆಲಸ ಎಂಬ ಯುವಾ ಬ್ರಿಗೇಡ್ನ ಮಾರ್ಗದರ್ಶಿಯ ಮಾತುಗಳು ಮನಮುಟ್ಟೆತ್ತು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಅರ್ಥಕ್ರಾಂತಿಯ ರಾಜ್ಯಸಂಚಾಲಕ ಶ್ರೀ ಮುಖೇಶ್ ಜೀ ಯವರ ಮಾತುಗಳಲ್ಲಿ ತತ್ ಕ್ಷಣದ ಬದಲಾವಣೆಗಳ ಅಗತ್ಯದ ಕೂಗು ಕೇಳುತ್ತಿತ್ತು. ಸ್ವಚ್ಛ ಭಾರತ್ ಅಭಿಯಾನವಾಗುತ್ತಿದ್ದರೂ ಜನತೆಯು ಸ್ವಚ್ಛತೆಯ ಮಹತ್ವವನ್ನರಿಯದುದರ ಬಗ್ಗೆ, ಒಲಂಪಿಕ್ಸ್ ನಲ್ಲಿ ನಮ್ಮ ಆಟಗಾರರ ದಯನೀಯ ಸ್ಥಿತಿಗೆ ಭ್ರಷ್ಟಾಚಾರವು ಹೇಗೆ ಕಾರಣವಾಗಿರುವುದರೆಂಬುದರ  ಬಗ್ಗೆ ಮುಖೇಶ್ ಜೀ ಆಕ್ರೋಶ ವ್ಯಕ್ತಪಡಿಸಿದರು.
ಸಿ.ಡಿ.ಪ್ರೊಜೆಕ್ಟರ್ ಮೂಲಕ ತಮ್ಮ ಪ್ರಸ್ತುತ ಕಾರ್ಯಕ್ರಮಗಳ ದೃಶ್ಯ ವಿವರಗಳನ್ನು ಡಾ.ರವೀಂದ್ರ ಶಾನುಭಾಗ್ ನಮ್ಮೆದುರಿಗಿಟ್ಟರು. ಭ್ರಷ್ಟಾಚಾರದಿಂದ ಕೂಡಿದ ವ್ಯವಸ್ಥೆಯ ವಿರುದ್ಧ, ಅಸಂಘಟಿತ ಕಾರ್ಮಿಕ ವಲಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ, ಗ್ರಾಹಕರಿಗಾಗುತ್ತಿರುವ ಅನನುಕೂಲಗಳ ವಿರುದ್ಧ ಡಾ.ರವೀಂದ್ರ ಶಾನುಭಾಗ್ ರವರದ್ದು ದಶಕಗಳಿಂದ ನಡೆದುಕೊಂಡು ಬರುತ್ತಿರುವ ಒಂದು ಬಗೆಯ ಕ್ರಮಬದ್ಧ ಹೋರಾಟ. ಅನಿವಾಸೀ ಭಾರತೀಯ ಮೆಕ್ಯಾನಿಕಲ್ ಇಂಜನಿಯರ್ ಒಬ್ಬರು ಕುಂದಾಪುರದಲ್ಲಿ ಉದ್ಯಮವೊಂದನ್ನಾರಂಭಿಸಿದಾಗ ಅದಕ್ಕೆ ಭ್ರಷ್ಟ ವ್ಯವಸ್ಥೆಯಿಂದಾಗಿ ಬಂದ ತೊಡಕುಗಳನ್ನು ನಿವಾರಿಸಿದ ತಮ್ಮ ಕಾರ್ಯವೈಖರಿ, ದಕ್ಷಿಣ ಕನ್ನಡದ ಕೈಗಾರಿಕಾ ವಲಯಕ್ಕೆ ಪುನಶ್ಚೇತನ ನೀಡಿದ ತಮ್ಮ ಕಾರ್ಯವಿಧಾನ, ಹಾಗೂ ಅದಕ್ಕೆ ಜನರನ್ನು ಸಂಘಟಿಸಿದ ವಿವಿಧ ವಿಷಯಗಳ ಬಗ್ಗೆ ಡಾ.ರವೀಂದ್ರ ಶಾನುಭಾಗ್  ಮಾತನಾಡಿದರು.
ಅರ್ಥಕ್ರಾಂತಿಯ  ಉದ್ದೇಶವನ್ನು ವಿವರಿಸುತ್ತಾ ಮಾತನಾಡಿದ ಶ್ರೀಮತಿ ಲೀಲಾರವರು ಅದರ ಪ್ರಮುಖ ಮೂರು ಅಂಶಗಳನ್ನು ವಿವರಿಸಿದರು. 1. ಭಾರತದಲ್ಲಿ ನಗದುರಹಿತ ಬ್ಯಾಂಕಿಂಗ್, 2.ಈಗಿರುವ ಎಲ್ಲ ರೀತಿಯ ತೆರಿಗೆಗಳನ್ನೂ ತೆಗೆದು, ಅವುಗಳ ಬದಲು, ಎಲ್ಲರಿಗೂ ಎಲ್ಲಾ ಕಾಲಕ್ಕೂ ಅನುಕೂಲವಾಗುವಂತಹ ಬಿ.ಸಿ.ಟಿ.ಟಿ. ತೆರಿಗೆ.(ಬ್ಯಾಂಕ್ ಕ್ಯಾಶ್ ಟ್ರಾನ್ಸಾಕ್ಶನ್ ಟ್ಯಾಕ್ಸ್.) ಹಾಗೂ 3.ರೂ.50/-ರ ಮೇಲಿನ ಎಲ್ಲಾ ಡಿನಾಮಿನೇಶನ್ ನೋಟುಗಳನ್ನು ತೆಗೆದುಹಾಕುವುದರ ಮೂಲಕ ಒಂದೇ ಬಾರಿಗೆ ಭ್ರಷ್ಟಾಚಾರದ ಭೂತವನ್ನು ತಡೆಯಬಹುದಾದ ತಂತ್ರಗಳ ಬಗ್ಗೆ ವಿವರಿಸಿದರು.
ನಮ್ಮ ದೇಶದ ಆರ್ಥಿಕ ವ್ಯವಸ್ಥೆಯನ್ನು ಮೂರು ಮಹಡಿಯ ಕಟ್ಟಡವೊಂದಕ್ಕೆ ಹೋಲಿಸಿ ಅದರ ಮೇಲಿರುವ ನೀರಿನ ಟ್ಯಾಂಕ್ ನಿಂದ ಮೂರೂ ಮಹಡಿಯಲ್ಲಿರುವ ಜನರಿಗೆ ಹೇಗೆ ನೀರು ಸರಬರಾಜಾಗುತ್ತಿರುವುದು ಅವಶ್ಯಕವೆಂಬ ದೃಶ್ಯ ಚಿತ್ರಣವನ್ನು ಅರ್ಥಪೂರ್ಣವಾಗಿ ವಿವರಿಸಿದರು. ನೀರು ಮೂರೂ ಮಹಡಿಯಲ್ಲಿರುವ ಜನರಿಗೆ ಸರಬರಾಜಾಗುವಾಗ ಅಲ್ಲಲ್ಲಿ ಸೋರುತ್ತಿತ್ತು. ಕೆಲವೆಡೆ ಪೈಪ್ ಪೂರ್ತಿ ಒಡೆದುಹೋಗಿ ಕಟ್ಟಡದ ಕೆಳಗೆ ನಿರ್ಮಾಣವಾದ ಪುಟ್ಟ ಹಳ್ಳದ ಮೂಲಕ, ಪರ್ಯಾಯ ಅರ್ಥವ್ಯವಸ್ಥೆ ಅರ್ಥಾತ್ ಹವಾಲಾದ ಆತಂಕಕರ ವಾತಾವರಣವೇ ನಿರ್ಮಾಣವಾಗಿದೆಯೆಂಬಂತೆ ಆ ದೃಶ್ಯ ಚಿತ್ರವು ಬಿಂಬಿಸಿತ್ತು. ಲೀಲಾರವರು ಅಭ್ಯಾಸವರ್ಗದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದರು.
artha
ಯುವಾ ಬ್ರಿಗೇಡ್ ನ ಮಾರ್ಗದರ್ಶಿ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಪೂರ್ತಿದಿನ ಕಾರ್ಯಕ್ರಮದಲ್ಲಿದ್ದು, ಅದರ ಒಟ್ಟಾರೆ ನಿರ್ವಹಣೆ ಮಾಡಿದರು. ಹೋಟೆಲ್ ಉದ್ಯಮದಲ್ಲಿ, ಅಂಗಡಿ ಕಾಂಟ್ರಾಕ್ಟರ್ ಗಳಂತಹ ಯಾವುದೇ ಉದ್ಯಮಗಳಲ್ಲಿ  ಉದ್ಯಮಿಯಾದವನು ಅನುಭವಿಸಲೇಬೇಕಾಗಿರುವ ಪಡಿಪಾಟಲುಗಳನ್ನು ಚಕ್ರವರ್ತಿಯವರು ಉದಾಹರಣೆಗಳ ಸಮೇತ ವಿವರಿಸಿದರು. ಆಂಧ್ರದಿಂದ ತನ್ನಂಗಡಿಗೆ ಟೈಲ್ಸ್ ಗಳನ್ನು ತರಿಸಿ ಹಾಕಿಸಿಕೊಂಡಿದ್ದಕ್ಕೆ 23 ಲಕ್ಷ ವಾಣಿಜ್ಯ ತೆರಿಗೆ ಕಟ್ಟಬೇಕಾಗಿ ಬಂದ ದುರ್ದೈವಿ ಉದ್ಯಮಿ ರಘುವಿನ ಬಗ್ಗೆ, ತಮ್ಮದೇ ಕುಟುಂಬದ ಹೋಟೆಲ್ ಉದ್ಯಮದಲ್ಲಿ ಅವರ ಕುಟುಂಬದ ಹಿರಿಯರು ಎರ್ರಾಬಿರ್ರಿ ಟ್ಯಾಕ್ಸ್ನ ಉಪಟಳದಿಂದ ತಪ್ಪಿಸಿಕೊಳ್ಳಲು ಅನುಸರಿಸುತ್ತಿದ್ದ ತಂತ್ರದ ಬಗ್ಗೆ, ಒಂದಾಣೆ ಟ್ಯಾಕ್ಸ್ ಕೊಡಲು ಹಿಂಜರಿಯುವ ನಗರದ ಮಂದಿ, ರಾಜ್ಯದಲ್ಲಿ ನೆರೆಪರಿಹಾರಕ್ಕಾಗಿ ಚಂದಾ ಎತ್ತಲು ಬಂದ ಹಲವಾರು ಪ್ರಮುಖ ರಾಜಕೀಯ ನಾಯಕರಿಗೆ ಕೋಟ್ಯಂತರ ರೂ. ಚಂದಾ ಕೊಟ್ಟು ತಮಗೆ ದಾನ ಮಾಡಲು ಯಾವ ಬೇಸರವೂ ಇಲ್ಲವೆಂದೂ, ಆದರೆ ಸಂಕೀರ್ಣವೂ ಉಸಿರುಗಟ್ಟಿಸುವಂತಹುದೂ ಆದ ತೆರಿಗೆಯ ಪಾವತಿಯ ಬಗ್ಗೆ ಮಾತ್ರ ವಿರೋಧವಿದೆಯೆಂದೂ ತೋರಿಸಿಕೊಟ್ಟ ಜನರ ಬಗ್ಗೆ ಚಕ್ರವರ್ತಿಯವರು ವಿಷದವಾಗಿ ವಿವರಿಸಿದರು.
6357bcae-2e71-4b50-bee7-640b8d41fa4f
ದೇಶದ ವಾರ್ಷಿಕ ಬಜೆಟ್ ಸುಮಾರು 23  ಲಕ್ಷ ಕೋಟಿ. ಆದರೆ ಪ್ರತಿ ವರ್ಷವೂ 29 ಲಕ್ಷ ಕೋಟಿಗಳಷ್ಟಾಗುವ ಈ ವೆಚ್ಚವು ಖೋತಾ ಬಜೆಟ್ ಅನ್ನು ಸೃಷ್ಟಿಸುತ್ತಿದೆ. ಆದರೆ ಬಿಸಿಟಿಟಿ ಮೂಲಕ 40 ಲಕ್ಷ ಕೋಟಿ ರೂ. ಗಳಷ್ಟು ವಾರ್ಷಿಕ ಸಂಗ್ರಹಣೆ ಸಾಧ್ಯ, ಎಂಬುದನ್ನು ಚಕ್ರವರ್ತಿಯವರು ತಿಳಿಸಿದರು.
ಅರ್ಥಕ್ರಾಂತಿ ಅಭ್ಯಾಸವರ್ಗದ ವಿಶೇಷವೆಂದರೆ ರಾಜ್ಯದ ಬಹುತೇಕ ಜಿಲ್ಲೆಗಳಿಂದ ಬಂದಿದ್ದ ಸಮಾಜದ ವಿವಿಧ ವಲಯಗಳ ಉತ್ಸಾಹಿಗಳು. ಅವರಲ್ಲಿ ಉಪನ್ಯಾಸಕರಿದ್ದರು. ಉದ್ಯಮಿಗಳಿದ್ದರು. ಅಸಂಘಟಿತ ವಲಯಗಳ ಕಾರ್ಮಿಕರಿದ್ದರು. ಉಪನ್ಯಾಸಕರೂ ಬ್ಯಾಂಕರ್ಗಳೂ ಇದ್ದರು. ಅಂತೆಯೇ ಪ್ರಶ್ನೋತ್ತರ ಕಾರ್ಯಕ್ರಮವೂ ಬೋಧಪ್ರದವಾಗಿತ್ತು. ಅರ್ಥಕ್ರಾಂತಿ ಪರಿಕಲ್ಪನೆಯನ್ನು ತಪಸ್ಸಿನಂತೆ ಒಂದೂವರೆ ದಶಕಗಳ ಕಾಲ ಕೂಲಂಕುಶವಾಗಿ ಅಧ್ಯಯನ ಮಾಡಿದ ಅನಿಲ ಬೋಕಿಲ್ ರವರಿಗೆ  ಅದು ಮೊದಲ ಹಂತದಲ್ಲಿ ಜನರ ನಡುವೆ, ದೇಶದ ಬೌಧ್ಧಿಕ ವಲಯಗಳ ನಡುವೆ ಚರ್ಚಿಸಲ್ಪಡಬೇಕೆಂಬ ಮಹಾನ್ ಉದ್ದೇಶವಿದೆ. ಅದು ಕಾರ್ಯಗತಗೊಳ್ಳಲು ಈಗಾಗಲೇ ಅರ್ಥಕ್ರಾಂತಿ ಅನುಷ್ಠಾನವೆಂಬ ಪುಸ್ತಕವೂ ಹೊರಬಂದಿದೆಯೆಂಬ ವಿಷಯವನ್ನೂ ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ “ಭಾರತದ ಆರ್ಥಿಕ ಪುನರುತ್ಥಾನ, ಅರ್ಥಕ್ರಾಂತಿ ಅನುಷ್ಠಾನ” ಎಂಬ ಅದರ ಕನ್ನಡ ಅನುವಾದಿತ ಪುಸ್ತಕವನ್ನೂ ಗಣ್ಯರು ಬಿಡುಗಡೆಗೊಳಿಸಿದರು. ಪುಸ್ತಕವು ಕಾರ್ಯಕರ್ತರ ಮಧ್ಯ ಮಾತ್ರವಲ್ಲದೇ ಎಲ್ಲಾ ವಲಯಗಳಲ್ಲೂ ಚರ್ಚಿತವಾಗಬೇಕಾಗಿರುವುದರಿಂದ ಅದರ ಬೆಲೆಯನ್ನು ಕೇವಲ 30 ರೂಗಳಿಗೆ ನಿಗದಿಗೊಳಿಸಲಾಗಿದೆ.
ಯಾವುದೇ ಕಾರ್ಯಕ್ರಮಗಳು ಯಶಸ್ಸು ಅದನ್ನಾಯೋಜಿಸುವ ಸಂಘಟಕರ ಮೇಲಿರುತ್ತದೆ. ಈ ಹಿನ್ನೆಲೆಯಲ್ಲಿ ಉಪಹಾರ, ಪಾನೀಯ, ಸೊಗಸಾದ ಊಟ ಸ್ಥಳ ಮುಂತಾದ ಎಲ್ಲ ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ ಯಶಸ್ಸು ಹುಬ್ಳಿಯ ಕಿರಣ್ ಪಾಟೇಲ, ಪ್ರವೀಣ, ಸಂಜೀವ್ ತಂಡಕ್ಕೆ ಸಲ್ಲುತ್ತದೆ.
Leave a Reply

Your email address will not be published. Required fields are marked *

You May Also Like

ನಿವೇದಿತಾ ಸೇವಾಕೇಂದ್ರ

ಅದ್ವೈತ ತತ್ತ್ವದ ಶ್ರೇಷ್ಠ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರ ಜಯಂತಿಯಂದು ಅಂದರೆ ಏಪ್ರಿಲ್ 30 ರಂದು ಕಲ್ಲೋಳಿಯಲ್ಲಿ ಪ್ರಾರಂಭಗೊಂಡ ‘ನಿವೇದಿತಾ ಸೇವಾಕೇಂದ್ರ’ ಯಶಸ್ವಿಯಾಗಿ ನಡೆಯುತ್ತಿದೆ. ಆರ್ಥಿಕವಾಗಿ ಹಿಂದುಳಿದ, ಶೋಷಿತ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗುವಂತೆ ರೂಪಿಸಿದ ಈ ಯೋಜನೆ ಫಲ ಕೊಡುತ್ತಿದೆ. ಲಘು ಉದ್ಯೋಗ ಭಾರತಿಯ…
View Post

ವಿನಮ್ರ ಆಗ್ರಹ

ಭಾರತ ಎಂದರೆ ಸಮಸ್ಯೆಗಳ ಕೂಪ. ಇದನ್ನು ಯಾರಿಂದಲೂ ಸರಿ ಮಾಡಲು ಸಾಧ್ಯವಿಲ್ಲ. ಇಲ್ಲಿನ ವ್ಯವಸ್ಥೆ ಹದಗೆಟ್ಟುಹೋಗಿದೆ. ಭೃಷ್ಟಾಚಾರ, ಶ್ರೀಮಂತರ ಹಗರಣಗಳು ದೇಶದ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಬಡವ ಬಡವನಾಗಿಯೇ ಸಾಯಬೇಕು. ಕಾಳಧನಿಕ ಮತ್ತಷ್ಟು ಸಂಪತ್ತನ್ನು ಗಳಿಸುತ್ತಿದ್ದಾನೆ. ಹೀಗೆ ದೇಶವನ್ನು ಜರಿಯುತ್ತಲೇ ತಮ್ಮ…
View Post