ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ

Total
0
Shares

ಮಾರ್ಚ್ 25ರ “ದೀಕ್ಷಾ ದಿವಸದ” ಭರ್ಜರಿ ಕಾರ್ಯಕ್ರಮಗಳ ಪ್ರತಿಫಲ ಬೇಸಿಗೆ ಶಿಬಿರಗಳು. ಮಕ್ಕಳ ಶಾಲೆ ಮುಗಿದಿತ್ತು, ಏಪ್ರಿಲ್ ತಿಂಗಳ ಪ್ರಖರ ಸೂರ್ಯನ ಶಾಖ ಅವರನ್ನು ಹೊರಗೆ ಬರದಂತೆ ಮಾಡಿತ್ತು. ಎಲ್ಲಾ ಕಡೆಗಳಲ್ಲಿ ಬೇಸಿಗೆ ಶಿಬಿರಗಳು ಮಕ್ಕಳನ್ನು ಆಕರ್ಷಿಸುತ್ತಿದ್ದವು. ಆದರೆ ಶಿಬಿರಗಳ ಪ್ರವೇಶಕ್ಕೆ ದೊಡ್ಡ ಮೊತ್ತ ತೆತ್ತಬೇಕು! ಎಲ್ಲರಿಗೂ ಇದನ್ನು ಭರಿಸಲು ಸಾಧ್ಯವಿಲ್ಲ, ಹೀಗಿರುವಾಗ ನಮ್ಮ “ಸೋದರಿ ನಿವೇದಿತಾ ಪ್ರತಿಷ್ಠಾನ” ರಾಜ್ಯದ ಎಲ್ಲಾ ಭಾಗಗಳಲ್ಲೂ ಉಚಿತ ಬೇಸಿಗೆ ಶಿಬಿರ ಪ್ರಾರಂಭಿಸಿತು.

ನಮ್ಮ ಶಿಬಿರಗಳು ಹೇಗಿತ್ತೆಂದರೆ “ಸ್ಲಂ” ಗಳಲ್ಲಿ ವಾಸಿಸುವ ಮಕ್ಕಳ ಬಳಿ ಹೋಗಿ ಅಲ್ಲಿಯೇ ಇದ್ದ ದೇವಸ್ಥಾನದ ಅಂಗಳ, ಸರಕಾರಿ ಶಾಲೆಗಳನ್ನು ಶಿಬಿರದ ಕೇಂದ್ರವಾಗಿ ಮಾಡಿಕೊಂಡು ಯೋಗ, ಧ್ಯಾನ, ನಿತ್ಯ ಪಠಿಸುವ ಶ್ಲೋಕಗಳು, ಕರಕುಶಲ ವಸ್ತುಗಳ ತಯಾರಿಕೆ ಜೊತೆಗೆ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವಂತಹ ಕಥೆಗಳು ದೇಶಭಕ್ತರ ಆತ್ಮಚರಿತ್ರೆ ಪರಿಚಯಿಸುವುದು, ದೇಶಭಕ್ತಿ ಗೀತೆಗಳನ್ನು ಕಲಿಸುವುದು, ಕಿರು ನಾಟಕಗಳನ್ನು ಕಲಿಸುವುದು, ಹಳೆಯ ಗ್ರಾಮೀಣ ಆಟಗಳನ್ನು ಆಡಿಸುವುದು ಹಾಗೂ ಸುತ್ತಲಿನ ಪರಿಸರದ ಸ್ವಚ್ಛತೆಯ ಬಗ್ಗೆ ಕಾಳಜಿ ಹೆಚ್ಚುವಂತೆ ತಿಳಿಸಲಾಯಿತು. ಜೊತೆಗೆ ಬಾಲಾಪರಾಧ ಕುರಿತ ಕಾಯಿದೆಗಳ ಬಗ್ಗೆ ಹಾಗೂ ಪರಿವರ್ತನ ಕೇಂದ್ರಗಳ ಮೂಲಕ ಮಕ್ಕಳಿಗೆ ಕೊಡುತ್ತಿರುವ ಸೌಲಭ್ಯದ ಬಗ್ಗೆ ಮನವರಿಕೆ ಮಾಡಲಾಯಿತು. ಮಕ್ಕಳ ವ್ಯಕ್ತಿತ್ವ ವಿಕಸನದ ಬಗ್ಗೆ ಎಲ್ಲಾ ಕಡೆ ಹೆಚ್ಚು ಒತ್ತು ಕೊಡಲಾಗಿತ್ತು. ಅನುಕೂಲ ವಂಚಿತ ಮಕ್ಕಳು ದೇಶಕ್ಕೆ ಭಾರವಾಗದೆ ಮುಂದೆ ಸತ್ಪ್ರಜೆಗಳಾಗಿ ಹೊರಬರಬೇಕೆಂಬುದು ಈ ಬೇಸಿಗೆ ಶಿಬಿರಗಳ ಮೂಲ ಉದ್ದೇಶವಾಗಿತ್ತು.

ಅವರಿರುವಲ್ಲಿಗೇ ಹೋಗಿ ಶಿಬಿರ ನಡೆಸಿದ್ದರಿಂದ ಅಲ್ಲಿಯ ಪೂರ್ಣ ಚಿತ್ರಣದ ಅನುಭವ ನಮಗಾಯಿತು. ಮಕ್ಕಳಲ್ಲಿ ಮುಗ್ಧತೆ ಇದೆ, ಕೇಳುವ ತಾಳ್ಮೆಯೂ ಇದೆ. ಅವರಿಗೆ ಸರಿಯಾದ ಮಾರ್ಗದರ್ಶನ ಬೇಕು. ನಾಲ್ಕು ಐದು ದಿನಗಳ ಅಥವಾ ಒಂದು ವಾರದ ಶಿಬಿರದಿಂದ ಪರಿವರ್ತನೆ ಸಾಧ್ಯವಿಲ್ಲ. ಆದ್ದರಿಂದ ಮುಂದೆಯೂ ವಾರಕ್ಕೊಮ್ಮೆಯಾದರೂ ಆ ಜಾಗಗಳಿಗೆ ಭೇಟಿನೀಡಿ ಅವರೊಟ್ಟಿಗಿನ ಸಂಬಂಧವನ್ನು ಮುಂದುವರಿಸಬೇಕೆಂದು ಪ್ರತಿಷ್ಠಾನ ನಿರ್ಧರಿಸಿದೆ.

ಇದಲ್ಲದೇ ಪ್ರತಿಷ್ಠಾನದ ಸೋದರಿಯರು ಕೆಲವು ಸಂಘ ಸಂಸ್ಥೆಗಳು ನಡೆಸುತ್ತಿರುವ ಬೇಸಿಗೆ ಶಿಬಿರಗಳಿಗೆ ಭೇಟಿ ಇತ್ತು ಕಾರ್ಯಕ್ರಮಗಳನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇನ್ನೂ ಹಲವಾರು ಕಡೆಗಳಲ್ಲಿ ಶಿಬಿರ ಮುಂದುವರೆದಿದೆ. ಪ್ರತಿಷ್ಠಾನದ ಸೋದರಿಯರು ತಮ್ಮ ತನು, ಮನ, ಧನಗಳನ್ನು ವಿನಿಯೋಗ ಮಾಡಿ ಬಹಳ ಶ್ರದ್ಧೆಯಿಂದ ಬೇಸಿಗೆ ಶಿಬಿರ ನಡೆಸಿದ್ದಾರೆ. ಇದೇ ಉತ್ಸಾಹ ಮುಂದುವರೆಯಲಿ. ದೀಕ್ಷಾದಿನದ ಪ್ರತಿಜ್ಞೆ ನಮ್ಮನ್ನು ಎಚ್ಚರಿಸುತ್ತಿರಲಿ.

ಎಲ್ಲರಿಗೂ ಧನ್ಯವಾದಗಳು.

Leave a Reply

Your email address will not be published. Required fields are marked *

You May Also Like

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ದೀಕ್ಷಾ ದಿವಸ್

ಅಂದು ಮಾರ್ಚ 25, 1898. ಶುಕ್ರವಾರದ ಶುಭ ದಿನ. ಮಾರ್ಗರೆಟ್ ಸೂರ್ಯೋದಯದ ಮುನ್ನವೇ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು ತನ್ನ ಗುರುವಿನ ಮುಂದೆ ಉತ್ಸಾಹ, ಕುತೂಹಲಗಳಿಂದ ನಿಂತಿದ್ದಳು. ಆ ದಿನ ಸ್ವಾಮೀಜಿ ಆಕೆಗೆ ಶಿವ ಪೂಜೆ ಮಾಡುವ ವಿಧಾನ ಹೇಳಿಕೊಟ್ಟರು. ಗಮನವಿಟ್ಟು,…
View Post

ಸೋದರಿ ನಿವೇದಿತಾ ಪ್ರತಿಷ್ಠಾನಕ್ಕೆ ಎರಡು ವರ್ಷ!

ಅಳಿದರೇನು ದೇಹವಿಂದು ಧ್ಯೇಯದೀಪ ಉರಿದಿದೆ. ನವಜನಾಂಗ ನೆರೆದು ಬಂದು ತೈಲಪದಕೆ ಸುರಿದಿದೆ.” ಸಮಾನ ಮನಸ್ಕ ಯುವತಿಯರ ಸಮಾಜ ಸೇವೆಯ ತುಡಿತಕ್ಕೆ ಇಂಬಾಗಿದ್ದು ‘ಸೋದರಿ ನಿವೇದಿತಾ ಪ್ರತಿಷ್ಠಾನ’. ಇದು ಯುವಾಬ್ರಿಗೇಡ್ನ ಸಹೋದರಿ ಸಂಘಟನೆ. 2014ರ ಸೆಪ್ಟೆಂಬರ್ 27ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ‘ಸೋದರಿ…
View Post

ಹಿರಿ ಹೃದಯಗಳಲ್ಲೂ ನಂದಾದೀಪ

ಯುವಾ ಬ್ರಿಗೇಡಿನ ಸೋದರಿ ಸಂಸ್ಥೆಯಾದ ನಿವೇದಿತಾ ಪ್ರತಿಷ್ಠಾನ ಬಲು ಕ್ರಿಯಾಶೀಲವಾಗಿರುವ ದಿನಗಳಿವು. ನಿವೇದಿತಾಳ 150 ನೇ ಜಯಂತಿಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ 50ಕ್ಕೂ ಹೆಚ್ಚು ಕಡೆಗಳಲ್ಲಿ ‘ದೀಕ್ಷಾದಿವಸ್’ನ್ನು ನಡೆಸಿ ಅವರು ಪಡೆದ ಯಶಸ್ಸು ಅಭಿನಂದನಾರ್ಹ. ಇದು ಸುಮ್ಮನೆ ಆದಂತದ್ದಲ್ಲ. ಇದರ ಹಿಂದೆ ಬೇರೆ-ಬೇರೆ…
View Post

ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ – ಹೊಸ ಯರಗುದ್ರಿ, ಯಾದವಾಡ

ಸೋದರಿ ನಿವೇದಿತೆಯ ಕನಸನ್ನು ಸಾಕಾರಗೊಳಿಸುವತ್ತ ಒಂದು ಪುಟ್ಟ ಹೆಜ್ಜೆ: ಗೋಕಾಕಿನ ಬೇಸಿಗೆ ಶಿಬಿರ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಹೊಸಯರಗುದ್ರಿ ಹಾಗೂ ಯಾದವಾಡಾ, ಇದು ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಂಡ ಎರಡು ಹಳ್ಳಿಗಳು. ಬೆಳಗಾವಿ ಎಂದಾಕ್ಷಣ…
View Post

ಮಾಧ್ಯಮಗಳ ಮೂಲಕ ಪ್ರಚಾರ

ಅಕ್ಕ ನಿವೇದಿತಾ ಯಾರಿಗೆ ತಾನೆ ಸ್ಫೂರ್ತಿ ಅಲ್ಲ ಹೇಳಿ. ಭಾರತದ ಪ್ರತಿಯೊಂದು ವರ್ಗದ ಜನರ ಸಂಪರ್ಕದಲ್ಲಿದ್ದಾಕೆ ಅಕ್ಕ. ಪ್ರತಿಷ್ಠಿತ ಠಾಗೋರ್ ಮನೆತನದಿಂದ ಹಿಡಿದು ಬೆಸ್ತರ ಬಸ್ತಿಯವರೆಗೂ ಆಕೆ ಕೆಲಸ ಮಾಡಿದ್ದಾಳೆ. ಸ್ವಾತಂತ್ರ್ಯ ಹೋರಾಟಕ್ಕೆ ನಿಂತ ಅಹಿಂಸಾವಾದಿಗಳಿಂದ ಹಿಡಿದು ರೆವಲ್ಯೂಷನರಿಗಳವರೆಗೆ ಎಲ್ಲರಿಗೂ ಪ್ರೇರಣೆ…
View Post