ಭದ್ರಗಿರಿ, ಭಾಗಲಕೋಟೆ – 10 ಸಾವಿರ

Total
0
Shares

ನಾಲ್ಕು ವರ್ಷಗಳ ಹಿಂದೆ ನೆಟ್ಟ ಗಿಡಗಳು ಸೊಂಪಾಗಿ ಬೆಳೆದುಬಿಟ್ಟಿವೆ. ನೆಟ್ಟ ಸುಮಾರು 27,000 ಗಿಡಗಳಲ್ಲಿ ಮುಕ್ಕಾಲು ಭಾಗದಷ್ಟು ಉಳಿದಿದೆ. ಅದೇ ಹಳಿಂಗಳಿಯ ಗುಡ್ಡದ ಮೇಲೆ ಇಂದು ಸುಮಾರು 9000 ಗಿಡಗಳನ್ನು ನೆಡುವ ಕಾರ್ಯಕ್ರಮವಿತ್ತು. ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತರು ಇಂದು ಬೆಳಿಗ್ಗೆ ಆರೂವರೆಯಿಂದಲೇ ಕೆಲಸ ಆರಂಭಿಸಿಬಿಟ್ಟಿದ್ದರು. ನಾಲ್ಕಾರು ತಂಡಗಳಾಗಿ ತಮ್ಮನ್ನು ವಿಭಜಿಸಿಕೊಂಡು ಹಳ್ಳಗಳಲ್ಲಿ ಗಿಡಗಳನ್ನಿಟ್ಟು ಮಣ್ಣು ಹಾಕಿ ಗಿಡನೆಡುವ ಈ ಕಾರ್ಯಕ್ರಮವನ್ನು ಸಂಪನ್ನಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ಗುಡ್ಡದಲ್ಲಿ ಜೆಸಿಬಿಗಳು ಹಳ್ಳ ತೆಗೆದಿಟ್ಟಿದ್ದವು ನಿಜ. ಆದರೆ ಕಲ್ಲುಗಳೆ ತುಂಬಿರುವ ಗುಡ್ಡದಲ್ಲಿ ಗಿಡ ಇಟ್ಟ ನಂತರ ಮಣ್ಣು ತುಂಬುವುದಿದೆಯಲ್ಲ ಸುಲಭದ ಕೆಲಸವಲ್ಲ. ಕೈಲೇ ಮಣ್ಣು ತುಂಬುತ್ತೇವೆಂದು ಅತ್ಯುತ್ಸಾಹ ತೋರಿದವರು ಒಂದೇ ಗಿಡವಷ್ಟೇ. ಆಮೇಲೆ ಹರಿದ ಕೈಯ್ಯನ್ನು ನೋಡುತ್ತಾ ನಿಲ್ಲಬೇಕು. ಬಾಗಲಕೋಟೆ ಬೆಳಗಾವಿಯ ಕಾರ್ಯಕರ್ತರ ತಂಡ ಕೆಲಸ ಮಾಡಿದ ರೀತಿ ಅನನ್ಯವಾಗಿತ್ತು.

ಪೃಥ್ವಿಯೋಗದಿಂದ ಶುರುವಾದ ನಮ್ಮ ಈ ಪಯಣ ಇಂದು ಉಸಿರು ಹಂಚುವಲ್ಲಿಯವರೆಗೂ ಬಂದು ನಿಂತಿದೆ. ಈ ಮಹತ್ಕಾರ್ಯದಲ್ಲಿ ಭಾಗಿಯಾಗಿದ್ದು ನಮ್ಮೆಲ್ಲರಿಗೂ ಹೆಮ್ಮೆಯೇ ಸರಿ. ಈ ಗಿಡಗಳನ್ನು ನೆಟ್ಟಿದ್ದು ನಾವಿರಬಹುದು ಅದನ್ನು ಬೆಳೆಸುವಲ್ಲಿ ಆಸ್ಥೆ ತೋರುತ್ತಿರುವುದು 1008 ಕುಲರತ್ನಭೂಷಣ ಮಹಾರಾಜ್ ಅವರು. ಅವರು ತಮ್ಮ ಭಕ್ತರಿಗೆ ಗಿಡಗಳಿಗೆ ನೀರುಣಿಸುವ ಕೆಲಸವನ್ನೇ ಹಚ್ಚುತ್ತಾರೆ. ಹೀಗಾಗಿಯೇ ಇಡಿಯ ಗುಡ್ಡ ಇಂದು ಹಸಿರುಮಯವಾಗುತ್ತಿರುವುದು. ಅದರ ಎಲ್ಲ ‘ಕ್ರೆಡಿಟ್ಟೂ’ ಖಂಡಿತ ನಮ್ಮದಲ್ಲ. ಅದೂ ಆ ಸಂತರಿಗೇ ಸಲ್ಲುವಂಥದ್ದು!

ಈ ಇಡೀ ದಿನ ಹಿಂದೆಂದೂ ಇಲ್ಲದಷ್ಟು ಪೊಲೀಸ್ ರಕ್ಷಣೆ ಇದ್ದದ್ದು ಬಹಳ ವಿಶೇಷವಾಗಿತ್ತು.‌ ನಮ್ಮ ಕಾವಲಿಗೆ ನಿಂತಿದ್ದ ಆ ಎಲ್ಲಾ ಆರಕ್ಷಕ ಮಿತ್ರರಿಗೆ ಧನ್ಯವಾದಗಳು.

#ಉಸಿರು_ಹಂಚೋಣ #YuvaBrigade
#Bhadragiri #Bagalakote

Leave a Reply

Your email address will not be published. Required fields are marked *

You May Also Like

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ

ಮಾರ್ಚ್ 25ರ “ದೀಕ್ಷಾ ದಿವಸದ” ಭರ್ಜರಿ ಕಾರ್ಯಕ್ರಮಗಳ ಪ್ರತಿಫಲ ಬೇಸಿಗೆ ಶಿಬಿರಗಳು. ಮಕ್ಕಳ ಶಾಲೆ ಮುಗಿದಿತ್ತು, ಏಪ್ರಿಲ್ ತಿಂಗಳ ಪ್ರಖರ ಸೂರ್ಯನ ಶಾಖ ಅವರನ್ನು ಹೊರಗೆ ಬರದಂತೆ ಮಾಡಿತ್ತು. ಎಲ್ಲಾ ಕಡೆಗಳಲ್ಲಿ ಬೇಸಿಗೆ ಶಿಬಿರಗಳು ಮಕ್ಕಳನ್ನು ಆಕರ್ಷಿಸುತ್ತಿದ್ದವು. ಆದರೆ ಶಿಬಿರಗಳ ಪ್ರವೇಶಕ್ಕೆ…
View Post

ದೀಕ್ಷಾ ದಿವಸ್

ಅಂದು ಮಾರ್ಚ 25, 1898. ಶುಕ್ರವಾರದ ಶುಭ ದಿನ. ಮಾರ್ಗರೆಟ್ ಸೂರ್ಯೋದಯದ ಮುನ್ನವೇ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು ತನ್ನ ಗುರುವಿನ ಮುಂದೆ ಉತ್ಸಾಹ, ಕುತೂಹಲಗಳಿಂದ ನಿಂತಿದ್ದಳು. ಆ ದಿನ ಸ್ವಾಮೀಜಿ ಆಕೆಗೆ ಶಿವ ಪೂಜೆ ಮಾಡುವ ವಿಧಾನ ಹೇಳಿಕೊಟ್ಟರು. ಗಮನವಿಟ್ಟು,…
View Post

ಸೋದರಿ ನಿವೇದಿತಾ ಪ್ರತಿಷ್ಠಾನಕ್ಕೆ ಎರಡು ವರ್ಷ!

ಅಳಿದರೇನು ದೇಹವಿಂದು ಧ್ಯೇಯದೀಪ ಉರಿದಿದೆ. ನವಜನಾಂಗ ನೆರೆದು ಬಂದು ತೈಲಪದಕೆ ಸುರಿದಿದೆ.” ಸಮಾನ ಮನಸ್ಕ ಯುವತಿಯರ ಸಮಾಜ ಸೇವೆಯ ತುಡಿತಕ್ಕೆ ಇಂಬಾಗಿದ್ದು ‘ಸೋದರಿ ನಿವೇದಿತಾ ಪ್ರತಿಷ್ಠಾನ’. ಇದು ಯುವಾಬ್ರಿಗೇಡ್ನ ಸಹೋದರಿ ಸಂಘಟನೆ. 2014ರ ಸೆಪ್ಟೆಂಬರ್ 27ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ‘ಸೋದರಿ…
View Post

ಹಿರಿ ಹೃದಯಗಳಲ್ಲೂ ನಂದಾದೀಪ

ಯುವಾ ಬ್ರಿಗೇಡಿನ ಸೋದರಿ ಸಂಸ್ಥೆಯಾದ ನಿವೇದಿತಾ ಪ್ರತಿಷ್ಠಾನ ಬಲು ಕ್ರಿಯಾಶೀಲವಾಗಿರುವ ದಿನಗಳಿವು. ನಿವೇದಿತಾಳ 150 ನೇ ಜಯಂತಿಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ 50ಕ್ಕೂ ಹೆಚ್ಚು ಕಡೆಗಳಲ್ಲಿ ‘ದೀಕ್ಷಾದಿವಸ್’ನ್ನು ನಡೆಸಿ ಅವರು ಪಡೆದ ಯಶಸ್ಸು ಅಭಿನಂದನಾರ್ಹ. ಇದು ಸುಮ್ಮನೆ ಆದಂತದ್ದಲ್ಲ. ಇದರ ಹಿಂದೆ ಬೇರೆ-ಬೇರೆ…
View Post

ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ – ಹೊಸ ಯರಗುದ್ರಿ, ಯಾದವಾಡ

ಸೋದರಿ ನಿವೇದಿತೆಯ ಕನಸನ್ನು ಸಾಕಾರಗೊಳಿಸುವತ್ತ ಒಂದು ಪುಟ್ಟ ಹೆಜ್ಜೆ: ಗೋಕಾಕಿನ ಬೇಸಿಗೆ ಶಿಬಿರ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಹೊಸಯರಗುದ್ರಿ ಹಾಗೂ ಯಾದವಾಡಾ, ಇದು ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಂಡ ಎರಡು ಹಳ್ಳಿಗಳು. ಬೆಳಗಾವಿ ಎಂದಾಕ್ಷಣ…
View Post