ನಿವೇದಿತಾ 150

Total
0
Shares

ಸೋದರಿ‌ ನಿವೇದಿತಾಳ 151 ನೇ ಜಯಂತಿಯನ್ನು ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಿದ್ದು ನಮ್ಮ ಸೋದರಿ ನಿವೇದಿತಾ ಪ್ರತಿಷ್ಠಾನವೇ. ಬೆಂಗಳೂರಿನಲ್ಲಿ 151 ಕಾರ್ಯಕ್ರಮದ ಗುರಿ ಹೊತ್ತು ಶುರುವಾದ ಯಾತ್ರೆ ಕ್ರಿಕೆಟ್‌ ನ 20-20 ಮ್ಯಾಚಿನಂತೆಯೇ ಇತ್ತು. ಆರಂಭದಲ್ಲಿ ಸಲೀಸೆನಿಸಿತ್ತು. ಹದಿನೈದು ದಿನಗಳಲ್ಲಿ ತರಬೇತಿ ಪಡೆದ ಕಾರ್ಯಕರ್ತೆಯರು ನಿನ್ನೆ ಶಾಲಾ ಕಾಲೇಜುಗಳಿಗೆ ಧಾವಿಸಲು ಸಿದ್ಧರಾದಾಗಲೇ ಅನೇಕ ಶಾಲೆಗಳು ಅರಮನೆ ಮೈದಾನದತ್ತ ಹೊರಟಿರುವ ಸುದ್ದಿ ಬಂತು. ಧಾವಂತ ಶುರುವಾಗಿದ್ದು ಆಗಲೇ. 150 ದಾಟುವುದಿಲ್ಲ ಎನ್ನುತ್ತಿರುವಾಗಲೇ ಚಟುವಟಿಕೆ ತೀವ್ರಗೊಂಡಿತು. ಮತ್ತೊಮ್ಮೆ ಭೇಟಿ, ಮಾತುಕತೆ.ಚುರುಕುಗೊಂಡ ಕಾರ್ಯಕರ್ತೆಯರು ಮತ್ತಷ್ಟು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದರು. ರಾತ್ರಿಯವರೆಗೂ 150 ಕಾರ್ಯಕ್ರಮಗಳ ವರದಿ ಬಂತು. 151ನೆಯದಕ್ಕಾಗಿ ತಡಕಾಡುತ್ತಿರುವಾಗಲೇ ಯುವಾಬ್ರಿಗೇಡ್ ಕಾರ್ಯಕರ್ತ ಪ್ರಶಾಂತ್ ತನ್ನ ಮಗಳ ಹುಟ್ಟಿದ ಹಬ್ಬವನ್ನು ಅನಾಥ ಮಕ್ಕಳೊಂದಿಗೆ ಆಚರಿಸಿ, ನಿವೇದಿತೆಯ ಕುರಿತಂತೆ ಆ ಮಕ್ಕಳಿಗೆ ಹೇಳಿ 151 ನೇ ಕಾರ್ಯಕ್ರಮದ ವರದಿ ಕೊಟ್ಟಾಗ ಜಗತ್ತನ್ನೇ ಗೆದ್ದ ಸಂಭ್ರಮ ಆ ಹೆಣ್ಣು ಮಕ್ಕಳಿಗೆ.
22853369_746383258882697_5970035406768609894_n

22780690_1895107754088301_7332944973267121241_n 22788663_1895109330754810_7133807063510926689_n 22788714_1895089414090135_271021927593766370_n 22788921_1895112400754503_3862780618908018782_n 22814012_1895104034088673_8069644083820638746_n 22814022_1895104624088614_601188572915819082_n 22815299_1895116390754104_525185030930231552_n 22885860_1895113390754404_4118371776734928245_n22860143_1895084544090622_2282306665829317718_o

ಅತ್ತ ಮಂಗಳೂರಿನಲ್ಲಿ ನಿವೇದಿತಾಳ ಕಲೆಯನ್ನು ಪ್ರಚುರ ಪಡಿಸುವ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಿ ‘ಸೈ’ ಎನಿಸಿಕೊಂಡಿದ್ದರು ಅಲ್ಲಿನ ಪ್ರತಿಷ್ಠಾನದವರು.

22886331_1455181377913185_8861178472714679204_n

ಶಿವಮೊಗ್ಗದ್ದು ಸಾಹಸ. ಸ್ಲಂನಲ್ಲಿದ್ದ ಜನರಿಗೆ ಆರೋಗ್ಯ ತಪಾಸಣೆಯ ಸವಾಲನ್ನು ಹೊತ್ತಿದ್ದ ಕಾರ್ಯಕರ್ತೆಯರು ಅಕ್ಕನ ಸೇವಾ ಮನೋಭಾವ ಅನುಭೂತಿಯ ಪ್ರಯತ್ನಕ್ಕೆ ನಿಂತಿದ್ದರು. ಆರಂಭದಲ್ಲಿ ಒಂದೆರಡು ಗಂಟೆಗಳ ಕಾಲ ಯಾರೂ ಬರದೇ ಭ್ರಮನಿರಸನಗೊಳ್ಳುವ ವೇಳೆಗೇ ಜನ ತಮ್ಮ ಕೆಲಸ ಮುಗಿಸಿಕೊಂಡು ತಂಡ-ತಂಡವಾಗಿ ಧಾವಿಸಿ ಬಂದರು. ಅವರೆಲ್ಲರ ಆರೋಗ್ಯ ತಪಾಸಣೆ ನಡೆಸಿ ಔಷಧಿ ಕೊಡುವ ವೇಳೆಗೆ ಸಂತೃಪ್ತಿಯ ನಗು ಎಲ್ಲರಲ್ಲೂ ಇತ್ತು.
22814322_1455622741202382_6544565455988080364_n

ತುಮಕೂರಿನಲ್ಲಿ ಮಂದಿರವೊಂದರಲ್ಲಿ ದೀಪೋತ್ಸವ ಮಾಡಿ ನಿವೇದಿತೆಯ ಧರ್ಮದ ಕುರಿತಂತಹ ಚಿಂತನೆಗಳನ್ನು ಸಮಾಜದಲ್ಲಿ ಪ್ರಸ್ತುತ ಪಡಿಸುವ ಕಾರ್ಯ ನಡೆದಿತ್ತು.
24740267_1978212498872379_1562855388_o
ಗಂಗಾವತಿಯಲ್ಲಿ ಕಾಲೇಜು ಮಕ್ಕಳೊಂದಿಗೆ ಬಲು ವಿಜೃಂಭಣೆಯ ಕಾರ್ಯಕ್ರಮ ನಡೆದರೆ, ಗದಗ್ನಲ್ಲಿ ಕಿಕ್ಕಿರಿದು ಸೇರಿದ್ದ ಸಭಾಂಗಣದಲ್ಲಿ ನಿವೇದಿತೆಯ ಜೀವನದ ಅನಾವರಣವಾಯಿತು. ಬೆಳಗಾವಿ, ಮಂಡ್ಯಗಳಲ್ಲೂ ಕಾರ್ಯಕ್ರಮ ವಿಶೇಷವಾಗಿ ನಡೆಯಿತು.

22852975_746792158841807_541364471656900855_n22789068_746792002175156_6202368158280308420_n 22814470_746792198841803_7040159822083015499_n

ಇದಿಷ್ಟು ಕಾರ್ಯಕ್ರಮ ಹೆಣ್ಣುಮಕ್ಕಳೇ ಮಾಡಿದ್ದು. ಕಾರ್ಯಕ್ರಮದ ಪೂರ್ವಭಾವಿ ತಯಾರಿ, ಓಡಾಟ, ನಿಧಿಸಂಗ್ರಹ, ನಿರ್ವಹಣೆ ಎಲ್ಲವೂ ಹೆಣ್ಣುಮಕ್ಕಳದ್ದೇ. ಕಾರ್ಯಕ್ರಮದಲ್ಲಿ ಪ್ರಾರ್ಥನೆ ಮಾಡಿ ಹೋಗಲಷ್ಟೇ ಸೀಮಿತವಾಗಿದ್ದವರು ರಾಜ್ಯಾದ್ಯಂತ ಇಂಥದ್ದೊಂದು ಸವಾಲು ಸ್ವೀಕರಿಸಿದ್ದರೆಂದರೆ ಅವರೆಲ್ಲರೊಳಗೆ ಅಕ್ಕನ ಆವಾಹನೆಯಾಗಿರುವುದು ನೂರಕ್ಕೆ ನೂರರಷ್ಟು ಸತ್ಯ. ಸೂರ್ಯೋದಯ ಕಾಣುತ್ತಿದೆ ಅಂತ ಅಕ್ಕ ಹೇಳಿದ್ದು ಇದಕ್ಕೆ ಇರಬಹುದಾ?

ನಿಜಕ್ಕೂ ಹೆಮ್ಮೆ ಎನಿಸುತ್ತಿದೆ!

Leave a Reply

Your email address will not be published. Required fields are marked *

You May Also Like

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ

ಮಾರ್ಚ್ 25ರ “ದೀಕ್ಷಾ ದಿವಸದ” ಭರ್ಜರಿ ಕಾರ್ಯಕ್ರಮಗಳ ಪ್ರತಿಫಲ ಬೇಸಿಗೆ ಶಿಬಿರಗಳು. ಮಕ್ಕಳ ಶಾಲೆ ಮುಗಿದಿತ್ತು, ಏಪ್ರಿಲ್ ತಿಂಗಳ ಪ್ರಖರ ಸೂರ್ಯನ ಶಾಖ ಅವರನ್ನು ಹೊರಗೆ ಬರದಂತೆ ಮಾಡಿತ್ತು. ಎಲ್ಲಾ ಕಡೆಗಳಲ್ಲಿ ಬೇಸಿಗೆ ಶಿಬಿರಗಳು ಮಕ್ಕಳನ್ನು ಆಕರ್ಷಿಸುತ್ತಿದ್ದವು. ಆದರೆ ಶಿಬಿರಗಳ ಪ್ರವೇಶಕ್ಕೆ…
View Post

ದೀಕ್ಷಾ ದಿವಸ್

ಅಂದು ಮಾರ್ಚ 25, 1898. ಶುಕ್ರವಾರದ ಶುಭ ದಿನ. ಮಾರ್ಗರೆಟ್ ಸೂರ್ಯೋದಯದ ಮುನ್ನವೇ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು ತನ್ನ ಗುರುವಿನ ಮುಂದೆ ಉತ್ಸಾಹ, ಕುತೂಹಲಗಳಿಂದ ನಿಂತಿದ್ದಳು. ಆ ದಿನ ಸ್ವಾಮೀಜಿ ಆಕೆಗೆ ಶಿವ ಪೂಜೆ ಮಾಡುವ ವಿಧಾನ ಹೇಳಿಕೊಟ್ಟರು. ಗಮನವಿಟ್ಟು,…
View Post

ಸೋದರಿ ನಿವೇದಿತಾ ಪ್ರತಿಷ್ಠಾನಕ್ಕೆ ಎರಡು ವರ್ಷ!

ಅಳಿದರೇನು ದೇಹವಿಂದು ಧ್ಯೇಯದೀಪ ಉರಿದಿದೆ. ನವಜನಾಂಗ ನೆರೆದು ಬಂದು ತೈಲಪದಕೆ ಸುರಿದಿದೆ.” ಸಮಾನ ಮನಸ್ಕ ಯುವತಿಯರ ಸಮಾಜ ಸೇವೆಯ ತುಡಿತಕ್ಕೆ ಇಂಬಾಗಿದ್ದು ‘ಸೋದರಿ ನಿವೇದಿತಾ ಪ್ರತಿಷ್ಠಾನ’. ಇದು ಯುವಾಬ್ರಿಗೇಡ್ನ ಸಹೋದರಿ ಸಂಘಟನೆ. 2014ರ ಸೆಪ್ಟೆಂಬರ್ 27ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ‘ಸೋದರಿ…
View Post

ಹಿರಿ ಹೃದಯಗಳಲ್ಲೂ ನಂದಾದೀಪ

ಯುವಾ ಬ್ರಿಗೇಡಿನ ಸೋದರಿ ಸಂಸ್ಥೆಯಾದ ನಿವೇದಿತಾ ಪ್ರತಿಷ್ಠಾನ ಬಲು ಕ್ರಿಯಾಶೀಲವಾಗಿರುವ ದಿನಗಳಿವು. ನಿವೇದಿತಾಳ 150 ನೇ ಜಯಂತಿಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ 50ಕ್ಕೂ ಹೆಚ್ಚು ಕಡೆಗಳಲ್ಲಿ ‘ದೀಕ್ಷಾದಿವಸ್’ನ್ನು ನಡೆಸಿ ಅವರು ಪಡೆದ ಯಶಸ್ಸು ಅಭಿನಂದನಾರ್ಹ. ಇದು ಸುಮ್ಮನೆ ಆದಂತದ್ದಲ್ಲ. ಇದರ ಹಿಂದೆ ಬೇರೆ-ಬೇರೆ…
View Post

ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ – ಹೊಸ ಯರಗುದ್ರಿ, ಯಾದವಾಡ

ಸೋದರಿ ನಿವೇದಿತೆಯ ಕನಸನ್ನು ಸಾಕಾರಗೊಳಿಸುವತ್ತ ಒಂದು ಪುಟ್ಟ ಹೆಜ್ಜೆ: ಗೋಕಾಕಿನ ಬೇಸಿಗೆ ಶಿಬಿರ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಹೊಸಯರಗುದ್ರಿ ಹಾಗೂ ಯಾದವಾಡಾ, ಇದು ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಂಡ ಎರಡು ಹಳ್ಳಿಗಳು. ಬೆಳಗಾವಿ ಎಂದಾಕ್ಷಣ…
View Post