ದೀಕ್ಷಾ ದಿವಸ್

Total
0
Shares

ಅಂದು ಮಾರ್ಚ 25, 1898. ಶುಕ್ರವಾರದ ಶುಭ ದಿನ. ಮಾರ್ಗರೆಟ್ ಸೂರ್ಯೋದಯದ ಮುನ್ನವೇ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು ತನ್ನ ಗುರುವಿನ ಮುಂದೆ ಉತ್ಸಾಹ, ಕುತೂಹಲಗಳಿಂದ ನಿಂತಿದ್ದಳು. ಆ ದಿನ ಸ್ವಾಮೀಜಿ ಆಕೆಗೆ ಶಿವ ಪೂಜೆ ಮಾಡುವ ವಿಧಾನ ಹೇಳಿಕೊಟ್ಟರು. ಗಮನವಿಟ್ಟು, ಶ್ರದ್ಧೆಯಿಂದ ಸ್ವಾಮಿಜಿಯ ಪ್ರತಿ ಮಾತನ್ನು ಪಾಲಿಸಿದಳು. ಸ್ವಾಮೀಜಿ ನುಡಿದರು, “ಇಂದಿನಿಂದ ನೀನು ನಿವೇದಿತಾ”. ಅವಳ ಕೈಯಲ್ಲಿ ಹೂಗಳನ್ನಿಟ್ಟು ಬುದ್ಧನ ಪಾದಕ್ಕೆ ಅರ್ಪಿಸಲು ಹೇಳಿ, ” ಅವನು ಬುದ್ಧ ತತ್ವವನ್ನು ಪಡೆಯುವುದಕ್ಕು ಮುನ್ನ ಇತರರಿಗಾಗಿ 500 ಬಾರಿ ಜನ್ಮವೆತ್ತಿ ಪ್ರಾಣಾರ್ಪಣೆ ಮಾಡಿದ್ದ” ಎಂದರು. ನಿವೇದಿತೆಗೆ ತನ್ನ ಮುಂದಿನ ದಾರಿ ಸ್ಪಷ್ಟವಾಗಿ ಕಂಡಿತು. ಅಂದೇ ಪಶ್ಚಿಮದ ಮಾರ್ಗರೇಟ್ ನೋಬೆಲ್ ಪೂರ್ವದ ನಿವೇದಿತೆಯಾಗಿ ದೇಶ, ಧರ್ಮಗಳ ಎಲ್ಲೆ ಮೀರಿ ತನ್ನೆಲ್ಲವನ್ನೂ ಅತ್ಯಂತ ಶ್ರೇಷ್ಠ ಉದ್ದೇಶಕ್ಕೆ ಸಮರ್ಪಿಸಿಕೊಂಡದ್ದು. ಇದೇ ಆಕೆಯ ದೀಕ್ಷೆಯ ದಿನ.

ಅದಾದ ನಂತರ ಅಕ್ಕ ಮಾಡಿದ ಕೆಲಸ ಅಪಾರ, ಅವಿಸ್ಮರಣೀಯ. ಸ್ತ್ರೀ ಶಿಕ್ಷಣಕ್ಕೆ ಆಕೆ ಪಟ್ಟ ಶ್ರಮ, ಯುವಕರಿಗೆ ಅಕ್ಕ ನೀಡಿದ ಪ್ರೇರಣೆ, ಸೇವೆ ಮಾಡಿದ ರೀತಿ, ನಮಗೆ ಕೊಟ್ಟ ರಾಷ್ಟ್ರೀಯತೆಯ ಆದರ್ಶ ಇಂದಿಗೂ ಸೂಕ್ತ. ದೇಶವನ್ನು ಬೈದುಕೊಂಡು ತಿರುಗಾಡುತ್ತಿರುವ ನಮ್ಮಲ್ಲಿಯೂ ಒಬ್ಬ ಮಾರ್ಗರೆಟ್ ಹಾಗೂ ನಿವೇದಿತಾ ಇದ್ದಾರೆ. ನಾವೂ ದೀಕ್ಷೆ ಪಡಿಯಬೇಕಿದೆ. ಇದು “ರಾಷ್ಟ್ರ ಸೇವೆಗೆ ಸಂಕಲ್ಪ” ತೊಡುವ ದೀಕ್ಷೆ.‌ ನಮ್ಮಲ್ಲಿರುವ ಮಾರ್ಗರೆಟ್ ನೋಬೆಲ್ ನಿವೇದಿತೆಯಾಗಬೇಕು.

ದೀಕ್ಷೆ ಎನ್ನುವುದು ಪಶ್ಚಿಮದಿಂದ ಪೂರ್ವದೆಡೆಗೆ ತಿರುಗುವುದು. ಪಶ್ಚಿಮವೆಂದರೆ ಬಹಿರ್ಮುಖಿ, ಪೂರ್ವವೆಂದರೆ ಅಂತರ್ಮುಖಿ. ಮಾರ್ಗರೆಟ್ ನಿವೇದಿತೆಯಾಗುವುದೆಂದರೆ ಹೊರಗಡೆ ನೋಡುವುದನ್ನು ಬಿಟ್ಟು ಒಳಗೆ ನೋಡುವುದು.

ದೇಶ ಬಾಂಧವರಲ್ಲಿ ವಿಶೇಷವಾಗಿ ಯುವಕ-ಯುವತಿಯರಲ್ಲಿ ದೇಶಾಭಿಮಾನ ಹಾಗೂ ರಾಷ್ಟ್ರೀಯತೆಯ ಕಿಡಿ ಹಚ್ಚಿ ಅದರ ಮೂಲಕ ಅವರಲ್ಲಿಯ ಮಾರ್ಗರೆಟ್ ಧಗಧಗನೆ ಉರಿದು ನಿವೇದಿತೆಯ ಶ್ರೇಷ್ಠ ಗುಣಗಳತ್ತ ನಡೆಯುವ ಸಂಕಲ್ಪ ಕೊಡಿಸುವುದೇ ಸೋದರಿ ನಿವೇದಿತಾ ಪ್ರತಿಷ್ಠಾನದ ಉದ್ದೇಶವಾಗಿತ್ತು. ಈ ಉದ್ದೇಶದ ಸಾಕಾರಕ್ಕಾಗಿ ಪ್ರತಿಷ್ಠಾನದ ಸೋದರಿಯರು ಎಲ್ಲ ವರ್ಗದ ಜನರನ್ನು ತಲುಪಲು ನಿಶ್ಚಯಿಸಿದೆವು. ಶಾಲೆ-ಕಾಲೇಜುಗಳು ಮಾತ್ರವಲ್ಲದೆ ಯೋಗಾ ಕೇಂದ್ರ, ಅಂಗನವಾಡಿಯ ಹೆಣ್ಣುಮಕ್ಕಳು, ಅನಾಥ ಆಶ್ರಮ, ವೃದ್ಧಾಶ್ರಮ, ಹಾಸ್ಟೆಲ್ ಗಳು, ದೇವಾಲಯಗಳು ಹಾಗೂ ದೀನ-ದಲಿತರ ಕೇರಿಗಳಿಗೆ ಹೋಗಿ ಅವರಲ್ಲಿ ಜಾಗೃತಿ ಮೂಡಿಸಿ ಅವರಿಗೆ ಸಂಕಲ್ಪ ಬೋಧಿಸಿದೆವು. ಸಂಕಲ್ಪದ ಸಾರ “ಭಾರತವನ್ನು ವಿಶ್ವ ಗುರುವನ್ನಾಗಿಸುವುದರಲ್ಲಿ ಬಿಡುವಿಲ್ಲದ ಕೆಲಸ ಮಾಡುವುದು ಹಾಗೂ ನಮ್ಮ ಸಹಮಾನವರನ್ನು ರಾಷ್ಟ್ರದ ವಿಕಾಸದ ಓಟದ ಪಾಲುದಾರರನ್ನಾಗಿಸುವುದು.”

ರಾಜ್ಯಾದ್ಯಂತ 53 ಕಡೆಗಳಲ್ಲಿ “ದೀಕ್ಷಾ ದಿವಸ್” ಆಚರಿಸಿದ ನಾವುಗಳು ಸುಮಾರು 20 ಊರುಗಳಲ್ಲಿನ ಜನರನ್ನು ಸಮರ್ಥವಾಗಿ ತಲುಪುವಲ್ಲಿ ಯಶಸ್ವಿಯಾದೆವು. ಎಷ್ಟೋ ಕಡೆ ನಮ್ಮ ಸೋದರಿಯರು ಸ್ವಾಮೀಜಿ ಮತ್ತು ಅಕ್ಕ ನಿವೇದಿತೆಯ ಪಾತ್ರ ಧರಿಸಿ ದೀಕ್ಷೆಯ ಆ ದಿನದ ಒಂದು ಸಣ್ಣ ಝಲಕ್ ತೋರಿಸಿದರೆ ಮತ್ತೊಂದು ಕಡೆ, ಶಿವಮೊಗ್ಗದ ಸೋದರಿಯರು “ದೂರ ತೀರದ ಶ್ವೇತ ಕುವರಿಗೆ” ಹಾಡಿಗೆ ತಾವೇ ನೃತ್ಯ ಸಂಯೋಜನೆ ಮಾಡಿ ನೃತ್ಯ ಪ್ರದರ್ಶನ ನೀಡಿದರು. ಅಕ್ಕನನ್ನು ಯಾವ ರೀತಿಯಲ್ಲಿ ಆಗುವುದೋ ಆ ರೀತಿಯಲ್ಲಿ ಜನರ ಮನ ಮುಟ್ಟಿಸುವುದೇ ನಮ್ಮ ಉದ್ದೇಶವಾಗಿತ್ತು.

ದೀಕ್ಷಾದಿವಸ್ ಅಂದು ನಾವು ದೀಕ್ಷೆಯನ್ನು ಪಡೆದಿದ್ದೇವೆ. ಭಾರತ ವಿಶ್ವಗುರುವಾಗುವವರೆಗೆ ನಿರಂತರ ಶ್ರಮಿಸುತ್ತೇವೆ. ಅಕ್ಕ ನಮಗೆ ಶಕ್ತಿಯನ್ನು ನೀಡಲಿ.

Leave a Reply

Your email address will not be published. Required fields are marked *

You May Also Like

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ

ಮಾರ್ಚ್ 25ರ “ದೀಕ್ಷಾ ದಿವಸದ” ಭರ್ಜರಿ ಕಾರ್ಯಕ್ರಮಗಳ ಪ್ರತಿಫಲ ಬೇಸಿಗೆ ಶಿಬಿರಗಳು. ಮಕ್ಕಳ ಶಾಲೆ ಮುಗಿದಿತ್ತು, ಏಪ್ರಿಲ್ ತಿಂಗಳ ಪ್ರಖರ ಸೂರ್ಯನ ಶಾಖ ಅವರನ್ನು ಹೊರಗೆ ಬರದಂತೆ ಮಾಡಿತ್ತು. ಎಲ್ಲಾ ಕಡೆಗಳಲ್ಲಿ ಬೇಸಿಗೆ ಶಿಬಿರಗಳು ಮಕ್ಕಳನ್ನು ಆಕರ್ಷಿಸುತ್ತಿದ್ದವು. ಆದರೆ ಶಿಬಿರಗಳ ಪ್ರವೇಶಕ್ಕೆ…
View Post

ಸೋದರಿ ನಿವೇದಿತಾ ಪ್ರತಿಷ್ಠಾನಕ್ಕೆ ಎರಡು ವರ್ಷ!

ಅಳಿದರೇನು ದೇಹವಿಂದು ಧ್ಯೇಯದೀಪ ಉರಿದಿದೆ. ನವಜನಾಂಗ ನೆರೆದು ಬಂದು ತೈಲಪದಕೆ ಸುರಿದಿದೆ.” ಸಮಾನ ಮನಸ್ಕ ಯುವತಿಯರ ಸಮಾಜ ಸೇವೆಯ ತುಡಿತಕ್ಕೆ ಇಂಬಾಗಿದ್ದು ‘ಸೋದರಿ ನಿವೇದಿತಾ ಪ್ರತಿಷ್ಠಾನ’. ಇದು ಯುವಾಬ್ರಿಗೇಡ್ನ ಸಹೋದರಿ ಸಂಘಟನೆ. 2014ರ ಸೆಪ್ಟೆಂಬರ್ 27ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ‘ಸೋದರಿ…
View Post

ಹಿರಿ ಹೃದಯಗಳಲ್ಲೂ ನಂದಾದೀಪ

ಯುವಾ ಬ್ರಿಗೇಡಿನ ಸೋದರಿ ಸಂಸ್ಥೆಯಾದ ನಿವೇದಿತಾ ಪ್ರತಿಷ್ಠಾನ ಬಲು ಕ್ರಿಯಾಶೀಲವಾಗಿರುವ ದಿನಗಳಿವು. ನಿವೇದಿತಾಳ 150 ನೇ ಜಯಂತಿಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ 50ಕ್ಕೂ ಹೆಚ್ಚು ಕಡೆಗಳಲ್ಲಿ ‘ದೀಕ್ಷಾದಿವಸ್’ನ್ನು ನಡೆಸಿ ಅವರು ಪಡೆದ ಯಶಸ್ಸು ಅಭಿನಂದನಾರ್ಹ. ಇದು ಸುಮ್ಮನೆ ಆದಂತದ್ದಲ್ಲ. ಇದರ ಹಿಂದೆ ಬೇರೆ-ಬೇರೆ…
View Post

ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ – ಹೊಸ ಯರಗುದ್ರಿ, ಯಾದವಾಡ

ಸೋದರಿ ನಿವೇದಿತೆಯ ಕನಸನ್ನು ಸಾಕಾರಗೊಳಿಸುವತ್ತ ಒಂದು ಪುಟ್ಟ ಹೆಜ್ಜೆ: ಗೋಕಾಕಿನ ಬೇಸಿಗೆ ಶಿಬಿರ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಹೊಸಯರಗುದ್ರಿ ಹಾಗೂ ಯಾದವಾಡಾ, ಇದು ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಂಡ ಎರಡು ಹಳ್ಳಿಗಳು. ಬೆಳಗಾವಿ ಎಂದಾಕ್ಷಣ…
View Post

ಮಾಧ್ಯಮಗಳ ಮೂಲಕ ಪ್ರಚಾರ

ಅಕ್ಕ ನಿವೇದಿತಾ ಯಾರಿಗೆ ತಾನೆ ಸ್ಫೂರ್ತಿ ಅಲ್ಲ ಹೇಳಿ. ಭಾರತದ ಪ್ರತಿಯೊಂದು ವರ್ಗದ ಜನರ ಸಂಪರ್ಕದಲ್ಲಿದ್ದಾಕೆ ಅಕ್ಕ. ಪ್ರತಿಷ್ಠಿತ ಠಾಗೋರ್ ಮನೆತನದಿಂದ ಹಿಡಿದು ಬೆಸ್ತರ ಬಸ್ತಿಯವರೆಗೂ ಆಕೆ ಕೆಲಸ ಮಾಡಿದ್ದಾಳೆ. ಸ್ವಾತಂತ್ರ್ಯ ಹೋರಾಟಕ್ಕೆ ನಿಂತ ಅಹಿಂಸಾವಾದಿಗಳಿಂದ ಹಿಡಿದು ರೆವಲ್ಯೂಷನರಿಗಳವರೆಗೆ ಎಲ್ಲರಿಗೂ ಪ್ರೇರಣೆ…
View Post