ಸೋದರಿ ನಿವೇದಿತಾ ಪ್ರತಿಷ್ಠಾನ ದ ಸೇವಾ ಕಾರ್ಯಗಳು

Total
0
Shares
ನನ್ನ ಕನಸಿನ ಕರ್ನಾಟಕದಡಿಯಲ್ಲಿ, ಸೋದರಿ ನಿವೇದಿತಾ ಪ್ರತಿಷ್ಠಾನವು ರಾಜ್ಯಾದ್ಯಂತ ಗ್ರಾಮ ಸಮೀಕ್ಷೆಗಳನ್ನು ನಡೆಸಿ, ಹಳ್ಳಿಯ ಮಹಿಳೆಯರ ಜೀವನ ನಿರ್ವಹಣ  ಕ್ರಮ, ಅವರು ಎದುರಿಸುವ ತೊಂದರೆಗಳು, ಮಕ್ಕಳ ಶಿಕ್ಷಣ ವ್ಯವಸ್ಥೆ, ಯುವಕರಿಗೆ ಉದ್ಯೋಗಾವಕಾಶಗಳು, ಹಳ್ಳಿಗಳಲ್ಲಿಯ ವಿಶಿಷ್ಟ ಧರ್ಮಿಕ ಆಚರಣೆಗಳು,  ಹಳ್ಳಿಗಳಲ್ಲಿಯ ಆಸ್ಪತ್ರೆಗಳ ಪರಿಸ್ಥಿತಿ, ಗ್ರಂಥಾಲಯ ನಿರ್ವಹಣ ಮುಂತಾದ ವಿಷಯಗಳನ್ನು ಸಂಗ್ರಹಿಸಿದರು. ಸಮೀಕ್ಷೆ ನಡೆಸಿದ ಹಳ್ಳಿಗಳಲ್ಲಿ , ಪ್ರತಿ ಜಿಲ್ಲಿಯಿಂದ ಒಂದು ಹಳ್ಳಿ ಆಯ್ಕೆ ಮಾಡಿಕೊಂಡು, ಮಾದರಿ ಹಳ್ಳಿಹನ್ನಾಗಿಸುವ ಕಾರ್ಯವನ್ನು ಪ್ರತಿಷ್ಠಾನ ಕೈಗೆತ್ತಿಕೊಂಡಿದೆ. ಹಳ್ಳಿಗಳಲ್ಲಿಯ ಸಮಸ್ಯೆಗಳಿಗೆ ನಮ್ಮಿಂದ ಸಾಧ್ಯವಿರುವ  ರೀತಿಯಲ್ಲಿ ಪರಿಹಾರಗಳನ್ನು ಹುಡುಕುವ ಪ್ರಯತ್ನದಲ್ಲಿ ಪ್ರತಿಷ್ಠಾನವು ಕಾರ್ಯೋನ್ಮುಖವಾಗಿದೆ.
27657171_1939283806337362_2982583886833718372_n
ಹಳ್ಳಿಗಳ ಸಮೀಕ್ಷೆ ಮಾಡಲು ಹೋದಾಗ ಆದ ಅನುಭವಗಳಂತೂ ಒಂದಕ್ಕಿಂತ ಒಂದು ಅದ್ಬುತ. ಹಳ್ಳಿಯ ಹೆಣ್ಣುಮಕ್ಕಳು ತೋರಿದ ಪ್ರೀತಿ, ಗೌರವಗಳನ್ನು ವರ್ಣಿಸಲು ಪದಗಳು ಸಿಗುತ್ತಿಲ್ಲ. ಇನ್ನು ಹಳ್ಳಿಗಳ ಆಶಾ ಕಾರ್ಯಕರ್ತೆಯರ ಜವಾಬ್ದಾರಿಯುತ ಮಾತುಗಳು ಮತ್ತು ಬದ್ದತೆ ನಮ್ಮನ್ನು ಸೆಳೆದವು.  ತಮ್ಮ ಹಳ್ಳಿಗಳು  ಪ್ರಗತಿಪಥದಲ್ಲಿ ಸಾಗುವಂತೆ ಮಾಡಲು, ಬೇಕಾದ ಎಲ್ಲ ಸಹಕಾರ ನೀಡಲು ಅವರು  ಸಿದ್ದರಾಗಿದ್ದರೆ.
26993878_1929308264001583_3175580077747889839_n
27336955_1936657729933303_7785791499450383626_n 27751975_1936274556638287_410541142530836725_n
ಒಟ್ಟಾರೆ,  ನನ್ನ ಕನಸಿನ ಕರ್ನಾಟಕ ನಿರ್ಮಾಣದಲ್ಲಿ ಸಮಾಜಪ್ರಜ್ಞೆಯುಳ್ಳ ಜವಾಬ್ದಾರಿಯುತ ನಾಗರಿಕರ ಕರ್ತವ್ಯ ಪ್ರಮುಖಪಾತ್ರ ವಹಿಸುತ್ತದೆ. ಸೋದರಿ ನಿವೇದಿತಾ ಪ್ರತಿಷ್ಠಾನದ ಸೋದರಿಯರಿಗಂತೂ, ಇದು ನಿವೇದಿತೆಯ ಸೇವಾ ಮಾರ್ಗದಲ್ಲಿ  ಸಾಗುವ ಒಳ್ಳೆಯ ಅವಕಾಶ.

 

Leave a Reply

Your email address will not be published. Required fields are marked *

You May Also Like

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ

ಮಾರ್ಚ್ 25ರ “ದೀಕ್ಷಾ ದಿವಸದ” ಭರ್ಜರಿ ಕಾರ್ಯಕ್ರಮಗಳ ಪ್ರತಿಫಲ ಬೇಸಿಗೆ ಶಿಬಿರಗಳು. ಮಕ್ಕಳ ಶಾಲೆ ಮುಗಿದಿತ್ತು, ಏಪ್ರಿಲ್ ತಿಂಗಳ ಪ್ರಖರ ಸೂರ್ಯನ ಶಾಖ ಅವರನ್ನು ಹೊರಗೆ ಬರದಂತೆ ಮಾಡಿತ್ತು. ಎಲ್ಲಾ ಕಡೆಗಳಲ್ಲಿ ಬೇಸಿಗೆ ಶಿಬಿರಗಳು ಮಕ್ಕಳನ್ನು ಆಕರ್ಷಿಸುತ್ತಿದ್ದವು. ಆದರೆ ಶಿಬಿರಗಳ ಪ್ರವೇಶಕ್ಕೆ…
View Post

ದೀಕ್ಷಾ ದಿವಸ್

ಅಂದು ಮಾರ್ಚ 25, 1898. ಶುಕ್ರವಾರದ ಶುಭ ದಿನ. ಮಾರ್ಗರೆಟ್ ಸೂರ್ಯೋದಯದ ಮುನ್ನವೇ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು ತನ್ನ ಗುರುವಿನ ಮುಂದೆ ಉತ್ಸಾಹ, ಕುತೂಹಲಗಳಿಂದ ನಿಂತಿದ್ದಳು. ಆ ದಿನ ಸ್ವಾಮೀಜಿ ಆಕೆಗೆ ಶಿವ ಪೂಜೆ ಮಾಡುವ ವಿಧಾನ ಹೇಳಿಕೊಟ್ಟರು. ಗಮನವಿಟ್ಟು,…
View Post

ಸೋದರಿ ನಿವೇದಿತಾ ಪ್ರತಿಷ್ಠಾನಕ್ಕೆ ಎರಡು ವರ್ಷ!

ಅಳಿದರೇನು ದೇಹವಿಂದು ಧ್ಯೇಯದೀಪ ಉರಿದಿದೆ. ನವಜನಾಂಗ ನೆರೆದು ಬಂದು ತೈಲಪದಕೆ ಸುರಿದಿದೆ.” ಸಮಾನ ಮನಸ್ಕ ಯುವತಿಯರ ಸಮಾಜ ಸೇವೆಯ ತುಡಿತಕ್ಕೆ ಇಂಬಾಗಿದ್ದು ‘ಸೋದರಿ ನಿವೇದಿತಾ ಪ್ರತಿಷ್ಠಾನ’. ಇದು ಯುವಾಬ್ರಿಗೇಡ್ನ ಸಹೋದರಿ ಸಂಘಟನೆ. 2014ರ ಸೆಪ್ಟೆಂಬರ್ 27ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ‘ಸೋದರಿ…
View Post

ಹಿರಿ ಹೃದಯಗಳಲ್ಲೂ ನಂದಾದೀಪ

ಯುವಾ ಬ್ರಿಗೇಡಿನ ಸೋದರಿ ಸಂಸ್ಥೆಯಾದ ನಿವೇದಿತಾ ಪ್ರತಿಷ್ಠಾನ ಬಲು ಕ್ರಿಯಾಶೀಲವಾಗಿರುವ ದಿನಗಳಿವು. ನಿವೇದಿತಾಳ 150 ನೇ ಜಯಂತಿಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ 50ಕ್ಕೂ ಹೆಚ್ಚು ಕಡೆಗಳಲ್ಲಿ ‘ದೀಕ್ಷಾದಿವಸ್’ನ್ನು ನಡೆಸಿ ಅವರು ಪಡೆದ ಯಶಸ್ಸು ಅಭಿನಂದನಾರ್ಹ. ಇದು ಸುಮ್ಮನೆ ಆದಂತದ್ದಲ್ಲ. ಇದರ ಹಿಂದೆ ಬೇರೆ-ಬೇರೆ…
View Post

ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ – ಹೊಸ ಯರಗುದ್ರಿ, ಯಾದವಾಡ

ಸೋದರಿ ನಿವೇದಿತೆಯ ಕನಸನ್ನು ಸಾಕಾರಗೊಳಿಸುವತ್ತ ಒಂದು ಪುಟ್ಟ ಹೆಜ್ಜೆ: ಗೋಕಾಕಿನ ಬೇಸಿಗೆ ಶಿಬಿರ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಹೊಸಯರಗುದ್ರಿ ಹಾಗೂ ಯಾದವಾಡಾ, ಇದು ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಂಡ ಎರಡು ಹಳ್ಳಿಗಳು. ಬೆಳಗಾವಿ ಎಂದಾಕ್ಷಣ…
View Post