ಸ್ವಾಮೀಜಿಯ ಸೋಲ್ಜರ್ಸ್ ಕನ್ಯಾಕುಮಾರಿಯಲ್ಲಿ

Total
0
Shares

ಸ್ವಾಮೀ ವಿವೇಕಾನಂದರು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ತಿರುಗಾಡಿ ಭಾರತವನ್ನು ಅರ್ಥೈಸಿಕೊಂಡರು. ದೇಶದ ಸಮಸ್ಯೆಯನ್ನು ಕಂಡು ಮರುಗಿ ಕನ್ಯಾಕುಮಾರಿಯ ಕಡಲಿನ ಎದುರು ನಿಂತು ಸಮುದ್ರಕ್ಕೆ ಜಿಗಿದು ದೂರದಲ್ಲಿ ಕಾಣುತ್ತಿದ್ದ ಬಂಡೆಯನ್ನೇರಿ ಕುಳಿತು ಮೂರು ದಿನ ಧ್ಯಾನ ಮಾಡಿ ತಾಯಿ ಭಾರತೀಯ ದರುಶನವಾದ ನಂತರ ಮುಂದೆ ಭಾರತದ ವೈಭವವನ್ನು ಜಗತ್ತಿಗೆ ಪಸರಿಸಿದರು.

 ಮುಂದೆ ಈ ಬಂಡೆಯ ಮೇಲೆ ಏಕನಾಥ ಜಿ ರಾನಡೆಯವರ ಸತತ ಪರಿಶ್ರಮದಿಂದ ಈ ಸ್ಥಳದಲ್ಲಿ ವಿವೇಕಾನಂದರ ಶಿಲಾ ಸ್ಮಾರಕ ನಿರ್ಮಾಣವಾಯಿತು. ಈ ಅವಿಸ್ಮರಣಿಯ ದಿನದಿಂದ ಸ್ಪೂರ್ತಿ ಪಡೆದ ದಿನವೇ ರಾಕ್ ಡೇ.
24/12/2014 ರಂದು ಮೊದಲ ಬಾರಿ ರಾಕ್ ಡೇ ಆಚರಿಸಲಾಯಿತು. ಅಲ್ಲಿಂದ ಪ್ರತಿ ವರ್ಷ ರಾಜ್ಯದ ಆಯ್ದ ನೂರು ಜನ ತರುಣರನ್ನು ‘ಸೋಲ್ಜರ್ಸ್ ಆಫ್ ಸ್ವಾಮೀಜೀ’ ಕಲ್ಪನೆಯ ಅಡಿಯಲ್ಲಿ ‘ಕಬ್ಬಿಣದ ಮಾಂಸ ಕಂಡ, ಮಿಂಚಿನ ಬುದ್ಧಿ ಶಕ್ತಿ, ಉಕ್ಕಿನ ನರಮಂಡಲ’ ಹೊಂದುವಂತೆ ಪ್ರೇರೇಪಿಸಲಾಗುತ್ತಿದೆ.
25626771_1905913436088720_951651333070593952_o
25734052_1905911649422232_5163200389205443555_o
26024067_1905924052754325_4251442263872929303_o
ಕಳೆದ ವರ್ಷದಿಂದ ಡಿಸೆಂಬರ್ 25 ರಿಂದ ಜನವರಿ 12 ತನಕ ದೈಹಿಕ ವ್ಯಾಯಾಮ ಮಾಡುವ ಸಂಕಲ್ಪದೊಂದಿಗೆ ‘ವಿವೆಕ ಮಾಲೆ’ ಯನ್ನು ಹಾಕಲಾಯಿತು. ಈ ಸಲ ರಾಜ್ಯಾದ್ಯಂತ ಸುಮಾರು 2000 ಯುವಾ ಬ್ರಿಗೇಡ್ ತರುಣರು ಮತ್ತು ಇತರರು ತಮ್ಮ ತಮ್ಮ ಜಿಲ್ಲೆಗಳಲ್ಲಿ ರಾಮಕೃಷ್ಣ ಆಶ್ರಮದಲ್ಲಿ, ಸಮುದ್ರ ದಂಡೆಯಲ್ಲಿ, ದೇವಸ್ಥಾನದಲ್ಲಿ ಸ್ವಾಮೀಜೀ ಭಾವಚಿತ್ರದ ಮುಂದೆ ಸಂಕಲ್ಪಬದ್ಧರಾಗಿ ‘ವಿವೇಕ ಮಾಲೆ’ ಧರಿಸಿದರು. 18 ದಿನಗಳ ಕಾಲ ಯೋಗ, ವ್ಯಾಯಾಮ ಮಾಡುವುದರ ಮೂಲಕ ದೇಹವನ್ನು ಬಲಿಷ್ಠಗೊಳಿಸುವುದಲ್ಲದೆ ವಿವೇಕ ಸಾಹಿತ್ಯದ ಅಧ್ಯಯನ ನಡೆಸಿ ತಮ್ಮನ್ನು ತಾವು ರಾಷ್ಟ್ರ ಸೇವೆಗೆ ಮುಡಿಪಾಗಿಡುವ ಸಂಕಲ್ಪ ಮಾಡಿದೆವು. ವ್ರತದ ನಂತದ ಜನವರಿ 13ರಂದು ಕನ್ಯಾಕುಮಾರಿಗೆ ಪ್ರಯಾಣ ಬೆಳೆಸಿದೆವು. ಬಹುಜನರು  ಆಶ್ರಮದಲ್ಲಿ, ದೇವಸ್ಥಾನದಲ್ಲಿ ವಿವೇಕ ಮಾಲೆಯನ್ನು ವಿಸರ್ಜನೆ ಮಾಡಿದರು.
25591949_1726070184130363_7608682324658834985_n 25660218_1726071054130276_1932267667702963430_n 25660294_1726070577463657_7736413941725252192_n 25660329_1726071550796893_1395385308907794986_n 25994844_1726071617463553_7218142764307920623_n 26047091_1726070087463706_8794327555671962279_n
ಈ ಬಾರಿಯ ಯಾತ್ರೆಯಲ್ಲಿ 110 ಜನ ತರುಣರಿದ್ದರು. ಮೊದಲ ದಿನ ವಿವೇಕಾನಂದರ ಬಂಡೆಗೆ ತೆರಳಿ, ಸ್ವಾಮೀಜೀಯ ದರುಶನ ಪಡೆದು, ಬಂಡೆಯ ಮಹತ್ವವನ್ನು ತಿಳಿದು, ಎಲ್ಲರೂ ಹೊಸ ಸಂಕಲ್ಪದೊಂದಿಗೆ ಮರಳಿದೆವು. ನಂತರ ಸುಚೀಂದ್ರಂ ಮತ್ತು ಕನ್ಯಾಕುಮಾರಿ ದೇವಸ್ಥಾನಕ್ಕೆ  ಹೋಗಿ ದೇವರ ದರುಶನ ಮಾಡಿ ಯಾತ್ರೆಯ ಮೊದಲ ದಿನವನ್ನು ಮುಗಿಸಿದೆವು.
26731508_1590220641098218_7485837395055188161_n

ಎರಡನೆ ದಿವಸ ‘ಮರುತ ಮಲೈ’ ಬೆಟ್ಟವನ್ನೇರಿ, ವಿವೇಕ ಮಾಲೆಯನ್ನು ಅಲ್ಲೆ ವಿಸರ್ಜಿಸಿ ಬಂದೆವು. ಬೆಟ್ಟವನ್ನು ಇಳಿಯುತ್ತ ಅಲ್ಲಿದ್ದ ಪ್ಲಾಸ್ಟಿಕ್ ಲೋಟ,ಕವರ್ ಮತ್ತು ಇತರ ತ್ಯಾಜ್ಯವನ್ನು ತೆಗೆಯುತ್ತ ಸ್ವಚ್ಛತಾ ಕಾರ್ಯವನ್ನು ಮಾಡಿದೆವು. 2 ಲೋಡ್ ಆಗುವಷ್ಟು ಕಸವನ್ನು ತೆಗೆಯಲಾಯಿತು. ನಂತರ ವಿವೇಕಾನಂದರ ಕೇಂದ್ರಕ್ಕೆ ಹೋದೆವು. ಅಲ್ಲಿದ್ದ ಕೇಂದ್ರದ ಮುಖ್ಯಸ್ಥರಾದಂತಹ ನಿವೇದಿತಾ ಅಕ್ಕನವರಿಗೆ ಯುವ ಬ್ರಿಗೇಡ್ ಮಾಡುವ ಕೆಲಸಗಳ ಬಗ್ಗೆ ತಿಳಿಸಿಕೊಡಲಾಯಿತು. ಅವರು ನಮ್ಮನು ಪ್ರಶಂಶಿಸಿದರು. ನಂತರ ಅಲ್ಲಿದ್ದ ‘ಏಕನಾಥ ರಾನಡೆ ಜೀ’ ಅವರ ಸಮಾಧಿಗೆ ಗೌರವ ಸಲ್ಲಿಸಿ, ಭಾರತ ಮಾತೆಯ ಮಂದಿರಕ್ಕೆ ತೆರಳಿ ರಾಮಾಯಣವನ್ನು ದರುಶನ ಮಾಡಿ ಬಂದೆವು.

26992698_1937081299654293_3125134855882665437_n

26992124_1937083216320768_115160573607041158_n
ಈ ಎರಡು ದಿನದ ಯಾತ್ರೆ ಮುಗಿಸಿ, ವಿವೇಕಾನಂದರಿಂದ ಪ್ರೇರೇಪಿತಗೊಂಡು, ಮುಂದೆ ರಾಷ್ಟ್ರ ಕಾರ್ಯದಲಿ ತೊಡಗಿಸಿಕೊಳ್ಳುವ ಸಂಕಲ್ಪ ಮಾಡಿ ವಾಪಸ್ಸು ಹೊರಟೆವು.
Leave a Reply

Your email address will not be published. Required fields are marked *

You May Also Like

ಡಿಸೆಂಬರ್ 25 – ರಾಕ್ ಡೇ

“ಮೊರೆಯುವ ಕಡಲಿಗೆ ಹಾರಿ ಧುಮುಕಿದ, ಈಜಿದ, ನುಗ್ಗಿದ. ಗಟ್ಟಿ ಬಂಡೆಯಲಿ ಬೇರೂರಿದ, ಬಾನೆತ್ತರ ಬೆಳೆದ. ಬೆಳಕಿನ ಗೋಪುರವಾದ” ಕವಿ ಜಿ.ಎಸ್ ಶಿವರುದ್ರಪ್ಪನವರು ಬರೆದಿರುವ ಈ ಸಾಲುಗಳು ಸ್ವಾಮಿ ವಿವೇಕಾನಂದರ ಕುರಿತಂತೆಯೇ.. ನಿಜ! ಸ್ವಾಮಿ ವಿವೇಕಾನಂದರು ಏಳು ವರ್ಷಗಳಷ್ಟು ದೀರ್ಘಕಾಲ ಭಾರತವನ್ನು ಅರಿತುಕೊಳ್ಳುವ…
View Post