ವಿವೇಕ ಕುಂಭದ ಕೊನೆಯಲ್ಲಿ ನನ್ನ ಕನಸಿನ ಕರ್ನಾಟಕ!

Total
0
Shares
ಸಾವಿರಾರು ವಿವೇಕಾನಂದರ ಸಮ್ಮುಖದಲ್ಲಿ ಮಾತನಾಡಿದ ಕೆಲವೇ ನಿಮಿಷಗಳಲ್ಲಿ ನರೇಂದ್ರ ಮೋದಿಯವರು ಸಿದ್ದರಾಮಯ್ಯನವರು ಐದು ವರ್ಷಗಳಲ್ಲಿ ಮಾಡಲಾಗದ್ದನ್ನು ಮಾಡಿ ತೋರಿಸಿಬಿಟ್ಟರು. ಪ್ರಧಾನಮಂತ್ರಿಯವರಿಗೆ ಚೆನ್ನಾಗಿ ಗೊತ್ತು ಹತ್ತು ಸಾವಿರ ವಿವೇಕಾನಂದ ರೂಪಧಾರಿಗಳನ್ನು ನಿಮರ್ಿಸುವ ಸಂಕಲ್ಪ ಹೊತ್ತ ಸಂತ ಮನಸು ಮಾಡಿದರೆ ಜನ ಜೀವನವನ್ನೇ ಬದಲಾಯಿಸಬಲ್ಲ ಅಂತ!
ಈ ಜನವರಿ ಹನ್ನೆರಡು ನಾಡಿನ ಪಾಲಿಗೆ ವಿಶಿಷ್ಟವಾದ ದಿನವೇ ಸರಿ. ಚುನಾವಣೆ ಬಂದೊಡನೆ ತಮ್ಮ ತಾವು ಪದೇ ಪದೇ ಹಿಂದೂ ಎಂದು ಹೇಳಿಕೊಳ್ಳಲು ಹೆಣಗಾಡುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಟ್ಟಿಟರ್ನಲ್ಲಿ ಶುಭಾಶಯವನ್ನಷ್ಟೇ ಕೋರಲು ಸೀಮಿತಗೊಳಿಸಿಬಿಟ್ಟಿದ್ದರು. ಕೊನೆಯ ಪಕ್ಷ ಅದನ್ನು ರಾಷ್ಟ್ರೀಯ ಯುವದಿನವಾಗಿ ಆಚರಿಸುತ್ತಾರೆಂಬುದೂ ಅವರು ಮರೆತಿದ್ದಾರೆನಿಸುವಂತಿತ್ತು. ಒಂದಂತೂ ಸತ್ಯ. ವ್ಯಕ್ತಿಯೊಬ್ಬನ ಮೇಲೆ ಸಮಾಜಕ್ಕೆ ಅಸಡ್ಡೆ ಮೂಡಬೇಕೆಂದರೆ ಸಕರ್ಾರ ಅವನ ಜಯಂತಿಯನ್ನು ಆಚರಿಸುವಂತೆ ಮಾಡಿದರೆ ಸಾಕು. ಅದರಲ್ಲೂ ಬರಿಯ ಮತ ರಾಜಕಾರಣ ಮಾಡುವವರು ಇದರ ಜವಾಬ್ದಾರಿ ಹೊತ್ತರಂತೂ ಕಥೆ ಮುಗಿದಂತೆಯೇ! ಟಿಪ್ಪೂ ಕನ್ನಡದ ಗೌರವದ ಸಂಕೇತವಾಗಿ ಅಲ್ಪ ಸ್ವಲ್ಪ ಜನರ ನಡುವೆ ಜೀವಂತವಾಗಿದ್ದ. ಮುಖ್ಯಮಂತ್ರಿಗಳು ಮುಸ್ಲೀಂ ಮತಗಳ ಸೆಳೆಯಲು ಟಿಪ್ಪೂ ಜಯಂತಿ ಶುರು ಮಾಡಿದರು ನೋಡಿ ಈಗಾತ ಮುಸಲ್ಮಾನರ ನಾಯಕನಾಗಿ ಬಿಂಬಿತವಾಗತೊಡಗಿದ. ಆತನ ವಿರೋಧಕ್ಕೆಂದೇ ಒಂದಷ್ಟು ಜನ ಸಿದ್ಧವಾದರು. ಇನ್ನೂ ಕೆಲವು ವರ್ಷಗಳ ನಂತರ ಆತನನ್ನು ಹೊತ್ತು ಮೆರೆಸುವವರೂ ಆಚರಣೆ ನಿಲ್ಲಿಸಿಬಿಟ್ಟರೆಂದರೆ ಟಿಪ್ಪೂ ಕಥೆ ಮುಗಿಸಿಬಿಟ್ಟಂತೆ!! ಈ ಹಿನ್ನೆಲೆಯಲ್ಲಿ ತಾವು ಜಯಂತಿ ಆಚರಿಸದೇ ವಿವೇಕಾನಂದರನ್ನು ಕನ್ನಡಿಗರ ನಡುವೆ ಜೀವಂತವಾಗಿರಿಸಲು ಸಹಕರಿಸಿದ ಮುಖ್ಯಮಂತ್ರಿಗಳಿಗೆ ಹೇಗೆ ಧನ್ಯವಾದ ಹೇಳುವುದೋ ತಿಳಿಯದಾಗಿದೆ. ಈಗಂತೂ ಜಯಂತಿಯ ಆಚರಣೆಗಳು ರಜೆ ನೀಡುವುದಕ್ಕೆ ಸೀಮಿತವಾಗಿಬಿಟ್ಟಿವೆ. ಯಾವುದಾದರೂ ಜಾತಿಯ ಸಂಘಟನೆಗಳು ತಮ್ಮ ನಾಯಕರ ಜಯಂತಿ ಆಚರಣೆಗೆ ಸಕರ್ಾರೀ ರೂಪ ಬಯಸುವುದಾದರೆ ಒಂದು ಗಂಟೆ ಅವರ ವಿಚಾರಧಾರೆ ಚರ್ಚಿಸಬೇಕೆಂದೋ ಅಥವಾ ಒಂದು ಗಂಟೆ ಹೆಚ್ಚು ಕೆಲಸ ಮಾಡಬೇಕೆಂದೋ ಆಗ್ರಹ ಮಾಡಬೇಕೇ ಹೊರತು ರಜೆ ಕೊಡಿರೆಂದು ಅಲ್ಲ. ಕನಸಿನ ಕರ್ನಾಟಕದ ಮೊದಲ ನಿರ್ಣಯ ಇದೇ ಆಗಿರಬೇಕೆಂದು ನನ್ನ ಅಭಿಪ್ರಾಯ.
ಒಂದೆಡೆ ಮುಖ್ಯಮಂತ್ರಿಗಳು ವಿವೇಕಾನಂದರ ಜಯಂತಿಯನ್ನು ಅಸಡ್ಡೆಯಿಂದ ಕಂಡು ನಾಡಿನ ತರುಣರಿಗೆ ಅವಮಾನ ಮಾಡಿದರೆ ಅತ್ತ ಬೆಳಗಾವಿಯ ಮುಗಳಖೋಡದಲ್ಲಿ, ಪರಮ ಪೂಜ್ಯ ಮುರುಘರಾಜೇಂದ್ರ ಸ್ವಾಮಿಗಳು ಹತ್ತು ಸಾವಿರ ತರುಣರನ್ನು ವಿವೇಕಾನಂದರ ರೂಪಧಾರಿಗಳಾಗಿಸುವ ಸಂಕಲ್ಪ ಹೊತ್ತಿದ್ದರು. ನೆನಪಿಡಿ, ಹತ್ತು ಸಾವಿರ! ಮೊದಲಿಗೆ ಅಷ್ಟು ಜನರನ್ನು ಭೇಟಿ ಮಾಡಬೇಕು, ಅವರನ್ನು ಕಾರ್ಯಕ್ರಮದತ್ತ ಭಿನ್ನ ಭಿನ್ನ ಗಾಡಿಗಳಲ್ಲಿ ತರಬೇಕು, ಅವರಿಗಾಗಿ ಬಟ್ಟೆ ತರಬೇಕು, ಅದನ್ನು ತೊಡಿಸಬೇಕು. ವಿವೇಕಾನಂದರಂತೆ ಪೇಟ ತೊಡಿಸಬೇಕು, ಅವರಿಗೆ ಕುಳಿತಲ್ಲೇ ನೀರು, ಊಟ ತಲುಪಿಸಬೇಕು. ಓಹ್ ಎಲ್ಲವೂ ಸಾಹಸವೇ. ಆದರೆ ತೊಟ್ಟ ಸಂಕಲ್ಪವನ್ನು ಬಿಡದೇ ಸಾಧಿಸುವ ದಾಖಲೆಯಿರುವ ಮುಗಳಖೋಡ ಮಠ ಇದನ್ನು ಲೀಲಾಜಾಲವಾಗಿ ನಿಭಾಯಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಒಂದು ಲಕ್ಷ ಮೀಟರ್ ಬಟ್ಟೆಗೆ ಹೇಳಿಯಾಯ್ತು. ಪೇಟ ಕಟ್ಟುವವರಿಗಾಗಿ ಹುಡುಕಾಟ ಶುರುವಾಗಿತ್ತು. ಅತ್ತ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳನ್ನು ನೋಂದಾಯಿಸುವ ಕೆಲಸವೂ ಭರದಿಂದ ಸಾಗಿತು. ನೋಂದಣಿ ಎಂದರೆ ಸುಮ್ಮನೆ ಹೆಸರು ಬರಕೊಂಡು ಬಂದು ಬಿಡುವುದಲ್ಲ; ವಿದ್ಯಾಥರ್ಿಗಳ ಸಹಮತಿ ಪತ್ರ ಪಡೆದು ಅವರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಭಾವಚಿತ್ರಗಳನ್ನೊಳಗೊಂಡ ಪತ್ರಕ ತಯಾರು ಮಾಡಿಕೊಳ್ಳುವುದು. ಅದನ್ನು ಕಂಪ್ಯೂಟರ್ಗೆ ಅಳವಡಿಸಿ ಬಾರ್ಕೋಡ್ ತಯಾರು ಮಾಡಿ ವೈಯಕ್ತಿಕವಾದ ಗುರುತಿನ ಚೀಟಿ ತಯಾರಿಸುವುದು. ಹತ್ತಾರು ಕಾರ್ಯಕರ್ತರು ದಿನ ರಾತ್ರಿಗಳೆನ್ನದೇ ದುಡಿಯಲಾರಂಭಿಸಿದರು. ಹಳ್ಳಿಗಳ ತರುಣ ಸಂಘಟನೆಗಳನ್ನು ಭೇಟಿ ಮಾಡಿ ಅವರನ್ನೂ ಈ ಕಾರ್ಯಕ್ಕೆ ಜೋಡಿಸಿಕೊಳ್ಳುವ ಪ್ರಯಾಸ ಶುರುವಾಗಿತ್ತು. ಹದಿನೈದರಿಂದ ಮುವ್ವತ್ತೊಂಭತ್ತರ ನಡುವೆ ಇರುವ ತರುಣರನ್ನೆಲ್ಲ ರೂಪಧಾರಿಗಳಾಗಿಸುವ ಸಂಕಲ್ಪ ಕೈಗೊಳ್ಳಲಾಗಿತ್ತು. ಸ್ವಾಮಿ ವಿವೇಕಾನಂದರು ಬದುಕಿದ್ದು ಮುವ್ವತ್ತೊಂಬತ್ತೇ ವರ್ಷವಾದ್ದರಿಂದ ಈ ನಿಯಮ! ಹತ್ತು ಸಾವಿರ ಸಂಖ್ಯೆ ತಲುಪುವುದು ಸುಲಭದ ಸಂಗತಿಯಾಗಿರಲಿಲ್ಲ. ಅಷ್ಟು ಜನರನ್ನು ಕಾರ್ಯಕ್ರಮವೊಂದಕ್ಕೆ ಕರೆತರಲು ಹೆಣಗಾಡುವ ರಾಜಕೀಯ ಪಕ್ಷಗಳಿವೆ ಅಂದಮೇಲೆ ಅಷ್ಟು ಜನರನ್ನು ವಿವೇಕಾನಂದರ ರೂಪಧಾರಿಗಳಾಗಿಸಲು ಪ್ರೇರೇಪಿಸಿ ಕರೆತರುವುದು ಹೆಚ್ಚು ಕಡಿಮೆ ಅಸಾಧ್ಯವೇ ಆಗಿತ್ತು. ಹಳ್ಳಿಗರಲ್ಲಿ ಮನೆ ಮಾಡಿರುವ ಸನ್ಯಾಸಿಯ ವೇಷ ಧರಿಸುವುದು ಸಲ್ಲದೆಂಬ ಮೌಢ್ಯವನ್ನು ಎದುರಿಸಿ ನಿಂತು ಈ ಕೆಲಸ ಮಾಡಬೇಕಿತ್ತು. ನಿಧಾನವಾಗಿ ಒಂದು ವಾತಾವರಣ ರೂಪುಗೊಳ್ಳತೊಡಗಿತು. ನೋಂದಣಿಯಾಗುವವರ ಸಂಖ್ಯೆ ವಿರಾಟ್ ಕೊಹ್ಲಿಯ ಶತಕಗಳಂತೆ ಏರತೊಡಗಿತು. ಮೂರು, ಐದು, ಎಂಟು, ಹತ್ತು ಕೊನೆಗೆ ಹದಿನಾರು ಸಾವಿರಕ್ಕೇರಿತು ಆಕಾಂಕ್ಷೆ ಹೊಂದಿದ ವಿದ್ಯಾಥರ್ಿಗಳ ಸಂಖ್ಯೆ. ಒಂದು ಹಂತದಲ್ಲಿ ಇನ್ನು ನೋಂದಣಿ ಇಲ್ಲವೆಂದು ಖಡಾಖಂಡಿತವಾಗಿ ಹೇಳಲಾಯ್ತು. ಆಗಲೇ ಅವರಿವರ ಪ್ರಭಾವ ಬಳಸಿ ನೋಂದಣಿಗೆ ಬೇಡಿಕೊಳ್ಳುವವರ ಸಂಖ್ಯೆ ಹೆಚ್ಚಿದ್ದು. ಬಿಸಿ ಅದಾಗಲೇ ಶುರುವಾಗಿತ್ತು.
ಹಾಗಂತ ಇದನ್ನು ವೇಷ ಧಾರಣೆಗೆ ಸೀಮಿತಗೊಳಿಸುವ ಬಯಕೆ ಯಾರಿಗೂ ಇರಲಿಲ್ಲ. ಸ್ವಾಮಿಜಿಯವರ ಸಂಕಲ್ಪ ವಿವೇಕ ಆವಾಹನೆಯದ್ದಾಗಿತ್ತು. ಅದಕ್ಕೇ ವಿವೇಕಾನಂದರ ವಿಚಾರಧಾರೆಯನ್ನು ಮುಟ್ಟಿಸುವ ಅದನ್ನು ಸಾರ್ವಜನಿಕರ ಮನದಲ್ಲಿ ಇಂಗುವಂತೆ ಮಾಡುವ ಜವಾಬ್ದಾರಿ ಎಲ್ಲರಿಗೂ ಇದ್ದೇ ಇತ್ತು. ಅದಕ್ಕೇ ಆಸುಪಾಸಿನ ಊರೂರಲ್ಲಿ ವಿವೇಕಾನಂದರ ವಿಡಿಯೋ ಪ್ರದರ್ಶನ ಮಾಡಲಾಯ್ತು. ಅದು ಸಾಲದೆಂದು ಪಂಜಿನ ಮೆರವಣಿಗೆಗಳನ್ನು ಆಯೋಜಿಸಿ ಅದನ್ನೂ ಕಾರ್ಯಕ್ರಮದ ಮತ್ತು ವಿವೇಕಾನಂದರ ವಿಚಾರಧಾರೆಯ ಪ್ರಚಾರಕ್ಕೆಂದು ಬಳಸಿಕೊಳ್ಳಲಾಯ್ತು. ಕೆಲವು ಹಳ್ಳಿಗಳಲ್ಲಿ ಈ ಕಾರ್ಯಕ್ರಮಕ್ಕೇ ಸಾವಿರಾರು ಜನ ಸೇರಿ ಅಚ್ಚರಿಯನ್ನು ಮೂಡಿಸಿದ್ದರು. ಇದು ಬರಲಿರುವ ಕಾರ್ಯಕ್ರಮದ ಕುರಿತಂತೆ ಹೆದರಿಕೆಯನ್ನು ಹುಟ್ಟಿಸಲು ಖಂಡಿತ ಸಾಕಿತ್ತು.
26167926_1517588461672476_5143483554730776351_n
26219821_1518683241562998_8529231709025839884_n 26229448_1523682664396389_3687073986952290079_n 26230199_1523682607729728_3463809722017575895_n
ಇತ್ತ ವೇದಿಕೆಯ ತಯಾರಿಯೂ ಭರ್ಜರಿಯಾಗಿ ನಡೆದಿತ್ತು. ಐವತ್ತು ಸಾವಿರ ಜನ ಕುಳಿತು ವೀಕ್ಷಿಸಬಲ್ಲ ಭರ್ಜರಿ ವೇದಿಕೆ, ಹತ್ತು ಸಾವಿರ ಜನ ರೂಪಧಾರಿಗಳು ನಿಲ್ಲಬಲ್ಲ ವ್ಯವಸ್ಥೆ. ಸೆಖೆಯನ್ನು ಕಡಿಮೆ ಮಾಡಲೆಂದೇ ಗಿರಗಿರ ಸುತ್ತುವ ಫ್ಯಾನುಗಳು ಓಹ್ ಅದೊಂದು ಸ್ವಗರ್ಾನುಭೂತಿ. ಮುಂಚಿನ ಕೆಲವು ದಿನಗಳ ಕಾಲ ಈ ಕಾರ್ಯಕ್ರಮವನ್ನು ಹೆಗಲ ಮೇಲೆ ಹೊತ್ತು ಮೆರೆಸುತ್ತಿದ್ದ ತರುಣರಿಗೆ ಕೈತುಂಬಾ ಕೆಲಸ. ಬರುತ್ತೇವೆಂದು ಹೇಳಿದ್ದ ಹಳ್ಳಿಗರನ್ನು ಮತ್ತೊಮ್ಮೆ ಮಾತಾಡಿಸಬೇಕು, ಅವರ ಆಗಮನವನ್ನು ಖಾತ್ರಿಪಡಿಸಿಕೊಳ್ಳಬೇಕು. ಇತ್ತ ಅವರಿಗೆ ಕೊಡಬೇಕಾದ ಗುರುತಿನ ಚೀಟಿಗಳನ್ನು ಸಿದ್ಧ ಮಾಡಿಕೊಳ್ಳಬೇಕು. ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆಗಳಿಗೆ ಭಂಗಬರದಂತೆ ನೋಡಿಕೊಳ್ಳಬೇಕು. ಬಂದ ಮಕ್ಕಳಿಗೆ ಚಾಕಲೇಟು ಹಂಚಬೇಕು; ಬೇಗ ಬಂದವರಿಗೆ ತಿಂಡಿಯೂ ಕೊಡಬೇಕು. ಎಲ್ಲಕ್ಕೂ ಮಿಗಿಲಾಗಿ ಹತ್ತು ಸಾವಿರ ಜನರನ್ನು ಸಾಲಾಗಿ ನಿಲ್ಲಿಸಬೇಕು, ಇದು ಜಾಗತಿಕ ದಾಖಲೆಯಾಗಬೇಕಿರುವುದರಿಂದ ಬಂದಿರುವ ನಿಣರ್ಾಯಕರು ಹೇಳುವ ನಿಯಮಗಳನ್ನು ಪೂರೈಸಬೇಕು. ಫುಟ್ ಕೌಂಟ್ ಮಶೀನು, ಬಾರ್ ಕೋಡ್ ಸ್ಕ್ಯಾನರ್ಗಳಲ್ಲಿ ಕೆಲಸ ಮಾಡುವಂತೆ ತರುಣರನ್ನು ಸಿದ್ಧಪಡಿಸಬೇಕು. ಮಕ್ಕಳನ್ನು ಹೊತ್ತು ತರುವ ನೂರಾರು ಬಸ್ಗಳ ಪಾಕರ್ಿಂಗ್ ವ್ಯವಸ್ಥೆಗೆ ನಿಲ್ಲಬೇಕು. ಎದೆ ಬಡಿತ ಜೋರಾಗುವ ಹೊತ್ತು ಅದು.
26233499_1926492990697431_2702177913764986527_o
26240226_1926490574031006_9034978466952276124_o
26685134_1926490560697674_7905718788882304755_o
ಜನವರಿ ಹನ್ನೆರಡರ ಬೆಳಗ್ಗೆ ಒಂಭತ್ತು ಗಂಟೆಯ ವೇಳೆಗೆ ಬಸ್ಸುಗಳು ಬರಲಾರಂಭಿಸಿದವು. ಏಶಿಯ ಬುಕ್ ಆಫ್ ರೆಕಾಡ್ಸರ್್, ಇಂಡಿಯಾ ಬುಕ್ ಆಫ್ ರೆಕಾಡ್ಸರ್್ ಮತ್ತು ಗೋಲ್ಡನ್ ಬುಕ್ ಆಫ್ ರೆಕಾಡ್ಸರ್್ನ ತೀಪರ್ುಗಾರರು ಬರಲು ಸ್ವಲ್ಪ ತಡಮಾಡಿದ್ದು ಎಲ್ಲ ಎಡವಟ್ಟುಗಳಿಗೂ ಕಾರಣವಾಗಿಬಿಡ್ತು. ಅವರೆದುರಿಗೆ ಫುಟ್ಕೌಂಟ್ ಶುರುವಾಗಬೇಕಾದ್ದರಿಂದ ಹೊರಗೆ ಕಾಯುತ್ತಿದ್ದ ತರುಣರನ್ನು ಒಳಬಿಡುವಂತಿರಲಿಲ್ಲ. ಹತ್ತುಗಂಟೆಗೆ ಎಲ್ಲ ಸಮಸ್ಯೆ ತೀರಿ ಮೊದಲ ಹುಡುಗನನ್ನು ಒಳಬಿಡುವಾಗಾಗಲೇ ಹೊರಗೆ ಐದು ಸಾವಿರಕ್ಕೂ ಹೆಚ್ಚು ಜನ ಸೇರಿಯಾಗಿತ್ತು. ಐದು ಸಾವಿರ ಹತ್ತಾಗಲು ಬಹಳ ಹೊತ್ತು ಹಿಡಿಯಲಿಲ್ಲ. ಅದು ನೋಡನೋಡುತ್ತಲೇ ಹದಿನೈದಾಯ್ತು. ರೆಜಿಸ್ಟ್ರೇಶನ್ ಕೌಂಟರಿನಲ್ಲಿ ವ್ಯವಸ್ಥೆ ಮುರಿದು ಬಿತ್ತು. ಬಂದ ಪ್ರತಿಯೊಬ್ಬರಿಗೂ ವಿವೇಕಾನಂದರ ರೂಪಧಾರಿಗಳಾಗುವ ಹುಚ್ಚು ಆವರಿಸಿಕೊಂಡುಬಿಟ್ಟಿತ್ತು. ನಿಜಕ್ಕೂ ಬಲು ದೊಡ್ಡ ಸವಾಲು. ಪ್ರೀತಿಯ ಮಾತುಗಳು, ಕೋಪಾವೇಶ, ಪೊಲೀಸರ ಲಾಠಿ ದರ್ಶನ ಎಲ್ಲವೂ ಆಯ್ತು. ಸಮಸ್ಯೆಗಳು ಎದುರಾದಾಗಲೇ ಪರಿಹಾರಕ್ಕೆ ಹುಡುಕಾಟ ಶುರುವಾಗೋದು. ಅಲ್ಲಲ್ಲಿ ನಿಂತ ತರುಣರೇ ತಂತಮ್ಮ ಮಟ್ಟದ ಪರಿಹಾರಗಳನ್ನು ಹುಡುಕಿಕೊಂಡರು. ಒಂದಿಡೀ ವಿಸ್ತಾರದ ತಾತ್ಕಾಲಿಕ ಕೋಣೆಯಲ್ಲಿ ನೂರಿಪ್ಪತ್ತು ಜನ ಕಾರ್ಯಕರ್ತರು ಒಳಬಂದವರಿಗೆ ಪಂಚೆಯುಡಿಸಿ, ಶಲ್ಯ ಹಾಕಿಸಲಾರಂಭಿಸಿದರು. ಅಲ್ಲಿಂದಲೂ ಒಳದಾಟಿ ಬಂದವರಿಗೆ ಪೇಟ ತೊಡಿಸುವ ಕಾರ್ಯ ಆರಂಭವಾಯಿತು. ನೋಡನೋಡುತ್ತಲೇ ಕೇಸರೀ ಪಡೆ ಸಭಾಂಗಣವನ್ನು ಆವರಿಸಿಕೊಳ್ಳುತ್ತ ಹೋಯ್ತು. ಮೊದಲ ಅರ್ಧ ಗಂಟೆಯಲ್ಲಿ ಒಂದು ಸಾವಿರ ಜನರು ರೂಪಧಾರಿಗಳಾಗಿದ್ದರು. ಇದೇ ವೇಗದಲ್ಲಿ ನಡೆದರೆ ಕನಿಷ್ಠ ಐದು ಗಂಟೆ ಬೇಕು. ಅದರರ್ಥ ಮೊದಲು ಬಂದು ಕುಳಿತವ ಐದೈದು ಗಂಟೆ ಹಾಗೆಯೇ ಕುಳಿತಿರಬೇಕು. ಅವರನ್ನು ಸಮಾಧಾನವಾಗಿರಿಸಲು ವೇದಿಕೆಯ ಮೇಲೆ ಕಾರ್ಯಕ್ರಮಗಳು ಶುರುವಾದವು. ಸ್ಥಳೀಯ ಕಲಾವಿದರು ತಮ್ಮ ಗಾಯನದಿಂದ ಅವರನ್ನು ರಂಜಿಸಿದರು. ಬೆಂಗಳೂರಿನಿಂದ ಬಂದಿದ್ದ ಪೃಥ್ವೀಶ್ ರೂಬಿ ಕ್ಯೂಬ್ ಬಳಸಿ ವಿವೇಕಾನಂದರ ಚಿತ್ರವನ್ನು ರೂಪಿಸಿದ್ದು ಅಪರೂಪದ್ದಾಗಿತ್ತು. ಮಧ್ಯಾನ್ಹ ಎರಡೂವರೆಯ ವೇಳೆಗೆ ಹತ್ತು ಸಾವಿರದ ಸಂಖ್ಯೆಯನ್ನು ದಾಟಿ ವಿವೇಕ ವೇಷಧಾರಿಗಳು ಸಭಾಂಗಣದಲ್ಲೆಲ್ಲ ಕೇಸರೀ ಪಡೆಯಾಗಿ ರಾರಾಜಿಸಿದರು. ಆಗಾಗ ಅವರು ಹೇಳುತ್ತಿದ್ದ ವಿವೇಕಾನಂದರ ಮಾತುಗಳು, ಕೂಗುತ್ತಿದ್ದ ಘೋಷಣೆಗಳು ಅಲ್ಲೊಂದು ರುದ್ರ ಭಯಂಕರ ವಾತಾವರಣವನ್ನೇ ಸೃಷ್ಟಿಸಿಬಿಟ್ಟಿತ್ತು. ಎರಡೂವರೆಗೆ ಆ ಮಕ್ಕಳ ತಲೆಯಮೇಲೆ ಹಾದು ಹೋದ ಡ್ರೋನ್ಗಳು ದಾಖಲೆಗೆ ಬೇಕಾದ ಎಲ್ಲ ಆವಶ್ಯಕತೆಗಳನ್ನೂ ಪೂರೈಸಿದ್ದವು.
26685147_1926498454030218_135384875813255117_o
ಸಹಸ್ರ ಸಹಸ್ರ ಸಂಖ್ಯೆಯ ವಿವೇಕಾನಂದರನ್ನು ನೋಡುವ ಭಾಗ್ಯ ನೆರೆದಿದ್ದವರಲ್ಲೆಲ್ಲ ಆನಂದದ ಹೊನಲನ್ನು ಹರಿಸಿತ್ತು. ವೇದಿಕೆಯ ಮೇಲೆ ನಿಂತು ನೋಡುತ್ತಿದ್ದವರಂತೂ ಮೈಮರೆತುಬಿಟ್ಟಿದ್ದರು. ಇಂತಹುದೊಂದು ವಿಶಾಲ ಸಂಕಲ್ಪಗೈದಿದ್ದ ಮುಗಳಖೋಡದ ಸ್ವಾಮಿಗಳಂತೂ ವಿವೇಕಾನಂದರ ಭಾವದೊಳಗೆ ಮೈಮರೆತಿದ್ದರು. ವಿವೇಕಾನಂದರೇ ಸ್ಥಾಪಿಸಿದ ಅದ್ವೈತಾಶ್ರಮದ ಈಗಿನ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜೀ ಕುಂಭಮೇಳದ ನಂತರ ಕಂಡುಬಂದ ಶ್ರೇಷ್ಠ ದೃಶ್ಯವಿದೆಂದು ಉದ್ಗರಿಸಿದರು. ಸಹಜವಾಗಿಯೇ ‘ವಿವೇಕ ಕುಂಭ’ವೆಂದು ಈ ಕಾರ್ಯಕ್ರಮಕ್ಕೆ ಹೊಸದಾಗಿ ನಾಮಕರಣವಾಯ್ತು.
ಸ್ವಾಮಿ ವಿವೇಕಾನಂದರು ಹೇಳುತ್ತಾರಲ್ಲ, ಇಂಪಾದ ನಾದವ ಕೇಳಿ, ಕೇಳಿ ತರುಣ ವರ್ಗ ಮಲಗಿಬಿಟ್ಟಿದೆ ಅವರನ್ನು ಜಾಗೃತಗೊಳಿಸಲು ಭೇರಿ-ನಗಾರಿಗಳೇ ಬೇಕಿದೆ ಅಂತ. ಅದನ್ನು ಸಾಕಾರಗೊಳಿಸಲೆಂದೇ 880ಕ್ಕೂ ಹೆಚ್ಚು ದೇಸೀ ವಾದ್ಯಗಳು ಭರ್ಜರಿ ಸದ್ದಿಗೆ ಸಿದ್ಧವಾಗಿ ನಿಂತಿದ್ದವು. ಒಂದೊಂದೂ ವಾದ್ಯವೂ ನೂರುನೂರು ಸಂಖ್ಯೆಯಲ್ಲಿ ನೆರೆದಿದ್ದವು. ಅಷ್ಟೂ ಏಕಕಾಲದಲ್ಲಿ ಮೊಳಗಿದಾಗ ವೇದಿಕೆಯೆಲ್ಲ ಒಮ್ಮೆ ಅಲುಗಾಡಿದಂತಹ ಅನುಭವ! ನರೇಂದ್ರ ಮೋದಿ ಆನಂತರ ಮಾತನಾಡಿ ಅರ್ಧ ಗಂಟೆಯಲ್ಲಿ ನಾಡಿಗೆ ಬೇಕಾದ ಎಲ್ಲ ಸಂದೇಶವನ್ನೂ ಕೊಟ್ಟರು. ಸ್ವತಃ ಶ್ರೀಮಠಕ್ಕೂ ಸಾಗಬೇಕಾದ ಮುಂದಿನ ದಾರಿಯ ಕುರಿತಂತೆ ಸೂಕ್ಷ್ಮವಾಗಿ ತಿಳಿಹೇಳಿ ವಿವೇಕಾನಂದರ ಸಂದೇಶ ಸಮರ್ಥವಾಗಿ ಮುಟ್ಟುವ ಕುರಿತಂತೆ ಎಚ್ಚರಿಕೆ ವಹಿಸಿದರು. ನಾಯಕನ ರೀತಿಯೇ ಅದು. ಮಹಾಪುರುಷರನ್ನು ವೋಟಿಗಾಗಿ ಬಳಸುವುದಲ್ಲ ಬದಲಿಗೆ ಅವರ ವಿಚಾರ ಧಾರೆಯನ್ನು ರಾಷ್ಟ್ರ ನಿಮರ್ಾಣಕ್ಕಾಗಿ ಬಳಸುವುದು. ಸಿದ್ದರಾಮಯ್ಯನವರು ಇದನ್ನು ಅರಿಯೋದು ಯಾವಾಗ? ವಿವೇಕಾನಂದರ ಜಯಂತಿ ಮಾಡದೇ ತಾವು ಹಿಂದೂಗಳ ವಿರುದ್ಧದ ಸೇಡನ್ನು ತೀರಿಸಿಕೊಂಡಿದ್ದೇವೆಂದು ಭಾವಿಸಿರಬಹುದು ಆದರೆ ನರೇಂದ್ರ ಮೋದಿ ತಮ್ಮ ಮಾತುಗಳ ಮೂಲಕ ವಿವೇಕಾನಂದರ ಜಯಂತಿಯಂದು ನೆರೆದಿದ್ದ ಸಾವಿರಾರು ಜನರಿಗೆ ಪ್ರೇರಣೆ ನೀಡಿದರು. ಅವರ ಅರ್ಧ ಗಂಟೆಯ ಭಾಷಣದ ಪರಿಣಾಮವದೇನು ಗೊತ್ತೇ? ಮರುದಿನವೇ ಮುಗಳಖೋಡದ ಸ್ವಾಮೀಜಿ ಐದು ಗ್ರಾಮಗಳನ್ನು ಸ್ಮಾಟರ್್ವಿಲೇಜ್ ಆಗಿಸುವ ಸಂಕಲ್ಪ ಘೋಷಿಸಿಯೇ ಬಿಟ್ಟರು. ಸ್ಮಾಟರ್್ ವಿಲೇಜ್ ಆಗುವುದೆಂದರೆ ಹಳ್ಳಿಗಳು ಬಯಲು ಶೌಚಾಲಯ ಮುಕ್ತವಾಗೋದು, ಹೊಗೆ ರಹಿತವಾಗೋದು, ಮೂಲ ಸೌಕರ್ಯಗಳಲ್ಲಿ ಪಟ್ಟಣಗಳಿಗೆ ಸರಿಸಮವಾಗೋದು. ಪಾನ ಮುಕ್ತವಾಗೋದು, ಹೆಣ್ಣುಮಕ್ಕಳು ಸಶಕ್ತರಾಗೋದು, ರೈತ ಸ್ವಾವಲಂಬಿಯಾಗೋದು, ತರುಣ ಭಾಗ್ಯಗಳಿಗೆ ಕೈಚಾಚದೇ ಕೈತುಂಬಾ ಉದ್ಯೋಗ ಹೊಂದುವುದು ಮತ್ತು ಹಳ್ಳಿಗಳು ಡಿಜಿಟೈಸ್ ಆಗೋದು. ಒಟ್ಟಾರೆ ಹಳ್ಳಿಗಳ ಜನ ಪಟ್ಟಣಕ್ಕೆ ಬರುವ ಅಗತ್ಯವಿಲ್ಲದೇ ತಂತಮ್ಮ ಹಳ್ಳಿಗಳಲ್ಲೇ ಆನಂದದಿಂದಿರೋದು ಅಷ್ಟೇ.
26678340_1926492674030796_8130641883681752448_o
26240209_1926497254030338_7838457543984838003_o
26240219_1926492084030855_8206955129635093281_o

ಸಾವಿರಾರು ವಿವೇಕಾನಂದರ ಸಮ್ಮುಖದಲ್ಲಿ ಮಾತನಾಡಿದ ಕೆಲವೇ ನಿಮಿಷಗಳಲ್ಲಿ ನರೇಂದ್ರ ಮೋದಿಯವರು ಸಿದ್ದರಾಮಯ್ಯನವರು ಐದು ವರ್ಷಗಳಲ್ಲಿ ಮಾಡಲಾಗದ್ದನ್ನು ಮಾಡಿ ತೋರಿಸಿಬಿಟ್ಟರು. ಪ್ರಧಾನಮಂತ್ರಿಯವರಿಗೆ ಚೆನ್ನಾಗಿ ಗೊತ್ತು ಹತ್ತು ಸಾವಿರ ವಿವೇಕಾನಂದ ರೂಪಧಾರಿಗಳನ್ನು ನಿಮರ್ಿಸುವ ಸಂಕಲ್ಪ ಹೊತ್ತ ಸಂತ ಮನಸು ಮಾಡಿದರೆ ಜನ ಜೀವನವನ್ನೇ ಬದಲಾಯಿಸಬಲ್ಲ ಅಂತ! ನಮಗೆ ಅರಿವಿಲ್ಲದೇ ವಿವೇಕ ಕುಂಭದಲ್ಲಿ ನನ್ನ ಕನಸಿನ ಕರ್ನಾಟಕ ಮೈದಳೆದಿತ್ತು!

26758410_1926491230697607_6203786406094335704_o
Leave a Reply

Your email address will not be published. Required fields are marked *

You May Also Like

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಮತ್ತೊಮ್ಮೆ ದಿಗ್ವಿಜಯ

ಚಿಕಾಗೋ ಸರ್ವಧರ್ಮ ಸಮ್ಮೇಳನ ಎಂದೊಡನೆ ನೆನಪಾಗೋದು ನಿಸ್ಸಂಶಯವಾಗಿ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರೇ. ಇದೆ ಸಮ್ಮೇಳನದಲ್ಲಿಯೇ ಸ್ವಾಮೀಜಿ ಸನಾತನ ಧರ್ಮವನ್ನ ಜಗತ್ತಿನ ಮುಂದೆ ಎತ್ತಿ ಹಿಡಿದಿದ್ದು. ಸರ್ವಧರ್ಮ ಸಮ್ಮೇಳನಕ್ಕೆ ಹೊರಡುವ ಮೊದಲೇ ಆ ಸಮ್ಮೇಳನ ತನಗಾಗೇ ಆಗುತ್ತಿರುವುದೆಂದಿದ್ದರು ಸ್ವಾಮೀಜಿ. ಆದರೆ ತ್ಯಾಗ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘುಸಾಹಿತ್ಯ ಸಮ್ಮೇಳನ – ವಿಜಯಪುರ

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತೆ ರಾಜ್ಯಾದ್ಯಂತ ೧೫೦ ಲಘು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅಂದು ಮಾಡಿದ ಸಂಕಲ್ಪಕ್ಕೆ ಮೊದಲ ವೇದಿಕೆ ಸಜ್ಜುಗೊಳಿಸಿದ್ದು ಬೆಂಗಳೂರಿನ ವಿಜಯಪುರ‌.! ವಿವೇಕಾನಂದರು ಜಗತ್ತಿನಲ್ಲೆಲ್ಲ ಭಾರತದ ಪರಂಪರೆ ಶ್ರೇಷ್ಠತೆಯನ್ನು ಮುಟ್ಟಿಸಿದರೆ, ನಿವೇದಿತಾ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘು ಸಾಹಿತ್ಯ ಸಮ್ಮೇಳನಗಳು

‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ. ಜಡವಾದುದನ್ನು ಆದರ್ಶವಾಗಿರಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀರ್ಣಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು.’ ಈ ಮಾತುಗಳು ವಿವೇಕಾನಂದರ ಮಾನಸ ಪುತ್ರಿ ಸೋದರಿ ನಿವೇದಿತಾಳದ್ದು. ಆಕೆಯ ಮಾತುಗಳೇ ಹಾಗೆ ಸದಾ ಬೆಂಕಿಯನ್ನುಗುಳುತ್ತಿದ್ದವು. ಆಕೆ…
View Post

SVANSS – ಬಳ್ಳಾರಿ/ಶಿವಮೊಗ್ಗ

ಸ್ವಾಮಿ ವಿವೇಕಾನಂದರ ಪ್ರಿಯ ಶಿಷ್ಯೆ ನಿವೇದಿತಾ ಅಕ್ಕನ ನೂರೈವತ್ತನೇ ಜಯಂತಿಯನ್ನು ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ಅತ್ಯಂತ ವಿಭಿನ್ನ ಮತ್ತು  ಅರ್ಥಪೂರ್ಣವಾಗಿ ಆಚರಿಸಬೇಕೆಂದು ಅದಾಗಲೇ ನಿರ್ಣಯಿಸಿಯಾಗಿತ್ತು. ಅದರ ಮೂರ್ತ ರೂಪವೇ ಈ ಸಾಹಿತ್ಯ ಸಮ್ಮೇಳನ. ಮಂಗಳೂರಿನಲ್ಲಿ ಉದ್ಘಾಟನೆಗೊಂಡ ಈ…
View Post

ಬಿಲೀಫ್ ಫೆಸ್ಟ್

ಆದರೆ, ಇಸ್ಲಾಮಿ ರಾಜ್ಯ ಸ್ಥಾಪನೆಯಾದಲ್ಲೆಲ್ಲಾ ಗೋಮಾಂಸ ಭಕ್ಷಣೆ ಆರಂಭವಾಗತೊಡಗಿತು. ಗೋಹತ್ಯೆ ಎಗ್ಗಿಲ್ಲದೇ ನಡೆಯತೊಡಗಿತು. ಬರು–ಬರುತ್ತಾ ಕಸಾಯಿಖಾನೆಗಳ ಮೂಲಕ ಗೋಹತ್ಯೆ ವ್ಯಾಪಕವಾಗತೊಡಗಿತು. ಗೋವು ನಮಗೆ ಮಾಂಸದ ಮೂಲಕ ಹಣ ತರುವ ವಸ್ತುವಾಯ್ತು. ಬಹುಸಂಖ್ಯಾತರ ಶ್ರದ್ಧೆಯ ಪ್ರತೀಕವಾದ ಗೋವಿನ ಸಂರಕ್ಷಣೆ ಮಾಡುವುದು ಅಷ್ಟೇ ಅಗತ್ಯ…
View Post