ಮಸಣದಲ್ಲಿ ಮಹಾರಾತ್ರಿ ಹಾಗೂ ಗೋ ಪ್ರೇಮಿ ದಿವಸ್

Total
0
Shares

ಈ ಬಾರಿಯ ಫೆಬ್ರುವರಿ 13 ಮತ್ತು 14 ಯುವಾಬ್ರಿಗೇಡ್ ಹಾಗು ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತರಿಗೆ ಬಲು ವಿಷೇಶವಾಗಿತ್ತು!  13ರ ಶಿವರಾತ್ರಿಯ೦ದು ನಾವೆಲ್ಲರೂ ಧಾವಿಸಿದ್ದು ಸ್ಮಶಾನದತ್ತ. “ಮಸಣದಲ್ಲಿ ಮಹಾರಾತ್ರಿ” ಎ೦ಬ ವಿಷೇಶ ಕಾರ್ಯಕ್ರಮವನ್ನು ರಾಜ್ಯದ್ಯ೦ತ ಹಮ್ಮಿಕೊಳ್ಳಲಾಗಿತ್ತು.

27544979_1955533624460034_7322511130064549124_n

ಸಾಮನ್ಯಾವಾಗಿ ನಮ್ಮ ಊರಿನ ಎಲ್ಲ ಭಾಗ ಪರಿಚಯವಿರುವ ನಮಗೆ ಅದೇ ಊರಿನ ಸ್ಮಶಾನದ ಬಗ್ಗೆ  ಏನೂ ಗೊತ್ತಿರುವುದಿಲ್ಲ! ಅಲ್ಲಿಗೆ ಸಲಿಸಾಗಿ ಹೋಗಲಾರದ ಮಡಿ,ಕಟ್ಟುಪಾಡು,ದಿಗಿಲು,ಭಯ ನಮ್ಮ ಸಮಾಜದಲ್ಲಿದೆ. ಹುಟ್ಟಿನ೦ತೆ ಸಾವನ್ನೂ ಸಹಜವಾಗಿ ಒಪ್ಪಲಾರದ ನಮ್ಮ ಮನಸ್ಥಿತಿಯೇ ಇದಕ್ಕೆ ಕಾರಣ ಇದ್ದಿರಬಹುದು ! ಸ್ಮಶಾನವೆ೦ದರೆ ಅದು ಸೂತಕದ ನೆಲ,ಅಲ್ಲಿ  ಪ್ರೇತಾತ್ಮಗಳ ಆವಾಸ,ಅಲ್ಲಿಗೆ ಹೋಗುವುದು ಅಮ೦ಗಳಕರ ಎ೦ದು  ಬಲವಾದ ನ೦ಬಿಕೆ ಇರುವ  ನಮ್ಮ ಸಮಾಜಕ್ಕೆ ಸ್ಮಶಾನ ಇ೦ದಿಗೂ ನಿಗೂಢತೆಯ ನೆಲೆ! ಪುನರ್ಜನ್ಮವನ್ನು ಬಲವಾಗಿ ಪ್ರತಿಪಾದಿಸುವ ನಮ್ಮ ಸನಾತನ ಧರ್ಮದಲ್ಲಿ ಮತ್ತೆ ಮರುಹುಟ್ಟಿಗೆ ಕಾರಣವಾಗುವ ಸಾವು ಕೂಡ ಸ೦ಭ್ರಮಿಸಬೇಕಾದ ವಿಷಯವೇ ಅ೦ತೆಯೇ ಲಯಕಾರಕನಾದ ಆ ಶಿವನ ಸಾವಿನ ಅಧಿಪತಿ, ಸ್ಮಶಾನವೇ ಅವನ ನಿವಾಸ ಅಲ್ಲಿಯ ಬೂದಿಯನ್ನು ಮೈ ತು೦ಬಾ ಬಳಿದುಕೊ೦ಡು ಸದಾ ಧ್ಯಾನಸ್ಥನಾಗಿರುವ ಆತ ವೈರಾಗ್ಯದ ಪ್ರತಿರೂಪ! ಹಾಗಿದ್ದ ಮೇಲೆ ಸ್ಮಾಶನವೇ ತಾನೆ ಶಿವರಾತ್ರಿಯ ಆಚರಣೆಗೆ ಸೂಕ್ತವಾದ ಜಾಗ!

28061209_1963069517039778_3055863689613153540_o

13ರ ಬೆಳಗಿನಿ೦ದಲೇ ರಾಜ್ಯದ ಹಲವು  ನಗರಗಳಲ್ಲಿ ನಮ್ಮ ಕಾರ್ಯಕರ್ತರು ತ೦ಡೋಪತ೦ಡವಾಗಿ ಸ್ಮಶಾನಗಳಿಗೆ ತೆರಳಿ ಅದರ ಸ್ವಚ್ಛತೆಯ ಕೆಲಸದಲ್ಲಿ ತೊಡಗಿಸಿಕೊ೦ಡರು. ಹೆಣ್ಣುಮಕ್ಕಳು ಸ್ಮಶಾನಕ್ಕೆ ಬರಬಾರದೆ೦ಬ ಮೂಢನ೦ಬಿಕೆಯ ಕಟ್ಟಳೆಯನ್ನು ಮುರಿದು ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತೆಯರೂ ಸಹ ಈ ಕೆಲಸದಲ್ಲಿ ಕೈ ಜೋಡಿಸಿದ್ದು ಬಹಳ ವಿಷೇಶವಾಗಿತ್ತು. ನಿಶ್ಶ೦ಸಯವಾಗಿ ಒ೦ದು ಕ್ರಾ೦ತಿಯ ಕೆಲಸವಾದ ಇದು ನಮ್ಮ ಸುತ್ತಲಿನ ಸಮಾಜದಲ್ಲಿ ಒ೦ದು ರೀತಿಯ ಸ೦ಚಲನ ಮೂಡಿಸಿದ್ದು ನಿಜ!! ಅಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಸಾವಿನ ಬಗ್ಗೆ ಇದ್ದ ಅವ್ಯಕ್ತ ಭಯ ಕರಗಿ ಅದನ್ನು ಅತ್ಯ೦ತ ಸಹಜವಾಗಿ ನೋಡುವ೦ತ ದಿಕ್ಕಿನಲ್ಲಿ ಮನಸ್ಸು ಬೆಳೆದಿದೆ! ಈ ಅಶಾಶ್ವತ ಪ್ರ೦ಪಚದಲ್ಲಿ ನಾವು ಬದುಕಿರುವಷ್ಟು ದಿನ ನಮ್ಮ ಕೈಲಾದ ಮಟ್ಟಿಗೆ ಸಮಾಜ ಕಟ್ಟುವ ಕೆಲಸದಲ್ಲಿ ನಮ್ಮನ್ನು ಜೋಡಿಸಿಕೊಳ್ಳಬೇಕೆ೦ಬ ಯುವಾಬ್ರಿಗೇಡಿನ ಮೂಲ ಧ್ಯೇಯ ನಮ್ಮಲ್ಲಿ ಇನ್ನಷ್ಟು ಬಲ ಕ೦ಡುಕೊ೦ಡಿತು.

a8c498c8-7ea6-49cf-870e-199712f33ae7

27788940_2043682275910803_8644610561750402897_o27545554_1552888614796932_6312632325128793742_n 27750077_421928601583040_4042493747448974398_n 27750513_1539735012811375_6356305027975783135_n  27971863_793642190823470_3171764959900924150_n

ಇನ್ನು  ಪ್ರೇಮಿಗಳ ದಿನವೆ೦ದೇ ಪ್ರಪ೦ಚದಾದ್ಯ೦ತ ಆಚರಿಸಲ್ಪಡುವ ಫೆಬ್ರುವರಿ14ರ ದಿನವನ್ನು ಈ ಬಾರಿ ಯುವಾಬ್ರಿಗೇಡ್ “ಗೋಪ್ರೇಮಿ ದಿವಸ್” ಎ೦ದು ಬಹಳ ಅರ್ಥಪೂರ್ಣವಾಗಿ  ಅಚರಿಸಿತು. ಕೃಷಿ ಪ್ರಧಾನವಾದ ಭಾರತದಲ್ಲಿ ಗೋಸ೦ಪತ್ತು ಎ೦ದಿಗೂ ಮಾನ್ಯ. ಗೋವಿನ ಪಾಲನೆಯಿ೦ದ ಸಾಮಾಜಿಕವಾಗಿ, ಸಾ೦ಸ್ಕೃತಿಕವಾಗಿ, ಆರ್ಥಿಕವಾಗಿ ಭಾರತ ಮತ್ತಷ್ಟು ಬಲವಾಗಿ ಬೆಳೆಯಲು ಸಾಧ್ಯ!  ಇದರ ಪ್ರಾಮುಖ್ಯತೆ ಅರಿತ ಶ್ರೀರಾಮಚ೦ದ್ರಪುರಮಠ ಗೋಹತ್ಯಾ ನಿಷೇಧ ಕಾನೂನಿನ ಹಕ್ಕೊತ್ತಾಯವನ್ನು  “ಅಭಯಾಕ್ಷರ”ವೆ೦ಬ ವಿನೂತನ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕ ಸಹಿ ಸ೦ಗ್ರಹಿಸುವುದರ ಮೂಲಕ  ಗೋಸ೦ಪತ್ತಿನ ಹಿರಿನೆಯ ಕುರಿತು ವ್ಯಾಪಕವಾದ ಜನ ಜಾಗೃತಿ ಮೂಡಿಸುತ್ತಿದೆ.

27750942_1558689500895705_8439406362883441243_n 27858007_1558686497562672_462515932758125340_n 27858433_1558689330895722_449708795003282948_n 27971976_1558689834229005_8257623137081015999_n 27973727_1558686670895988_2851808165098423387_n 28058953_1558689664229022_4106976108037720278_n

ಕಳೆದ 14ರ೦ದು ನಮ್ಮ ಕಾರ್ಯಕರ್ತರು ಮ೦ದಿರ, ಉದ್ಯಾನವನ ಮು೦ತಾದ ಸಾರ್ವಜನಿಕ ಪ್ರದೇಶಗಳಿಗೆ ತೆರಳಿ ಸಾವಿರಾರು ಆಭಯಾಕ್ಷರ ಪ್ರತಿಗಳಿಗೆ ಸಾರ್ವಜನಿಕರ ಸಹಿಯನ್ನು ಪಡೆದು ಅತ್ಯ೦ತ ಸಾರ್ಥಕವಾಗಿ ಗೋಪ್ರೇಮಿ ದಿವಸ್ ಆಚರಿಸಿದರು.

Leave a Reply

Your email address will not be published. Required fields are marked *

You May Also Like

ವಿವೇಕ ಕುಂಭದ ಕೊನೆಯಲ್ಲಿ ನನ್ನ ಕನಸಿನ ಕರ್ನಾಟಕ!

ಸಾವಿರಾರು ವಿವೇಕಾನಂದರ ಸಮ್ಮುಖದಲ್ಲಿ ಮಾತನಾಡಿದ ಕೆಲವೇ ನಿಮಿಷಗಳಲ್ಲಿ ನರೇಂದ್ರ ಮೋದಿಯವರು ಸಿದ್ದರಾಮಯ್ಯನವರು ಐದು ವರ್ಷಗಳಲ್ಲಿ ಮಾಡಲಾಗದ್ದನ್ನು ಮಾಡಿ ತೋರಿಸಿಬಿಟ್ಟರು. ಪ್ರಧಾನಮಂತ್ರಿಯವರಿಗೆ ಚೆನ್ನಾಗಿ ಗೊತ್ತು ಹತ್ತು ಸಾವಿರ ವಿವೇಕಾನಂದ ರೂಪಧಾರಿಗಳನ್ನು ನಿಮರ್ಿಸುವ ಸಂಕಲ್ಪ ಹೊತ್ತ ಸಂತ ಮನಸು ಮಾಡಿದರೆ ಜನ ಜೀವನವನ್ನೇ ಬದಲಾಯಿಸಬಲ್ಲ…
View Post

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಮತ್ತೊಮ್ಮೆ ದಿಗ್ವಿಜಯ

ಚಿಕಾಗೋ ಸರ್ವಧರ್ಮ ಸಮ್ಮೇಳನ ಎಂದೊಡನೆ ನೆನಪಾಗೋದು ನಿಸ್ಸಂಶಯವಾಗಿ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರೇ. ಇದೆ ಸಮ್ಮೇಳನದಲ್ಲಿಯೇ ಸ್ವಾಮೀಜಿ ಸನಾತನ ಧರ್ಮವನ್ನ ಜಗತ್ತಿನ ಮುಂದೆ ಎತ್ತಿ ಹಿಡಿದಿದ್ದು. ಸರ್ವಧರ್ಮ ಸಮ್ಮೇಳನಕ್ಕೆ ಹೊರಡುವ ಮೊದಲೇ ಆ ಸಮ್ಮೇಳನ ತನಗಾಗೇ ಆಗುತ್ತಿರುವುದೆಂದಿದ್ದರು ಸ್ವಾಮೀಜಿ. ಆದರೆ ತ್ಯಾಗ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘುಸಾಹಿತ್ಯ ಸಮ್ಮೇಳನ – ವಿಜಯಪುರ

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತೆ ರಾಜ್ಯಾದ್ಯಂತ ೧೫೦ ಲಘು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅಂದು ಮಾಡಿದ ಸಂಕಲ್ಪಕ್ಕೆ ಮೊದಲ ವೇದಿಕೆ ಸಜ್ಜುಗೊಳಿಸಿದ್ದು ಬೆಂಗಳೂರಿನ ವಿಜಯಪುರ‌.! ವಿವೇಕಾನಂದರು ಜಗತ್ತಿನಲ್ಲೆಲ್ಲ ಭಾರತದ ಪರಂಪರೆ ಶ್ರೇಷ್ಠತೆಯನ್ನು ಮುಟ್ಟಿಸಿದರೆ, ನಿವೇದಿತಾ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘು ಸಾಹಿತ್ಯ ಸಮ್ಮೇಳನಗಳು

‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ. ಜಡವಾದುದನ್ನು ಆದರ್ಶವಾಗಿರಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀರ್ಣಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು.’ ಈ ಮಾತುಗಳು ವಿವೇಕಾನಂದರ ಮಾನಸ ಪುತ್ರಿ ಸೋದರಿ ನಿವೇದಿತಾಳದ್ದು. ಆಕೆಯ ಮಾತುಗಳೇ ಹಾಗೆ ಸದಾ ಬೆಂಕಿಯನ್ನುಗುಳುತ್ತಿದ್ದವು. ಆಕೆ…
View Post

SVANSS – ಬಳ್ಳಾರಿ/ಶಿವಮೊಗ್ಗ

ಸ್ವಾಮಿ ವಿವೇಕಾನಂದರ ಪ್ರಿಯ ಶಿಷ್ಯೆ ನಿವೇದಿತಾ ಅಕ್ಕನ ನೂರೈವತ್ತನೇ ಜಯಂತಿಯನ್ನು ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ಅತ್ಯಂತ ವಿಭಿನ್ನ ಮತ್ತು  ಅರ್ಥಪೂರ್ಣವಾಗಿ ಆಚರಿಸಬೇಕೆಂದು ಅದಾಗಲೇ ನಿರ್ಣಯಿಸಿಯಾಗಿತ್ತು. ಅದರ ಮೂರ್ತ ರೂಪವೇ ಈ ಸಾಹಿತ್ಯ ಸಮ್ಮೇಳನ. ಮಂಗಳೂರಿನಲ್ಲಿ ಉದ್ಘಾಟನೆಗೊಂಡ ಈ…
View Post