ಕೆಲಸ ಮಾಡುವವನೆ ನೇತಾರ

Total
0
Shares

ಎಲ್ಲರಿಗೂ ಪ್ರೀತಿಯ ನಮಸ್ಕಾರ,

ಯುವಾಬ್ರಿಗೇಡ್ ಆಟೋಗ್ರಾಫ್ ಈ ಬಾರಿ ತಡವಾಗಿ ನಿಮ್ಮ ಕೈಲಿದೆ. ಕೆಲಸ ಮಾಡುತ್ತ ಮಾಡುತ್ತ ನಿಮ್ಮವರೆಗೂ ವರದಿ ತರುವುದನ್ನು ಮರೆತೇ ಹೋಗಿದ್ದೇವೆ. ಲೀಡರ್ಸ್ ಮೀಟ್ ಮುಗಿದು ನಾವು ಹೊಸ ತಂಡವಾಗಿ ನಿರ್ಮಾಣಗೊಂಡ ನಾಲ್ಕುವರೆ ತಿಂಗಳೊಳಗೆ ನಾವೇ ಗಾಬರಿಯಾಗುವಷ್ಟು ಕೆಲಸಗಳಾಗಿವೆ. ಮೊದಲೆಲ್ಲ ನಾವು ಯೋಜನೆಗಳನ್ನು ನಿರ್ಧರಿಸಬೇಕಿತ್ತು. ಉಳಿದೆಡೆಗಳಲ್ಲೆಲ್ಲ ಕೆಲಸ ನಡೆಯುತ್ತಿತ್ತು. ಈಗ ಹಾಗಲ್ಲ. ಹಳ್ಳಿ-ಹಳ್ಳಿಯಲ್ಲೂ ತರುಣರು ತಾವೇ ತಾವಾಗಿ ಕೆಲಸಕ್ಕೆ ನಿಲ್ಲುತ್ತಾರೆ ಮತ್ತು ನಮಗೆ ವರದಿ ಕಳಿಸುತ್ತಾರೆ. ಹಾಗೆ ನೋಡಿದರೆ ಯುವಾಬ್ರಿಗೇಡ್ ಕಟ್ಟಿದ ಉದ್ದೇಶವೇ ಅದಾಗಿತ್ತು. ಆಯಾ ಪ್ರದೇಶಕ್ಕೆ ತಕ್ಕಂತೆ ಆಲೋಚನೆಗಳು ರೂಪುಗೊಳ್ಳಬೇಕು ಅದಕ್ಕೆ ತಕ್ಕಂತೆ ಕೆಲಸಗಳೂ ನಡೆಯಬೇಕು. ಒಟ್ಟಾರೆ ನಮ್ಮೂರಿನ ಕೆಲಸ ನಮ್ಮ ನಾಡಿನ ಕೆಲಸ ನಮ್ಮದ್ದೇ ಜವಾಬ್ದಾರಿ ಎನ್ನುವ ಪ್ರಜ್ಞೆ ಮೈದಳಿಯಬೇಕು. ನನ್ನ ಕನಸಿನ ಕರ್ನಾಟಕದ ಸರಣಿ ಕಾರ್ಯಕ್ರಮಗಳ ನಂತರ ಈ ಒಂದು ಪ್ರಜ್ಞೆ ನಿಧಾನವಾಗಿ ತರುಣ ವರ್ಗದಲ್ಲಿ ಮೊಳೆಯುತ್ತಿದೆ, ಸಸಿಯಾಗುತ್ತಿದೆ. ಒಮ್ಮೆ ಈ ಪ್ರಜ್ಞಾವಂತಿಕೆ ಹೆಮ್ಮರವಾಗಿ ಬೆಳೆದು ನಿಂತಿತೆಂದರೆ ನಾವು ಯಾವ ನೇತಾರನಿಗಾಗಿಯೂ ಕಾಯುವ ಅಗತ್ಯವಿಲ್ಲ. ನಮ್ಮ ನಮ್ಮ ಕ್ಷೇತ್ರಗಳಲ್ಲಿ ನಾವು ನಾವೇ ನೇತಾರರು. ಹಾಗಾಗಿಬಿಟ್ಟರೆ ಕರ್ನಾಟಕ ಈ ದೇಶಕ್ಕೆ ಮಾದರಿಯಾಗಿ ನಿಲ್ಲುವ ರಾಜ್ಯವಾಗುತ್ತದೆ. ಅದೇ ಕನಸನ್ನು ಹೊತ್ತು ಯುವಾಬ್ರಿಗೇಡ್ ಬೀದಿಗಿಳಿದಿದೆ.

ಈ ತಿಂಗಳ ಎಲ್ಲ ಚಟುವಟಿಕೆಗಳೂ ಇದರ ಸುತ್ತಲೇ ಗಿರಕಿ ಹೊಡೆಯುವಂಥದ್ದು. ಅದು ಕಟೀಲಿನ ಬಳಿಯ ನಂದಿನಿ ನದಿಯ ಸ್ವಚ್ಛತೆ ಇರಬಹುದು ಅಥವಾ ಬೆಳಗಾವಿಯ ತುಕಾನಟ್ಟಿಯಲ್ಲಿ ನಡೆಯುತ್ತಿರುವ ಚರಂಡಿಯ ಸ್ವಚ್ಛತೆ ಇರಬಹುದು. ಇವೆಲ್ಲವೂ ಯುವಾಬ್ರಿಗೇಡ್‍ನ ಕರ್ತೃತ್ವ ಶಕ್ತಿಯ ಪ್ರತಿಬಿಂಬವಷ್ಟೇ. ಈ ಎಲ್ಲಕ್ಕೂ ನಮಗೆ ಪ್ರೇರಣೆ ಸ್ವಾಮಿ ವಿವೇಕಾನಂದರೇ. ವಿವೇಕ ಆವಾಹನಾದ ಮುಲಕ 10,000 ಜನರಿಗೆ ಸ್ವಾಮಿ ವಿವೇಕಾನಂದರ ವೇಷಧಾರಣೆ ಮಾಡಿಸುವ ಅವಕಾಶ ದೊರೆತಿದ್ದು ನಮ್ಮ ಪಾಲಿನ ಮಹಾಭಾಗ್ಯವೇ ಸರಿ. ಯುವಾಬ್ರಿಗೇಡ್‍ನ ತರುಣರು ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಸೋದರಿಯರು ಈ ಕಾರ್ಯದಲ್ಲಿ ಹೆಮ್ಮೆಯಿಂದ ಭಾಗಿಯಾಗಿದ್ದರು.

ಈ ಬಾರಿಯ ಆಟೋಗ್ರಾಫ್‍ನಲ್ಲಿ ಇವೆಲ್ಲವನ್ನೂ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ನಿಮ್ಮ ಮಡಿಲಲ್ಲಿ ಹಾಕಿಕೊಳ್ಳಿ ಮತ್ತು ಮುಂದಿನ ಚಟುವಟಿಕೆಗಳಿಗೆ ಸಹಕರಿಸಿ. ನಿಮ್ಮ ಸ್ನೇಹ ಪ್ರೀತಿಗೆ ನಾವು ಚಿರಋಣಿ.

16265648_1193735127391146_2042931661509393595_n

ವಂದೇ,
ಚಕ್ರವರ್ತಿ, ಸೂಲಿಬೆಲೆ

Leave a Reply

Your email address will not be published. Required fields are marked *

You May Also Like

ವಿವೇಕ ಕುಂಭದ ಕೊನೆಯಲ್ಲಿ ನನ್ನ ಕನಸಿನ ಕರ್ನಾಟಕ!

ಸಾವಿರಾರು ವಿವೇಕಾನಂದರ ಸಮ್ಮುಖದಲ್ಲಿ ಮಾತನಾಡಿದ ಕೆಲವೇ ನಿಮಿಷಗಳಲ್ಲಿ ನರೇಂದ್ರ ಮೋದಿಯವರು ಸಿದ್ದರಾಮಯ್ಯನವರು ಐದು ವರ್ಷಗಳಲ್ಲಿ ಮಾಡಲಾಗದ್ದನ್ನು ಮಾಡಿ ತೋರಿಸಿಬಿಟ್ಟರು. ಪ್ರಧಾನಮಂತ್ರಿಯವರಿಗೆ ಚೆನ್ನಾಗಿ ಗೊತ್ತು ಹತ್ತು ಸಾವಿರ ವಿವೇಕಾನಂದ ರೂಪಧಾರಿಗಳನ್ನು ನಿಮರ್ಿಸುವ ಸಂಕಲ್ಪ ಹೊತ್ತ ಸಂತ ಮನಸು ಮಾಡಿದರೆ ಜನ ಜೀವನವನ್ನೇ ಬದಲಾಯಿಸಬಲ್ಲ…
View Post

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಮತ್ತೊಮ್ಮೆ ದಿಗ್ವಿಜಯ

ಚಿಕಾಗೋ ಸರ್ವಧರ್ಮ ಸಮ್ಮೇಳನ ಎಂದೊಡನೆ ನೆನಪಾಗೋದು ನಿಸ್ಸಂಶಯವಾಗಿ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರೇ. ಇದೆ ಸಮ್ಮೇಳನದಲ್ಲಿಯೇ ಸ್ವಾಮೀಜಿ ಸನಾತನ ಧರ್ಮವನ್ನ ಜಗತ್ತಿನ ಮುಂದೆ ಎತ್ತಿ ಹಿಡಿದಿದ್ದು. ಸರ್ವಧರ್ಮ ಸಮ್ಮೇಳನಕ್ಕೆ ಹೊರಡುವ ಮೊದಲೇ ಆ ಸಮ್ಮೇಳನ ತನಗಾಗೇ ಆಗುತ್ತಿರುವುದೆಂದಿದ್ದರು ಸ್ವಾಮೀಜಿ. ಆದರೆ ತ್ಯಾಗ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘುಸಾಹಿತ್ಯ ಸಮ್ಮೇಳನ – ವಿಜಯಪುರ

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತೆ ರಾಜ್ಯಾದ್ಯಂತ ೧೫೦ ಲಘು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅಂದು ಮಾಡಿದ ಸಂಕಲ್ಪಕ್ಕೆ ಮೊದಲ ವೇದಿಕೆ ಸಜ್ಜುಗೊಳಿಸಿದ್ದು ಬೆಂಗಳೂರಿನ ವಿಜಯಪುರ‌.! ವಿವೇಕಾನಂದರು ಜಗತ್ತಿನಲ್ಲೆಲ್ಲ ಭಾರತದ ಪರಂಪರೆ ಶ್ರೇಷ್ಠತೆಯನ್ನು ಮುಟ್ಟಿಸಿದರೆ, ನಿವೇದಿತಾ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘು ಸಾಹಿತ್ಯ ಸಮ್ಮೇಳನಗಳು

‘ಬ್ರಹ್ಮಚಾರಿಗಳು ಬೇಕಾಗಿದ್ದಾರೆ. ಜಡವಾದುದನ್ನು ಆದರ್ಶವಾಗಿರಿಸಿಕೊಂಡವರಲ್ಲ, ಸದಾ ಉತ್ಸಾಹದಿಂದ ಕೂಡಿರುವಂಥವರು. ಬದುಕಿನ ಎಲ್ಲ ಅನುಭವಗಳಿಗೆ ಹೆದರಿ ಓಡದೇ ಅದನ್ನು ತನ್ನೊಳಗೆ ಜೀರ್ಣಿಸಿಕೊಳ್ಳುವ ಕ್ರಿಯಾಶೀಲ ಬ್ರಹ್ಮಚಾರಿಗಳು.’ ಈ ಮಾತುಗಳು ವಿವೇಕಾನಂದರ ಮಾನಸ ಪುತ್ರಿ ಸೋದರಿ ನಿವೇದಿತಾಳದ್ದು. ಆಕೆಯ ಮಾತುಗಳೇ ಹಾಗೆ ಸದಾ ಬೆಂಕಿಯನ್ನುಗುಳುತ್ತಿದ್ದವು. ಆಕೆ…
View Post

SVANSS – ಬಳ್ಳಾರಿ/ಶಿವಮೊಗ್ಗ

ಸ್ವಾಮಿ ವಿವೇಕಾನಂದರ ಪ್ರಿಯ ಶಿಷ್ಯೆ ನಿವೇದಿತಾ ಅಕ್ಕನ ನೂರೈವತ್ತನೇ ಜಯಂತಿಯನ್ನು ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ಅತ್ಯಂತ ವಿಭಿನ್ನ ಮತ್ತು  ಅರ್ಥಪೂರ್ಣವಾಗಿ ಆಚರಿಸಬೇಕೆಂದು ಅದಾಗಲೇ ನಿರ್ಣಯಿಸಿಯಾಗಿತ್ತು. ಅದರ ಮೂರ್ತ ರೂಪವೇ ಈ ಸಾಹಿತ್ಯ ಸಮ್ಮೇಳನ. ಮಂಗಳೂರಿನಲ್ಲಿ ಉದ್ಘಾಟನೆಗೊಂಡ ಈ…
View Post