ಸಂಭ್ರಮ ದಿವಸ್

ಪ್ರತಿಯೊಂದು ಸಂಭ್ರಮದ ಆಚರಣೆಯ ಹಿನ್ನೆಲೆಯಲ್ಲಿ ಒಂದು ಸಂತೋಷದ ಘಟನೆಯಿರುತ್ತದೆ. ಅಂತಹ ಒಂದು ಸಂತೋಷದ ವಾತಾವರಣ ದೇಶದೆಲ್ಲೆಡೆ ಇದ್ದಾಗ ಸಂಭ್ರಮ ಜೋರಾಗಿಯೇ ಇರುತ್ತದೆ. ಮೋದಿಜೀಯವರು 500 ಮತ್ತು 1000 ದ ನೋಟುಗಳನ್ನು ನಿಷೇಧಿಸಿದ್ದರಿಂದ ಕಪ್ಪುಹಣ ಇಟ್ಟವರಲ್ಲಿ ಭಯ ಶುರುವಾಯಿತು. ಇಟ್ಟ ಹಣ ಹಲವಾರು…

ಕ್ಯಾಶ್ ಲೆಸ್ ದುನಿಯಾ

ಪ್ರಧಾನ ಮಂತ್ರಿ ತೆಗೆದುಕೊಂಡ ಅರ್ಥ ವ್ಯವಸ್ಥೆಯ ಮಹಾ ಕ್ರಾಂತಿಯಿಂದಾಗಿ ದೊಡ್ಡ ಮುಖಬೆಲೆಯ ನೋಟುಗಳು ಮೌಲ್ಯ ಕಳೆದುಕೊಂಡಿತು. ಆಗಲೇ ಕಾಳಧನಿಕರ ಆಕ್ರೋಶ ತೀವ್ರವಾಗಿದ್ದು.ಇವರ ಆಕ್ರೋಶವನ್ನು ಬಡವರ ತಲೆಗೆ ಕಟ್ಟುವ ಎಲ್ಲ ಪ್ರಯತ್ನಗಳು ನಡೆದವು. ಇಂತಹ ಸಮಯದಲ್ಲಿ ಜನ ಸಾಮಾನ್ಯರಿಗೆ ತುರ್ತಾಗಿ ಯೋಜನೆಯ ಸಾಧಕ-…

ದೀಪೋತ್ಸವ

ರಾಜ್ಯಾದ್ಯಂತ ಯುವ ಬ್ರಿಗೇಡ್ ತುಂಬಾ ಸಾಹಸಮಯಿಯಾಗಿ ನಡೆಸುತ್ತಿದ್ದ ಕಾರ್ಯವೆಂದರೆ ಕಲ್ಯಾಣಿ ಸ್ವಚ್ಛ ಮಾಡುವುದು. ಆದರೆ ನಮ್ಮ ಉತ್ತರಕನ್ನಡ ಜಿಲ್ಲೆಯಲ್ಲಿ ಕಲ್ಯಾಣಿ ಬಹಳ ಅಪರೂಪವಾಗಿ ಕಾಣಲ್ಪಡುತ್ತದೆ. ಅದರಲ್ಲೂ ಹೊನ್ನಾವರದಂತಹ ತಾಲೂಕುಗಳಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಆದರೂ ಒಂದು ಪ್ರಯತ್ನ ಮಾಡಿಬಿಡೋಣ ಎಂದು ಅವರಿವರಲ್ಲಿ…

ಪತಿತ ಪಾವನ ಮಂದಿರ ಲೋಕಾರ್ಪಣೆ

ವಿನಾಯಕ ದಾಮೋದರ್ ಸಾವರ್ಕರ್ ಜಯಂತಿಯ ನಿಮಿತ್ತಾ, ಯುವಾಬ್ರಿಗೇಡ್ ವಿಶೇಷ ಕಾರ್ಯಕ್ಕೆ ಸಜ್ಜುಗೊಂಡಿತು.ಸಾವರ್ಕರ್ ಕನಸನ್ನು ಸಾಕಾರಗೊಳಿಸುವ ಯೋಜನೆಯೇ “ಪತಿತಪಾವನ ಮಂದಿರ ಅಥವಾ ಹೃದಯ ಮಂದಿರ”. ಉದ್ದೇಶ ಬಹಳ ಸ್ಪಷ್ಟ. ಯಾವ ದೇಗುಲಗಳಿಗೆ ಮೇಲು,ಕೀಳು ಅನ್ನುವ ಭೇದ-ಭಾವವಿಲ್ಲದೆ ಮುಕ್ತ ಪ್ರವೇಶ ಇರುವುದೋ ಅಂತಹ ದೇಗುಲಗಳನ್ನು…

ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳ ಒಂದು ವರದಿ

“ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ”, ತನ್ನ ಮುಕ್ತಿ ಮತ್ತು ಜಗತ್ತಿನ ಹಿತಕ್ಕಾಗಿ ಎಂಬ ಸತ್ಯದ ಆಧಾರದ ಮೇಲೆ ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳವನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ 14/12/2016 ರಿಂದ 18/12/2016 ರ ವರೆಗೆ ಆಯೋಜಿಸಲಾಗಿತ್ತು. ಸ್ಥಳೀಯ ಆಧ್ಯಾತ್ಮ…

ಡಿಸೆಂಬರ್ 25 – ರಾಕ್ ಡೇ

“ಮೊರೆಯುವ ಕಡಲಿಗೆ ಹಾರಿ ಧುಮುಕಿದ, ಈಜಿದ, ನುಗ್ಗಿದ. ಗಟ್ಟಿ ಬಂಡೆಯಲಿ ಬೇರೂರಿದ, ಬಾನೆತ್ತರ ಬೆಳೆದ. ಬೆಳಕಿನ ಗೋಪುರವಾದ” ಕವಿ ಜಿ.ಎಸ್ ಶಿವರುದ್ರಪ್ಪನವರು ಬರೆದಿರುವ ಈ ಸಾಲುಗಳು ಸ್ವಾಮಿ ವಿವೇಕಾನಂದರ ಕುರಿತಂತೆಯೇ.. ನಿಜ! ಸ್ವಾಮಿ ವಿವೇಕಾನಂದರು ಏಳು ವರ್ಷಗಳಷ್ಟು ದೀರ್ಘಕಾಲ ಭಾರತವನ್ನು ಅರಿತುಕೊಳ್ಳುವ…

ಭುವನ ದೀಪ

“ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ರಾಷ್ಟ್ರಕವಿ ಕುವೆಂಪು ಅವರ ಈ ನಾಡಗೀತೆ ಆಲಿಸಿದಾಗಲೆಲ್ಲ ಮೈಮನದಲಿ ಪುಳಕ ! ಹೌದು, ನಮ್ಮ ನಾಡಿನ ಹಿರಿಮೆಯೇ ಅಂತದ್ದು,ತನ್ನ ಸಾರಸ್ವತ , ಕಲಾತ್ಮಕ, ನೈಸರ್ಗಿಕ, ಕೈಗಾರಿಕ ಶ್ರೀಮಂತಿಕೆಯ ಮೂಲಕ ವಿಶ್ವಭಾರತಿಗೆ ಅವಿರತವಾಗಿ ಕನ್ನಡದಾರತಿಯ ಬೆಳಗುತ್ತಿರುವ…

ಕನ್ನಡವೇ ಸತ್ಯ

ನವೆಂಬರ್ ಬಂತೆಂದರೆ ಎಲ್ಲೆಲ್ಲೂ ನಾಡಹಬ್ಬದ ಸಡಗರ. ನಾಡಿನ, ನುಡಿಯ ಆರಾಧನೆ ಮಾಸಾದ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.ಆದರೆ ನವೆಂಬರ್ ಒಂದರ ಕನ್ನಡಿಗರಾಗುವುದಕ್ಕಿಂತ ನಂಬರ್ ಒನ್ ಕನ್ನಡಿಗರಾಗುವುದು ಅತ್ಯಂತ ಅವಶ್ಯಕ ಹಾಗು ಸೂಕ್ತವೆಂದು ನಂಬಿರುವ ಯುವಾಬ್ರಿಗೇಡ್ ಈ ಬಾರಿಯ ರಾಜ್ಯೋತ್ಸವವನ್ನು ತುಂಬಾ ವಿಶೇಷವಾಗಿ ಆಚರಿಸಿ ಹೊಸ…

ನಾಯಕತ್ವಕ್ಕೆ ಆದರ್ಶವೇ ಸರದಾರ!!

ಒಬ್ಬ ಶ್ರೇಷ್ಠೋತ್ತಮ ನಾಯಕನನ್ನು ಎತ್ತರದಲ್ಲಿ ಕೂರಿಸುವಲ್ಲಿ ಭಾರತೀಯರಾದ ನಾವು ಸೋತು ಬಿಟ್ಟೆವು ಎಂದೆನಿಸುತ್ತದೆ! ಅಂದು ತುಂಡು ತುಂಡಾಗುತ್ತಿದ್ದ ಇಡಿಯ ದೇಶವನ್ನು ಏಕರಸಗೊಳಿಸಿದವರನ್ನು ಇಂದು ನೆನಪಿನಲ್ಲಿ ಇಟ್ಟುಕೊಳ್ಳದೆ ಹೋದೆವಲ್ಲ! ಯಾರ ಕಾರಣಕ್ಕೆ ಇಂದು ನಮಗೆ ಭವ್ಯ ಭಾರತವನ್ನು ನೋಡಲು ಸಾಧ್ಯವಾಗಿದೆಯೋ ಅವರ ವ್ಯಕ್ತಿತ್ವದ…

“ವಿಕಾಸ ಪರ್ವ”

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಜಾತಿ ವ್ಯವಸ್ಥೆ ಇರಲೇ ಇಲ್ಲ. ಅದೆಲ್ಲ ಹುಟ್ಟಿದ್ದು ನಂತರದ ದಿನಗಳಲ್ಲೇ! ಶ್ರೇಷ್ಠ ಪರಂಪರೆಯೊಂದು ಕಾಲಘಟ್ಟದ ಬದಲಾವಣೆಯಲ್ಲಿ ಜಾತಿ ಎಂಬ ಅನಿಷ್ಠ ಪದ್ಧತಿಯಾಗಿ ರೂಪುಗೊಂಡಿತು. ಈಗ ನಾವು ಭಾರತವನ್ನು ಮತ್ತದೇ ಪಟ್ಟಕ್ಕೆ ಕೊಂಡೊಯ್ಯುವ ಕೆಲಸಕ್ಕೆ ಮುನ್ನುಡಿ ಬರೆಯಬೇಕಾಗಿದೆ.ಜಾತಿಯನ್ನು ಮೀರಿ…