ಸ್ವಚ್ಛ ರಾಜಮಾರ್ಗ

Total
0
Shares

ಮಂಗಳೂರು ರಾಷ್ಟ್ರ ಮಟ್ಟದಲ್ಲಿ ಸ್ವಚ್ಛ ನಗರ ಎಂಬ ಹೆಸರು ಪಡೆದುಕೊಂಡಿದ್ದೇನೋ ನಿಜ. ಆದರೆ ಮಂಗಳೂರಿನ ಹೊರವಲಯದ ಕೆ.ಸಿ.ರಸ್ತೆ, ತಲಪಾಡಿ, ತೊಕ್ಕೊಟ್ಟುವಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳು ತುಂಬಿ ಹೋಗಿ ಸ್ವಚ್ಛ ನಗರಕ್ಕೆ ಕಪ್ಪು ಚುಕ್ಕೆಯಾಗಿ ನಿಂತಿತ್ತು.ಈ ರಸ್ತೆ ಕೇರಳದಿಂದ ಮಂಗಳೂರಿಗೆ ಬರುವ ರಾಜಮಾರ್ಗವಾದ್ದರಿಂದ ಸ್ಥಳೀಯ ಪ್ರಯಾಣಿಕರ ಜೊತೆಗೆ ಹೊರರಾಜ್ಯದ ಪ್ರಯಾಣಿಕರೂ ದಿನನಿತ್ಯ ಈ ದುರವಸ್ಥೆಯನ್ನು ಕಾಣುತ್ತಿದ್ದರು.

ಸ್ಥಳೀಯ ಪಾಲಿಕೆಗಳೂ ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ಸಾಧ್ಯವಿಲ್ಲವೆಂದು ಕೈಚೆಲ್ಲಿ ಕುಳಿತಿದ್ದರು. ಸ್ಥಳೀಯ ಜನಗಳೂ ಇದರ ಪರಿಣಾಮ ಅರಿಯದೇ ಮೇಲಿಂದ ಮೇಲೆ ಕಸ ಚೆಲ್ಲಿ ತಮ್ಮ ಪಾಡಿಗೆ ತಾವಿದ್ದರು. ಆದರೆ ಯುವಾಬ್ರಿಗೇಡ್ ಸುಮ್ಮನಿರಲು ಹೇಗೆ ಸಾಧ್ಯ? ಚಕ್ರವರ್ತಿ ಸೂಲಿಬೆಲೆಯವರ ಮುಂದಾಳುತ್ವದಲ್ಲಿ ಕಾರ್ಯಪ್ರವೃತ್ತರಾದ ಕಾರ್ಯಕರ್ತರು ಸ್ವಚ್ಛ ರಾಜಮಾರ್ಗಕ್ಕೆ ಮುನ್ನುಡಿ ಬರೆದರು. ಪರಿಸರ ಹಾಳುಗೆಡವುದರ ಗಾಢ ಪರಿಣಾಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಸಲಾಯಿತು. ಜೊತೆಗೆ ಸ್ವಚ್ಛತೆ ಹಾಗೂ ಕಸವಿಲೇವಾರಿಯ ಬಗ್ಗೆ ಮಾಧ್ಯಮಗಳ ಮೂಲಕ ಗಮನ ಸೆಳೆದ ಪರಿಣಾಮ, ಸ್ಥಳೀಯ ಆಡಳಿತ ಮಂಡಳಿಗಳು, ಸಂಬಂಧಪಟ್ಟ ವ್ಯಕ್ತಿಗಳು ಇನ್ನು ಮುಂದೆ ಇಲ್ಲಿನ ಕಸವಿಲೇವಾರಿ ಬಗ್ಗೆ ಗಮನವಹಿಸುವುದಾಗಿ ಭರವಸೆ ನೀಡಿರುವುದು ಬದಲಾವಣೆಯ ಸಂಕೇತ.

ಯುವಾಬ್ರಿಗೇಡ್ ಸ್ವಚ್ಛತೆಯೆಡೆಗೆ ಇಟ್ಟ ಒಂದು ಹೆಜ್ಜೆಗೆ ಸ್ಪಂದಿಸಿದ ನೂರಾರು ನಾಗರಿಕರು ನೂರಾರು ಹೆಜ್ಜೆಗಳೊಂದಿಗೆ ನಮ್ಮೊಂದಿಗೆ ಕೂಡಿರುವುದು ಸಂತಸದ ವಿಷಯ

Leave a Reply

Your email address will not be published. Required fields are marked *

You May Also Like

ನನ್ನ ಕನಸಿನ ಕರ್ನಾಟಕ

ಕನಸು ಕಾಣುವುದಕ್ಕೆ ದುಡ್ಡು ಕೊಡಬೇಕೇ?’ ಇದು ಸಾಮಾನ್ಯವಾಗಿ ನಾವು ನೀವೆಲ್ಲ ಏನಾದರೂ ಕನಸು ಕಂಡದ್ದನ್ನು ಇನ್ನೊಬ್ಬರ ಹೇಳೋವಾಗ ಬಳಸುವಂತಹ ಒಂದು ಸರ್ವೇ ಸಾಮಾನ್ಯವಾದ ಮಾತು. ಹೌದು ಕನಸು ಕಾಣೋದಕ್ಕೆ ಕಾಸು ಕೊಡೋದು ಬೇಡ ನಿಜ. ಹಾಗಂತ ಕಂಡ ಕನಸನ್ನು ನನಸು ಮಾಡುವಂತ…
View Post

ಮತದಾನ ನಮ್ಮ‌ ಹಕ್ಕು

ಸಮರ್ಥನ ಆಯ್ಕೆ ನಮ್ಮ ಕರ್ತವ್ಯ.. ಪ್ರಜಾಪ್ರಭುತ್ವ ಅತ್ಯಂತ ಸುಂದರವಾದ ವ್ಯವಸ್ಥೆಗಳಲ್ಲೊಂದು. ಇದು ಪ್ರಜೆಗಳಿಗೆ ಆಳುವ ಹಕ್ಕನ್ನು ದಯಪಾಲಿಸುತ್ತದೆ. ತನ್ನ ಪ್ರತಿನಿಧಿಯಾಗುವ ಯೋಗ್ಯತೆ ಉಳ್ಳವರನ್ನು ತಾನೇ ಆರಿಸಿಕೊಳ್ಳುವ ಅವಕಾಶವನ್ನು ಕೊಡುವುದು ಪ್ರಜಾಪ್ರಭುತ್ವ ಮಾತ್ರ. ರಾಜಪ್ರಭುತ್ವದಲ್ಲಿ ಹಾಗಿರಲಿಲ್ಲ. ಅಲ್ಲಿ ರಾಜನೇ ತನ್ನ ಉತ್ತರಾಧಿಕಾರಿಯನ್ನು ಗುರುತಿಸುತ್ತಾನೆ,…
View Post

ನಿವೇದಿತಾ ಸೇವಾಕೇಂದ್ರ

ಅದ್ವೈತ ತತ್ತ್ವದ ಶ್ರೇಷ್ಠ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರ ಜಯಂತಿಯಂದು ಅಂದರೆ ಏಪ್ರಿಲ್ 30 ರಂದು ಕಲ್ಲೋಳಿಯಲ್ಲಿ ಪ್ರಾರಂಭಗೊಂಡ ‘ನಿವೇದಿತಾ ಸೇವಾಕೇಂದ್ರ’ ಯಶಸ್ವಿಯಾಗಿ ನಡೆಯುತ್ತಿದೆ. ಆರ್ಥಿಕವಾಗಿ ಹಿಂದುಳಿದ, ಶೋಷಿತ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗುವಂತೆ ರೂಪಿಸಿದ ಈ ಯೋಜನೆ ಫಲ ಕೊಡುತ್ತಿದೆ. ಲಘು ಉದ್ಯೋಗ ಭಾರತಿಯ…
View Post

“ಆಲ್ ದ ಬೆಸ್ಟ್”

“ಆಲ್ ದ ಬೆಸ್ಟ್” ಒಂದು ಸ್ವಪ್ರೇರಣಾ, ಸ್ವಪ್ರಚೋದನಾ ತಂತ್ರ. ಕೆಲವು ಸುಲಭವಾಗಿ ಮತ್ತು ಸುಲಭವಾದ ಬದಲಾವಣೆಗಳನ್ನು ನಮ್ಮ ನಡೆ, ನುಡಿ ಹಾಗೂ ಅಚರಣೆಗಳಲ್ಲಿ ಮಾಡಿಕೊಳ್ಳುವುದರ ಮೂಲಕ ಹೇಗೆ ನಾವು ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದಾಗಿದೆ ಎಂಬುದನ್ನು ಅರಿತುಕೊಳ್ಳುವುದೇ ಆಗಿದೆ. ಇವುಗಳನ್ನು ಕಳೆದ ಬಾರಿ…
View Post

“ವಿಕಾಸ ಪರ್ವ”

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಜಾತಿ ವ್ಯವಸ್ಥೆ ಇರಲೇ ಇಲ್ಲ. ಅದೆಲ್ಲ ಹುಟ್ಟಿದ್ದು ನಂತರದ ದಿನಗಳಲ್ಲೇ! ಶ್ರೇಷ್ಠ ಪರಂಪರೆಯೊಂದು ಕಾಲಘಟ್ಟದ ಬದಲಾವಣೆಯಲ್ಲಿ ಜಾತಿ ಎಂಬ ಅನಿಷ್ಠ ಪದ್ಧತಿಯಾಗಿ ರೂಪುಗೊಂಡಿತು. ಈಗ ನಾವು ಭಾರತವನ್ನು ಮತ್ತದೇ ಪಟ್ಟಕ್ಕೆ ಕೊಂಡೊಯ್ಯುವ ಕೆಲಸಕ್ಕೆ ಮುನ್ನುಡಿ ಬರೆಯಬೇಕಾಗಿದೆ.ಜಾತಿಯನ್ನು ಮೀರಿ…
View Post

ಸ್ವಚ್ಛತೆಯೇ ಆರೋಗ್ಯ

ಸ್ವಚ್ಛತೆ ಆರೋಗ್ಯದೆಡೆಗಿನ ಮೊದಲ ಹೆಜ್ಜೆ. ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದರಿಂದ ರೋಗ-ರುಜಿನಗಳು ಹರಡುವುದನ್ನು ತಡೆಗಟ್ಟಬಹುದು. ಆದರೆ, ಆರೋಗ್ಯ ಹದಗೆಟ್ಟಲ್ಲಿ ನೋಡಿಕೊಳ್ಳಬೇಕಾದ ಸರ್ಕಾರಿ ಆಸ್ಪತ್ರೆಗಳೇ ಸ್ವಚ್ಛವಾಗಿರುವುದಿಲ್ಲ! ಸರ್ಕಾರಿ ಆಸ್ಪತ್ರೆಗಳ ಈ ದೈನೀಸಿ ಸ್ಥಿತಿಯನ್ನು ಕಂಡು ಯುವಾಬ್ರಿಗೇಡ್ ‘ಸ್ವಚ್ಛತೆಯೇ ಆರೋಗ್ಯ’ ಎಂಬ ಹೆಸರಿನಡಿಯಲ್ಲಿ ಹಲವು…
View Post