ಸ್ವಚ್ಛ ಭಾರತದಡಿಯಲ್ಲಿ ಯುವಾ ಬ್ರಿಗೇಡ್

Total
0
Shares

ಸ್ವಚ್ಛತೆ ಎಂಬುದು ಆರೋಗ್ಯಕರ ಜೀವನ, ಗುಣಮಟ್ಟದ ಜೀವನಶೈಲಿ ಮತ್ತು ನಮ್ಮ ಕ್ಷೇತ್ರದ ವಿಕಾಸವನ್ನು ಬಿoಬಿಸುತ್ತದೆ. ಸ್ವಚ್ಛ ಭಾರತ್ ಮಾಡುವುದು ಈ ದೇಶದ ಪ್ರಧಾನ ಮಂತ್ರಿಯೊಬ್ಬರ ಕರ್ತವ್ಯವಲ್ಲ, ಬದಲಾಗಿ ಇದು ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವೆoದು ನಾವು ಅರಿತುಕೊಳ್ಳಬೇಕಿದೆ. ಹಾಗಾಗಿ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಸಲುವಾಗಿ ಯುವಾ ಬ್ರಿಗೇಡ್ ಈ ಕಾರ್ಯವನ್ನು ಕೈಗೆತ್ತಿಕೊoಡಿದೆ.

ನನ್ನ ಕನಸಿನ ಕರ್ನಾಟಕವೆoಬ  ಅಭಿಯಾನವನ್ನು ಶುರು ಮಾಡಿ ಅದರಡಿಯಲ್ಲಿ ರಾಜ್ಯಾದ್ಯಂತ ಸ್ವಚ್ಛತೆಯ ಕಾರ್ಯಕ್ರಮಗಳನ್ನು ಮಾಡುತ್ತಿದೆ. ನನ್ನ ಕನಸಿನ ಕರ್ನಾಟಕದ ಗುರಿಯೇ ಪ್ರಜ್ಞಾವoತ ನಾಗರಿಕರನ್ನು ನಿರ್ಮಾಣ ಮಾಡುವುದಾಗಿದೆ. ಈ ಯೋಜನೆಯಡಿಯಲ್ಲಿ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಮೂರು ರೀತಿಯಲ್ಲಿ ಕೆಲಸ ಮಾಡಬಹುದು. ತಮ್ಮ ಹಳ್ಳಿ, ತಾಲ್ಲೂಕು, ಜಿಲ್ಲೆಗಳನ್ನು ಅಭಿವೃದ್ಧಿಗೊಳಿಸುವಲ್ಲಿ 50 ಪ್ರತಿಶತದಷ್ಟು ಕೆಲಸವನ್ನು ನಾವೇ ಮಾಡಬಹುದು. 25 ಪ್ರತಿಶತದಷ್ಟು ಕೆಲಸಗಳನ್ನು ನಮ್ಮ ಜಿಲ್ಲೆಯ ಅಧಿಕಾರಿಗಳು ಮಾಡುವoತಹ ಕೆಲಸಗಳು. ಇನ್ನುಳಿದ 25 ಪ್ರತಿಶತದಷ್ಟು ಕೆಲಸವನ್ನು ಮಾಡಲು ರಾಜಕೀಯ ಶಕ್ತಿ ಬೇಕು.

ಈ ಕನಸುಗಳನ್ನು ನನಸುಗೊಳಿಸಲೋಸುಗವೆ ಯುವಾ ಬ್ರಿಗೇಡ್ ಕಾರ್ಯಕರ್ತರು ತಮ್ಮ ತಮ್ಮ ಊರಿನ ವಿಕಾಸಕ್ಕಾಗಿ ತಾವೇ ಖುದ್ದಾಗಿ ಮುಂದು ನಿoತು ಕೆಲಸ ಮಾಡಲು ಅಣಿಯಾಗಿದ್ದಾರೆ.

ಇತ್ತಿಚೆಗೆ ಯುವಾ ಬ್ರಿಗೇಡ್ ಮಾಡಿರುವ ಕೆಲ  ಸ್ವಚ್ಛತಾ ಕಾರ್ಯಕ್ರಮದ ವರದಿ ಇಂತಿವೆ :

 

1)ಬೀದರ್ ಜಿಲ್ಲೆಯ ಹುಮ್ನಾಬಾದ್ ನಗರದ ಬಸ್ ನಿಲ್ದಾಣದ ಸ್ವಚ್ಛತೆ.
2)ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪ್ರಮುಖ ರಸ್ತೆಗಳ ಸ್ವಚ್ಛತೆ.
3)ಕಲಬುರ್ಗಿ ಜಿಲ್ಲೆಯ ಅಪ್ಜಲ್ಪೂರ ತಾಲೂಕಿನ ಸಾರಕಾರೀ ಶಾಲಾ ಆವರಣದ ಸ್ವಚ್ಛತೆ.
4)ಸತತ 55 ದಿನಗಳಿoದ ಹಾವೇರಿ ನಗರದ ಅಕ್ಕಮಹಾದೇವಿ ಹೊoಡದ ಸ್ವಚ್ಛತೆ.
6)ಬೆಳಗಾವಿ ಜಿಲ್ಲೆಯ ತುಕಾನಟ್ಟಿ ಗ್ರಾಮದ ಸ್ವಚ್ಛತೆ.
7)ಉತ್ತರಕನ್ನಡ ಜಿಲ್ಲೆಯ ಕುಮಟಾದ ಸೊಪ್ಪಿನಹೊಸಹಳ್ಳಿ ಗ್ರಾಮದ ಸ್ವಚ್ಛತೆ.
8) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಗಂಗಾ ವಿಶ್ವೇಶ್ವರ ದೇವಾಲಯದ ಸ್ವಚ್ಛತೆ.
9)ಮಂಗಳೂರಿನ ಸ್ಟೇಟ್ ಬ್ಯಾoಕ ಸರ್ಕಲ ಮತ್ತು ಅಡ್ಯನಡ್ಕ ಗ್ರಾಮದ ಸ್ವಚ್ಛತೆ.
10)ಉಡುಪಿ ಜಿಲ್ಲೆಯ ಕುಂದಾಪುರದ ತಲ್ಲೂರಿನ ಜಾತ್ರಾ ಮಹೋತ್ಸವದ ನಂತರ ಜಾತ್ರಾ ಸ್ಥಳದ ಸ್ವಚ್ಛತೆ.
11)ಕೋಲಾರ ಜಿಲ್ಲೆಯ ಮಾಲೂರಿನ ಮಾಸ್ತಿ ಗ್ರಾಮದ ಬಸ್ ತಂಗುದಾಣದ ಸ್ವಚ್ಛತೆ.
12)ಬೆoಗಳೂರಿನ ನಾಗೇಶ್ವರ ದೇವಾಲಯ ಮತ್ತು ಬನಪ್ಪಾ ಪಾರ್ಕ್ ನ ಸ್ವಚ್ಛತೆ.

13)ನಂಜನಗೂಡಿನ ಕಪಿಲಾ ನದಿಯ ಸ್ವಚ್ಛತೆ.

27545351_1549680888463233_7252306397497725019_n

26231053_10209154402211830_2823820078027000794_n
15401154_1289151527852724_7294365238463344078_n 25594203_10159683236060133_8431232792942944776_n 26165584_1514556158642373_3595681909715336878_n 26168374_1514410181990304_5416528048309317517_n 26239021_1522545697843419_8037619653747722596_n 27332274_1542022499229072_259486602141030447_n
26195412_10209154409052001_6881828816003041300_n
ಇವೆಲ್ಲದರ ನಡುವೆ ಹಲವಾರು ಜಿಲ್ಲಾ ಮತ್ತು ತಾಲ್ಲೂಕಾ ಸರಕಾರಿ ಆಸ್ಪತ್ರೆಗಳ ಸ್ವಚ್ಛತೆಯನ್ನು ಸಹ ಮಾಡಿದೆ. ಬನ್ನಿ ನಾವೆಲ್ಲರೂ ಸೇರಿ ಸ್ವಚ್ಛತೆಯೇ ಸೇವೆ ಎಂದು ಅರಿತು ಸ್ವಚ್ಛತೆಯ ಕಡೆಗೆ ಹೆಜ್ಜೆ ಇಡೋಣ. ಗಾಂಧೀಜಿ ಕಂಡoತಹ ಸ್ವಚ್ಛ ಭಾರತದ ಕನಸನ್ನು ನನಸು ಮಾಡೋಣ.
Leave a Reply

Your email address will not be published. Required fields are marked *

You May Also Like

ನನ್ನ ಕನಸಿನ ಕರ್ನಾಟಕ

ಕನಸು ಕಾಣುವುದಕ್ಕೆ ದುಡ್ಡು ಕೊಡಬೇಕೇ?’ ಇದು ಸಾಮಾನ್ಯವಾಗಿ ನಾವು ನೀವೆಲ್ಲ ಏನಾದರೂ ಕನಸು ಕಂಡದ್ದನ್ನು ಇನ್ನೊಬ್ಬರ ಹೇಳೋವಾಗ ಬಳಸುವಂತಹ ಒಂದು ಸರ್ವೇ ಸಾಮಾನ್ಯವಾದ ಮಾತು. ಹೌದು ಕನಸು ಕಾಣೋದಕ್ಕೆ ಕಾಸು ಕೊಡೋದು ಬೇಡ ನಿಜ. ಹಾಗಂತ ಕಂಡ ಕನಸನ್ನು ನನಸು ಮಾಡುವಂತ…
View Post

ಮತದಾನ ನಮ್ಮ‌ ಹಕ್ಕು

ಸಮರ್ಥನ ಆಯ್ಕೆ ನಮ್ಮ ಕರ್ತವ್ಯ.. ಪ್ರಜಾಪ್ರಭುತ್ವ ಅತ್ಯಂತ ಸುಂದರವಾದ ವ್ಯವಸ್ಥೆಗಳಲ್ಲೊಂದು. ಇದು ಪ್ರಜೆಗಳಿಗೆ ಆಳುವ ಹಕ್ಕನ್ನು ದಯಪಾಲಿಸುತ್ತದೆ. ತನ್ನ ಪ್ರತಿನಿಧಿಯಾಗುವ ಯೋಗ್ಯತೆ ಉಳ್ಳವರನ್ನು ತಾನೇ ಆರಿಸಿಕೊಳ್ಳುವ ಅವಕಾಶವನ್ನು ಕೊಡುವುದು ಪ್ರಜಾಪ್ರಭುತ್ವ ಮಾತ್ರ. ರಾಜಪ್ರಭುತ್ವದಲ್ಲಿ ಹಾಗಿರಲಿಲ್ಲ. ಅಲ್ಲಿ ರಾಜನೇ ತನ್ನ ಉತ್ತರಾಧಿಕಾರಿಯನ್ನು ಗುರುತಿಸುತ್ತಾನೆ,…
View Post

ನಿವೇದಿತಾ ಸೇವಾಕೇಂದ್ರ

ಅದ್ವೈತ ತತ್ತ್ವದ ಶ್ರೇಷ್ಠ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರ ಜಯಂತಿಯಂದು ಅಂದರೆ ಏಪ್ರಿಲ್ 30 ರಂದು ಕಲ್ಲೋಳಿಯಲ್ಲಿ ಪ್ರಾರಂಭಗೊಂಡ ‘ನಿವೇದಿತಾ ಸೇವಾಕೇಂದ್ರ’ ಯಶಸ್ವಿಯಾಗಿ ನಡೆಯುತ್ತಿದೆ. ಆರ್ಥಿಕವಾಗಿ ಹಿಂದುಳಿದ, ಶೋಷಿತ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗುವಂತೆ ರೂಪಿಸಿದ ಈ ಯೋಜನೆ ಫಲ ಕೊಡುತ್ತಿದೆ. ಲಘು ಉದ್ಯೋಗ ಭಾರತಿಯ…
View Post

“ಆಲ್ ದ ಬೆಸ್ಟ್”

“ಆಲ್ ದ ಬೆಸ್ಟ್” ಒಂದು ಸ್ವಪ್ರೇರಣಾ, ಸ್ವಪ್ರಚೋದನಾ ತಂತ್ರ. ಕೆಲವು ಸುಲಭವಾಗಿ ಮತ್ತು ಸುಲಭವಾದ ಬದಲಾವಣೆಗಳನ್ನು ನಮ್ಮ ನಡೆ, ನುಡಿ ಹಾಗೂ ಅಚರಣೆಗಳಲ್ಲಿ ಮಾಡಿಕೊಳ್ಳುವುದರ ಮೂಲಕ ಹೇಗೆ ನಾವು ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದಾಗಿದೆ ಎಂಬುದನ್ನು ಅರಿತುಕೊಳ್ಳುವುದೇ ಆಗಿದೆ. ಇವುಗಳನ್ನು ಕಳೆದ ಬಾರಿ…
View Post

ಸ್ವಚ್ಛ ರಾಜಮಾರ್ಗ

ಮಂಗಳೂರು ರಾಷ್ಟ್ರ ಮಟ್ಟದಲ್ಲಿ ಸ್ವಚ್ಛ ನಗರ ಎಂಬ ಹೆಸರು ಪಡೆದುಕೊಂಡಿದ್ದೇನೋ ನಿಜ. ಆದರೆ ಮಂಗಳೂರಿನ ಹೊರವಲಯದ ಕೆ.ಸಿ.ರಸ್ತೆ, ತಲಪಾಡಿ, ತೊಕ್ಕೊಟ್ಟುವಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳು ತುಂಬಿ ಹೋಗಿ ಸ್ವಚ್ಛ ನಗರಕ್ಕೆ ಕಪ್ಪು ಚುಕ್ಕೆಯಾಗಿ ನಿಂತಿತ್ತು.ಈ ರಸ್ತೆ ಕೇರಳದಿಂದ…
View Post

“ವಿಕಾಸ ಪರ್ವ”

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಜಾತಿ ವ್ಯವಸ್ಥೆ ಇರಲೇ ಇಲ್ಲ. ಅದೆಲ್ಲ ಹುಟ್ಟಿದ್ದು ನಂತರದ ದಿನಗಳಲ್ಲೇ! ಶ್ರೇಷ್ಠ ಪರಂಪರೆಯೊಂದು ಕಾಲಘಟ್ಟದ ಬದಲಾವಣೆಯಲ್ಲಿ ಜಾತಿ ಎಂಬ ಅನಿಷ್ಠ ಪದ್ಧತಿಯಾಗಿ ರೂಪುಗೊಂಡಿತು. ಈಗ ನಾವು ಭಾರತವನ್ನು ಮತ್ತದೇ ಪಟ್ಟಕ್ಕೆ ಕೊಂಡೊಯ್ಯುವ ಕೆಲಸಕ್ಕೆ ಮುನ್ನುಡಿ ಬರೆಯಬೇಕಾಗಿದೆ.ಜಾತಿಯನ್ನು ಮೀರಿ…
View Post