ವಿಕಾಸ ಪರ್ವ

Total
0
Shares

ನುಡಿದಂತೆ ನಡೆದಿದ್ದೇವೆ ಎಂಬ ಹೆಮ್ಮೆ ಯಾವತ್ತೂ ಯುವಾ ಬ್ರಿಗೇಡ್ ನ ಸಾತ್ವಿಕ ಅಹಂಕಾರಕ್ಕೆ ಎಡೆಮಾಡಿಕೊಡುವ ವಿಷಯವೇ ಆಗಿದೆ. ನಾವು ಯುವಾ ಬ್ರಿಗೇಡ್ ನಿಂದ ಅಕ್ಟೋಬರ್ 13 ರಂದು ಕಲ್ಲೋಳಿ ಯಲ್ಲಿ “ವಿಕಾಸ ಪರ್ವ” ಎಂಬ ಕಾರ್ಯಕ್ರಮ ಮಾಡಿದ್ದೆವು. ಆ ಸಂದರ್ಭದಲ್ಲಿ ಅಲ್ಲಿಯ ದಲಿತ, ಶೋಷಿತರ ಪರವಾಗಿ ಬರಿ ಧ್ವನಿ ಎತ್ತಿದರೆ ಸಾಲದು ಕಾರ್ಯ ಪ್ರವೃತ್ತರಾಗಬೇಕೆಂದು ತಿರ್ಮಾನಿಸಿ, ಮುಂದಿನ ದಿನಮಾನದಲ್ಲಿ ಅವರಿಗೆ ಸ್ವ ಉದ್ಯೋಗ ಕಲ್ಪಿಸಿ, ಆರ್ಥಿಕ ಸ್ವಾವಲಂಬಿಗಳಾಗಿ ಬದುಕಲು ಬೇಕಾದ ತರಬೇತಿ ಪ್ರಾರಂಭದ ಕುರಿತು ಆಶ್ವಾಸನೆ ಕೊಟ್ಟು ಬಂದಿದ್ದೆವು.

ಅದರಂತೆ ಆ ಆಶ್ವಾಸನೆಯನ್ನು ಇದೇ ತಿಂಗಳು ಅಂದರೆ ಏಪ್ರಿಲ್ 30 ಕ್ಕೆ ಶಂಕರ ಜಯಂತಿಯ ಶುಭ ದಿನದಂದು ಅಲ್ಲಿನ ಮಹಿಳೆಯರಿಗಾಗಿ “ನಿವೇದಿತಾ ಸೇವಾ ಕೇಂದ್ರ” ಎಂಬ ತರಬೇತಿ ಸಂಸ್ಥೆ ಪ್ರಾರಂಭಿಸಿ ಅಲ್ಲಿನ ಹೆಣ್ಣು ಮಕ್ಕಳಿಗೆ ಹೊಲಿಗೆ ತರಬೇತಿ ಕಾರ್ಯಾಗಾರವನ್ನು ಪ್ರಾರಂಭಿಸಿದೆವು. ಅದಕ್ಕೆ “ವಿಕಾಸ ಪರ್ವ” ಹೆಸರು ಸೂಕ್ತವೆನಿಸಿ ಮೊದಲ ಕಾರ್ಯಕ್ರಮದ ಹೆಸರೇ ನೀಡಲಾಯಿತು.

ಭಾರತಕ್ಕೆ ಶಂಕರ, ರಾಮಾನುಜ ಹಾಗೂ ಅಂಬೇಡ್ಕರ್ ಈ ತ್ರಿರತ್ನಗಳು ಸಮಾಜದಲ್ಲಿ ತುಳಿತಕ್ಕೊಳಗಾದವರ ಅಭಿವೃದ್ಧಿಗೆ ಶ್ರಮಿಸಿದ ಬಗೆ ಕಂಡು ಅದರಿಂದ ಸ್ಫೂರ್ತಿ ಪಡೆದು ಈ ಕೆಲಸ ಪ್ರಾರಂಭಿಸಿದ ಕೀರ್ತಿ ನಮ್ಮದಾಯಿತು.

ಈ ವಿಶಿಷ್ಟ ಕಾರ್ಯಕ್ರಮಕ್ಕೆ ಯುವಾ ಬ್ರಿಗೇಡ್ ರಾಜ್ಯ ಸಂಚಾಲಕರಾದ ಶ್ರೀ ನಿತ್ಯಾನಂದ ವಿವೇಕವಂಶಿ, ಲಘು ಉದ್ಯೋಗ ಭಾರತಿ-ಬೆಂಗಳೂರು ಇದರ ಪರವಾಗಿ ಶ್ರೀಮತಿ ಭಾರತಿ ಎನ್, ಯುವಾ ಬ್ರಿಗೇಡ್ ಧಾರವಾಡ ವಿಭಾಗ ಸಂಚಾಲಕರಾದ ಶ್ರೀ ಕಿರಣ್ ರಾಮ್, ಗ್ರಾಮದ ಮುಖಂಡರಾದ ಶ್ರೀ ಶಿವಾನಂದ ಬೆಳಕೂಡ ಹಾಗೂ ಶ್ರೀ ನೀಲಕಂಠ ಕಪ್ಪಲಗುದ್ದಿ ಉಪಸ್ಥಿತರಿದ್ದರು. ಶ್ರೀ ನಿತ್ಯಾನಂದ ವಿವೇಕವಂಶಿ ಯವರು ದೀಪಕ್ಕೆ ತೈಲ ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಂಕರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಗ್ರಾಮದ ಪ್ರಮುಖರಾದ ಶ್ರೀ ನೀಲಕಂಠ ಕಪ್ಪಲಗುದ್ದಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ಲಾಸ್ಟಿಕ್ ಮುಕ್ತ ಗ್ರಾಮದ ಕಲ್ಪನೆ ತೆರೆದಿಟ್ಟರು ನಂತರ ರಾಜ್ಯ ಸಂಚಾಲಕರಾದ ನಿತ್ಯಾನಂದ ವಿವೇಕವಂಶಿಯವರು ಸ್ವಾವಲಂಬಿ ಭಾರತ, ರಾಜ್ಯ ಹಾಗೂ ಸ್ವಾವಲಂಬಿ ಮಾದರಿ ಗ್ರಾಮದ ಕನಸುಗಳನ್ನು ಬಿಚ್ಚಿಟ್ಟು ,ದೇಶದ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಈ ಪರಿವರ್ತನೆ ಆಗಬೇಕಾಗಿದೆ ಅದರಂತೆ ಪ್ರತಿಯೊಬ್ಬರು ಉದ್ಯಮಿಗಳಾಗಲು ಪ್ರಯತ್ನಿಸಬೇಕು ಎನ್ನುತ್ತಾ ಮಹಿಳಾ ಉದ್ಯಮಕಾರರು ಹೆಚ್ಚಾದರೆ ದೇಶ ಸುಭಿಕ್ಷವಾಗುತ್ತದೆ ಆದ್ದರಿಂದ ಎಲ್ಲ ಮಹಿಳೆಯರು ಸ್ವ ಉದ್ಯೋಗ ಹಾಗೂ ಗುಡಿ ಕೈಗಾರಿಕೆಯ ಕಲ್ಪನೆ ಕಟ್ಟಿಕೊಳ್ಳಿ. ಅವಶ್ಯವಿದ್ದರೆ ಯುವಾ ಬ್ರಿಗೇಡ್ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ ಎಂಬ ಆಶ್ವಾಸನೆ ನೀಡಿದರು.

ಶ್ರೀಮತಿ ಭಾರತಿ ಯವರು ತರಬೇತಿ ಪ್ರಾತ್ಯಕ್ಷಿಕೆ ತೋರಿದರು ನಂತರ ಎಲ್ಲರೂ “ನಿವೇದಿತಾ ಸೇವಾ ಕೇಂದ್ರ”ಕ್ಕೆ ತೆರಳಿ ಉದ್ಘಾಟಿಸಿ ಚಾಲನೆ ನೀಡಲಾಯಿತು. ಹೆಣ್ಣು ಮಕ್ಕಳ ಅತ್ಯುತ್ಸಾಹ ಹೇಳತೀರದು. ಸಿದ್ದು ಉಳ್ಳಾಗಡ್ಡಿ ಅತಿಥಿ,ಅಭ್ಯಾಗತರನ್ನು ಸ್ವಾಗತಿಸಿದರು ಹಾಗೂ ಶ್ರೀ ವರ್ಧಮಾನ ತ್ಯಾಗಿ ಕಾರ್ಯಕ್ರಮ ನಿರೂಪಿಸಿದರು.

ಜೈ ಹಿಂದ್.

Leave a Reply

Your email address will not be published. Required fields are marked *

You May Also Like

ನನ್ನ ಕನಸಿನ ಕರ್ನಾಟಕ

ಕನಸು ಕಾಣುವುದಕ್ಕೆ ದುಡ್ಡು ಕೊಡಬೇಕೇ?’ ಇದು ಸಾಮಾನ್ಯವಾಗಿ ನಾವು ನೀವೆಲ್ಲ ಏನಾದರೂ ಕನಸು ಕಂಡದ್ದನ್ನು ಇನ್ನೊಬ್ಬರ ಹೇಳೋವಾಗ ಬಳಸುವಂತಹ ಒಂದು ಸರ್ವೇ ಸಾಮಾನ್ಯವಾದ ಮಾತು. ಹೌದು ಕನಸು ಕಾಣೋದಕ್ಕೆ ಕಾಸು ಕೊಡೋದು ಬೇಡ ನಿಜ. ಹಾಗಂತ ಕಂಡ ಕನಸನ್ನು ನನಸು ಮಾಡುವಂತ…
View Post

ಮತದಾನ ನಮ್ಮ‌ ಹಕ್ಕು

ಸಮರ್ಥನ ಆಯ್ಕೆ ನಮ್ಮ ಕರ್ತವ್ಯ.. ಪ್ರಜಾಪ್ರಭುತ್ವ ಅತ್ಯಂತ ಸುಂದರವಾದ ವ್ಯವಸ್ಥೆಗಳಲ್ಲೊಂದು. ಇದು ಪ್ರಜೆಗಳಿಗೆ ಆಳುವ ಹಕ್ಕನ್ನು ದಯಪಾಲಿಸುತ್ತದೆ. ತನ್ನ ಪ್ರತಿನಿಧಿಯಾಗುವ ಯೋಗ್ಯತೆ ಉಳ್ಳವರನ್ನು ತಾನೇ ಆರಿಸಿಕೊಳ್ಳುವ ಅವಕಾಶವನ್ನು ಕೊಡುವುದು ಪ್ರಜಾಪ್ರಭುತ್ವ ಮಾತ್ರ. ರಾಜಪ್ರಭುತ್ವದಲ್ಲಿ ಹಾಗಿರಲಿಲ್ಲ. ಅಲ್ಲಿ ರಾಜನೇ ತನ್ನ ಉತ್ತರಾಧಿಕಾರಿಯನ್ನು ಗುರುತಿಸುತ್ತಾನೆ,…
View Post

ನಿವೇದಿತಾ ಸೇವಾಕೇಂದ್ರ

ಅದ್ವೈತ ತತ್ತ್ವದ ಶ್ರೇಷ್ಠ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರ ಜಯಂತಿಯಂದು ಅಂದರೆ ಏಪ್ರಿಲ್ 30 ರಂದು ಕಲ್ಲೋಳಿಯಲ್ಲಿ ಪ್ರಾರಂಭಗೊಂಡ ‘ನಿವೇದಿತಾ ಸೇವಾಕೇಂದ್ರ’ ಯಶಸ್ವಿಯಾಗಿ ನಡೆಯುತ್ತಿದೆ. ಆರ್ಥಿಕವಾಗಿ ಹಿಂದುಳಿದ, ಶೋಷಿತ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗುವಂತೆ ರೂಪಿಸಿದ ಈ ಯೋಜನೆ ಫಲ ಕೊಡುತ್ತಿದೆ. ಲಘು ಉದ್ಯೋಗ ಭಾರತಿಯ…
View Post

“ಆಲ್ ದ ಬೆಸ್ಟ್”

“ಆಲ್ ದ ಬೆಸ್ಟ್” ಒಂದು ಸ್ವಪ್ರೇರಣಾ, ಸ್ವಪ್ರಚೋದನಾ ತಂತ್ರ. ಕೆಲವು ಸುಲಭವಾಗಿ ಮತ್ತು ಸುಲಭವಾದ ಬದಲಾವಣೆಗಳನ್ನು ನಮ್ಮ ನಡೆ, ನುಡಿ ಹಾಗೂ ಅಚರಣೆಗಳಲ್ಲಿ ಮಾಡಿಕೊಳ್ಳುವುದರ ಮೂಲಕ ಹೇಗೆ ನಾವು ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದಾಗಿದೆ ಎಂಬುದನ್ನು ಅರಿತುಕೊಳ್ಳುವುದೇ ಆಗಿದೆ. ಇವುಗಳನ್ನು ಕಳೆದ ಬಾರಿ…
View Post

ಸ್ವಚ್ಛ ರಾಜಮಾರ್ಗ

ಮಂಗಳೂರು ರಾಷ್ಟ್ರ ಮಟ್ಟದಲ್ಲಿ ಸ್ವಚ್ಛ ನಗರ ಎಂಬ ಹೆಸರು ಪಡೆದುಕೊಂಡಿದ್ದೇನೋ ನಿಜ. ಆದರೆ ಮಂಗಳೂರಿನ ಹೊರವಲಯದ ಕೆ.ಸಿ.ರಸ್ತೆ, ತಲಪಾಡಿ, ತೊಕ್ಕೊಟ್ಟುವಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳು ತುಂಬಿ ಹೋಗಿ ಸ್ವಚ್ಛ ನಗರಕ್ಕೆ ಕಪ್ಪು ಚುಕ್ಕೆಯಾಗಿ ನಿಂತಿತ್ತು.ಈ ರಸ್ತೆ ಕೇರಳದಿಂದ…
View Post

“ವಿಕಾಸ ಪರ್ವ”

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಜಾತಿ ವ್ಯವಸ್ಥೆ ಇರಲೇ ಇಲ್ಲ. ಅದೆಲ್ಲ ಹುಟ್ಟಿದ್ದು ನಂತರದ ದಿನಗಳಲ್ಲೇ! ಶ್ರೇಷ್ಠ ಪರಂಪರೆಯೊಂದು ಕಾಲಘಟ್ಟದ ಬದಲಾವಣೆಯಲ್ಲಿ ಜಾತಿ ಎಂಬ ಅನಿಷ್ಠ ಪದ್ಧತಿಯಾಗಿ ರೂಪುಗೊಂಡಿತು. ಈಗ ನಾವು ಭಾರತವನ್ನು ಮತ್ತದೇ ಪಟ್ಟಕ್ಕೆ ಕೊಂಡೊಯ್ಯುವ ಕೆಲಸಕ್ಕೆ ಮುನ್ನುಡಿ ಬರೆಯಬೇಕಾಗಿದೆ.ಜಾತಿಯನ್ನು ಮೀರಿ…
View Post