ಬದಲಾವಣೆಯ ಪರ್ವಕಾಲ

Total
0
Shares

ನನ್ನ ಕನಸಿನ ಕರ್ನಾಟಕದ ಕಲ್ಪನೆ ರೂಪುಗೊಂಡಿದ್ದರ ಮೊದಲ ಉದ್ದೇಶವೇ ಜನರನ್ನ ಪ್ರಜ್ಞಾವಂತರನ್ನಾಗಿಸಬೇಕೆನ್ನುವ ಕಾರಣಕ್ಕೆ. ಈ ಸಲುವಾಗಿ ರಾಜ್ಯಾದ್ಯಂತ ಸಾರ್ವಜನಿಕ ಸಭೆಯನ್ನ ಏರ್ಪಡಿಸಲಾಯಿತು.

ಮೊದಲ ಸುತ್ತಿನಲ್ಲಿ ಉತ್ತರ ಕರ್ನಾಟಕ ಭಾಗಗಳಲ್ಲಿ ಸಾರ್ವಜನಿಕ ಸಮಾರಂಭಗಳಿಗೆ ವೇದಿಕೆ ಸಜ್ಜುಗೊಂಡಿತು.

ಮೊದಲ ಕಾರ್ಯಕ್ರಮ ಆರಂಭವಾಗಿದ್ದು ಸೀರೆಗಳಿಂದಲೇ ಪ್ರಸಿದ್ಧವಾಗಿರುವ ಇಳಕಲ್ನಿಂದ. ಇಳಕಲ್ಲಿನ ಜನಕ್ಕೆ ಬದಲಾವಣೆ ಬೇಕು ಎನ್ನುವುದಕ್ಕೆ ಅಂದು ಸೇರಿದ್ದ ಜನರೇ ಉದಾಹರಣೆಯಾಗಿದ್ದರು. ಆದರೆ ಸುಂದರ ಇಳಕಲ್ಲನ್ನ ನಿರ್ಮಿಸಲು ನಾವೇನು ಮಾಡಬೇಕೆನ್ನುವುದು ಸ್ಪಷ್ಟ ಕಲ್ಪನೆ ಇರಲಿಲ್ಲ. ಇಳಕಲ್ ಬಟ್ಟೆ ಉದ್ಯಮಕ್ಕೆ ಹೆಸರುವಾಸಿ ಅದರಲ್ಲೂ ಸೀರೆಯಲ್ಲಂತೂ ಇಳಕಲ್ ಸೀರೆ ಅಂತಾನೆ ಪ್ರಸಿದ್ಧಿ ಪಡೆದಿರುವ ಇಳಕಲ್ ಜಗತ್ತಿನ ಜನ ಬಳಸುವಂತ ವಿನ್ಯಾಸದೊಂದಿಗೆ ಜಗತ್ತಿನ ಮಾರುಕಟ್ಟೆಗೆ ಲಗ್ಗೆ ಇಡುವಂತಾಗಿದ್ದರೆ ಇಳಕಲ್ ಬರಿಯ ಬಟ್ಟೆ ಉದ್ಯಮ ಒಂದರಲ್ಲೇ ತನ್ನ ಊರಿನ ಆದಾಯ ಹೆಚ್ಚಿಸಿಕೊಂಡು  ಸುಂದರ ಇಳಕಳನ್ನ ನಿರ್ಮಿಸಬಹುದಿತ್ತು. ಉಪನ್ಯಾಸದ ಉದ್ದಕ್ಕೂ ಇಂತಹ ಇಳಕಲ್ ನಿರ್ಮಾಣದ ಕನಸು ಬಿತ್ತುತ್ತಿದ್ದರೆ ಜನತೆ ಚಪ್ಪಾಳೆಯ ಸ್ವಾಗತ ನೀಡುತಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಯುವಕರು ನನ್ನ ಕನಸಿನ ಇಳಕಲ್ ನಿರ್ಮಿಸುತ್ತೇವೆ ಎನ್ನುವ ಭರವಸೆ ನೀಡುವುದರೊಂದಿಗೆ ನನ್ನ ಕನಸಿನ ಕರ್ನಾಟಕಕ್ಕೆ ಸಾಥ್ ನೀಡಿದರು.

22886125_1574395175954433_7936358791769237246_n
ಅಲ್ಲಿಂದ ಮುಂದಿನ ಕಾರ್ಯಕ್ರಮ ಧಾರವಾಡದ ಕಾಲೇಜಿನಲ್ಲಿ.
ಯುವಕರು ಕೆಟ್ಟು ಹೋಗಿದ್ದಾರೆ ಎನ್ನುವ ಸಮಾಜದ ಕೂಗನ್ನು ಧಾರವಾಡದ ಕಾಲೇಜಿನ ವಿದ್ಯಾರ್ಥಿಗಳು ಸುಳ್ಳಾಗಿಸಿದ್ದರು. ಅವರು ಕಾರ್ಯಕ್ರಮದ ಉದ್ದಕ್ಕೂ ತೋರಿಸಿದ ಶಿಸ್ತು ಮತ್ತು ಕಾರ್ಯಕ್ರಮದ ಕೊನೆಯಲ್ಲಿ ನನ್ನ ಕನಸಿನ ಧಾರಾವಾಡಕ್ಕಾಗಿ ಕೇಳಿದ ಪ್ರೆಶ್ನೆಗಳು ನಾವು ಧಾರಾವಾಡಕ್ಕಾಗಿ ಏನಾದರು ಮಾಡಬೇಕೆನ್ನುವ ಉತ್ಸಾಹವನ್ನ ತೋರಿಸುತಿತ್ತು. ಬೆಳಗಿನ ಕಾಲೇಜಿನ ಕಾರ್ಯಕ್ರಮದ ನಂತರ ಸಂಜೆ ಹುಬ್ಬಳ್ಳಿಯಲ್ಲಂತೂ ಎಲ್ಲಾ ವರ್ಗದ ಜನ ಸೇರಿದ್ದರು. ಯುವಾ ಬ್ರಿಗೇಡಿನ ಮಾರ್ಗದರ್ಶಕರು ಹುಬ್ಬಳ್ಳಿ ಧಾರವಾಡದ ಕನಸನ್ನ ಬಿಚ್ಚಿಟ್ಟರು. ಧಾರವಾಡ ಹಿದುಸ್ಥಾನಿ ಸಂಗೀತಕ್ಕೆ ಎಂತೆಂಥಾ ದಿಗ್ಗಜರನ್ನ ಕೊಟ್ಟಿದೆ ಇಂತಹ ಈ ಧಾರಾವಾಡವನ್ನ ಸಂಗೀತದ ಹಬ್ಬಾಗಿ ನಿರ್ಮಿಸಿ ಜಗತ್ತಿನ ಜನರು ಹಿಂದುಸ್ಥಾನಿ ಸಂಗೀತವನ್ನ ಕಲಿಯಬೇಕಾದರೆ ಧಾರವಾಡಕ್ಕೆ ಬರುವಂತೆ ಮಾಡಿದ್ದರೆ ಇಲ್ಲಿನ ಎಷ್ಟೋ  ಜನಕ್ಕೆ ಉದ್ಯೋಗ ದೊರೆಯುತಿತ್ತು. ಧಾರವಾಡ ವಿಕಾಸಕ್ಕೆ ಹೆಜ್ಜೆ ಇಡುತಿತ್ತು. ಹುಬ್ಬಳ್ಳಿಯನ್ನ  ಯಂತ್ರೋಪಕರಣಗಳ ತಯಾರಿಕೆಗೆ ಪ್ರಶಸ್ತವಾದ ವಾತಾವರಣವನ್ನ ರೂಪಿಸಿ ಅದರ ಜೊತೆಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣವನ್ನ ಅಭಿವೃದ್ಧಿ ಪಡಿಸಿದ್ದರೆ ಎರಡನೇ ನಗರಗಳ ಪಟ್ಟಿಯಲ್ಲಿ ಹುಬ್ಬಳ್ಳಿ ಮುಂಚೂಣಿಯಲ್ಲಿ ನಿಲ್ಲುತಿತ್ತು ಎನ್ನುತ್ತಾ ತಮ್ಮ ಕನಸನ್ನ ಒಂದೊಂದಾಗಿ ಹುಬ್ಬಳ್ಳಿಯ ಜನತೆಯ ಮುಂದಿಟ್ಟರು. ಹೀಗೆ ಮುಂದಿನ ಕಾರ್ಯಕ್ರಮಗಳು ಡಂಬಳ, ಗುತ್ತಲ, ಹಾವೇರಿಗಳಲ್ಲಿ ನಡೆಯಿತು ಈ ಎಲ್ಲ ಕಡೆಯಲ್ಲೂ ಜನ ಹೆಚ್ಚಿನ ಸಂಖೆಯಲ್ಲಿ ಸೇರುವುದರ ಮೂಲಕ ಹೊಸನಾಡಿನ ನಿರ್ಮಾಣಕ್ಕೆ ಬೆಂಬಲ ಸೂಚಿಸಿದ್ದರು.
24174510_1484326571665332_4043264557870791568_n
24068320_1484499661648023_2082336319719330687_n24068072_1484499654981357_8732588114902150291_n 24131267_1485468664884456_5851436419134333210_n
24176824_1487551224676200_878885843919890728_n 24231890_1487551244676198_4575232285633228839_n24176770_1488187701279219_102036302884608332_n
ನಂತರ ಕೊಪ್ಪಳದ ಕಾರ್ಯಕ್ರಮದಲ್ಲಿ,‌’ನಾವೆಲ್ಲ ರಾಮಮಂದಿರದ ನಿರ್ಮಾಣದ ಹೋರಾಟ ನಡೆಸುತ್ತೇವೆ.‌ ಅದರ ಜೊತೆಗೆ ರಾಮನ ಬಂಟನಾಗಿದ್ದ ಆಂಜನೇಯನ ಜನ್ಮಸ್ಥಾನ ಕೊಪ್ಪಳದಲ್ಲಿದೆ ಇದನ್ನ ಆಂಜನೇಯನ ಮ್ಯೂಸಿಂ ಆಗಿ ನಿರ್ಮಿಸಿ ಜಗತ್ತಿನ ಆಂಜನೇಯನ ಭಕ್ತರನ್ನ ಕರೆದು ತರುವಂತಾಗಿದ್ದರೆ ಕೊಪ್ಪಳದ ಆದಾಯವನ್ನ ಆಂಜನೇಯ ವೃದ್ಧಿಸುತ್ತಿದ್ದ. ಆದರೆ ನಮ್ಮ ನಾಯಕರಿಗೆ ಇದಾವುದರ ಕಲ್ಪನೆ ಇಲ್ಲ. ನಾವಾದರೂ ಈ ಕನಸನ್ನ ಸಾಕಾರಮಾಡಿಕೊಳ್ಳಲು ಕೆಲಸಮಾಡಬೇಕಾಗಿದೆ’ ಎಂದು ಹೇಳಲಾಯಿತು. ಕೊಪ್ಪಳದ ಬೆಳಿಗ್ಗಿನ ಕಾರ್ಯಕ್ರಮವನ್ನ ಮುಗಿಸಿ ಸಂಜೆ ತಾವರೆಗೇರಾದಲ್ಲಿ ಸಾರ್ವಜನಿಕರನ್ನ ಉದ್ದೇಶಿಸಿ ಮಾತನಾಡಲಾಯಿತು. ಕಿಕ್ಕಿರಿದು ಸೇರಿದ್ದ ಜನ ಅತ್ತಿತ್ತ ಅಲುಗಾಡದೆ ಇಡಿಯ ಕಾರ್ಯಕ್ರಮವನ್ನ ಶಾಂತ ಚಿತ್ತದಲ್ಲಿ ಆಲಿಸುವುದರ ಮೂಲಕ ನನ್ನ ಕನಸಿನ ತಾವರಗೇರಾ ನಿರ್ಮಾಣಕ್ಕೆ ಸಮ್ಮತಿಸಿದ್ದರು.
ತಾವರೆಗೆರದಿಂದ ದೇವದುರ್ಗ, ಸಿರಗುಪ್ಪ, ಹೊಸದುರ್ಗ ಸಾರ್ವಜನಿಕ ಕಾರ್ಯಕ್ರಮ ನಡೆಸುವುದರ ಮೂಲಕ ಮೊದಲ ಸುತ್ತಿನ ನನ್ನ ಕನಸಿನ ಕರ್ನಾಟಕದ ಜಾಗೃತ ಕಾರ್ಯಕ್ರಮವು ಸಮಾಪ್ತಿಗೊಂಡಿತು.
24176755_1488533801244609_7666701987514011226_n 24177218_1488533811244608_980009583666803551_n 24312610_1490350804396242_7877667574356967707_n
ನನ್ನ ಕನಸಿನ ಕರ್ನಾಟಕದ ಮೊದಲ ಸಾರ್ವಜನಿಕ ಕಾರ್ಯಕ್ರಮವನ್ನ ನೋಡಿದ ಉತ್ತರ ಕರ್ನಾಟಕದ ಜನ ತಮ್ಮ ತಾಲೂಕುಗಳಲ್ಲೂ ಕಾರ್ಯಕ್ರಮ ಆಯೋಜಿಸುವಂತೆ ಕೇಳಿಕೊಂಡರು. ಈ ನಿಟ್ಟಿನಲ್ಲಿ ದಕ್ಷಿಣ ಕರ್ನಾಟಕದ ಒಂದೆರಡು ಭಾಗಗಳನ್ನ ಸೇರಿಸಿಕೊಂಡು ಉತ್ತರ ಕರ್ನಾಟಕದ ಎರಡನೇ ಸುತ್ತಿನ ಕಾರ್ಯಕ್ರಮಗಳ ದಿನಾಂಕಗಳನ್ನ ನಿಗದಿಪಡಿಸಲಾಯಿತು. ಈ‌ ಬಾರಿ ಕರ್ನಾಟಕದ ತುತ್ತ‌‌ ತುದಿಯ ಜಿಲ್ಲೆಯಾದ ಕಲ್ಬುರ್ಗಿಯ ಯಾದಗಿರಿಯಿಂದ ಸಾರ್ವಜನಿಕ ಸಭೆಯನ್ನ ಪ್ರಾರಂಭಿಸಲಾಯಿತು. ಕಲ್ಬುರ್ಗಿ ಕರ್ನಾಟಕದಲ್ಲೇ ಅತಿಹೆಚ್ಚು ತೊಗರಿ ಬೆಳೆಯುವ ಜಿಲ್ಲೆ. ಆದರೆ ಬೆಳೆದ ಬೆಳೆಯನ್ನ ಸಂಸ್ಕರಿಸಿ ಹೊರ ರಾಜ್ಯಗಳಿಗೆ, ವಿದೇಶಗಳಿಗೆ ಕಳುಹಿಸಕೊಡಬಹುದಾದ ವ್ಯವಸ್ಥೆಯನ್ನ ಸಮರ್ಥವಾಗಿ ರೂಪಿಸಿಕೊಳ್ಳದಿರುವುದೇ ಅತಿಹೆಚ್ಚು ತೊಗರಿ ಬೆಳೆದರು ಜಿಲ್ಲೆಯ ಆರ್ಥಿಕತೆಯ ಹೆಚ್ಚಿಸಲು ಸಾಧ್ಯವಾಗದೆ ಇರೋದು ಎಂದು ಯುವಾ ಬ್ರಿಗೇಡಿನ ಮಾರ್ಗದರ್ಶಕರು ತಿಳಿಸಿದರು ಮುಂದಿನ ಕಾರ್ಯಕ್ರಮಗಳು ಸೇಡಂ, ಮುದೋಳ, ಅಥಣಿಗಳಲ್ಲೂ ತುಂಬಿದ ಜನರ ಮಧ್ಯ ಯಶಸ್ವಿಯಾಯಿತು. ಮುಂದೆ ಬಾಗಲಕೋಟೆಯಲ್ಲೂ ಕಿಕ್ಕಿರಿದು ಸೇರಿದ್ದ ಜನರು ಕನಸಿನ ಕರ್ನಾಟಕಕ್ಕೆ ಒಪ್ಪಿಗೆ ಸೂಚಿಸಿದ್ದರು. ಅಲ್ಲಿಂದ ಮುಂದಿನ ಕಾರ್ಯಕ್ರಮ ಕಡಲತಡಿಯ ಕುಂದಾಪುರದಲ್ಲಿ   ಜರುಗಿತು. ನಂತರದ ಕಾರ್ಯಕ್ರಮಗಳು ಚಿಕ್ಕನಾಯಕನ ಹಳ್ಳಿ ಮತ್ತು ಹೊಸರಿತ್ತಿಯಲ್ಲಿ ನಡೆಯುವುದರ ಮೂಲಕ ಎರಡನೇ ಸುತ್ತಿನ ಕಾರ್ಯಕ್ರಮಗಳು ಕೊನೆಗೊಂಡಿತು.
25289534_1500494936715162_4476362598769861621_n
25289696_1498560680241921_8822514627095831941_n
25498271_1501478473283475_2416773934356741569_n

ನನ್ನ ಕನಸಿನ ಕರ್ನಾಟಕದ ಬಹುತೇಕ ಎರಡು ಸುತ್ತುಗಳ ಉತ್ತರ ಕರ್ನಾಟಕದ ಪ್ರವಾಸವನ್ನ ಮುಗಿಸಿ ಈ ಬಾರಿಯ ಮೂರನೇ ಸುತ್ತಿನ ಬಹಿರಂಗ ಸಮಾವೇಶಗಳನ್ನ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಆಯೋಜಿಸಲಾಯಿತು. ಹಿಂದುಳಿದ ಜಿಲ್ಲೆ ಎಂದು ಹಣೆಪಟ್ಟಿ ಹೊರಸಿರುವ ಚಾಮರಾಜನಗರದಿಂದ ಕಾರ್ಯಕ್ರಮ ಆರಂಭವಾಯಿತು. ಚಾಮರಾಜನಗರದ ಜನ ರಾಜಕೀಯ ಕಾರ್ಯಕ್ರಮವನ್ನ ಹೊರತು ಪಡಿಸಿ ಬಹುತೇಕ ಕಾರ್ಯಕ್ರಮಕ್ಕೆ ಹೋಗುವುದು ಕಡಿಮೆ ಎಂದು ಭಾವಿಸಿದ್ದ ನಮಗೆ ರಾಜಕೀಯ ಕಾರ್ಯಕ್ರಮಕ್ಕೂ ಸೇರುವ ಜನಕ್ಕಿಂತ ಹೆಚ್ಚು ಜನ ಸೇರುವ ಮೂಲಕ ಆಶ್ಚರ್ಯ ಉಂಟುಮಾಡಿದ್ದರು.

ಚಾಮರಾಜನಗರ ಜಿಲ್ಲೆ ಉತ್ತರ ಕನ್ನಡಕ್ಕೆ ಪೈಪೋಟಿ ನೀಡಬಲ್ಲ ಜಿಲ್ಲೆ. ಸಮುದ್ರವನ್ನ ಹೊರತು ಪಡಿಸಿ ಮಳೆ ಕಡಿಮೆ ಎನ್ನುವುದು ಬಿಟ್ಟರೆ ಮತ್ತೆಲ್ಲ ವಿಷಯದಲ್ಲೂ ಚಾಮರಾಜನಗರ ಉತ್ತರ ಕನ್ನಡದ ಸಮಕ್ಕೆ ನಿಲ್ಲುವಂತದ್ದೇ. ಪ್ರಾಕೃತಿಕವಾಗಿ ಚಾಮರಾಜನಗರ ಎಷ್ಟು ಶ್ರೀಮಂತವೆಂದರೆ ಮೂರು ಮೂರು ಪ್ರಸಿದ್ಧ ಬೆಟ್ಟಗಳು, ನದಿ ಜಲಪಾತಗಳು, ರಾಷ್ಟೀಯ ಉದ್ಯಾನವನವನ್ನ ಒಳಗೊಂಡಿದೆ. ಬಿಳಿಗಿರಿರಂಗನ ಬೆಟ್ಟ, ಮಲೆಮಹದೇಶ್ವರ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ, ಕಾವೇರಿ, ಕಬಿನಿ, ಸುವರ್ಣವತಿ , ಹೊಗೇನಕಲ್ ಜಲಪಾತ, ಗಗನಚುಕ್ಕಿ ಭರಚುಕ್ಕಿ ಜಲಪಾತ, ಬಂಡೀಪುರ ರಾಷ್ಟೀಯ ಉದ್ಯಾನವನ ಹೀಗೆ ಪೃಕೃತಿಯ ಸೌಂದರ್ಯದ ಜೊತೆಗೆ ಪ್ರಾಕೃತಿಕ ಸಂಪತ್ತನ್ನ ಹೊತ್ತು ನಿಂತಿದ್ದರು ಹಿಂದುಳಿದ ಜಿಲ್ಲೆಯೆಂದು ಮೂಲೆಸೇರಿಸಿರುವುದು ದುರಂತ ಎಂದು ಕಾರ್ಯಕ್ರಮದ ಉದ್ದಕ್ಕೂ ನಾಯಕರ ವೈಫಲ್ಯವನ್ನ ಬಿಚ್ಚಿಡಲಾಯಿತು. ಅಲ್ಲಿಂದ ಮುಂದೆ ಶಿರಾಳಕೊಪ್ಪ, ಭದ್ರಾವತಿ, ತಲ್ಲೂರಂಗಡಿ, ಮೈಸೂರಿನಲ್ಲೂ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಮುಂದಿನ ಕಾರ್ಯಕ್ರಮಗಳು ಉತ್ತರ ಕನ್ನಡದ ಭಾಗಗಳಲ್ಲಿ ನಡೆಯಿತು. ಮುಂಡಕೋಡ್, ಶಿರಸಿ, ಕುಮಟಾ, ಅಂಕೋಲಗಳಲ್ಲಿ ಉತ್ತರ ಕನ್ನಡದ ವಿಕಾಸಕ್ಕೆ ಮಾಡಬಹುದಾದ ಕನಸುಗಳನ್ನ ಮುಂದಿಡಲಾಯಿತು. ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಪ್ರಶಸ್ತವಾದ ಜಾಗ ಸಮುದ್ರ, ಕಾಡು, ನದಿ, ಜಲಪಾತಗಳು, ಪ್ರಸಿದ್ಧ ಧಾರ್ಮಿಕ ಕೇಂದ್ರಗಳು ಇಷ್ಟನ್ನೇ ಅಭಿವೃದ್ಧಿ ಪಡಿಸಿದ್ದರೆ ಉತ್ತರ ಕನ್ನಡ ಪ್ರವಾಸಿಗರ ಸ್ವರ್ಗವಾಗುತಿತ್ತು. ಹಾಗೆ ಕರಾವಳಿ ಭಾಗದ ಬಂದರುಗಳನ್ನ ಅಭಿವೃದ್ಧಿ ಪಡಿಸಿ ಮೀನಿನ ಸಂಸ್ಕರಣಾ ಘಟಕವನ್ನ ಸ್ಥಾಪಿಸಿದ್ದೆ ಆಗಿದ್ದರೆ ನೇರವಾಗಿ ವಿದೇಶಗಳಿಗೆ ಉತ್ತರ ಕನ್ನಡದ ಕರಾವಳಿಯಿಂದಲೇ ಮೀನಿನ ಉತ್ಪನ್ನಗಳನ್ನ ಕಳುಹಿಸಿಕೊಡಬಹುದಿತ್ತು. ಘಟ್ಟದ ಮೇಲಿನ ಶಿರಸಿಯ ಭಾಗಗಳಲ್ಲಿ ಅಮೂಲ್ಯವಾದ ಔಷಧಿಯ ಸಸ್ಯಗಳು ದೊರಕುವುದರಿಂದ ಆ ಭಾಗಗಳೇನಾದರೂ ಆರೋಗ್ಯದ ಕೇಂದ್ರವನ್ನಾಗಿ ರೂಪುಗೊಳಿಸಿದ್ದರೆ ವಿದೇಶಿಗರು ಹುಡುಕಿಕೊಂಡು ಬರುತಿದ್ದರು. ಕಾರಣ ಇಂದು ಇಡಿಯ ವಿಶ್ವವೇ ಆರೋಗ್ಯಕ್ಕೆ ಹೋರಾಟ ನಡೆಸುತ್ತಿದೆ. ಇದರ ಕಡೆ ನಾಯಕರು ಗಮನ ಹರಿಸಿದ್ದರೆ ರಾಜ್ಯದ ಬೊಕ್ಕಸಕ್ಕೆ ಉತ್ತರ ಕನ್ನಡ ಒಂದೇ ಬಂಗಾರವನ್ನ ಸುರಿಯುತಿತ್ತು. ಹೀಗೆ ತಮ್ಮ ಕನಸನ್ನ ಬಿಡಿಸಿಡಲಾಯಿತು.
25299005_1501478553283467_2824639487897381057_n 25396226_1502344146530241_8719953940899025424_n 25442797_1504201919677797_7865241181765362746_n 26992349_1537526456345343_587295939513182876_n 27332037_1544434582321197_1868530792426876925_n 27332657_1539298429501479_1743378287249928393_n 27459343_1547255195372469_7787321262196566209_n 27540877_1542487769182545_7098990539547308146_n 27657414_1546287528802569_5657130243657429600_n
ನಂತರದ ಕಾರ್ಯಕ್ರಮಗಳು ಬೆಂಗಳೂರಿನ ಮತ್ತಿಕೆರೆ, ಬೇಗೂರು, ಹೊಸಕೋಟೆಯಲ್ಲಿ ಜರುಗಿತು. ಸಿಂಗಾಪುರದಂತ ರಾಷ್ಟ್ರಗಳು ತ್ಯಾಜ್ಯವನ್ನ ಸಂಸ್ಕರಿಸಿ ಅದರಿಂದ ಉತ್ಪತ್ತಿಯಾಗುವ ವಸ್ತುಗಳನ್ನ ಭಾರದಂತ ದೇಶಗಳಿಗೆ ಸಿಮೆಂಟ್ ತಯಾರಿಕಾ ಕಾರ್ಖಾನೆಗಳಿಗೆ ಕಚ್ಚಾವಸ್ತುವಾಗಿ ರಫ್ತು ಮಾಡುತ್ತಾರೆಂದರೆ ನಮಗೆ ಈ ತಂತ್ರಜ್ಞವನ್ನ ಅಭಿವೃದ್ಧಿಪಡಿಸಲು ಏಕೆ ಸಾಧ್ಯವಾಗಿಲ್ಲ. ರಾಜ್ಯಕ್ಕೆ ಬರುವ ಹೂಡಿಕೆಯನ್ನ ಒಂದೇ ಬೆಂಗಳೂರಿಗೆ ಸುರಿದು ಸುರಿದು ಬೆಂಗಳೂರನ್ನ ಉಬ್ಬಿಸಿ ಬಿಟ್ಟಿದ್ದೀರಲ್ಲ ಅದೇ ಹೂಡಿಕೆಯನ್ನ ಕರ್ನಾಟಕದ ಬೇರೆ ನಗರಗಳಿಗೆ ಹಂಚಿದ್ದರೆ ಆ ನಗರಗಳು ಬೆಳೆದು ಬೆಂಗಳೂರಿನ ಹೊರೆಯನ್ನ ಕಡಿಮೆ ಮಾಡುತಿತ್ತು. ಹೀಗೆ ಮುಂದುವರಿದರೆ ಬೆಂಗಳೂರಿನಲ್ಲಿ ಬದುಕಲು ಆಗದ ಸ್ಥಿತಿಯನ್ನ ಎದುರಿಸಬೇಕಾಗುತ್ತದೆ ಎಂಬ ಆತಂಕವನ್ನ ಬೆಂಗಳೂರಿಗರ ಮುಂದಿಡಲಾಯಿತು. ಬೆಂಗಳೂರಿನ ಕಾರ್ಯಕ್ರಮಗಳ ನಂತರ ಮುಂದಿನ ಕಾರ್ಯಕ್ರಮ ಕೋಲಾರ ಜಿಲ್ಲೆಯ ನರಸಾಪುರ, ಮುಳಬಾಗಿಲು, ಮಾಲೂರುಗಳಲ್ಲಿ ಕಾರ್ಯಕ್ರಮ ಯಶಸ್ವಿಯಾಗುವುದರೊಂದಿಗೆ ನನ್ನ ಕನಸಿನ ಕರ್ನಾಟಕದ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವು ಮುಕ್ತಾಯ ಗೊಂಡಿತು.
Leave a Reply

Your email address will not be published. Required fields are marked *

You May Also Like

ನನ್ನ ಕನಸಿನ ಕರ್ನಾಟಕ

ಕನಸು ಕಾಣುವುದಕ್ಕೆ ದುಡ್ಡು ಕೊಡಬೇಕೇ?’ ಇದು ಸಾಮಾನ್ಯವಾಗಿ ನಾವು ನೀವೆಲ್ಲ ಏನಾದರೂ ಕನಸು ಕಂಡದ್ದನ್ನು ಇನ್ನೊಬ್ಬರ ಹೇಳೋವಾಗ ಬಳಸುವಂತಹ ಒಂದು ಸರ್ವೇ ಸಾಮಾನ್ಯವಾದ ಮಾತು. ಹೌದು ಕನಸು ಕಾಣೋದಕ್ಕೆ ಕಾಸು ಕೊಡೋದು ಬೇಡ ನಿಜ. ಹಾಗಂತ ಕಂಡ ಕನಸನ್ನು ನನಸು ಮಾಡುವಂತ…
View Post

ಮತದಾನ ನಮ್ಮ‌ ಹಕ್ಕು

ಸಮರ್ಥನ ಆಯ್ಕೆ ನಮ್ಮ ಕರ್ತವ್ಯ.. ಪ್ರಜಾಪ್ರಭುತ್ವ ಅತ್ಯಂತ ಸುಂದರವಾದ ವ್ಯವಸ್ಥೆಗಳಲ್ಲೊಂದು. ಇದು ಪ್ರಜೆಗಳಿಗೆ ಆಳುವ ಹಕ್ಕನ್ನು ದಯಪಾಲಿಸುತ್ತದೆ. ತನ್ನ ಪ್ರತಿನಿಧಿಯಾಗುವ ಯೋಗ್ಯತೆ ಉಳ್ಳವರನ್ನು ತಾನೇ ಆರಿಸಿಕೊಳ್ಳುವ ಅವಕಾಶವನ್ನು ಕೊಡುವುದು ಪ್ರಜಾಪ್ರಭುತ್ವ ಮಾತ್ರ. ರಾಜಪ್ರಭುತ್ವದಲ್ಲಿ ಹಾಗಿರಲಿಲ್ಲ. ಅಲ್ಲಿ ರಾಜನೇ ತನ್ನ ಉತ್ತರಾಧಿಕಾರಿಯನ್ನು ಗುರುತಿಸುತ್ತಾನೆ,…
View Post

ನಿವೇದಿತಾ ಸೇವಾಕೇಂದ್ರ

ಅದ್ವೈತ ತತ್ತ್ವದ ಶ್ರೇಷ್ಠ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರ ಜಯಂತಿಯಂದು ಅಂದರೆ ಏಪ್ರಿಲ್ 30 ರಂದು ಕಲ್ಲೋಳಿಯಲ್ಲಿ ಪ್ರಾರಂಭಗೊಂಡ ‘ನಿವೇದಿತಾ ಸೇವಾಕೇಂದ್ರ’ ಯಶಸ್ವಿಯಾಗಿ ನಡೆಯುತ್ತಿದೆ. ಆರ್ಥಿಕವಾಗಿ ಹಿಂದುಳಿದ, ಶೋಷಿತ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗುವಂತೆ ರೂಪಿಸಿದ ಈ ಯೋಜನೆ ಫಲ ಕೊಡುತ್ತಿದೆ. ಲಘು ಉದ್ಯೋಗ ಭಾರತಿಯ…
View Post

“ಆಲ್ ದ ಬೆಸ್ಟ್”

“ಆಲ್ ದ ಬೆಸ್ಟ್” ಒಂದು ಸ್ವಪ್ರೇರಣಾ, ಸ್ವಪ್ರಚೋದನಾ ತಂತ್ರ. ಕೆಲವು ಸುಲಭವಾಗಿ ಮತ್ತು ಸುಲಭವಾದ ಬದಲಾವಣೆಗಳನ್ನು ನಮ್ಮ ನಡೆ, ನುಡಿ ಹಾಗೂ ಅಚರಣೆಗಳಲ್ಲಿ ಮಾಡಿಕೊಳ್ಳುವುದರ ಮೂಲಕ ಹೇಗೆ ನಾವು ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದಾಗಿದೆ ಎಂಬುದನ್ನು ಅರಿತುಕೊಳ್ಳುವುದೇ ಆಗಿದೆ. ಇವುಗಳನ್ನು ಕಳೆದ ಬಾರಿ…
View Post

ಸ್ವಚ್ಛ ರಾಜಮಾರ್ಗ

ಮಂಗಳೂರು ರಾಷ್ಟ್ರ ಮಟ್ಟದಲ್ಲಿ ಸ್ವಚ್ಛ ನಗರ ಎಂಬ ಹೆಸರು ಪಡೆದುಕೊಂಡಿದ್ದೇನೋ ನಿಜ. ಆದರೆ ಮಂಗಳೂರಿನ ಹೊರವಲಯದ ಕೆ.ಸಿ.ರಸ್ತೆ, ತಲಪಾಡಿ, ತೊಕ್ಕೊಟ್ಟುವಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳು ತುಂಬಿ ಹೋಗಿ ಸ್ವಚ್ಛ ನಗರಕ್ಕೆ ಕಪ್ಪು ಚುಕ್ಕೆಯಾಗಿ ನಿಂತಿತ್ತು.ಈ ರಸ್ತೆ ಕೇರಳದಿಂದ…
View Post

“ವಿಕಾಸ ಪರ್ವ”

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಜಾತಿ ವ್ಯವಸ್ಥೆ ಇರಲೇ ಇಲ್ಲ. ಅದೆಲ್ಲ ಹುಟ್ಟಿದ್ದು ನಂತರದ ದಿನಗಳಲ್ಲೇ! ಶ್ರೇಷ್ಠ ಪರಂಪರೆಯೊಂದು ಕಾಲಘಟ್ಟದ ಬದಲಾವಣೆಯಲ್ಲಿ ಜಾತಿ ಎಂಬ ಅನಿಷ್ಠ ಪದ್ಧತಿಯಾಗಿ ರೂಪುಗೊಂಡಿತು. ಈಗ ನಾವು ಭಾರತವನ್ನು ಮತ್ತದೇ ಪಟ್ಟಕ್ಕೆ ಕೊಂಡೊಯ್ಯುವ ಕೆಲಸಕ್ಕೆ ಮುನ್ನುಡಿ ಬರೆಯಬೇಕಾಗಿದೆ.ಜಾತಿಯನ್ನು ಮೀರಿ…
View Post