ನನ್ನ ಕನಸಿನ ಕರ್ನಾಟಕ

Total
0
Shares

ಕನಸು ಕಾಣುವುದಕ್ಕೆ ದುಡ್ಡು ಕೊಡಬೇಕೇ?’ ಇದು ಸಾಮಾನ್ಯವಾಗಿ ನಾವು ನೀವೆಲ್ಲ ಏನಾದರೂ ಕನಸು ಕಂಡದ್ದನ್ನು ಇನ್ನೊಬ್ಬರ ಹೇಳೋವಾಗ ಬಳಸುವಂತಹ ಒಂದು ಸರ್ವೇ ಸಾಮಾನ್ಯವಾದ ಮಾತು. ಹೌದು ಕನಸು ಕಾಣೋದಕ್ಕೆ ಕಾಸು ಕೊಡೋದು ಬೇಡ ನಿಜ. ಹಾಗಂತ ಕಂಡ ಕನಸನ್ನು ನನಸು ಮಾಡುವಂತ ಸಾಮಥ್ರ್ಯವಿಲ್ಲದೇ ಸುಮ್ಮನೆ ಕಾಲಹರಣ ಮಾಡುವಂತಹ ಕನಸು ಕಾಣೋದಕ್ಕೂ ಅರ್ಥವಿಲ್ಲ. ಆದರೆ ಯುವಾಬ್ರಿಗೇಡ್ ಕಾಲಹರಣವಾಗುವಂತಹ ವ್ಯರ್ಥ ಕನಸನ್ನು ಕಾಣುವುದಿಲ್ಲ! ಅದು ಭವ್ಯ ಸಮಾಜವನ್ನು ನಿರ್ಮಿಸುವ ಕನಸನ್ನು ಕಾಣುತ್ತದೆ. ಅದಕ್ಕೆಂದೇ ‘ನನ್ನ ಕನಸಿನ ಕರ್ನಾಟಕ’ ಎನ್ನುವ ಪರಿಕಲ್ಪನೆಯನ್ನು ಜನರಲ್ಲಿ ಬಿತ್ತಿ ಕರ್ನಾಟಕದ ಕುರಿತಂತೆ ಅವರ ಕನಸುಗಳನ್ನು ಸಾಕಾರಗೊಳಿಸುವ ಯೋಜನೆಯನ್ನು ರೂಪಿಸಿದೆ.

ಯಾವತ್ತಾದರೂ ನಮ್ಮ ರಾಜ್ಯ, ನಮ್ಮ ಊರು ಹೀಗಿರಬೇಕು ಎಂಬ ಕನಸನ್ನೇನಾದರೂ ಕಂಡಿದ್ದೀರಾ? ನಮ್ಮ ರಾಜ್ಯ ಎರಡೂವರೆ ಲಕ್ಷಕೋಟಿ ಸಾಲದ ಹೊರೆಯನ್ನು ಹೊತ್ತುಕೊಂಡಿದೆ. ಹೀಗೆಯೇ ಮುಂದುವರೆದರೆ ನಮ್ಮ ರಾಜ್ಯ ಅಧಃಪತನದತ್ತ ಸಾಗುವುದರಲ್ಲಿ ಅನುಮಾನವೇ ಇಲ್ಲ. ಇದನ್ನು ತಡೆದು ಶ್ರೇಷ್ಠ ಕರ್ನಾಟಕದ ನಿರ್ಮಾಣವಾಗಬೇಕು ಎನ್ನುವುದು ನಮ್ಮ ಆಶಯ.

ಇಡಿಯ ದೇಶ ಉತ್ತಮ ನಾಯಕನ ನೇತೃತ್ವದಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕದ ಸ್ಥಿತಿಗತಿ ಬದಲಾಗದಿದ್ದರೆ ಹೇಗೆ? ಇನ್ನೂ ನಮ್ಮ ರಾಜ್ಯವನ್ನು ತೆಲಂಗಾಣ, ಒರಿಸ್ಸಾ, ಬಿಹಾರದಂತಹ ರಾಜ್ಯಗಳಿಗೆ ಹೋಲಿಸಿಕೊಂಡಿರಬೇಕೆ ಅಥವಾ ಮುಂದುವರೆದ ರಾಷ್ಟ್ರಗಳ ಜೊತೆ ಹೋಲಿಸಿಕೊಳ್ಳಬಹುದಾದಂತಹ ಕರ್ನಾಟಕವನ್ನು ಕಟ್ಟಬೇಕೆ? ಜಾಗತಿಕ ಮಟ್ಟದಲ್ಲಿ ನಮ್ಮನ್ನು ಗುರುತಿಸಿಕೊಳ್ಳುವ ಸಲುವಾಗಿಯೇ ರಾಜ್ಯಾದ್ಯಂತ ನನ್ನ ಕನಸಿನ ಕರ್ನಾಟಕ ಅಭಿಯಾನವನ್ನು ಆರಂಭಿಸಲಾಗಿದೆ.

ಆಡಳಿತ ನಡೆಸುವ ಸರಕಾರಗಳು ಚುನಾವಣೆ ವೇಳೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುತ್ತಿವೆ. ಈ ಬಾರಿ ಜನ ಪ್ರತಿನಿಧಿಗಳು ನೀಡುವ ಭರವಸೆಗಳಿಗೆ ನೀಡುವ ಭರವಸೆಗಳಿಗೆ ಮೋಸಹೋಗದೇ, ಗ್ರಾಮಗಳ ಅಭಿವೃದ್ಧಿಗಾಗಿ ನಾವು ತಯಾರಿಸಿದ ನೀಲಿನಕ್ಷೆಯನ್ನು ಅವರ ಕೈಲಿಟ್ಟು, ಅದರಲ್ಲಿರುವ ಕೆಲಸಗಳನ್ನು ಮಾಡಿ ಕೊಡಲು ಒತ್ತಾಯಿಸಲಾಗುವುದು. ಅದಕ್ಕಾಗಿ ಪ್ರಜ್ಞಾವಂತ ಮತದಾರರನ್ನು ತಯಾರು ಮಾಡಿ ಸ್ಥಳೀಯ ಸಮಸ್ಯೆಗಳನ್ನು ಪಟ್ಟಿ ಮಾಡಲಾಗುವುದು. ಸ್ಥಳೀಯ ಸಮಸ್ಯೆಗಳನ್ನು ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ಸಾಮಾಜಿಕ ನ್ಯಾಯ, ಉದ್ಯೋಗ, ಪರಿಸರ, ಕೈಗಾರಿಕೆ, ಕೃಷಿ, ಪಟ್ಟಣ ಅಭಿವೃದ್ಧಿ, ಐಟಿ-ಬಿಟಿ, ಮೀನುಗಾರಿಕೆ ಎಂಬ ವಿಭಾಗಗಳಲ್ಲಿ ವಿಂಗಡಿಸಿಕೊಳ್ಳಲಾಗುವುದು. ದೊರೆವಂತಹ ಸಲಹೆಗಳನ್ನು ಗಮನಿಸಿ ಸೂಕ್ತವಾದುದ್ದನ್ನು ಆಯ್ಕೆ ಮಾಡಿ ನೀಲಿನಕ್ಷೆ ತಯಾರು ಮಾಡುವ ಜವಾಬ್ದಾರಿ ತಜ್ಞರದ್ದು. ತಜ್ಞರ ತಂಡದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ದೀರ್ಘಕಾಲ ಅನುಭವವಿರುವವರು, ಊರಿನಲ್ಲಿ ಜನರ ಗೌರವಕ್ಕೆ ಪಾತ್ರರಾದಂತಹ ಕಾಲೇಜು ಅಧ್ಯಾಪಕರು, ಭಾರತೀಯ ಪರಂಪರೆಯನ್ನು ಗೌರವಿಸುವಂತಹವರು, ನಿವೃತ್ತರಾದ ಪ್ರಾಮಾಣಿಕ ಅಧಿಕಾರಿಗಳು, ರಾಜಕೀಯದಿಂದ ನಿವೃತ್ತ ಹೊಂದಿದವರು – ಹೀಗೆ ಭಿನ್ನ ಭಿನ್ನ ಜನರನ್ನು ಯೋಚಿಸಬಹುದು. ಕ್ರೋಢೀಕರಣಗೊಂಡ ಕನಸುಗಳ ನೀಲಿನಕ್ಷೆಯಲ್ಲಿ ಬಹುತೇಕವು ಸ್ಥಳೀಯವಾಗಿ ಜನರ ಸಹಕಾರದಿಂದಲೇ ಪರಿಹಾರ ಕಾಣಲು ಸಾಧ್ಯವಿದೆ. ಶೇಕಡಾ 50% ಸಮಸ್ಯೆಗಳು ಹೀಗೆ ಸಾರ್ವಜನಿಕರಿಂದಲೇ ಪರಿಹಾರ ಕಂಡರೆ, ಶೇಕಡಾ 25% ಅಧಿಕಾರಿಗಳಿಂದ ಮತ್ತು ಶೇಕಡಾ 25% ಸಮಸ್ಯೆಗಳು ಮಾತ್ರ ಜನ ಪ್ರತಿನಿಧಿಗಳಿಂದಲೇ ಪರಿಹಾರ ಕಾಣುವಂತದ್ದಾಗಿದೆ. ಅಲ್ಲಿಗೆ ಸರಕಾರ ಯಾವುದೇ ಪಕ್ಷದ್ದಾಗಿರಲಿ ನಮ್ಮ ಊರು ಸುಭಿಕ್ಷವಾಗಿರಲು ನಾವೇ ಶ್ರಮಿಸಿದಂತಾಗುತ್ತದೆ. ನಮ್ಮ ನೀಲಿನಕ್ಷೆಯಲ್ಲಿರುವ ಕನಸುಗಳನ್ನು ಈಡೇರಿಸುವ ಆಶ್ವಾಸನೆಯಿಂದಾಗಿ ಆರಿಸಿ ಬಂದ ಜನಪ್ರತಿನಿಧಿಗಳಿಂದ ಜನರು ವಂಚಿತರಾಗುವ ಪ್ರಮೇಯವೇ ಇಲ್ಲ. ಪ್ರಜ್ಞಾವಂತ ಜನತೆಯು ಭಯದಿಂದ ಆಳುವ ವರ್ಗ ಜನರನ್ನು ವಂಚಿಸುವ ಸಾಧ್ಯತೆಯೂ ಇಲ್ಲ.

ಈಗಾಗಲೇ ರಾಜ್ಯದ ಬಹುತೇಕ ಎಲ್ಲ ಕಡೆ ನನ್ನ ಕನಸಿನ ಕರ್ನಾಟಕ ಕುರಿತು ಪತ್ರಿಕಾ ಗೋಷ್ಠಿಗಳು, ಪ್ರಜ್ಞಾವಂತರ ಸಭೆಗಳು ನಡೆದಿವೆ. ನನ್ನ ಕನಸಿನ ಕರ್ನಾಟಕದ ಮೊದಲ ಸಾರ್ವಜನಿಕ ಕಾರ್ಯಕ್ರಮ ಇಳಕಲ್ನಲ್ಲಿ ನಡೆಯಿತು. ಆಯಾ ಜಿಲ್ಲೆ ಆಯಾ ತಾಲೂಕಿನಲ್ಲಿ ನಡೆದ ಪ್ರಜ್ಞಾವಂತರ ಸಭೆಗಳಲ್ಲಿ ಸ್ಥಳೀಯ ಸಮಸ್ಯೆ ಹಾಗೂ ಸಲಹೆಗಳನ್ನು ಪಟ್ಟಿ ಮಾಡಲಾಗಿದೆ. ಜನರು ತಮ್ಮ ಕನಸುಗಳನ್ನು ಹಂಚಿಕೊಳ್ಳಲು ಸ್ಥಳೀಯ ಕಾರ್ಯಕರ್ತರ ವಾಟ್ಸಪ್ ನಂಬರನ್ನು ಕೊಡಲಾಗಿದೆ. ಬಳ್ಳಾರಿ, ಗದಗ, ಸಂಡೂರು ಹಾಗೂ ಇನ್ನೂ ಕೆಲವೆಡೆ ಶಾಲಾ-ಕಾಲೇಜು ಮಕ್ಕಳಿಗೆ ನನ್ನ ಕನಸಿನ ಕರ್ನಾಟಕದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ, ಆ ಮೂಲಕ ಯುವ ಜನರ ಕನಸುಗಳನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ.

23244365_736801316504668_2284744577871364784_n

23319344_736415736543226_5605292942449679261_n

23334242_737315776453222_8023026940664157906_o

23376138_736414589876674_794464998128237488_n

23472831_737686983082768_9111519747820847967_n

23231470_736047703246696_58897826971021338_n23131564_735273426657457_29083799054829685_n 23132134_734613483390118_2186887494256789451_n 23244116_735003096684490_8554509928046722433_n

ಯುವಾಬ್ರಿಗೇಡ್ ಜನರ ಕನಸುಗಳಿಗೆ ದನಿಯಾಗಲು ಹೊರಟಿದೆ. ವಿಶ್ವದ ನಾನಾ ಭಾಗಗಳಿಂದ ಕನ್ನಡಿಗರು ಪ್ರತಿಕ್ರಿಯಿಸಿದ್ದಾರೆ. ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರು ತಮ್ಮ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕನ್ನಡ ಸಂಘದವರ ಜೊತೆ ನನ್ನ ಕನಸಿನ ಕರ್ನಾಟಕದ ಸಭೆ ನಡೆಸಿ, ಹೊರನಾಡ ಕನ್ನಡಿಗರ ಕನಸುಗಳನ್ನು ಕ್ರೋಢೀಕರಿಸುವುದರಲ್ಲಿ ಸಫಲರಾಗಿದ್ದಾರೆ.

ಅಥಣಿ ತಾಲೂಕಿನ ಖಡಚಿ ಗ್ರಾಮದಲ್ಲಿ ನನ್ನ ಕನಸಿನ ಕರ್ನಾಟಕದ ಮೊದಲ ಹಂತವಾಗಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಸಿ ನೆಡುವ ಕಾರ್ಯಕ್ರಮಗಳು ನಡೆದವು. ಬಾಗಲಕೋಟೆಯ ನೀರಬೂದಿಹಾಳದಲ್ಲಿ 28 ವರ್ಷಗಳಿಂದ ಸ್ವಚ್ಛತೆ ಬಣ್ಣವನ್ನೇ ಕಂಡಿರದ ಬಸ್ ತಂಗುದಾಣಕ್ಕೆ ಯುವಕರು ಹೊಸ ಬಣ್ಣ ನೀಡಿದರು. ಬದಲಾವಣೆ ಹಂತ ಹಂತವಾಗಿ ಬಂದರೆ ಒಳಿತು ನಿಜ. ಆದರೆ ದಡ ಮುಟ್ಟುವ ಧಾವಂತವೂ ಇರುವುದರಿಂದ ನನ್ನ ಕನಸಿನ ಕರ್ನಾಟಕಕ್ಕೆ ಒಳ್ಳೆಯ ವೇಗ ದೊರೆತಿದೆ.

Leave a Reply

Your email address will not be published. Required fields are marked *

You May Also Like

ಮತದಾನ ನಮ್ಮ‌ ಹಕ್ಕು

ಸಮರ್ಥನ ಆಯ್ಕೆ ನಮ್ಮ ಕರ್ತವ್ಯ.. ಪ್ರಜಾಪ್ರಭುತ್ವ ಅತ್ಯಂತ ಸುಂದರವಾದ ವ್ಯವಸ್ಥೆಗಳಲ್ಲೊಂದು. ಇದು ಪ್ರಜೆಗಳಿಗೆ ಆಳುವ ಹಕ್ಕನ್ನು ದಯಪಾಲಿಸುತ್ತದೆ. ತನ್ನ ಪ್ರತಿನಿಧಿಯಾಗುವ ಯೋಗ್ಯತೆ ಉಳ್ಳವರನ್ನು ತಾನೇ ಆರಿಸಿಕೊಳ್ಳುವ ಅವಕಾಶವನ್ನು ಕೊಡುವುದು ಪ್ರಜಾಪ್ರಭುತ್ವ ಮಾತ್ರ. ರಾಜಪ್ರಭುತ್ವದಲ್ಲಿ ಹಾಗಿರಲಿಲ್ಲ. ಅಲ್ಲಿ ರಾಜನೇ ತನ್ನ ಉತ್ತರಾಧಿಕಾರಿಯನ್ನು ಗುರುತಿಸುತ್ತಾನೆ,…
View Post

ನಿವೇದಿತಾ ಸೇವಾಕೇಂದ್ರ

ಅದ್ವೈತ ತತ್ತ್ವದ ಶ್ರೇಷ್ಠ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರ ಜಯಂತಿಯಂದು ಅಂದರೆ ಏಪ್ರಿಲ್ 30 ರಂದು ಕಲ್ಲೋಳಿಯಲ್ಲಿ ಪ್ರಾರಂಭಗೊಂಡ ‘ನಿವೇದಿತಾ ಸೇವಾಕೇಂದ್ರ’ ಯಶಸ್ವಿಯಾಗಿ ನಡೆಯುತ್ತಿದೆ. ಆರ್ಥಿಕವಾಗಿ ಹಿಂದುಳಿದ, ಶೋಷಿತ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗುವಂತೆ ರೂಪಿಸಿದ ಈ ಯೋಜನೆ ಫಲ ಕೊಡುತ್ತಿದೆ. ಲಘು ಉದ್ಯೋಗ ಭಾರತಿಯ…
View Post

“ಆಲ್ ದ ಬೆಸ್ಟ್”

“ಆಲ್ ದ ಬೆಸ್ಟ್” ಒಂದು ಸ್ವಪ್ರೇರಣಾ, ಸ್ವಪ್ರಚೋದನಾ ತಂತ್ರ. ಕೆಲವು ಸುಲಭವಾಗಿ ಮತ್ತು ಸುಲಭವಾದ ಬದಲಾವಣೆಗಳನ್ನು ನಮ್ಮ ನಡೆ, ನುಡಿ ಹಾಗೂ ಅಚರಣೆಗಳಲ್ಲಿ ಮಾಡಿಕೊಳ್ಳುವುದರ ಮೂಲಕ ಹೇಗೆ ನಾವು ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದಾಗಿದೆ ಎಂಬುದನ್ನು ಅರಿತುಕೊಳ್ಳುವುದೇ ಆಗಿದೆ. ಇವುಗಳನ್ನು ಕಳೆದ ಬಾರಿ…
View Post

ಸ್ವಚ್ಛ ರಾಜಮಾರ್ಗ

ಮಂಗಳೂರು ರಾಷ್ಟ್ರ ಮಟ್ಟದಲ್ಲಿ ಸ್ವಚ್ಛ ನಗರ ಎಂಬ ಹೆಸರು ಪಡೆದುಕೊಂಡಿದ್ದೇನೋ ನಿಜ. ಆದರೆ ಮಂಗಳೂರಿನ ಹೊರವಲಯದ ಕೆ.ಸಿ.ರಸ್ತೆ, ತಲಪಾಡಿ, ತೊಕ್ಕೊಟ್ಟುವಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳು ತುಂಬಿ ಹೋಗಿ ಸ್ವಚ್ಛ ನಗರಕ್ಕೆ ಕಪ್ಪು ಚುಕ್ಕೆಯಾಗಿ ನಿಂತಿತ್ತು.ಈ ರಸ್ತೆ ಕೇರಳದಿಂದ…
View Post

“ವಿಕಾಸ ಪರ್ವ”

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಜಾತಿ ವ್ಯವಸ್ಥೆ ಇರಲೇ ಇಲ್ಲ. ಅದೆಲ್ಲ ಹುಟ್ಟಿದ್ದು ನಂತರದ ದಿನಗಳಲ್ಲೇ! ಶ್ರೇಷ್ಠ ಪರಂಪರೆಯೊಂದು ಕಾಲಘಟ್ಟದ ಬದಲಾವಣೆಯಲ್ಲಿ ಜಾತಿ ಎಂಬ ಅನಿಷ್ಠ ಪದ್ಧತಿಯಾಗಿ ರೂಪುಗೊಂಡಿತು. ಈಗ ನಾವು ಭಾರತವನ್ನು ಮತ್ತದೇ ಪಟ್ಟಕ್ಕೆ ಕೊಂಡೊಯ್ಯುವ ಕೆಲಸಕ್ಕೆ ಮುನ್ನುಡಿ ಬರೆಯಬೇಕಾಗಿದೆ.ಜಾತಿಯನ್ನು ಮೀರಿ…
View Post

ಸ್ವಚ್ಛತೆಯೇ ಆರೋಗ್ಯ

ಸ್ವಚ್ಛತೆ ಆರೋಗ್ಯದೆಡೆಗಿನ ಮೊದಲ ಹೆಜ್ಜೆ. ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದರಿಂದ ರೋಗ-ರುಜಿನಗಳು ಹರಡುವುದನ್ನು ತಡೆಗಟ್ಟಬಹುದು. ಆದರೆ, ಆರೋಗ್ಯ ಹದಗೆಟ್ಟಲ್ಲಿ ನೋಡಿಕೊಳ್ಳಬೇಕಾದ ಸರ್ಕಾರಿ ಆಸ್ಪತ್ರೆಗಳೇ ಸ್ವಚ್ಛವಾಗಿರುವುದಿಲ್ಲ! ಸರ್ಕಾರಿ ಆಸ್ಪತ್ರೆಗಳ ಈ ದೈನೀಸಿ ಸ್ಥಿತಿಯನ್ನು ಕಂಡು ಯುವಾಬ್ರಿಗೇಡ್ ‘ಸ್ವಚ್ಛತೆಯೇ ಆರೋಗ್ಯ’ ಎಂಬ ಹೆಸರಿನಡಿಯಲ್ಲಿ ಹಲವು…
View Post