ಬದುಕುವ ಹಕ್ಕು ನಮಗೂ ಇದೆ

Total
0
Shares

ಗೋವು ಹಾಗೂ ಗೋ ರಕ್ಷಕರ ಮೇಲಿನ ಆಕ್ರಮಣ ಖಂಡಿಸಿ ಯುವಾ ಬ್ರಿಗೇಡ್ ರಾಜ್ಯಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡಿತು. ಭಾರತ ಕೃಷಿ ಪ್ರಧಾನ ದೇಶ. ಕೃಷಿಗೆ ಗೋವು ಅಗತ್ಯ. ಹೀಗಾಗಿಯೇ ಇಲ್ಲಿ ಗೋವಿಗೆ ಇತರೆಲ್ಲ ಪ್ರಾಣಿಗಳಿಗಿಂತ ಹೆಚ್ಚು ಬೆಲೆ. ಗೋವಿನ ಹಾಲು ಬಿಡಿ ರೈತನಾದವ ಗೋಮೂತ್ರ ಮತ್ತು ಸಗಣಿಯನ್ನೂ ಕೃಷಿಗೆ ಬಳಸಿಕೊಳ್ಳುವುದರಿಂದ ಅವನು ಅದನ್ನು ದೇವರೆಂದು ಕರೆದು ಆರಾಧಿಸಿದ. ನೇರವಾಗಿ ಹೇಳಬೇಕೆಂದರೆ ಗೋವು ನಮಗೆ ಮಾತೃ ಸ್ವರೂಪಿ. ಭಾರತ ಗೋವಿನ ಕಲ್ಪನೆಯನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ. ಗೋವು ಮಾತ್ರವೇ ಅಲ್ಲ, ಗೋವಿನ ಮೂತ್ರವೂ ಪವಿತ್ರತೆಯ ಕಲ್ಪನೆಯೇ. ಹಾಗಾಗಿ ಗೋವನ್ನು ಅಕ್ರಮವಾಗಿ ಸಾಗಣೆ ಮಾಡುವುದು, ಕೇವಲ ಭಕ್ಷಣೆಗಾಗಿ ಗೋವನ್ನು ಕ್ರೂರವಾಗಿ ಕೊಲ್ಲುವುದನ್ನು ನಾವು ಒಪ್ಪಲಾರೆವು.

ಅಕ್ಟೋಬರ್ 15 ರಂದು ಬೆಂಗಳೂರಿನ‌ ನಿವಾಸಿಯಾದ ನಂದಿನಿ ತನ್ನ ಕೆಲಸ‌ ಮುಗಿಸಿ ಸ್ನೇಹಿತರೊಡನೆ ಹೋಗುತ್ತಿದ್ದ ಸಮಯದಲ್ಲಿ ಬೆಂಗಳೂರಿನ ಟಿಪ್ಪು ಸರ್ಕಲ್ನ ಬಳಿ ಅಕ್ರಮ ಗೋ‌ ಸಾಗಣೆಯನ್ನು ನೋಡಿದರು. ಹಲವು ಕಸಾಯಿ ಖಾನಗಳಿರುವ ಸ್ಥಳವದು. ತಕ್ಷಣ ತಾಳಗಟ್ಟ ಪುರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ಅದನ್ನು ತಡೆಯುವಂತೆ ಕೋರಿದ್ದರು. ನಂದಿನಿಯೊಡನೆ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್ ಕೂಡ ಘಟನೆ‌ ನಡೆಯುವ ಸ್ಥಳಕ್ಕೆ ತೆರಳಿದ್ದರು. ಆದರೆ, ಅಲ್ಲಿಗೆ ಹೋಗುವ ವೇಳೆಗೆ 100 ಜನರ ಗುಂಪೊಂದು‌‌ ನಂದಿನಿಯವರ ಕಾರಿನ ಮೇಲೆ ಕಲ್ಲುಗಳನ್ನು ಎಸೆದು, ಅವರ ಮೇಲೆ‌ ಮಾರಣಾಂತಿಕ ಹಲ್ಲೆ ನಡೆಸಿದೆ. ಮಹಿಳೆಯೊಬ್ಬರ ಮೇಲೆ ಈ ರೀತಿಯ ಮಾರಣಾಂತಿಕ ಹಲ್ಲೆ ನಡೆದಾಗಲೂ ಬುದ್ಧಿಜೀವಿಗಳೆನಿಸಿಕೊಂಡವರು, ಸ್ತ್ರೀ ವಾದ ಪ್ರತಿಪಾದಕರು ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದು ಆಕಯನ್ನೇ ಅನುಮಾನಿಸಿದ್ದಾರೆ. ಅಕ್ರಮ ಗೋಹತ್ಯೆಯನ್ನು ಬಯಲಿಗೆಳೆದುದರ ಫಲವಿದು.‌ ಆಕೆಯ ದನಿಯ ಜೊತೆ ನಮ್ಮ ದನಿಯನ್ನು ಸೇರಿಸುವ ಅಗತ್ಯವಿದೆ ಎಂದು ಯುವ ಬ್ರಿಗೇಡ್ ಕಾರ್ಯಕ್ರಮ‌ ಹಮ್ಮಿಕೊಂಡಿದೆ.

ಅಕ್ಟೋಬರ್ 17 ರಂದು ಯಲಹಂಕಾದಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿದೆ. ಪ್ರಾಣಿ ರಕ್ಷಣಾ ಸಂಸ್ಥೆಯ ಕವಿತಾ‌ ಮತ್ತು ಆಂಟನಿ ಹೈಕೋರ್ಟ್ ನೇಮಿಸಿದ್ದ ಕಮೀಷನರ್ ಮತ್ತು ಪೊಲೀಸರ ಜೊತೆಗೂಡಿ ಅಕ್ರಮ ಗೋ ಸಾಗಣೆ ಮಾಡುತ್ತಿದ್ದ ಕಸಾಯಿ ಖಾನೆಯೊಂದಕ್ಕೆ ಭೇಟಿ ನೀಡಿ ಪರಿಶೀಲಿಸಬೇಕೆಂದಿದ್ದರು. ಆದರೆ,‌ ಭೇಟಿ ನೀಡಿದಾಗ ಅಲ್ಲಿ ಸುಮಾರು 200 ಜನರ ಗುಂಪು ಇವರ ಮೇಲೆ ದಾಳಿ ನಡೆಸಿದೆ. ಪೊಲೀಸರ ವಾಹನ ಜಖಂಗೊಂಡಿದೆ. ಯಾವ ಮಾಧ್ಯಮಗಳು ಈ ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಆಸಕ್ತಿ ಹೊಂದಿದಂತೆ‌ ತೋರುತ್ತಿಲ್ಲ.

ಕೇವಲ ದೇಶದೊಳಗೆ ಮಾತ್ರವಲ್ಲ ಗಡಿಗಳಲ್ಲೂ ಅಕ್ರಮ ಗೋ ಸಾಗಣೆ ಭರದಿಂದ ಸಾಗುತ್ತಿದೆ. ‘ದೇಶದಲ್ಲಿರುವ ನಾಗರಿಕರು ಖುಷಿಯಿಂದ ದೀಪಾವಳಿಯನ್ನು ಆಚರಿಸಲು. ನಾವು ಶತ್ರುಗಳಿಗೆ ತಕ್ಕ ಉತ್ತರವನ್ನು ಕೊಡುವ ಕೆಲಸ ಮಾಡುತ್ತೇವೆ’ ಎಂದಿದ್ದರು ಪೂಂಚ್ ನಲ್ಲಿರುವ ಸೈನಿಕರು ದೀಪಾವಳಿ‌ಆಚರಣೆಯ ಕುರಿತು ಪತ್ರಿಕೆಗಳು ಪ್ರಶ್ನಿಸಿದ್ದಾಗ.‌ ಹೌದು. ನಮ್ಮ‌ ಸೈನಿಕರು ವರ್ಷವಿಡೀ ದೇಶವನ್ನು ಕಾಯುವ ಕೆಲಸದಲ್ಲಿಯೇ ಮಗ್ನರಾಗಿರುತ್ತಾರೆ. ಶತ್ರುಗಳ‌ ನಾಶವೇ ಅವರಿಗೆ ಹಬ್ಬ. ಇಡಿಯ ದೇಶ ದೀಪಾವಳಿಯ ಸಂಭ್ರಮದಲ್ಲಿ ಮುಳುಗಿದ್ದರೆ, ಅತ್ತ ಸೈನಿಕರು ತಮ್ಮ‌ ಕುಟುಂಬದ ಚಿಂತೆಯನ್ನೂ ಬದಿಗೊತ್ತಿ ಗಡಿಗಳಲ್ಲಿ ದೇಶದ ರಕ್ಷಣೆಯ ಕೆಲಸ ಮಾಡುತ್ತಿದ್ದರು. ಅಂತರಾಷ್ಟ್ರೀಯ ಗಡಿಗಳಲ್ಲಿ ನಡೆಯುವ ಅಕ್ರಮವನ್ನು ತಡೆಯುವ ಕೆಲಸದಲ್ಲಿ ನಿಯೋಜಿತರಾಗಿದ್ದರು. ಅದೇ ಕೆಲಸದಲ್ಲಿ ನಿರತರಾಗಿದ್ದ ಸೈನಿಕನೊಬ್ಬನ ಮೇಲೆ ಗೋ ಕಳ್ಳ ಸಾಗಣೆ‌‌ ಮಾಡುತ್ತಿದ್ದ ಗುಂಪೊಂದು ಅಕ್ಟೋಬರ್ 16 ರಂದು ದಾಳಿ‌ ಮಾಡಿತ್ತು. ಆ ಸೈನಿಕ‌ ಈಗ ಮೃತಪಟ್ಟಿದ್ದಾರೆ. ದೀಪಕ್ ಮಂಡಲ್ ಅವರು ಬಿ.ಎಸ್.ಎಫ್ ನ 145 ನೇ ಬಟಾಲಿಯನ್ ನ‌ ಉಸ್ತುವಾರಿ ಅಧಿಕಾರಿ. ತ್ರಿಪುರಾದ ಸಿಪಾಹಿಜಲ್ ಜಿಲ್ಲೆಯ ಬೆಲಾರ್‌ದೆಪ್ಪದ ಗಡಿ ಭಾಗದಲ್ಲಿ ತಮ್ಮ ತಂಡದೊಂದಿಗೆ ಅಂತರಾಷ್ಟ್ರೀಯ ಗಡಿಗಳಲ್ಲಿ ಗೋ ಕಳ್ಳ ಸಾಗಣೆ ಮಾಡುವವರನ್ನು ಮತ್ತು ಅಕ್ರಮ ಕೆಲಸಗಳನ್ನು ಕೈಗೊಳ್ಳುವವರನ್ನು ತಡೆಯುವ ಕೆಲಸದಲ್ಲಿ ನಿರತರಾಗಿದ್ದರು. ಅಕ್ಟೋಬರ್ 16 ರ ಬೆಳಗ್ಗಿನ ಜಾವ 2 ಗಂಟೆಯ ಹೊತ್ತಿಗೆ 25 ಜನ ಗೋ ಸಾಗಾಣೆ ಮಾಡುವವರ ಗುಂಪೊಂದು ಬಂತು. ಅವರನ್ನು ತಡೆಯಲು ಪ್ರಯತ್ನಿಸಿದಾಗ ಸಾಧ್ಯವಾಗಲಿಲ್ಲ.‌ ಗೋ ಸಾಗಾಣೆ‌ ಮಾಡುತ್ತಿದ್ದವರು ತಮ್ಮ ನಾಲ್ಕು‌ ಚಕ್ರದ ವಾಹನದಿಂದ ದೀಪಕ್‌‌‌ ಮಂಡಲ್ ಅವರಿಗೆ ಹಿಂಬದಿಯಿಂದ‌ ಗುದ್ದಿದ್ದಾರೆ. ಅವರ ತಲೆ ಮತ್ತು ಕಾಲುಗಳಿಗೆ ತೀವ್ರವಾಗಿ ಪೆಟ್ಟುಗಳಾಗಿವೆ.‌ ‘ಅವರು ಲಾಠಿ, ಇಟ್ಟಿಗೆಗಳು, ಮಚ್ಚುಗಳನ್ನು ತಮ್ಮೊಡನೆ ತೆಗೆದುಕೊಂಡು ಬಂದಿದ್ದರು’ ಎನ್ನುತ್ತಾರೆ ದೀಪಕ್ ಅವರೊಡನಿದ್ದ ಮತ್ತೊಬ್ಬ ಸೈನಿಕ. ದೀಪಕ್‌ ಅವರ ಪರಿಸ್ಥಿತಿ ಗಂಭೀರವಾದ ಕಾರಣ‌ ಅವರನ್ನು ಕಲ್ಕತ್ತಾದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.‌ ಆದರೆ, ತೀವ್ರವಾಗಿ ಗಾಯಗೊಂಡದ್ದರಿಂದ ಅಕ್ಟೋಬರ್ 20ರಂದು ದಿಪಕ್ ಅವರು ಮರಣ‌‌ ಹೊಂದಿದ್ದಾರೆ. ಜಾತ್ಯತೀತ, ಬುದ್ಧಿಜೀವಿಗಳು,‌ ಮಾತು- ಮಾತಿಗೂ ಮಾನವತಾವಾದವನ್ನು ಮುಂದಿಡುವ ಜನ ಇವರ ಸಾವಿಗೆ ಕಣ್ಣೀರು ಬಿಡಿ,‌‌ ಸೈನಿಕರಿಗೆ ತೋರಿಸಬೇಕಾದ ಗೌರವದ ಒಂದು‌ ಮಾತನ್ನೂ ಆಡಿಲ್ಲ. ಅಕ್ರಮವಾಗಿ ಸಾಗಣೆಯಾಗುತ್ತಿದ್ದ ಗೋವುಗಳನ್ನು ರಕ್ಷಸುತ್ತಿದ್ದುದಲ್ಲವೇ, ಹಾಗಾಗಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ ಎಂಬುದನ್ನೂ ಮರೆತು ಮೌನದಿಂದಿದ್ದಾರೆ.

ಈ ರೀತಿಯ ಹಲವು ಘಟನೆಗಳು‌ ನಡೆಯುತ್ತಲೇ ಇರುತ್ತವೆ. ಬೆಳಕಿಗೆ ಬರುವ ಘಟನೆಗಳು ಮಾತ್ರ ಅತ್ಯಂತ ಕಡಿಮೆ. ಅಕ್ರಮವಾಗಿ ಗೋವನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದವರನ್ನು ಥಳಿಸಿದರೆ ‘ನಮ್ಮ‌ ಹಕ್ಕು, ಅಸಹಿಷ್ಣುತೆ, ನಾಟ್ ಇನ್ ಮೈ ನೇಮ್, ಮಾನವೀಯತೆಯಿಲ್ಲ’ ಎಂದೆಲ್ಲ ಅರಚಿಕೊಳ್ಳುತ್ತಾರೆ. ಗೋ ರಕ್ಷಣೆ ಮಾಡಲು ಹೋದವರ ಮೇಲೆ ಮಾರಣಾಂತಿಕ ಹಲ್ಲೆಯಾದಾಗಲೂ,‌ ಅಷ್ಟೆ ಏಕೆ, ಮರಣವೇ ಹೊಂದಿದಾಗಲೂ ಉಸಿರೆತ್ತುವುದಿಲ್ಲ ಸೋಗಲಾಡಿ ಬುದ್ಧಿಜೀವಿಗಳು. ಆದರೆ, ನಾವು ಸುಮ್ಮನೆ ಕೂರುವವರಲ್ಲ. ಗೋ ಹಂತಕರ ವಿರುದ್ಧ ಎದ್ದು ನಿಂತವರೊಡನೆ ನಾವಿದ್ದೇವೆ. ಅವರ ದನಿಯ ಜೊತೆ ನಮ್ಮೆಲ್ಲರ ದನಿ ಸೇರಿಸಿ ಆಗುತ್ತಿರುವ ಅನ್ಯಾಯವನ್ನು ಜನರ ಮುಂದಿಡುವ ಕೆಲಸ ನಾವು ಮಾಡುತ್ತೇವೆ. ಈ ಎಲ್ಲ ಘಟನೆಗಳನ್ನು ಖಂಡಿಸಿ #ಬದುಕುವ_ಹಕ್ಕು_ನಮಗೂ_ಇದೆ‌ ಎನ್ನುವ ಜೀವಪರ ಹೋರಾಟ ಆಯೋಜಿಸಿ ರಾಜ್ಯಾದ್ಯಂತ ಹಣತೆ ಹಿಡಿದು ಮೆರವಣಿಗೆ ಮಾಡುವುದರ ಮೂಲಕ ಪ್ರಾಣವನ್ನೇ ಪಣಕ್ಕಿಟ್ಟು ಈ ಅನ್ಯಾಯದ ವಿರುದ್ಧ ಹೋರಾಡಿದವರ ಜೊತೆಗೆ ಸದಾ ನಾವಿದ್ದೇವೆ ಎಂದು ಬೆಂಬಲಕ್ಕೆ ನಿಂತೆವು.! ರಾಜ್ಯದಲ್ಲಿ ಸುಮಾರು 60 ಕ್ಕೂ ಹೆಚ್ಚು ಕಡೆಗಳಲ್ಲಿ ಈ ಹೋರಾಟವು ಸದ್ದು ಮಾಡಿತು.

ರಾಜ್ಯಾದ್ಯಂತ ನಡೆದ #ಬದುಕುವ_ಹಕ್ಕು_ನಮಗೂ_ಇದೆ – ಹಣತೆ ಹಿಡಿದು ಮೆರವಣಿಗೆ ಕಾರ್ಯಕ್ರಮಗಳು.

$$ ಧಾರವಾಡ ವಿಭಾಗ $$
#ಬೆಳಗಾವಿ_ಜಿಲ್ಲೆ
1. ಬೆಳಗಾವಿ ನಗರ
2. ಕಲ್ಲೋಳಿ, ಗೋಕಾಕ
3. ಬಿರನಗಡ್ಡೆ, ಗೋಕಾಕ
4. ಘಟಪ್ರಭಾ, ಗೋಕಾಕ
5. ತುಕ್ಕಾನಟ್ಟಿ, ಗೋಕಾಕ
6. ದುರದುಂಡಿ, ಗೋಕಾಕ
7. ನಾಗನೂರ
8. ಕಳ್ಳೂರ, ರಾಮದುರ್ಗ
9. ಚಿಕ್ಕೊಪ್ಪ, ರಾಮದುರ್ಗ
10. ಹಿರೆಕೊಪ್ಪ, ರಾಮದುರ್ಗ
11. ಕುನ್ನಾಳ, ರಾಮದುರ್ಗ
12. ಹಲಗತ್ತಿ, ರಾಮದುರ್ಗ
13. ಕಟಕೋಳ, ರಾಮದುರ್ಗ
14. ಖಾನಾಪುರ
15. ರಾಮದುರ್ಗ
16. ವಿಠ್ಠಲ ಮಂದಿರ, ಸವದತ್ತಿ
17. ಆನಿ ಅಗಸಿ, ಸವದತ್ತಿ
18. ಗಾಂಧಿ ಚೌಕ, ಸವದತ್ತಿ
19. ಎಸ.ಎಲ್.ಒ. ಸರ್ಕಲ್, ಸವದತ್ತಿ
20. ಶಿವಾಜಿ ಸರ್ಕಲ್, ಸವದತ್ತಿ
21. ಬಸ್ ವಿಲ್ದಾಣ, ಸವದತ್ತಿ
22. ಗುರ್ಲ ಹೊಸೂರ
23. ಹಿಡಕಲ್ ಡ್ಯಾಮ್, ಹುಕ್ಕೇರಿ
#ಬಾಗಲಕೋಟೆ_ಜಿಲ್ಲೆ
24. ಗದ್ದನಕೇರಿ
25. ಮುಧೋಳ
26. ಮಹಾಲಿಂಗಪೂರ
27. ಇಳಕಲ್
28. ನಿರಬೂದಿಹಾಳ
29. ಅಮ್ಮಿನಗಡ
#ಹಾವೇರಿ_ಜಿಲ್ಲೆ
30. ಜೆ.ಪಿ.ಸರ್ಕಲ್, ಹಾವೇರಿ
31. ಜೆ.ಎಚ್ ಪಾಟೀಲ್ ಸರ್ಕಲ್, ಹಾವೇರಿ
32. ಯಲವಿಗಿ, ಸವಣೂರು ತಾಲೂಕು
33. ರಾಣೆಬೆನ್ನೂರು
#ಗದಗ_ಜಿಲ್ಲೆ
34. ಗದಗ ನಗರ
#ಧಾರವಾಡ_ಜಿಲ್ಲೆ
35. ಹುಬ್ಬಳ್ಳಿ ನಗರ

$$ ಬಳ್ಳಾರಿ ವಿಭಾಗ $$
#ಬಳ್ಳಾರಿ_ಜಿಲ್ಲೆ
36. ಕೊಟ್ಟೂರು
37. ಸಂಡೂರು
38. ಕೂಡ್ಲಿಗಿ
39. ಹಗರಿ ಬೊಮ್ಮನಹಳ್ಳಿ
40. ಹೊಸಪೇಟೆ
#ಕೊಪ್ಪಳ_ಜಿಲ್ಲೆ
41. ಕೊಪ್ಪಳ ನಗರ
42. ಕುಷ್ಟಗಿ
43. ಗಂಗಾವತಿ
#ರಾಯಚೂರು_ಜಿಲ್ಲೆ
44. ಮಸ್ಕಿ
#ದಾವಣಗೆರೆ_ಜಿಲ್ಲೆ
45. ಹೊನ್ನಾಳಿ

$$ ಮಂಗಳೂರು ವಿಭಾಗ $$
#ದಕ್ಷಿಣಕನ್ನಡ_ಜಿಲ್ಲೆ
46. ದಕ್ಷಿಣ ಕನ್ನಡ
47. ಪುತ್ತೂರು
#ಉತ್ತರಕನ್ನಡ_ಜಿಲ್ಲೆ
48. ಹೊನ್ನಾವರ
49. ನಂದಿಗದ್ದಾ, ಹಳಿಯಾಳ
#ಶಿವಮೊಗ್ಗ_ಜಿಲ್ಲೆ
50. ಶಿವಮೊಗ್ಗ

$$ ವಿಜಯಪುರ ವಿಭಾಗ $$
#ವಿಜಯಪುರ_ಜಿಲ್ಲೆ
51. ವಿಜಯಪುರ ನಗರ
52. ಇಂಡಿ
53. ಮುದ್ದೇಬಿಹಾಳ
#ಕಲ್ಬುರ್ಗಿ_ಜಿಲ್ಲೆ
54. ಸೇಡಂ
55. ಕಮಲಾಪುರ
56. ಜೇವರ್ಗಿ
#ಯಾದಗಿರಿ_ಜಿಲ್ಲೆ
57. ಸೈದಾಪುರ

$$ ಬೆಂಗಳೂರು ವಿಭಾಗ $$
#ಕೋಲಾರ_ಜಿಲ್ಲೆ
58. ಮಾಲೂರು
59. ಕುಡೆನೂರು, ಮಾಲೂರು ತಾಲೂಕು
#ಚಿಕ್ಕಬಳ್ಳಾಪುರ_ಜಿಲ್ಲೆ
60. ಚಿಕ್ಕಬಳ್ಳಾಪುರ
#ತುಮಕೂರು_ಜಿಲ್ಲೆ
61. ಚೊಕ್ಕನಾಯಕನಹಳ್ಳಿ

$$ ಮೈಸೂರು ವಿಭಾಗ $$
#ಮೈಸೂರು_ಜಿಲ್ಲೆ
62. ಮೈಸೂರು ನಗರ
63. ನಂಜನಗೂಡು

22550563_1578227672240208_3317661179139669696_o

22552897_1578342375562071_2989781468314253115_o

22554716_1578366558892986_8146886619288634230_n

22554869_1578262365570072_7124911895100760552_n

22688067_1578229662240009_3225111185630511601_n 22688419_1578311218898520_8204191633294104632_n 22688626_1581488588580783_354164093303029500_n 22688677_1578262798903362_539688697374571934_n 22688899_1578270802235895_5549245074373795019_n 22780382_1581488271914148_3076461036905047309_n

Leave a Reply

Your email address will not be published. Required fields are marked *

You May Also Like

ನಂದಾದೀಪ

ಮರೆವು – ಒಂದು ಮನುಷ್ಯ ಸಹಜ ಗುಣ. ವರ್ಷಕ್ಕೊಮ್ಮೆ ಬರೋ WEDDING ANNIVERSARY ಗಂಡನಿಗೆ ನೆನಪಿರಲ್ಲ, ಗಂಡ ಕೇಳಿದ ಹೊಸ ರುಚಿ ಪಾಯಸ ಹೆಂಡತಿಗೆ ನೆನಪಿರಲ್ಲ. ಅಪ್ಪನಿಗೆ ಮಗ ಹೇಳಿದ್ದೆನೋ ನೆನೆಪಿರಲ್ಲ, ಮಗನಿಗೆ ಅಮ್ಮ ತರಲಿಕ್ಕೆ ಹೇಳಿದ್ದು ನೆನಪಿರಲ್ಲ. ಇವೆಲ್ಲವೂ ನೆನಪಿದ್ರೆ…
View Post

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘುಸಾಹಿತ್ಯ ಸಮ್ಮೇಳನ – ವಿಜಯಪುರ

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತೆ ರಾಜ್ಯಾದ್ಯಂತ ೧೫೦ ಲಘು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅಂದು ಮಾಡಿದ ಸಂಕಲ್ಪಕ್ಕೆ ಮೊದಲ ವೇದಿಕೆ ಸಜ್ಜುಗೊಳಿಸಿದ್ದು ಬೆಂಗಳೂರಿನ ವಿಜಯಪುರ‌.! ವಿವೇಕಾನಂದರು ಜಗತ್ತಿನಲ್ಲೆಲ್ಲ ಭಾರತದ ಪರಂಪರೆ ಶ್ರೇಷ್ಠತೆಯನ್ನು ಮುಟ್ಟಿಸಿದರೆ, ನಿವೇದಿತಾ…
View Post

ಹಿರಿ ಮನೆ

ಯುವಾ ಬ್ರಿಗೇಡ್ ನ ಹುಡುಗರ ಕೆಲಸಗಳೇ ಹಾಗೆ..! ಮಾಡುವ ಕೆಲಸವನ್ನು ಎಲ್ಲರಿಗಿಂತ ಡಿಫರೆಂಟ್ ಆಗಿ, ಪರ್ಫೆಕ್ಟ್ ಆಗಿ ಮಾಡುವಂತಹ ಜಾಯಮಾನ. ಕಳೆದ ಮೂರು ವರ್ಷಗಳಿಂದ ಇದನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅದರ ಸೊಗಡು ಗೊತ್ತಾಗುವುದು. ಹೌದು ಕಳೆದ ಮೂರು ವರ್ಷಗಳ ಹಿಂದಿನ…
View Post

“ನಿವೇದನಾ”

ದೇಶಭಕ್ತಿ ಅಂದ್ರೆ ಏನು? ಸುಮ್ನೆ ಹೀಗೆ ಘೋಷಣೆ ಕೂಗೋದಾ? ಒಂದು ಹತ್ತು ಜನರನ್ನ ಗುಂಪು ಹಾಕಿಕೊಂಡು, ಮೈಕಿನ ಮುಂದೆ ನಿಂತು ಭಾಷಣ ಕುಟ್ಟೋದ ? ದೇಶ – ಅದಕ್ಕೊಂದು ಇತಿಹಾಸ ಅಂತೆಲ್ಲ ಇಲ್ಲದೆ ಇರೋ ಕತೆ ಕವನ ಹೇಳೋದಾ? ಮಾತಿಗೆ ಮುಂಚೆ…
View Post

ಏಕತೆಗಾಗಿ‌ ಭಗತ್

ಮಹಾಪುರುಷರು ಬಲಿದಾನಗೈದದ್ದು ಖಂಡತುಂಡ ಭಾರತವನ್ನು ನೋಡಲಲ್ಲ. ಅಖಂಡ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಏಕವಾದ, ಸಾಧ್ಯವಾದರೆ ಕಟಕ್ ನಿಂದ ಅಟಕ್ ಗೂ ಹಬ್ಬಿದ ಏಕರಸ ಭಾರತಕ್ಕಾಗಿ. ಜಾತಿ-ಮತ-ಪಂಥ ಮೀರಿದ ಸುಂದರ ಭಾರತಕ್ಕಾಗಿ. ಆದರೆ ನಾವಿಂದು ನಮ್ಮ ನಮ್ಮೊಳಗಿನ ಕದನದಿಂದ ಬಲಿದಾನಗೈದ ಮಹಾವೀರರಿಗೆ ಅವಮಾನ ಮಾಡುತ್ತಿದ್ದೇವೆ.…
View Post