ಕಾರ್ಗಿಲ್ ವಿಜಯೋತ್ಸವ

Total
0
Shares

ಕಾರ್ಗಿಲ್ ಎಂದೊಡನೆ ಭಾರತೀಯರ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾಗುವುದು ಸಾಮಾನ್ಯ. ಏಕೆಂದರೆ ಭಾರತದ ಇತಿಹಾಸದಲ್ಲಿ ಮರೆಯಲಾಗದ ಕದನವೊಂದು ನಡೆದಂತಹ ಜಾಗ ಅದು. ಕಾರ್ಗಿಲ್ ಕದನ ನಡೆಯಲು ಕಾರಣ ಪಾಕಿಸ್ತಾನವೆಂಬ ಧೂರ್ತ ರಾಷ್ಟ್ರದ ಅತಿಕ್ರಮಣ. ಯುದ್ಧದ ಯಾವುದೇ ಸೂಚನೆಯಿಲ್ಲದೇ ಭಾರತ ಸ್ನೇಹದ ಹಸ್ತ ಚಾಚಿದ್ದ ಸಂದರ್ಭದಲ್ಲಿ, ಪಾಕಿಸ್ತಾನ ತನ್ನ ಸೈನಿಕರ ಮೂಲಕ ಕಾರ್ಗಿಲ್, ಬಟಾಲಿಕ್, ದ್ರಾಸ್, ಮುಷ್ಕೋ ಕಣಿವೆಯುದ್ದಕ್ಕೂ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದ ಭೂಭಾಗವನ್ನು ಅತಿಕ್ರಮಿಸಿತ್ತು.

ಅತಿಕ್ರಮಣಕಾರಿಗಳು ಗಡಿನಿಯಂತ್ರಣ ರೇಖೆ ದಾಟಿ ನಮ್ಮ ಸೇನೆಯ ಮೇಲೆ ದಾಳಿ ನಡೆಸಿದಾಗ ಇಡೀ ದೇಶವೇ ಆಘಾತಕ್ಕೊಳಗಾಗಿತ್ತು. ಅನಿರೀಕ್ಷಿತ ದಾಳಿಗೆ ನಮ್ಮ ಕೆಲವು ಸೈನಿಕರು ಪ್ರಾರಂಭದಲ್ಲಿ ಬಲಿಯಾದರು. ಆದರೆ ಅನಂತರ ನಡೆದದ್ದೇ ಬೇರೆ. ಮೈಕೊಡವಿ ಮೇಲೆದ್ದ ನಮ್ಮ ಸೈನ್ಯ ಶತ್ರುಗಳನ್ನು ಸದೆಬಡಿದು ಗಡಿಯಾಚೆ ತೊಲಗಿಸುವವರೆಗೆ ವಿಶ್ರಮಿಸಲಿಲ್ಲ. ಸೀಮಿತ ಯುದ್ಧೋಪಕರಣ, ಪ್ರತಿಕೂಲ ಹವೆ, ಪಾಕ್ ವೈರಿಪಡೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಯಾವುದಕ್ಕೂ ನಮ್ಮ ಯೋಧರು ಹೆದರಲಿಲ್ಲ.
ಸಾಧನಗಳ ಕೊರತೆಗಳು ನಮ್ಮ ಧೀರಯೋಧರನ್ನು ಕಾಡಲಿಲ್ಲ. ಧೈರ್ಯ, ಪರಾಕ್ರಮ, ದೃಢನಿರ್ಧಾರಗಳೇ ಅವರ ಪ್ರಬಲ ಅಸ್ತ್ರಗಳಾದವು. ಬಹುಶಃ ಜಗತ್ತಿನಲ್ಲಿ ಇದೊಂದು ರೋಚಕವಾದ ಯುದ್ಧ ಎಂದರೆ ತಪ್ಪಾಗಲಾರದು. ದುರ್ಗಮ ಪರ್ವತದ ಎತ್ತರವನ್ನು ಏರಿ ಹೋರಾಡಿದ ನಮ್ಮ ಇನ್ ಫೆಂಟ್ರಿಗೆ ವಿಶ್ರಾಂತಿಯೆಂಬುದೇ ಇರಲಿಲ್ಲ. ಒಂದೋ ಹೋರಾಡಬೇಕಿತ್ತು, ಇಲ್ಲವೇ ಹೋರಾಡುತ್ತಾ ಮಡಿಯ ಬೇಕಿತ್ತು.
ಬೇರೆ ಅವಕಾಶವೇ ಇರಲಿಲ್ಲ. ಜುಲೈ 26ಕ್ಕೆ ‘ವಿಜಯ್’ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದಾಗ ತ್ರಿವರ್ಣಧ್ವಜ ರಕ್ತದಲ್ಲಿ ಸಂಪೂರ್ಣ ತೊಯ್ದು ಕೆಂಪಾಗಿತ್ತು.
ಯುದ್ಧಕ್ಕೆ ತೆರಳಿದ ನಮ್ಮ ಸೈನಿಕರೊಬ್ಬೊಬ್ಬರದೂ ಒಂದೊಂದು ಸಾಹಸಗಾಥೆ.
ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ಇಡೀ ದೇಶ ಗೌರವ ಸಲ್ಲಿಸಿದೆ, ಆರಾಧಿಸಿದೆ. ಜಾತಿ, ಮತ,
ಧರ್ಮ, ಪ್ರಾಂತ, ಭಾಷೆ ಯಾವುದು ಇದಕ್ಕೆ ಅಡ್ಡಿಯಾಗಲಿಲ್ಲ.ಹಿಂದೆಂದೂ ಕಾಣದಂತ ಏಕತೆ ಸದ್ಭಾವನೆ ಈ ಯುದ್ಧದ ಸಂದರ್ಭದಲ್ಲಿ ಕಂಡುಬಂತು.
ಭಾರತಕ್ಕೆ ಅದೆಂತಹ ಅದಮ್ಯ ಶಕ್ತಿ, ಚರಿತ್ರೆ ಇದೆಯೆಂದು ಮತ್ತೊಮ್ಮೆ ಸಾಬೀತಾಯಿತು.

ಇಂತಹ ಸಾಹಸಗಾಥೆಯನ್ನು ಮರೆತರೆ ನಮಗಿಂತ ಕೃತಘ್ನರು ಯಾರೂ ಇರಲಿಕ್ಕಿಲ್ಲ.
ಯುವಾಬ್ರಿಗೇಡ್ ಕಳೆದ ಮೂರು ವರ್ಷಗಳಿಂದ “ಮಹಾರಕ್ಷಕ್” ವಿಭಾಗದ ಅಡಿಯಲ್ಲಿ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸವನ್ನು ಸಂಭ್ರಮದಿಂದ ಆಚರಿಸುತ್ತಾ ಬಂದಿದೆ.

ಈ ಬಾರಿಯೂ ರಾಜ್ಯಾದ್ಯಂತ 40ಕ್ಕೂ ಹೆಚ್ಚು ಕಡೆಗಳಲ್ಲಿ ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸಲಾಯಿತು.

ಯುವಾಬ್ರಿಗೇಡ್ ನ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ವಿಜಯಪುರ ವಿಭಾಗದ ಚಿತ್ತಾಪುರ ಹಾಗೂ ಕಲಬುರ್ಗಿ ನಗರಗಳಲ್ಲಿ ಕಾರ್ಗಿಲ್ ವಿಜಯ್ ದಿವಸದಲ್ಲಿ ಪಾಲ್ಗೊಂಡಿದ್ದು ಅಲ್ಲಿನ ಕಾರ್ಯಕರ್ತರರ ಉತ್ಸಾಹವನ್ನು ನೂರ್ಮಡಿಗೊಳಿಸಿತ್ತು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವಾಬ್ರಿಗೇಡ್ ಹುಬ್ಬಳ್ಳಿ ವಿಭಾಗದ ಸಂಚಾಲಕರಾದ ಶ್ರೀ ಕಿರಣ್ ರಾಮ್ ಅವರು ಕಾರ್ಗಿಲ್ ಯೋಧರ ಕಥನವನ್ನು ಎಳೆ-ಎಳೆಯಾಗಿ ಬಿಡಿಸಿಟ್ಟರು. ಕೆಲವೆಡೆ ನಿವೃತ್ತ ಸೈನಿಕರು, ಹುತಾತ್ಮ ಯೋಧರ ಕುಟುಂಬಸ್ಥರನ್ನು ಗೌರವಿಸಲಾಯಿತು. ನಾನಾ ಕಡೆ ಕಾರ್ಯಕರ್ತರು ಮೆರವಣಿಗೆಯಲ್ಲಿ ಮೋಂಬತ್ತಿಯನ್ನು ಹಿಡಿದು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಹಿರಿಯ ನಿವೃತ್ತ ಸೈನಿಕರುಗಳು ಯುದ್ಧದ ಅನುಭವಗಳನ್ನು ಹಂಚಿಕೊಂಡರು.

 

20258103_1371576859606971_3807986578651969050_n 20258147_1126585830774427_5817495395833333073_n 20258302_1126586057441071_9127234880402154868_n 20280543_1746159532064112_7373560180504633587_o 20286976_1746149365398462_7250677928417311108_o 20287200_1746157392064326_6292033476955657315_o  20294175_818607374973851_8700476103932425097_n 20369488_1746166948730037_2790020828101583510_o 20369520_1746169662063099_1143998679450599002_o 20374436_818607434973845_1518868221968304_n 20374706_818607314973857_3504625227598768458_n 20413886_1746161765397222_6121722227649803798_o

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಸೈನಿಕರನ್ನು ನೆನೆಯುವ ಮೂಲಕ ದೇಶಕಾಯುವ ಸೈನಿಕರಿಗೆ ಮತ್ತಷ್ಟು ಉತ್ಸಾಹವನ್ನು ತುಂಬುತ್ತಾ, ಮತ್ತಷ್ಟು ಯುವಕರು ಭಾರತಮಾತೆಯ ಸೇವೆಗೆ ಮುಂದಡಿಯಿಡುವಂತೆ ಪ್ರೇರೇಪಿಸುವುದೇ ಕಾರ್ಯಕ್ರಮದ ಆಶಯ.

Leave a Reply

Your email address will not be published. Required fields are marked *

You May Also Like

ನಂದಾದೀಪ

ಮರೆವು – ಒಂದು ಮನುಷ್ಯ ಸಹಜ ಗುಣ. ವರ್ಷಕ್ಕೊಮ್ಮೆ ಬರೋ WEDDING ANNIVERSARY ಗಂಡನಿಗೆ ನೆನಪಿರಲ್ಲ, ಗಂಡ ಕೇಳಿದ ಹೊಸ ರುಚಿ ಪಾಯಸ ಹೆಂಡತಿಗೆ ನೆನಪಿರಲ್ಲ. ಅಪ್ಪನಿಗೆ ಮಗ ಹೇಳಿದ್ದೆನೋ ನೆನೆಪಿರಲ್ಲ, ಮಗನಿಗೆ ಅಮ್ಮ ತರಲಿಕ್ಕೆ ಹೇಳಿದ್ದು ನೆನಪಿರಲ್ಲ. ಇವೆಲ್ಲವೂ ನೆನಪಿದ್ರೆ…
View Post

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘುಸಾಹಿತ್ಯ ಸಮ್ಮೇಳನ – ವಿಜಯಪುರ

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತೆ ರಾಜ್ಯಾದ್ಯಂತ ೧೫೦ ಲಘು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅಂದು ಮಾಡಿದ ಸಂಕಲ್ಪಕ್ಕೆ ಮೊದಲ ವೇದಿಕೆ ಸಜ್ಜುಗೊಳಿಸಿದ್ದು ಬೆಂಗಳೂರಿನ ವಿಜಯಪುರ‌.! ವಿವೇಕಾನಂದರು ಜಗತ್ತಿನಲ್ಲೆಲ್ಲ ಭಾರತದ ಪರಂಪರೆ ಶ್ರೇಷ್ಠತೆಯನ್ನು ಮುಟ್ಟಿಸಿದರೆ, ನಿವೇದಿತಾ…
View Post

ಹಿರಿ ಮನೆ

ಯುವಾ ಬ್ರಿಗೇಡ್ ನ ಹುಡುಗರ ಕೆಲಸಗಳೇ ಹಾಗೆ..! ಮಾಡುವ ಕೆಲಸವನ್ನು ಎಲ್ಲರಿಗಿಂತ ಡಿಫರೆಂಟ್ ಆಗಿ, ಪರ್ಫೆಕ್ಟ್ ಆಗಿ ಮಾಡುವಂತಹ ಜಾಯಮಾನ. ಕಳೆದ ಮೂರು ವರ್ಷಗಳಿಂದ ಇದನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅದರ ಸೊಗಡು ಗೊತ್ತಾಗುವುದು. ಹೌದು ಕಳೆದ ಮೂರು ವರ್ಷಗಳ ಹಿಂದಿನ…
View Post

“ನಿವೇದನಾ”

ದೇಶಭಕ್ತಿ ಅಂದ್ರೆ ಏನು? ಸುಮ್ನೆ ಹೀಗೆ ಘೋಷಣೆ ಕೂಗೋದಾ? ಒಂದು ಹತ್ತು ಜನರನ್ನ ಗುಂಪು ಹಾಕಿಕೊಂಡು, ಮೈಕಿನ ಮುಂದೆ ನಿಂತು ಭಾಷಣ ಕುಟ್ಟೋದ ? ದೇಶ – ಅದಕ್ಕೊಂದು ಇತಿಹಾಸ ಅಂತೆಲ್ಲ ಇಲ್ಲದೆ ಇರೋ ಕತೆ ಕವನ ಹೇಳೋದಾ? ಮಾತಿಗೆ ಮುಂಚೆ…
View Post

ಏಕತೆಗಾಗಿ‌ ಭಗತ್

ಮಹಾಪುರುಷರು ಬಲಿದಾನಗೈದದ್ದು ಖಂಡತುಂಡ ಭಾರತವನ್ನು ನೋಡಲಲ್ಲ. ಅಖಂಡ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಏಕವಾದ, ಸಾಧ್ಯವಾದರೆ ಕಟಕ್ ನಿಂದ ಅಟಕ್ ಗೂ ಹಬ್ಬಿದ ಏಕರಸ ಭಾರತಕ್ಕಾಗಿ. ಜಾತಿ-ಮತ-ಪಂಥ ಮೀರಿದ ಸುಂದರ ಭಾರತಕ್ಕಾಗಿ. ಆದರೆ ನಾವಿಂದು ನಮ್ಮ ನಮ್ಮೊಳಗಿನ ಕದನದಿಂದ ಬಲಿದಾನಗೈದ ಮಹಾವೀರರಿಗೆ ಅವಮಾನ ಮಾಡುತ್ತಿದ್ದೇವೆ.…
View Post