ಭಗವಂತನನ್ನು ನಾನಾ ರೂಪಗಳಲ್ಲಿ ಆರಾಧಿಸುವ ದೇಶ ನಮ್ಮದು. ಅಂತಹ ಭಗವಂತ ಮನೆಗಳಲ್ಲಿ ಚಿತ್ರ ರೂಪದಲ್ಲಿ ಅಂದರೆ ಫೋಟೋಗಳ ರೂಪದಲ್ಲಿ ಪೂಜೆಗೈಯಲ್ಪಡುತ್ತಾನೆ. ಹೀಗೆ ಭಗವಂತನನ್ನು ಪೂಜೆ ಮಾಡುವ ನಾವುಗಳು, ಯಾರೋ ಬಂದು ಈ ದೇವರನ್ನು ಪೂಜಿಸಬೇಡಿ ಎಂದು ಹೇಳಿದರೆಂದು ಮನೆಯಲ್ಲಿರುವ ಫೋಟೋಗಳನ್ನು ಊರಿನ ದೇವಸ್ಥಾನಗಳ ಮುಂದೋ ಅಥವಾ ಯಾವುದಾದರೂ ದೈವೀ ಸ್ವರೂಪದ ಮರಗಳ ಕೆಳಗೋ ಇಟ್ಟು ಬರುತ್ತೇವೆ. ಇದು ಎಷ್ಟರ ಮಟ್ಟಿಗೆ ಸರಿ..?
ಒಮ್ಮೆ ಯೋಚಿಸಿ ನಿಮಗೆ ಭಗವಂತನೇ ಬೇಡವಾದರೆ, ಭಗವಂತನಿಗೆ ನೀವೂ ಒಂದಲ್ಲ ಒಂದು ರೀತಿಯಲ್ಲಿ ಬೇಡವಾಗುತ್ತೀರಿ!.
ಆದಾಗ್ಯೂ ನಿಮ್ಮ ದೇವರು ನಿಮಗೆ ಬೇಡವೆಂದಾದರೆ ಈ ರೀತಿ ಮಾಡಿ ಪುಣ್ಯ ಪಡೆಯಿರಿ.
‘ನಿಮಗೆ ಬೇಡವಾದ ಭಗವಂತನ ಫೋಟೋವಿನ ಫ್ರೇಮ್ ತೆಗೆದು, ಗಾಜನ್ನು ಬೇರ್ಪಡಿಸಿ ಅದರಲ್ಲಿ ಚಿತ್ರ ಪಟವನ್ನು ತೆಗೆದು, ಮಣ್ಣಿನ ಗುಂಡಿಯೊಂದನ್ನು ತೋಡಿ ಅದರಲ್ಲಿ ಹಾಕಿ ಒಂದು ಅರಳೆಯ ಸಸಿ ಇಟ್ಟು ಪುನಃ ಮಣ್ಣಿನಿಂದ ಮುಚ್ಚಿಬಿಡಿ, ನೀವು ಬೇಡವೆಂದರು ಭಗವಂತ ನೀವು ಮಾಡಿದ ಈ ಪುಣ್ಯ ಕೆಲಸಕ್ಕೆ ಅರಳಿ ಮರದ ಮೂಲಕ ನಿಮ್ಮನ್ನು ಸಲಹುತ್ತಾನೆ, ನಿಮ್ಮ ಕೆಲಸಕ್ಕೆ ಪ್ರತಿಯಾಗಿ ಉಸಿರನ್ನು ನೀಡುತ್ತಾನೆ. ಒಮ್ಮೆ ಯೋಚಿಸಿ ನೋಡಿ ಸರಿ ತಾನೆ..?!
ಯುವಾ ಬ್ರಿಗೇಡ್ ತಂಡ ಕಣ ಕಣದಲ್ಲೂ ಶಿವ ಎಂಬ ಕಾರ್ಯಕ್ರಮದಡಿ ಈ ರೀತಿ ಎಲ್ಲೆಂದರಲ್ಲಿ ಬಿಸಾಡಿದ ಫೋಟೋಗಳನ್ನು ಸೂಕ್ತ ವಿಲೇವಾರಿ ಮಾಡಿ, ಅಲ್ಲಿ ಒಂದು ಸಸಿ ನೆಟ್ಟು ಅದರಲ್ಲಿಯೇ ಶಿವನನ್ನು ಕಾಣುವ ನಿಜವಾದ ಸಾಮಾಜಿಕ ಕಳಕಳಿ ಇಟ್ಟುಕೊಂಡಿದೆ.
ಯುವಾ ಬ್ರಿಗೇಡ್ ನ ಕಾರ್ಯಕರ್ತರು ಈಗಾಗಲೇ ಕಳೆದೆರಡು ವರ್ಷಗಳಿಂದ ಇಂತಹ ಬಹಳಷ್ಟ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅದರಂತೆ ಇದೇ ದಿನಾಂಕ ೨೦.೧೦.೨೦೧೯ ರಂದು ರಾಜ್ಯಾದ್ಯಂತ ಹಲವಾರು ಕಡೆ ಈ ಕಾರ್ಯವನ್ನು ಮಾಡಿದೆ ಅದರ ವಿವರಗಳನ್ನು ಇಲ್ಲಿ ಹಂಚಿಕೊಳ್ಳುತ್ತಾ. ಈ ಕಾರ್ಯ ಕೈಗೊಂಡ ಎಲ್ಲ ಯುವಾ ಬ್ರಿಗೇಡ್ ಕಾರ್ಯಕರ್ತರಿಗೆ ಧನ್ಯವಾದಗಳು ಅರ್ಪಿಸುತ್ತೇವೆ.
ಬೆಂಗಳೂರು ವಿಭಾಗದಲ್ಲಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆ.ಆರ್.ಪುರ, ಕೋಲಾರ ಜಿಲ್ಲೆಯ, ಕೋಲಾರ ನಗರ, ಮಾಲೂರು.
ಧಾರವಾಡ ವಿಭಾಗದಲ್ಲಿ
ಧಾರವಾಡ ಜಿಲ್ಲೆಯ ನವಲಗುಂದ, ಗದಗ ಜಿಲ್ಲೆಯ ನರೇಗಲ್ಲ, ಬೆಳಗಾವಿ ಜಿಲ್ಲೆಯ ಗೋಕಾಕ ನಗರ.
ಬಳ್ಳಾರಿ ವಿಭಾಗದಲ್ಲಿ
ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ನಗರ, ಸಿರುಗುಪ್ಪ, ಕೊಪ್ಪಳ ಜಿಲ್ಲೆಯ, ಗಂಗಾವತಿ, ತಾವರಗೇರ, ಕೊಪ್ಪಳ ನಗರ, ರಾಯಚೂರು ಜಿಲ್ಲೆಯ ಕಲ್ಮಲಾ ಗ್ರಾಮ.
ಮೈಸೂರು ವಿಭಾಗದಲ್ಲಿ
ಮೈಸೂರು ನಗರ, ಮಂಡ್ಯ ಜಿಲ್ಲೆ ನಾಗಮಂಗಲ,
ಮಂಗಳೂರು ವಿಭಾಗ
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ,
ವಿಜಯಪುರ ವಿಭಾಗ
ಬೀದರ್ ಜಿಲ್ಲೆಯ ಹುಮನಾಬಾದ್, ಕಲಬುರಗಿ ನಗರ.