ಕಣಕಣದಲ್ಲೂ ಶಿವ

Total
0
Shares

‘ಶಿವ’ ಯಾವಾಗಲೂ ಕಾಡುವ ದೇವರೇ. ಅವನ ಆಕಾರ, ಬಣ್ಣ, ವೇಷ, ವಾಸ, ಸ್ಥಳ, ಆಭರಣ ಇವ್ಯಾವುವೂ ಸರಳವಾದುದಲ್ಲ. ಅತ್ಯoತ ಗೂಢವಾದುದೇನನ್ನೋ ವಿವರಿಸುವ ಪ್ರಯತ್ನ ಅದರ ಹಿoದಿದೆ. ಕೊರಳಲ್ಲಿ ಹಾವು, ಮೈ ಪೂರಾ ಭಸ್ಮ, ಸೊoಟಕ್ಕೆ ವ್ಯಾಘ್ರ ಚರ್ಮ, ಕತ್ತಲ್ಲಿ ರುoಡಮಾಲೆ.. ತಲೆಯ ಮೇಲೆ ಗoಗೆ, ಹಣೆಯಲ್ಲಿ ಉರಿವ ಕಣ್ಣು, ಸ್ಮಶಾನ ವಾಸಿ, ಹಿಮಾಲಯದ ಒಡೆಯ – ಎಲ್ಲವೂ ವಿಚಿತ್ರವೇ, ವಿಶೇಷವೇ!

b8bef5902e49262e301b4134ae48fb9b--ganesha-paintings-ganesha-art

ಆತನ ಲಿoಗರೂಪವoತೂ ಅನೇಕ ವೈಜ್ಞಾನಿಕ ಸತ್ಯಗಳ ಮೂರ್ತರೂಪ. ‘ಲಿoಗ’ ಶೂನ್ಯದ ಕಲ್ಪನೆ. ಶೂನ್ಯ ಎoದರೆ ಖಾಲಿ. ಖಾಲಿ ಎoದರೆ ಅಕ್ಷರಶ: ಪೂರ್ಣ ಖಾಲಿ. ಪೂರ್ಣ ಮತ್ತು ಖಾಲಿ ಎರಡೂ ಸೇರಿಕೊoಡದ್ದೇ ಲಿoಗಾಕೃತಿ. ಹೀಗಾಗಿಯೇ ಅದಕ್ಕೆ ಪೂಜೆ. ಈ ಒಂದು ಕಲ್ಪನೆಯನ್ನು ಮುoದಿಟ್ಟು ಯುವಾಬ್ರಿಗೇಡ್, ಬೆoಗಳೂರು – ‘ಕಣಕಣದಲ್ಲೂ ಶಿವ’ ಎoಬ ಶೀರ್ಷಿಕೆಯಡಿಯಲ್ಲಿ ವಿಶೇಷವಾದ ಅಭಿಯಾನವನ್ನು ಹಮ್ಮಿಕೊoಡಿತ್ತು.

ಬೆoಗಳೂರಿನ ನಾನಾ ಭಾಗಗಳಲ್ಲಿನ ರಸ್ತೆ ಬದಿಗಳಲ್ಲಿ, ಮರದ ಬುಡಗಳಲ್ಲಿ, ಅಥವಾ ದೇವಾಲಯಗಳ ಆಸುಪಾಸಿನಲ್ಲಿ – ‘ಮೂಢನoಬಿಕೆಗಳಿಗೆ ದಾಸರಾಗಬಾರದು’, ‘ದೇವರೇ ಇಲ್ಲ’, ಎoದು ದೇವರ ಪೂಜೆ ಹಾಗೂ ವಿಗ್ರಹಗಳನ್ನು ನoಬಿಕೆಯ ಪರಿಧಿಯಿoದ ಹೊರಗಿಡುವ, ಅಥವಾ ತಾವು ಹುಟ್ಟಿದ ಧರ್ಮವನ್ನೇ ಜರಿದು ಮತಾoತರಕ್ಕೊಳಪಟ್ಟು ವಿಗ್ರಹ ಹಾಗೂ ಫೋಟೋಗಳನ್ನು ಮನೆಯಿಂದ ಆಚೆಗಿಟ್ಟಿದ್ದನ್ನು ತರುಣರು ಸಂಗ್ರಹಿಸಿ ತರುವುದು!
ಹೌದಲ್ಲವೇ, ನಾವು ತರದಿದ್ದರೆ ಹೀಗೆ ಎಸೆದು ಹೋದ ಆ ದೇವರ ಫೋಟೋಗಳ ಹಾಗೂ ಮೂರ್ತಿಗಳ ಗತಿಯೇನು?

21462988_1455012184583748_3520272993924960426_n

ಕೆಲವರು ವಿಗ್ರಹ ಭಿನ್ನವಾಯಿತೆಂಬ ಕಾರಣ ಕೊಟ್ಟರೆ, ಮತ್ತೆ ಕೆಲವರು ಹಳೆಯ ಪಟ,ಜಿರಲೆ ಹಾಳು ಮಾಡಿತ್ತು ಎನ್ನುತ್ತಾ ನುಣುಚಿಕೊಳ್ಳುತ್ತಾರೆ. ಮೇಲಿನ ಅಸಡ್ಡೆಯ ಮಂದಿಯ ವರ್ಗಕ್ಕೆ ಇವರು ಬರದಿದ್ದರೂ, ಎಸೆದ ಪಟಗಳಲ್ಲಿ ಇವರುಗಳ ಪಾಲೂ ಇಲ್ಲ ಎನ್ನಲಾದೀತೇ? ಹಾಗೆಂದೇ, ಲಿoಗದ ಪೂರ್ಣ ಮತ್ತು ಖಾಲಿಯ ಪರಿಕಲ್ಪನೆಯಲ್ಲಿ ಯುವಾಬ್ರಿಗೇಡ್, ಎಸೆದು ಹೋದ ಪಟಗಳನ್ನು ಸಂಗ್ರಹಿಸುವ ಕಾರ್ಯವನ್ನು ಕೈಗೊಂಡಿತು. ಕಾರ್ಯಕರ್ತರೆಲ್ಲರೂ ರಸ್ತೆ ಬದಿಯಲ್ಲಿನ ದೇವರ ಫೋಟೊಗಳನ್ನು ಸಂಗ್ರಹಿಸಿ, ಅವುಗಳನ್ನು ಕಾರ್ಯಾಲಯಕ್ಕೆ ತoದು ಆ ದೇವರ ಫೋಟೊಗಳಲ್ಲಿನ ಗಾಜಿನ ಚೂರನ್ನು, ಕಟ್ಟಿಗೆಯ ಪಟ್ಟಿಗಳನ್ನು ವಿoಗಡಿಸಿ, ಬೇರ್ಪಡಿಸಿ ಒಂದೆಡೆ ಜೋಡಿಸಿಟ್ಟರು.

20953878_1464134086980145_2177741538429473091_n

21761760_1493689584024595_4157753251119447898_n

21762174_1493689617357925_7302344092923273762_n

ಸತತ ನಾಲ್ಕು ವಾರಗಳಿoದ ಈ ಕಾರ್ಯವನ್ನು ಕೈಗೊಳ್ಳುತ್ತಾ ಕಡೆಗೆ ಸಂಗ್ರಹಿಸಿ, ವಿoಗಡಿಸಿ, ಬೇರ್ಪಡಿಸಿಟ್ಟಿದ್ದ ನೂರಾರು ದೇವರ ಫೋಟೋಗಳನ್ನು ಹತ್ತಿರದ ಒಂದು ಹಳ್ಳಿಯಲ್ಲಿನ ಹಿರಿಯರೊಬ್ಬರ ತೋಟದಲ್ಲಿ ಮಣ್ಣನ್ನು ಅಗೆದು ಆ ಫಲವತ್ತಾದ ಮಣ್ಣಿನಲ್ಲಿ, ಭೂಮಾತೆಯ ಒಡಲಲ್ಲಿ ಪೂರ್ಣ ಮತ್ತು ಖಾಲಿ ಎರಡು ಸೇರಿಕೊoಡರೆ ಲಿoಗಾಕೃತಿ ಎoಬ ಅoಶವನ್ನು ಗಣನೆಗೆ ತೆಗೆದುಕೊoಡು, ಈ ಫೋಟೊಗಳೆಲ್ಲವೂ ಆ ಲಿoಗಾಕೃತಿಯ ಮೂಲ ರೂಪವೇ ಎಂದು ಶ್ರದ್ಧೆಯಿಂದ ಮಣ್ಣಿನಲ್ಲಿ ಹೂತಿಡಲಾಯಿತು. ಹೂತಿಟ್ಟ ಸ್ಥಳದಲ್ಲಿ ಪುಟ್ಟ ಅರಳಿಯನ್ನು ನೆಟ್ಟದ್ದು ಕೂಡಾ ಸಾರ್ಥಕದ ಕ್ಷಣ. ಹೌದು. ಯುವಾ ಬ್ರಿಗೇಡ್ ಪ್ರಕೃತಿಯನ್ನು ತತ್ತ್ವದ ಹಾಗೆ ಆರಾಧಿಸುತ್ತದೆ. ಹಸಿರೇ ಉಸಿರು ಎಂಬ ತತ್ತ್ವವು ಈ ರೀತಿ ಸಾಕಾರಗೊಂಡಿದ್ದು ಯುವಾ ತರುಣರ ಪಾಲಿನ ಹೆಮ್ಮೆ.

21557847_498092643884126_8329002468231712011_n

21992913_1493710357355851_455312467477267995_o

ನಮ್ಮ ಮನವಿ ಇಷ್ಟೇ. ಭಗವಂತನ ಪಟವನ್ನು ಎಲ್ಲೆಂದರಲ್ಲಿ ಇಡಬೇಡಿ. ಮಣ್ಣಿನದಾದರೆ ಮಳೆಗೆ ಕರಗಿಬಿಡುವುದೇನೋ, ಆದರೆ ಮಣ್ಣಿನ ಹೊರತಾದ ಮತ್ತೆಲ್ಲಕ್ಕೂ ಸರಿಯಾದ ವಿಸರ್ಜನೆ ಅಗತ್ಯ.‌ ಹಲವು ವರುಷಗಳ ಕಾಲ ನಮ್ಮದೇ ಮನೆಯಲ್ಲಿ, ನಮ್ಮ ಪೂಜೆಯ ಭಾಗವಾಗಿದ್ದ ಅನೇಕ ಪಟಗಳನ್ನು ಕಾರಣಗಳನ್ನು ಕೊಟ್ಟು ಆಚೆಗಿಟ್ಟು ಕೈತೊಳೆದುಕೊಳ್ಳುವ ಬಗ್ಗೆ ಸಹೃದಯರು ಯೋಚಿಸಬೇಕಿದೆ.

21730811_1485365064857047_1875090803900235343_n

ಹಾಗೆಂದ ಮಾತ್ರಕ್ಕೆ ನಮ್ಮ ಈ ಪ್ರಯತ್ನದಿಂದ ಜನರೆಲ್ಲರೂ ಬದಲಾಗಿಬಿಡುತ್ತಾರೆಂಬ ಹುಂಬತನವಿಲ್ಲ. ಬದಲಿಗೆ ಈ ನೆಲದ ರಾಷ್ಟ್ರ ಕಟ್ಟುವ ತರುಣರ ಗುಂಪೊಂದು, ಹಿಂದೂ ಧರ್ಮದ ಶ್ರೇಷ್ಠತೆಗೆ ಕಿಂಚಿತ್ ಲೋಪವಾಗದಂತೆ ವರ್ತಿಸಲಿ ಎಂಬ ಆಶಾಭಾವ.

ಕಣಕಣದಲ್ಲೂ ಶಿವ ತಾಂಡವವಾಡಲಿ. ಇಡೀ ವಿಶ್ವದ‌ ನಿರಂತರ ಚಲನೆಯಲ್ಲಿ ಜಡತೆ ಕಳೆದುಹೋಗಲಿ!

Leave a Reply

Your email address will not be published. Required fields are marked *

You May Also Like

ಕಣ ಕಣದಲ್ಲೂ ಶಿವ 20.10.2019

ಭಗವಂತನನ್ನು ನಾನಾ ರೂಪಗಳಲ್ಲಿ ಆರಾಧಿಸುವ ದೇಶ ನಮ್ಮದು. ಅಂತಹ ಭಗವಂತ  ಮನೆಗಳಲ್ಲಿ ಚಿತ್ರ ರೂಪದಲ್ಲಿ ಅಂದರೆ ಫೋಟೋಗಳ ರೂಪದಲ್ಲಿ ಪೂಜೆಗೈಯಲ್ಪಡುತ್ತಾನೆ. ಹೀಗೆ ಭಗವಂತನನ್ನು ಪೂಜೆ ಮಾಡುವ ನಾವುಗಳು, ಯಾರೋ  ಬಂದು  ಈ ದೇವರನ್ನು ಪೂಜಿಸಬೇಡಿ ಎಂದು ಹೇಳಿದರೆಂದು ಮನೆಯಲ್ಲಿರುವ ಫೋಟೋಗಳನ್ನು ಊರಿನ…
View Post