ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 100 ವರ್ಷ

Total
0
Shares
ಶಹೀದ್ ಉಧಮ್ ಸಿಂಗ್

ಜುಲೈ 31 ಉಧಮ್‌ಸಿಂಗ್ ಅವರ ಪುಣ್ಯಸ್ಮರಣೆ. 21 ವರ್ಷಗಳ ಕಾಲ ಕಾದು ಜಲಿಯನ್‌ವಾಲಾಬಾಗ್‌ನಲ್ಲಿ ಸಾವಿರಕ್ಕೂ ಮಿಕ್ಕಿ ಭಾರತೀಯರ ಸಾವಿಗೆ ಕಾರಣನಾದ ಮೈಕಲ್ ಓಡ್ವಯರ್‌ನನ್ನು ಹತ್ಯೆಗೈದ ಮಹಾನ್ ಸಾಹಸಿ ಆತ.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಾಂದಾರ್ಭಿಕ ಚಿತ್ರ

ಹಾಗೆಯೇ, ಈ ವರ್ಷ ಜಲಿಯನ್‌ವಾಲಾಬಾಗ್ ಘಟನೆ‌ಗೆ ನೂರು ತುಂಬಿದೆ. ಉಧಮ್ ಸಿಂಗ್‌ರವರ ಪುಣ್ಯಸ್ಮರಣೆಯ ದಿನದಂದು ಆ ಹತ್ಯಾಕಾಂಡದ ನೈಜ ಸ್ವರೂಪವನ್ನು ವಿವರಿಸುವ ರೂಪಿಸಿದ ವಿಡಿಯೋವನ್ನು ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪ್ರದರ್ಶಿಸಿ ಇತಿಹಾಸದ ಸ್ಪಷ್ಟ ಪರಿಚಯ ಮಾಡುವ ಹಾಗೂ ಮಹಾವೀರರನ್ನು ನೆನಪಿಸುವ ಕಾರ್ಯವನ್ನು ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ತರುಣ-ತರುಣಿಯರು ಕೈಗೆತ್ತಿಕೊಂಡರು.

ಈ ವಿಡಿಯೋವನ್ನು ಕನಿಷ್ಠ 500 ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಇಲ್ಲಿಯವರೆಗೂ ರಾಜ್ಯದ ವಿವಿಧೆಡೆ150 ಕ್ಕೂ ಹೆಚ್ಚು ಕಾರ್ಯಕ್ರಮಗಲಾಗಿವೆ. ಈ ಕಾರ್ಯ ಮುಂದುವರೆಯಲಿ ಎಂದು ಆಶಿಸೋಣ.

ಏಕೆಂದರೆ ಇತಿಹಾಸ ತಿಳಿಯದ ಹೊರತು ಮತ್ತೊಂದು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲವಷ್ಟೇ..? ವಿಡಿಯೋದ ಅಂತರ್ಜಾಲ ಲಿಂಕ್ ನ್ನು ಕೆಳಗೆ ಹಂಚಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

You May Also Like