ಭೀಮಾ ತೀರದ ರಕ್ಷಕರು – ಗಾಣಗಾಪುರ

Total
1
Shares

ಎರಡು ದಿನಗಳ‌ಕಾಲ ಗಾಣಗಾಪುರದಲ್ಲಿ ಭೀಮಾ ನದಿಯ ಸ್ವಚ್ಛತೆಯಲ್ಲಿ ನಿರತವಾಗಿದ್ದು ಹಿಂದೆಂದಿಗಿಂತಲೂ ಭಿನ್ನವಾದ ಅನುಭವಕೊಟ್ಟಿತು. ಘತ್ತರಗಿಯಲ್ಲಿ ಕಳೆದ ಬಾರಿ ಭೀಮಾನದಿಯ ಸ್ವಚ್ಛತೆಗಿಳಿದಾಗ ಕೆಲಸಕ್ಕಿಂತ ಹೆಚ್ಚು ಕೆಲಸಕ್ಕೆ ಬಾರದವರೇ ಇದ್ದರು. ಈ ಬಾರಿ ಹಾಗಲ್ಲ. ಮೈ ಮುರಿದು ದುಡಿಯುವ ಸುಮಾರು 150 ಕಾರ್ಯಕರ್ತರು ಸ್ವಚ್ಛತಾ ಕಾರ್ಯವನ್ನು ಹಬ್ಬವನ್ನಾಗಿಸಿಬಿಟ್ಟಿದ್ದರು. ಕೆಲಸ ಮಾಡುವುದು ಬಿಡಿ. ಆ ಕೆಲಸವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು.

ಭೀಮಾ ವಿಶಾಲವಾದ ನದಿ. ಒಂದು ದಂಡೆಯಿಂದ ಮತ್ತೊಂದು ದಂಡೆಗೆ ನೇರದೂರ ಕ್ರಮಿಸಿದರೂ ಕಾಲುಗಳು ಸೋತುಹೋಗುವಷ್ಟು ಅಗಲ. ಜೊತೆಗೆ ನೆತ್ತಿ ಸುಡುವ ಸೂರ್ಯ ಬೇರೆ. ಮೊದಲನೇ ದಿನ ಭೀಮಾ ಮತ್ತು ಅಮರ್ಜಾ ನದಿ ಸೇರುವ ಸಂಗಮದಲ್ಲಿ 5.30ಕ್ಕೆ ಕೆಲಸ ಆರಂಭಗೊಂಡು 11.30ರ ವೇಳೆಗೆ ಬಸವಳಿದು, ಹಣ್ಣಾಗಿ ಕೆಲಸ ನಿಲ್ಲಿಸಿದ್ದೆವು. ಸೂರ್ಯೋದಯವಾದಾಗಿನಿಂದಲೂ ಆತನ ಪ್ರಖರತೆಗೆ ಸೆಡ್ಡು ಹೊಡೆದೇ ನಾವು ಕೆಲಸ ಮಾಡುತ್ತಿದ್ದೆವು. ಮೈಯೊಳಗಿನ ತ್ರಾಣವನ್ನೆಲ್ಲ ಆತ ಪೈಪು ಹಾಕಿ ಹೀರಿಬಿಟ್ಟಿದ್ದ. ಆದರೆ ಆ ವೇಳೆಗಾಗಲೇ 20ಕ್ಕೂ ಹೆಚ್ಚು ಟ್ರಕ್ಕುಗಳಷ್ಟು ಕಸವನ್ನು ತೆಗೆದು ಅದನ್ನು ಇಕ್ಕೆಲಗಳಲ್ಲೂ ಶೇಖರಿಸುವ ಕೆಲಸ ಮಾಡಿದ್ದೆವು.‌ ಸಂಜೆ ಐದಾದರೂ ಶಾಖ ಇಳಿದಿರಲಿಲ್ಲ. ಹಾಗಂತ ಕೆಲಸಕ್ಕೆ ಚಕ್ಕರ್ ಕೊಡುವಂತಿಲ್ಲವಲ್ಲ. ರಾತ್ರಿ 8ರವರೆಗೂ ಕಸ ಹೆಕ್ಕಿ, ಸಾಗಿಸಿ ಆನಂತರ ಹರಡಿಸಿ, ಒಣಗಿಸಿದ ಕಸಕ್ಕೆ ಬೆಂಕಿ ಹಚ್ಚಿ ಸುಟ್ಟು ಮುಗಿಸಿದಾಗಲೇ ನಮಗೆ ಸಂತೃಪ್ತಿ ಎನಿಸಿದ್ದು. ಮರುದಿನ ಗಾಣಗಾಪುರದ ಸೇತುವೆಯ ಕೆಳಗೆ ಸರಿಯಾಗಿ 5 ಗಂಟೆಗೆ ಬೆಳಕಾಗುವ ಮುನ್ನವೇ ಸೇರಿಬಿಟ್ಟಿದ್ದೆವು. ಕಸ ಗೋಚರಿಸುವಷ್ಟು ಬೆಳಕು ಕಾಣುತ್ತಿದ್ದಂತೆ ಸಮರೋಪಾದಿಯಲ್ಲಿ ಕೆಲಸವೂ ಆರಂಭವಾಯ್ತು. ಸೂರ್ಯ ಉದಯಿಸಿ ನಮ್ಮ ಶಕ್ತಿ ಕಸಿಯುವ ಮುನ್ನವೇ 15ಕ್ಕೂ ಹೆಚ್ಚು ಟ್ರಾಕ್ಟರ್‌ಗಳಷ್ಟು ಕಸ ಹೆಕ್ಕಿ ದಡದಲ್ಲಿ ಗುಡ್ಡೆ ಹಾಕಿಯಾಗಿತ್ತು. 7.30 ಕ್ಕೆ ತಿಂಡಿ ತಿಂದು 10.30ರವರೆಗೂ ಇನ್ನೊಂದು 15 ಟ್ರಾಕ್ಟರುಗಳಷ್ಟು ಕಸ ಹೆಕ್ಕುವ ವೇಳೆಗೆ ಜೀವ ಹೈರಾಣು. ಈ ಎರಡೂ ದಿನ ನಿವೇದಿತಾ ಪ್ರತಿಷ್ಠಾನದ ಹೆಣ್ಣುಮಕ್ಕಳ ಕೆಲಸ ಅಭಿನಂದನೆಗೆ ಅರ್ಹವಾದ್ದು. ಸೇತುವೆಗೆ ಹೋಗಲು ಇದ್ದ ಮೆಟ್ಟಿಲುಗಳನ್ನು ಅವರು ಗುಡಿಸಿ, ಸ್ವಚ್ಛಗೊಳಿಸಿದ ರೀತಿ ಪ್ರತಿಯೊಬ್ಬ ಕುಡುಕನಿಗೂ ನಾಚಿಕೆ ತರುವಂಥದ್ದು. ಏಕೆಂದರೆ ಆ ಮೆಟ್ಟಿಲುಗಳ ‌ಮೇಲೆಲ್ಲಾ ಕುಡಿದು ಬಿಸಾಡಿದ ಹೆಂಡದ ಬಾಟಲಿಗಳು, ಗಾಜಿನ ಚೂರುಗಳೇ ತುಂಬಿಕೊಂಡಿದ್ದವು.

ಈ ಎರಡು ದಿನ ಯುವಾಬ್ರಿಗೇಡ್‌ನ ಪಾಲಿಗೆ ಬಲು ಮಹತ್ವದ ದಿನ. ಯುವಾಬ್ರಿಗೇಡ್‌ನಲ್ಲಿ ಎಂದಿಗೂ ಮುಕ್ತಿಯ ಮಾರ್ಗ ಹೇಳಿ ಕೊಡುವ ಪ್ರವಚನಗಳನ್ನು ಆಯೋಜಿಸಿಲ್ಲ. ಬದುಕನ್ನು ನಡೆಸುವುದು ಹೇಗೆಂಬ ತರಬೇತಿ ನಾವು ಕೊಡಲಿಲ್ಲ. ವ್ಯಕ್ತಿತ್ವ ರೂಪಿಸಿಕೊಳ್ಳುವ ಶಿಬಿರಗಳನ್ನೂ ಕಾರ್ಯಕರ್ತರಿಗೆ ಮಾಡಲಿಲ್ಲ. ಆದರೆ ವಿವೇಕಾನಂದರು ಹೇಳಿದ ಕರ್ಮಮಾರ್ಗದಲ್ಲಿ ನಡೆಯುವ ಫಲಾಪೇಕ್ಷೆಯಿಲ್ಲದೇ ಕರ್ಮಗೈಯ್ಯುತ್ತಾ ಉನ್ನತಿಯ ಹಾದಿಯನ್ನು ನಮ್ಮದಾಗಿಸಿಕೊಳ್ಳುವ ಪ್ರಯತ್ನವನ್ನಂತೂ ನಿರಂತರವಾಗಿ ಮಾಡುತ್ತಿದ್ದೇವೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು, ದೂರದೂರುಗಳಿಂದ ಬಂದು, ಪ್ರಖರ ಬಿಸಿಲಿನಲ್ಲಿ ನಿಸ್ವಾರ್ಥವಾಗಿ ಸೇವೆ ಮಾಡುತ್ತಾ ಕೊನೆಗೆ ಏನನ್ನೂ ಅಪೇಕ್ಷಿಸದೇ ಶಾಂತವಾಗಿ ತಮ್ಮೂರಿಗೆ ಮರಳುವ ಈ ಕಾರ್ಯಕರ್ತರೆಲ್ಲಾ ಹಿಮಾಲಯದಲ್ಲಿರುವ ಯೋಗಿಗಳಿಗೆ ಸಮವೇ. ಅತಿಶಯೋಕ್ತಿ ಎನಿಸಿದರೂ ಇದು ಸತ್ಯ ಏಕೆಂದರೆ ಇರುವ ಅತ್ಯಂತ ಸಾಮಾನ್ಯ ಸವಲತ್ತುಗಳಲ್ಲೂ ಒಂದಿನಿತೂ ಮುಖ ಬಾಡಿಸಿಕೊಳ್ಳದೇ ಹೋದಲ್ಲಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳುತ್ತಾ ಸಮಾಜದ ಕೆಲಸಕ್ಕಾಗಿ ರಟ್ಟೆ ಮುರಿದು, ದುಡಿದು ಸಣ್ಣದಾದ ಗೌರವವನ್ನೂ ಬಯಸದೇ ಮರಳಿಬಿಡುವ ಈ ತರುಣ ಮಿತ್ರರು ಯೋಗಿಗಳಲ್ಲದೇ ಮತ್ತೇನು. ಅವರೆಲ್ಲಾ ಕೆಲಸ‌ ಮಾಡುವಾಗ ಕೆಲವೊಮ್ಮೆ ಎತ್ತರದ ಸ್ಥಳದಲ್ಲಿ ನಿಂತು ನೋಡುವಾಗ ನನಗೆ ಹೀಗೆಲ್ಲಾ ಅನಿಸುತ್ತಿತ್ತು.

ಮಾಡಿದ ಕೆಲಸ‌ ಶಾಶ್ವತವಾಗಿರಬೇಕು. ಈ ಬಾರಿಯಂತೂ ಅಂಥದ್ದೊಂದು ಸಂಕಲ್ಪ ಮಾಡಿದ್ದೇವೆ.‌ ಸದ್ಯದಲ್ಲೇ ಅಂತಹ ಯೋಜನೆಗಳೊಂದಿಗೆ ನಿಮ್ಮೆದುರು ಬರುತ್ತೇವೆ. ಈ ಎರಡು ದಿನಗಳ‌ ಕಾರ್ಯಕ್ಕೆ ಸ್ಥಳೀಯ ಯುವಾಬ್ರಿಗೇಡ್‌ನ ಕಾರ್ಯಕರ್ತರಲ್ಲದೇ ಆನಂದ್, ಸುನೀಲ್ ಮತ್ತು ನಿತಿನ್ ಅವರ ಸಹಕಾರ ಮರೆಯಲಾಗದಂಥದ್ದು. ಗ್ರಾಮಪಂಚಾಯತ್ ಮುಖ್ಯಸ್ಥರೂ ತರುಣರೇ ಆಗಿದ್ದರಿಂದ ಬರುವ ದಿನಗಳಲ್ಲಿ ಹೆಚ್ಚಿನ ಸಹಕಾರ ನಿರೀಕ್ಷಿಸಬಹುದು. ಮುಂದಿನ ಕಾರ್ಯಗಳಲ್ಲಿ ನೀವೂ ನಮ್ಮೊಂದಿಗೆ ಕೈ ಜೋಡಿಸಿ.

Leave a Reply

Your email address will not be published. Required fields are marked *

You May Also Like

ಸ್ವಚ್ಛ ಸೌಪರ್ಣಿಕಾ

ಕೊಲ್ಲೂರಿನಲ್ಲಿ ಹರಿಯುವ ನದಿ ಸೌಪರ್ಣಿಕಾ. ಯುವಾ ಬ್ರಿಗೇಡ್ ನ 20 ಜನ ಕಾರ್ಯಕರ್ತರು ದಿನವಿಡೀ ಕೆಲಸ ಮಾಡಿ 10 ಟನ್ ಕಸವನ್ನು ಹೊರತೆಗೆಯಲಾಯಿತು. Post Views: 322
View Post

ಜೀವನದಿಗೆ ಜೀವತುಂಬಿ

ಕಾವೇರಿಗಾಗಿ ಯಾವ ಕದನ ಶುರುವಾಗತ್ತೋ ಹೇಳಲು ಬರುವುದಿಲ್ಲ. ರಾಜಕೀಯದ ಪಡಸಾಲೆಯಲ್ಲಿ ಮತ ಬಾಚಬೇಕು ಎನಿಸಿದಾಗಲೆಲ್ಲ ಕಾವೇರಿಯೇ ಅಸ್ತ್ರ. ಈ ಬಾರಿ ಈ ಹೋರಾಟದಲ್ಲಿ ಕಮಲ್ಹಾಸನ್ ಮತ್ತು ರಜನೀಕಾಂತ್ ಭಾಗವಹಿಸಿರುವುದು ಅಪ್ಪಟ ರಾಜಕೀಯವಲ್ಲದೇ ಮತ್ತೇನೂ ಅಲ್ಲ. ಇಷ್ಟೂ ದಿನ ಈ ಪರಿಯ ಕದನಗಳಿಂದ…
View Post

ಸ್ವಾತಂತ್ರ್ಯ ತಿಲಕ

ಸ್ವತಂತ್ರ ಭಾರತ ಬ್ರಿಟಿಷರು ಕೊಟ್ಟ ಉಡುಗೊರೆ ಅಲ್ಲ! ವೀರರ ರಕ್ತದ ಮೇಲೆ ಕಟ್ಟಿದ ಸೌಧ! ಬ್ರಿಟಿಷರು ವ್ಯಾಪಾರಕ್ಕಾಗಿ ಬಂದರು ದೇಶವನ್ನೇ ಆಳಲು ನಿಂತುಬಿಟ್ಟರು. ಭಾರತೀಯರು ನಾವು ಉದಾರಿಗಳು ಅವಕಾಶ ಕಲ್ಪಿಸಿ ಕೊಟ್ಟೆವು. ಅವರು ಅವಕಾಶವನ್ನೇ ದುರುಪಯೋಗ ಮಾಡುತ್ತಿರುವುದನ್ನು ತಿಳಿಯದೆ ಹೋದೆವು. ಇದರ…
View Post

ಗದಗ ಕೋನೆರಿ ಹೊಂಡದ ದೀಪೋತ್ಸವ ಕಾರ್ಯಕ್ರಮ

ಕೋನೇರಿ ಕಲ್ಯಾಣಿ ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಸಂಬಂಧಿಸಿದ ಪುಷ್ಕರಣಿಯಾಗಿದ್ದು, ಕ್ರಿ.ಶ ೧೧೧೭ ರಲ್ಲಿ ಹೊಯ್ಸಳ ಅರಸ ವಿಷ್ಣುವರ್ಧನನು ಈ ದೇವಸ್ಥಾನ ನಿರ್ಮಿಸಿದನು. ಗದುಗಿನ ಇತಿಹಾಸ ವರ್ಣಿಸುವ ಪುರಾಣ-ಪುಸ್ತಕಗಳು ಹೇಳುವಂತೆ ಈಗಿನ ಕೊನೇರಿ ಕಲ್ಯಾಣಿಯು ಕೂಡ ಅದೇ ಕಾಲದಲ್ಲಿ ನಿರ್ಮಿತವಾಯಿತು. ಇಲ್ಲಿನ ಆಚಾರ್ಯರ…
View Post

ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ

ಮಾರ್ಚ್ 25ರ “ದೀಕ್ಷಾ ದಿವಸದ” ಭರ್ಜರಿ ಕಾರ್ಯಕ್ರಮಗಳ ಪ್ರತಿಫಲ ಬೇಸಿಗೆ ಶಿಬಿರಗಳು. ಮಕ್ಕಳ ಶಾಲೆ ಮುಗಿದಿತ್ತು, ಏಪ್ರಿಲ್ ತಿಂಗಳ ಪ್ರಖರ ಸೂರ್ಯನ ಶಾಖ ಅವರನ್ನು ಹೊರಗೆ ಬರದಂತೆ ಮಾಡಿತ್ತು. ಎಲ್ಲಾ ಕಡೆಗಳಲ್ಲಿ ಬೇಸಿಗೆ ಶಿಬಿರಗಳು ಮಕ್ಕಳನ್ನು ಆಕರ್ಷಿಸುತ್ತಿದ್ದವು. ಆದರೆ ಶಿಬಿರಗಳ ಪ್ರವೇಶಕ್ಕೆ…
View Post

ದೀಕ್ಷಾ ದಿವಸ್

ಅಂದು ಮಾರ್ಚ 25, 1898. ಶುಕ್ರವಾರದ ಶುಭ ದಿನ. ಮಾರ್ಗರೆಟ್ ಸೂರ್ಯೋದಯದ ಮುನ್ನವೇ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು ತನ್ನ ಗುರುವಿನ ಮುಂದೆ ಉತ್ಸಾಹ, ಕುತೂಹಲಗಳಿಂದ ನಿಂತಿದ್ದಳು. ಆ ದಿನ ಸ್ವಾಮೀಜಿ ಆಕೆಗೆ ಶಿವ ಪೂಜೆ ಮಾಡುವ ವಿಧಾನ ಹೇಳಿಕೊಟ್ಟರು. ಗಮನವಿಟ್ಟು,…
View Post