ಜಲ ಜನ ಸಂಪರ್ಕ ಸೇತು

Total
0
Shares

ನೀರಿದ್ದರೆ ಊರು, ಊರುಳಿದರೆ ನಾವು. ಊರು ಉಳಿಸಲು ನಾವೀಗ ನೀರು ಉಳಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ವಿಪರೀತ ಬದಲಾವಣೆಯನ್ನು ತೋರುತ್ತಿದೆ. ಬಾರಿಯ ಬೇಸಿಗೆಯಲ್ಲಿ ಬಿಸಿಲಿನ ಝಳ ಅತ್ಯಂತ ಹೆಚ್ಚಿತ್ತು. ಉತ್ತರ ಕರ್ನಾಟಕದ ಹಲವು ಹಳ್ಳಿಗಳು ಅಕ್ಷರಶಃ ಬರಪೀಡಿತವಾಗಿದ್ದವು. ಪ್ರಾಣಿಪಕ್ಷಿಗಳಿಗಿರಲಿ ಮನುಷ್ಯರಿಗೆ ಕುಡಿಯಲು ನೀರು ಸಿಕ್ಕರೆ ಸಾಕು ಎನ್ನುವಷ್ಟು!

 ಬೇಸಿಗೆ ಕಳೆದು ಮಳೆಗಾಲ ಪ್ರಾರಂಭಗೊಂಡಿದೆ. ರಾಜ್ಯಾದ್ಯಂತ ಬಾರಿ ಉತ್ತಮ ಮಳೆಯಾಗುತ್ತಿದೆ. ಉತ್ತರ ಕರ್ನಾಟಕದಲ್ಲೂ ಮಳೆಯು ಧರೆಯನ್ನು ತಂಪುಗೊಳಿಸಿದೆ. ಹಾಗಂತ ಮಳೆ ಬೀಳುತ್ತಿದೆ ಎಂದು ಸುಮ್ಮನೆ ಕುಳಿತರೆ ಆಗದು. ಈಗ ಮಳೆ ಚೆನ್ನಾಗಿ ಬಂದ ಮಾತ್ರಕ್ಕೆ ಮುಂದಿನ ಬೇಸಿಗೆಯಲ್ಲಿ ನೀರಿನ ಕೊರತೆ ತಪ್ಪುವುದಿಲ್ಲ. ಆದರೆ, ನೀರನ್ನು ವ್ಯರ್ಥಮಾಡದೆ ಉಪಾಯದಿಂದ ಬಳಸುವುದರ ಮೂಲಕ, ಭೂಮಿಗೆ ಬಿದ್ದ ನೀರನ್ನು ಇಂಗಿಸುವುದರ ಮೂಲಕ ನೀರಿನ ಕೊರತೆಯನ್ನು ಹೋಗಲಾಡಿಸಬಹುದು. ಇದನ್ನೇ ಜಲಸಾಕ್ಷರತೆ ಅನ್ನೋದು. ನಾವು ಜಲ ಸಾಕ್ಷರರಾದರೆ ಸಾಲದು, ನಮ್ಮ ಸುತ್ತಮುತ್ತಲಿರುವ ಜನರನ್ನೂ ಜಲಸಾಕ್ಷರರನ್ನಾಗಿ ಮಾಡಬೇಕಿದೆ. ಹಾಗೆಂದೇ ಯುವಾಬ್ರಿಗೇಡ್ ಬಾರಿ ಕೈಗೊಂಡ ಯೋಜನೆ ಜಲ ಜನ ಸಂಪರ್ಕ ಸೇತು.

20664795_1500094743384477_7677366934467308894_n

20708306_1499548766772408_6756198728907256181_n

  ನಿಟ್ಟಿನಲ್ಲಿ, ನೀರನ್ನು ವ್ಯರ್ಥ ಮಾಡದೇ ಮಿತವಾಗಿ ಬಳಸುವ, ಬಿದ್ದ ಮಳೆ ನೀರನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ಕೆಲವೊಂದು ಉಪಾಯಗಳನ್ನೊಳಗೊಂಡ ಕರಪತ್ರವನ್ನು ಯುವಾಬ್ರಿಗೇಡ್ ಸಿದ್ಧಪಡಿಸಿತು. ರಾಜ್ಯಾದ್ಯಂತ ಯುವಾಬ್ರಿಗೇಡಿನ ಕಾರ್ಯಕರ್ತರು ತಮ್ಮ ಬಿಡುವಿನ ವೇಳೆಯಲ್ಲಿ ಮನೆಮನೆಗೆ ತೆರಳಿ, ಕರಪತ್ರವನ್ನು ನೀಡುವುದರ ಜೊತೆಗೆ ನೀರಿನ ಕುರಿತಾದ ಕೆಲವು ವಿಶೇಷ ಮಾಹಿತಿಯನ್ನೂ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಪ್ರತಿ ಶನಿವಾರ ಮತ್ತು ಭಾನುವಾರ WeekendWithRainWaterHarvestin ಎಂಬ ಹೆಸರಿನಡಿಯಲ್ಲಿ ಪ್ರತಿ ಮನೆಗೂ ತೆರಳಿ ಮಳೆ ನೀರು ಕೊಯ್ಲಿನ ಕುರಿತು ವಿಶೇಷ ಮಾಹಿತಿಯನ್ನು ನೀಡಿ, ಅದರ ಹಲವು ಉಪಯೋಗಗಳನ್ನು ತಿಳಿಸಿ, ಸಾಧ್ಯವಾದರೆ ಅತ್ಯಂತ ಸರಳವಾಗಿ ಅದನ್ನು ಮಾಡುವ ವಿಧಾನವನ್ನು ವಿವರಿಸಿ ಬರುತ್ತಿದ್ದಾರೆ. ಹನಿ ಹನಿ ನೀರೂ ಅಮೂಲ್ಯವೆನ್ನುವ ವಿಚಾರವನ್ನು ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಮುಂಬರುವ ದಿನಗಳಲ್ಲಿ ಯುದ್ಧವೇನಾದರೂ ಆದರೆ ಅದು ನೀರಿಗಾಗಿಯೇ ಆಗುವುದು ಬಹುತೇಕ ಖಚಿತ. ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ಅಂತಹ ಯುದ್ಧಕ್ಕೆ ಅವಕಾಶ ಕೊಡಬಾರದೆಂದು ನಿರ್ಧರಿಸಿ ಯುವಾಬ್ರಿಗೇಡ್ ಜಲ ಮತ್ತು ಜನತೆಯ ನಡುವೆ ಸಂಪರ್ಕವನ್ನು ಬೆಸೆಯುವ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಒಂದು ಲಕ್ಷ ಜನರನ್ನು ಜಲಸಾಕ್ಷರತೆಯೆಡೆಗೆ ಕರೆದೊಯ್ಯುವ ಪಣತೊಟ್ಟಿದೆ ಯುವಾಬ್ರಿಗೇಡ್. ಈಗಾಗಲೇ ರಾಜ್ಯಾದ್ಯಂತ 2000ಕ್ಕೂ ಮೀರಿ ಮನೆಗಳಿಗೆ ಭೇಟಿ ಕೊಟ್ಟು, ಜಲಸಾಕ್ಷರರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದೆ! ಬನ್ನಿ, ನಮ್ಮೊಡನೆ ಕೈ ಜೋಡಿಸಿ. ಜಲ ಸಾಕ್ಷರರಾಗಿ.

ಕೆರೆಯಿಂದ ಕಲ್ಯಾಣಿಗೆ,

ಕಲ್ಯಾಣಿಯಿಂದ ಬಾವಿಗೆ,

ಬಾವಿಯಿಂದ ಬೋರಿಗೆ ಕೊನೆಗೆ ಮನೆಯೊಳಗಿನ ನಲ್ಲಿಗೆ ನೀರು ಬಂತು.

ಈಗ

ಅಂತರ್ಜಲ ಖಾಲಿ

ಬಾವಿಗಳಿಲ್ಲ, ಕಲ್ಯಾಣಿಗಳು ಮುಚ್ಚಿವೆ

ಕೆರೆ ಹೂಳು ತುಂಬಿದೆ.

ಮುಂದೇನು?

ಭಗವಂತ ಕೊಡುವ ಮಳೆಹನಿ ಉಳಿಸೋಣ.

ಕಲ್ಯಾಣಿಕೆರೆಬಾವಿಗಳ ತುಂಬಿಸೋಣ.

ಬತ್ತಿದ ಬೋರ್ವೆಲ್ಲು ಚುರುಕಾಗಲಿ.

ನಲ್ಲಿನಲ್ಲಿಗಳು ನಳನಳಿಸಲಿ.

Leave a Reply

Your email address will not be published. Required fields are marked *

You May Also Like

ಸ್ವಚ್ಛ ಸೌಪರ್ಣಿಕಾ

ಕೊಲ್ಲೂರಿನಲ್ಲಿ ಹರಿಯುವ ನದಿ ಸೌಪರ್ಣಿಕಾ. ಯುವಾ ಬ್ರಿಗೇಡ್ ನ 20 ಜನ ಕಾರ್ಯಕರ್ತರು ದಿನವಿಡೀ ಕೆಲಸ ಮಾಡಿ 10 ಟನ್ ಕಸವನ್ನು ಹೊರತೆಗೆಯಲಾಯಿತು. Post Views: 322
View Post

ಜೀವನದಿಗೆ ಜೀವತುಂಬಿ

ಕಾವೇರಿಗಾಗಿ ಯಾವ ಕದನ ಶುರುವಾಗತ್ತೋ ಹೇಳಲು ಬರುವುದಿಲ್ಲ. ರಾಜಕೀಯದ ಪಡಸಾಲೆಯಲ್ಲಿ ಮತ ಬಾಚಬೇಕು ಎನಿಸಿದಾಗಲೆಲ್ಲ ಕಾವೇರಿಯೇ ಅಸ್ತ್ರ. ಈ ಬಾರಿ ಈ ಹೋರಾಟದಲ್ಲಿ ಕಮಲ್ಹಾಸನ್ ಮತ್ತು ರಜನೀಕಾಂತ್ ಭಾಗವಹಿಸಿರುವುದು ಅಪ್ಪಟ ರಾಜಕೀಯವಲ್ಲದೇ ಮತ್ತೇನೂ ಅಲ್ಲ. ಇಷ್ಟೂ ದಿನ ಈ ಪರಿಯ ಕದನಗಳಿಂದ…
View Post

ಗದಗ ಕೋನೆರಿ ಹೊಂಡದ ದೀಪೋತ್ಸವ ಕಾರ್ಯಕ್ರಮ

ಕೋನೇರಿ ಕಲ್ಯಾಣಿ ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಸಂಬಂಧಿಸಿದ ಪುಷ್ಕರಣಿಯಾಗಿದ್ದು, ಕ್ರಿ.ಶ ೧೧೧೭ ರಲ್ಲಿ ಹೊಯ್ಸಳ ಅರಸ ವಿಷ್ಣುವರ್ಧನನು ಈ ದೇವಸ್ಥಾನ ನಿರ್ಮಿಸಿದನು. ಗದುಗಿನ ಇತಿಹಾಸ ವರ್ಣಿಸುವ ಪುರಾಣ-ಪುಸ್ತಕಗಳು ಹೇಳುವಂತೆ ಈಗಿನ ಕೊನೇರಿ ಕಲ್ಯಾಣಿಯು ಕೂಡ ಅದೇ ಕಾಲದಲ್ಲಿ ನಿರ್ಮಿತವಾಯಿತು. ಇಲ್ಲಿನ ಆಚಾರ್ಯರ…
View Post

ಯುವಾ ಬ್ರಿಗೇಡ್ ನ ಆಧುನಿಕ ಭಗೀರಥರು

ಮನಷ್ಯ ಜಗತ್ತಿನಲ್ಲಿ ಭೂಮಿಯಿಂದ ನೀರನ್ನು ಹೊರ ತೆಗೆಯುವುದನ್ನು ಮಾತ್ರ ಕಲೆತಿದ್ದಾನೆ. ಆದರೆ, ನೀರನ್ನು ಮರಳಿ ಭೂಮಿಗೆ ಇಂಗಿಸುವ ಕೆಲಸವನ್ನು ಮರೆತೇ ಬಿಟ್ಟಿದ್ದಾನೆ. ತಾಯಿ ವಸುಂಧರೆಯನ್ನು ತಂಪಾಗಿಸಲೆಂದೇ ಯುವಾ ಬ್ರಿಗೇಡ್ ಮಳೆನೀರು ಕೊಯ್ಲು ಹಾಗೂ ಕಲ್ಯಾಣಿಗಳ ಸ್ವಚ್ಛತಾ ಕೆಲಸವನ್ನು ಕೈಗೆತ್ತಿಕೊಂಡಿತು. ಹೌದು ನನಗೆ…
View Post

ನಮಾಮಿ‌ ಕಪಿಲೆ

ನಂಜನಗೂಡಿನಲ್ಲಿ ಹರಿಯುವ ನದಿ‌ ಕಪಿಲೆ. ಭಕ್ತರು ಆಕೆಯನ್ನು ಭಕ್ತಿಯಿಂದ ಕಾಣುತ್ತಾರೆ.‌ ಆದರೆ ಆಕೆಯ ಸ್ವಚ್ಛತೆಯನ್ನು ಕಾಪಾಡುವುದಿಲ್ಲ. ಹೀಗಾಗಿಯೇ ಯುವಾಬ್ರಿಗೇಡ್ ಕಾರ್ಯಕರ್ತರು ಕಪಿಲೆಯನ್ನು ಸ್ವಚ್ಛಗೊಳಿಸಲು ಮುಂದಾದರು. ಸುಮಾರು 30 ಜನ ಕಾರ್ಯಕರ್ತರು ಒಂದು ಭಾನುವಾರವಿಡೀ ಕೆಲಸ ಮಾಡಿ 15 ಟನ್ ಕಸವನ್ನು ಹೊರತೆಗೆದರು.…
View Post

ಗದಗ ಕೋನೆರಿ ಹೊಂಡದ 100ನೇ ದಿನದ ಸ್ಚಚ್ಛತಾ ಕಾರ್ಯಕ್ರಮ

ಕೋನೇರಿ ಕಲ್ಯಾಣಿ, ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಸಂಬಂಧಿಸಿದ ಪುಷ್ಕರಣಿಯಾಗಿದೆ.ಕ್ರಿ.ಶ ೧೧೧೭ ರಲ್ಲಿ ಹೊಯ್ಸಳ ಅರಸ ವಿಷ್ಣುವರ್ಧನನು ಈ ದೇವಸ್ಥಾನ ನಿರ್ಮಿಸಿದನು.ಗದುಗಿನ ಇತಿಹಾಸ ವರ್ಣಿಸುವ ಪುರಾಣ-ಪುಸ್ತಕಗಳು ಹೇಳುವಂತೆ ಈಗಿನ ಕೊನೇರಿ ಕಲ್ಯಾಣಿಯು ಕೂಡ ಅದೇ ಕಾಲದಲ್ಲಿ ನಿರ್ಮಿತವಾಯಿತು. ಇಲ್ಲಿನ ಆಚಾರ್ಯರ ಅಂಬೋಣವು ಅದೇ…
View Post