ದಿಸ್ ಇಸ್ ನಾಟ್ 1962

Total
0
Shares

ಡೋಕ್ಲಾಮ್ ಭೂತಾನಿಗೆ ಸೇರಿದ್ದರೂ ಚೀನಾ ಮಾತ್ರ ಅದರ ಮೇಲೆ ಪ್ರಾಬಲ್ಯ ಸಾಧಿಸಲು ತನ್ನ ಸೇನೆಯನ್ನು ಡೋಕ್ಲಾಮ್ ಗಡಿ ಪ್ರದೇಶಕ್ಕೆ ಕಳಿಸಿತ್ತು. ಆದರೆ ಭೂತಾನ್ ತನ್ನ ನೆರವಿಗೆ ಭಾರತವನ್ನು ಕೇಳಿಕೊಂಡಿತು. ಭಾರತವು ತನ್ನ ಸೇನೆಯನ್ನು ಡೋಕ್ಲಾಮ್ಗೆ ಕಳಿಸಿಕೊಟ್ಟಿತ್ತು. ಇದನ್ನು ಸಹಿಸದ ಚೀನಾ ಭಾರತೀಯ ಸೈನಿಕರ ಮೇಲೆ ಮಾತಿನ ಸಮರಕ್ಕೆ ಇಳಿದಿತ್ತು. ಭಾರತೀಯ ಸೈನಿಕರು ಸುಮ್ಮನಾಗದೆ ಅವರೂ ಮಾತಿಗೆ ನಿಂತರು. ವಾದ ವಿವಾದಗಳು ಮೈ ಕೈ ಮುಟ್ಟಿಕೊಳ್ಳುವವರೆಗೂ ನಡೆಯಿತು. ಭಾರತೀಯ ಸೈನಿಕರು ಚೀನಿ ಸೈನಿಕರನ್ನು ಎದೆಯಿಂದ ಹಿಂದಕ್ಕೆ ತಳ್ಳಿದ್ದರು. ಇದರ ಪರಿಣಾಮ ಚೀನಾ ಭಾರತಕ್ಕೆ 1962 ನೆನಪಿದೆಯಾ ಎಂದು ಎಚ್ಚರಿಸಿತ್ತು.

ಚೀನಾದ ಈ ವಿಶ್ವಾಸ ಘಾತುಕ ವರ್ತನೆಗೆ ಇಡಿಯ ದೇಶದಲ್ಲಿ ಚೀನಾದ ವಿರುದ್ಧ ಧ್ವನಿ ಮೊಳಗಿತ್ತು. ಚೀನಾದ ವಸ್ತುಗಳನ್ನು ನಿಷೇಧಿಸುವಂತೆ ದೊಡ್ಡ ಕೂಗೊಂದು ದೇಶ ವ್ಯಾಪಿ ಕೇಳಿತ್ತು. ಯುವಾ ಬ್ರಿಗೇಡ್ ದಿಸ್ ಇಸ್ ನಾಟ್ 1962 ಎನ್ನುವ ಕಿರುಚಿತ್ರ ಮಾಡುವುದರ ಮೂಲಕ ಈ ಅಭಿಯಾನಕ್ಕೆ ಕೈ ಜೋಡಿಸಿತು.
ಸಾಮಾನ್ಯ ಭಾರತೀಯರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಈ ಸಾಲು ಕಿರುಚಿತ್ರದಲ್ಲಿ ತೋರಿಸಲಾಗಿತ್ತು.

1. ಸಾಮಾನ್ಯ ದೋಬಿಯೊಬ್ಬ ಚೀನಾ ಬಟ್ಟೆಯ ಸ್ವಚ್ಛತೆಗೆ ಹೆಚ್ಚಿಗೆ ಹಣವನ್ನು ಪಡೆಯುವುದರ ಮೂಲಕ ತನ್ನ ವಿರೋಧವನ್ನು ಹೇಗೆ ವ್ಯಕ್ತ ಪಡಿಸುತ್ತಾನೆ ಎಂದು ತೋರಿಸಲಾಗಿತ್ತು.

V1

2. ಚಪ್ಪಲಿ ಹೊಲಿಯುವವನೊಬ್ಬ ಚೀನಾ ಚಪ್ಪಲಿಯನ್ನು ಪಾಲಿಶ್ ಮಾಡದೇ ವಾಪಾಸ್ ಕಳಿಸುವುದರ ಮೂಲಕ ಚೀನಾದ ವಿರುದ್ಧ ತನ್ನ ಕೋಪವನ್ನು ಹೊರಹಾಕುವುದನ್ನ ತೋರಿಸಲಾಗಿತ್ತು.

V2

3. ಪೇಪರ್ ಹಾಕುವ ಹುಡುಗ ಚೀನಾ ವಸ್ತುಗಳ ಮಾರಾಟದ ಕರಪತ್ರವನ್ನು ಪೇಪರಿನೊಳಗೆ ಇಟ್ಟು ಪ್ರಚಾರ ಪಡಿಸಲು ನಿರಾಕರಿಸಿದ್ದನ್ನು ಕಿರು ಚಿತ್ರದ ಮೂಲಕ ವ್ಯಕ್ತ ಪಡಿಸಲಾಗಿತ್ತು.

V3

4. ಚೀನಾದಿಂದ ಅಧಿಕ ಪ್ರಮಾಣದಲ್ಲಿ ಆಮದಾಗುವ ಬೀಜವನ್ನ ಆಡಿಕೊಳ್ಳುತ್ತ ಉತ್ತಮ ಫಸಲು ಕೊಡೋದಿಲ್ಲ ಎಂದು ತೋರಿಸಲಾಗಿತ್ತು.

v4

ಈ ನಾಲ್ಕು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಚಾರವನ್ನು ಪಡೆಯಿತು.

Leave a Reply

Your email address will not be published. Required fields are marked *

You May Also Like

ಜಯ ತವ ಜಯ

ಭಾರತ ಕಂಡ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು. ಹಿಂದೂ ಯೋಗಿ, ಸಿಡಿಲ ಸಂತ, ಸನ್ಯಾಸಿ ಯೋಧ, ಹೀಗೆ ಹತ್ತು ಹಲವು ಪದಗಳು ವಿವೇಕಾನಂದರ ಹೆಸರೊಡನೆ ಜೋಡಣೆಯಾಗುತ್ತವೆ. ಇಂದಿಗೂ ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಫೂರ್ತಿಯ ಚಿಲುಮೆಯೇ. ಈಗಾಗಲೇ ಸ್ವಾಮಿ ವಿವೇಕಾನಂದರ ಕುರಿತು ವಿವಿಧ…
View Post

ಬಿಲೀಫ್ ಫೆಸ್ಟ್

ಆದರೆ, ಇಸ್ಲಾಮಿ ರಾಜ್ಯ ಸ್ಥಾಪನೆಯಾದಲ್ಲೆಲ್ಲಾ ಗೋಮಾಂಸ ಭಕ್ಷಣೆ ಆರಂಭವಾಗತೊಡಗಿತು. ಗೋಹತ್ಯೆ ಎಗ್ಗಿಲ್ಲದೇ ನಡೆಯತೊಡಗಿತು. ಬರು–ಬರುತ್ತಾ ಕಸಾಯಿಖಾನೆಗಳ ಮೂಲಕ ಗೋಹತ್ಯೆ ವ್ಯಾಪಕವಾಗತೊಡಗಿತು. ಗೋವು ನಮಗೆ ಮಾಂಸದ ಮೂಲಕ ಹಣ ತರುವ ವಸ್ತುವಾಯ್ತು. ಬಹುಸಂಖ್ಯಾತರ ಶ್ರದ್ಧೆಯ ಪ್ರತೀಕವಾದ ಗೋವಿನ ಸಂರಕ್ಷಣೆ ಮಾಡುವುದು ಅಷ್ಟೇ ಅಗತ್ಯ…
View Post

ನನ್ನ ಕನಸಿನ ಕರ್ನಾಟಕ (ಟ್ವಿಟರ್ ಟ್ರೆಂಡ್)

ಈ ಬಾರಿ ಯುವಾಬ್ರಿಗೇಡ್ ನನ್ನ ಕನಸಿನ ಕರ್ನಾಟಕ ಎಂಬ ಯೋಜನೆಯನ್ನು ಕೈಗೆತ್ತಿಕೊಂಡು ಕರ್ನಾಟಕವನ್ನು ಸುಂದರವಾಗಿಸುವ ಪ್ರಯತ್ನಕ್ಕೆ ಕೈ ಹಾಕಿತು. ನಮ್ಮ ಊರು, ಹಳ್ಳಿ, ಜಿಲ್ಲೆ, ರಾಜ್ಯದ ಕುರಿತಂತೆ ನಮ್ಮ-ನಮ್ಮ ಕನಸುಗಳನ್ನು ಹಂಚಿಕೊಳ್ಳುವ ಸಾಧ್ಯವಾದರೆ ಸಾಕಾರಗೊಳಿಸಿಕೊಳ್ಳುವ ಪ್ರಯತ್ನವನ್ನು ಯುವಾಬ್ರಿಗೇಡ್ ಮಾಡಿತು. ನವೆಂಬರ್ 1…
View Post

#BoseQuotes

ಜನವರಿ 23 ಸುಭಾಷ್ ಚಂದ್ರ ಬೋಸರ ಜಯಂತಿ. ಭಾರತ ಮಾತೆಯ ಶ್ರೇಷ್ಠ ಪುತ್ರ ಸುಭಾಷ್ ಚಂದ್ರ ಬೋಸರ ಬಗ್ಗೆ ತಿಳಿಸುವುದು ಮತ್ತು ಅವರ ಸಂದೇಶವನ್ನು ಮನೆ-ಮನೆಗೂ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ. ಈ ಕಾರಣಕ್ಕಾಗಿಯೇ ಯುವಾಬ್ರಿಗೇಡ್ ಈ ಬಾರಿ ಜನವರಿ 23 ರಂದು…
View Post

#TirangaYB

ಯುವಾಬ್ರಿಗೇಡಿಗೆ ಭರ್ತಿ ಮೂರು ವರ್ಷ! ಬೆಂಗಳೂರಿನ ದೊಡ್ಡ ಆಲದ ಮರದ ಹತ್ತಿರದ ತೋಟದಲ್ಲಿ ಯುವಾಬ್ರಿಗೇಡ್ ತನ್ನ ಪಯಣವನ್ನು ಆರಂಭಿಸಿ ರಾಜ್ಯಾದ್ಯಂತ ತನ್ನ ಬಾಹುಗಳನ್ನು ಚಾಚಿದೆ. ಈ ಮೂರು ವರ್ಷಗಳಲ್ಲಿ ಆದ ಕೆಲಸಗಳೂ ಹಲವು; ಎದುರಿದ್ದ ಸವಾಲುಗಳೂ ಹಲವು. ಸಣ್ಣ ವೇದಿಕೆಯ ಕಾರ್ಯಕ್ರಮಗಳಾದ…
View Post