ಜಯ ತವ ಜಯ

Total
0
Shares

ಭಾರತ ಕಂಡ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು. ಹಿಂದೂ ಯೋಗಿ, ಸಿಡಿಲ ಸಂತ, ಸನ್ಯಾಸಿ ಯೋಧ, ಹೀಗೆ ಹತ್ತು ಹಲವು ಪದಗಳು ವಿವೇಕಾನಂದರ ಹೆಸರೊಡನೆ ಜೋಡಣೆಯಾಗುತ್ತವೆ. ಇಂದಿಗೂ ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಫೂರ್ತಿಯ ಚಿಲುಮೆಯೇ. ಈಗಾಗಲೇ ಸ್ವಾಮಿ ವಿವೇಕಾನಂದರ ಕುರಿತು ವಿವಿಧ ಭಾಷೆಗಳಲ್ಲಿ ಚಲನಚಿತ್ರಗಳು, ಕಿರುಚಿತ್ರಗಳು ನಿರ್ಮಿಸಲ್ಪಟ್ಟಿವೆ. ಆದರೆ, ಸ್ವಾಮೀಜಿಯ ಕುರಿತ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅಪರೂಪದ ಚಿತ್ರ ‘ಜಯ ತವ ಜಯ’. 45 ನಿಮಿಷಗಳ ಈ ಕಿರುಚಿತ್ರ ಹಿಂದಿ, ಇಂಗ್ಲೀಷ್ ಮತ್ತು ಬಂಗಾಲಿ ಭಾಷೆಗಳಲ್ಲಿ ತೆರೆಕಂಡಿದೆ. ವಿವೇಕಾನಂದರ ಸಿಡಿಲಿನಂತಹ ಸಂದೇಶಗಳನ್ನೂ, ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧೀಜಿ, ಅರಬಿಂದೊ, ಕ್ರಿಸ್ಟೊಫರ್, ವಿಲಿಯಂ ಜೇಮ್ಸ್, ಟಾಲ್ಸ್ಟಾಯ್ ರಂತಹ ಜಾಗತಿಕ ಚಿಂತಕರು ಸ್ವಾಮೀಜಿಯ ಕುರಿತಂತೆ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಈ ಕಿರುಚಿತ್ರ ಒಳಗೊಂಡಿದೆ.

20280314_10208207530900639_5581509717682641955_o

ಕಲ್ಕತ್ತಾದ ರಾಮಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಕಲ್ಚರ್ ನಿರ್ಮಿಸಿರುವ ಈ ಕಿರುಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಚಿತ್ರ ನಿರ್ದೇಶಕರಾದ ಅನೂಪ್ ರಾಯ್ ಚೌಧರಿಯವರು ಕರ್ನಾಟಕದಲ್ಲಿ ಈ ಕಿರುಚಿತ್ರದ ಪ್ರದರ್ಶನ ಏರ್ಪಡಿಸಲು ಸಹಕಾರಕ್ಕಾಗಿ ಯುವಾಬ್ರಿಗೇಡನ್ನು ಕೇಳಿಕೊಂಡರು. ವಿಶ್ವಗುರು ಭಾರತದ ಸಾಕಾರಕ್ಕಾಗಿ ಸ್ವಾಮಿ ವಿವೇಕಾನಂದರ ಮಾರ್ಗದಲ್ಲಿ ನಡೆಯುತ್ತಿರುವ ಯುವಾಬ್ರಿಗೇಡ್ಗೆ ಸ್ವಾಮೀಜಿಯ ಕೆಲಸವೆಂದರೆ ಅಚ್ಚುಮೆಚ್ಚು. ಬೇರೆಲ್ಲಾ ಯೋಜನೆಗಳ ನಡುವೆ ಈ ಕೆಲಸವನ್ನು ಸಂತೋಷದಿಂದ ಸ್ವೀಕರಿಸಿತು ಯುವಾಬ್ರಿಗೇಡ್.

ಕರ್ನಾಟಕದ ಕೆಲವು ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಿರುಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಯಿತು. ವಿಶೇಷವೆಂದರೆ ಚಿತ್ರದ ನಿರ್ದೇಶಕರಾದ ಅನೂಪ್ ರಾಯ್ ಚೌಧರಿಯವರು ನಮ್ಮೊಡನಿದ್ದರು. ಬೆಂಗಳೂರಿನ ಯುವಾಬ್ರಿಗೇಡ್ ಕಾರ್ಯಕರ್ತ ಅಭಿರಾಮ್ ಅವರು ಈ ಎಲ್ಲ ಪ್ರದರ್ಶನಗಳ ಮುಂದಾಳತ್ವ ವಹಿಸಿದ್ದರು.

ಮಂಗಳೂರು, ಹುಬ್ಬಳ್ಳಿ, ದಾವಣಗೆರೆ ಮತ್ತು ತುಮಕೂರಿನಲ್ಲಿ ಒಟ್ಟು ಒಂಭತ್ತು ಕಡೆ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಚಿತ್ರ ಪ್ರದರ್ಶನದ ನಂತರ ನಿರ್ದೇಶಕ ಅನೂಪ್ ಚೌಧರಿಯವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಪ್ರತಿಕ್ರಿಯೆ ಅದ್ಭುತವಾಗಿತ್ತು. ಸುಮಾರು 80 ಸಿಡಿಗಳು ಮಾರಾಟಗೊಂಡವು.

20604241_1377516115679712_2312746911975299120_n

20597411_1378022845629039_2451978799298459065_n

20596998_1377515929013064_3695454933145011143_n

20525635_1378022918962365_7888501772165643045_n

20476116_1377515869013070_2993913671917175670_n

ತುಮಕೂರಿನ ಕೊನೆಯ ಪ್ರದರ್ಶನದಲ್ಲಿ ಯುವಾಬ್ರಿಗೇಡಿನ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಉಪಸ್ಥಿತರಿದ್ದು ಚಿತ್ರದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ತಮ್ಮದೇ ಆದ ರೀತಿಯಲ್ಲಿ ದೇಶದಾದ್ಯಂತ ಪಸರಿಸುತ್ತಿರುವ ಅನೂಪ್ ಚೌಧರಿಯವರಿಗೆ ಯುವಾಬ್ರಿಗೇಡ್ ಧನ್ಯವಾದಗಳನ್ನು ಸಮರ್ಪಿಸಿತು.

20431634_1377515905679733_5656370959979752158_n

ಜಯ ತವ ಜಯ ಪ್ರದರ್ಶನಗೊಂಡ ಸ್ಥಳಗಳು:
1. ಮಂಗಳೂರು – ಮಧುಸೂದನ ಡಿ ಕುಷೆ ಕಾಲೇಜು
ಶಾರದಾ ವಿದ್ಯಾಲಯ

2. ಹುಬ್ಬಳ್ಳಿ – ಕೆ.ಎಲ್.ಇ ಕಾಲೇಜು
ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ

3. ದಾವಣಗೆರೆ – ಜಿ.ಎಮ್.ಟಿ ಕಾಲೇಜು
ಡಿ.ಆರ್.ಎಮ್ ಕಾಲೇಜು
ಶ್ರೀ ರಾಮಕೃಷ್ಣ ಆಶ್ರಮ

4. ತುಮಕೂರು – ಶಾರದಾಂಬ ಪಿ.ಯು ಕಾಲೇಜು
ಪಂಚವಟಿ, ಸಾರ್ವಜನಿಕ ಕಾರ್ಯಕ್ರಮ

Leave a Reply

Your email address will not be published. Required fields are marked *

You May Also Like

ಬಿಲೀಫ್ ಫೆಸ್ಟ್

ಆದರೆ, ಇಸ್ಲಾಮಿ ರಾಜ್ಯ ಸ್ಥಾಪನೆಯಾದಲ್ಲೆಲ್ಲಾ ಗೋಮಾಂಸ ಭಕ್ಷಣೆ ಆರಂಭವಾಗತೊಡಗಿತು. ಗೋಹತ್ಯೆ ಎಗ್ಗಿಲ್ಲದೇ ನಡೆಯತೊಡಗಿತು. ಬರು–ಬರುತ್ತಾ ಕಸಾಯಿಖಾನೆಗಳ ಮೂಲಕ ಗೋಹತ್ಯೆ ವ್ಯಾಪಕವಾಗತೊಡಗಿತು. ಗೋವು ನಮಗೆ ಮಾಂಸದ ಮೂಲಕ ಹಣ ತರುವ ವಸ್ತುವಾಯ್ತು. ಬಹುಸಂಖ್ಯಾತರ ಶ್ರದ್ಧೆಯ ಪ್ರತೀಕವಾದ ಗೋವಿನ ಸಂರಕ್ಷಣೆ ಮಾಡುವುದು ಅಷ್ಟೇ ಅಗತ್ಯ…
View Post

ದಿಸ್ ಇಸ್ ನಾಟ್ 1962

ಡೋಕ್ಲಾಮ್ ಭೂತಾನಿಗೆ ಸೇರಿದ್ದರೂ ಚೀನಾ ಮಾತ್ರ ಅದರ ಮೇಲೆ ಪ್ರಾಬಲ್ಯ ಸಾಧಿಸಲು ತನ್ನ ಸೇನೆಯನ್ನು ಡೋಕ್ಲಾಮ್ ಗಡಿ ಪ್ರದೇಶಕ್ಕೆ ಕಳಿಸಿತ್ತು. ಆದರೆ ಭೂತಾನ್ ತನ್ನ ನೆರವಿಗೆ ಭಾರತವನ್ನು ಕೇಳಿಕೊಂಡಿತು. ಭಾರತವು ತನ್ನ ಸೇನೆಯನ್ನು ಡೋಕ್ಲಾಮ್ಗೆ ಕಳಿಸಿಕೊಟ್ಟಿತ್ತು. ಇದನ್ನು ಸಹಿಸದ ಚೀನಾ ಭಾರತೀಯ…
View Post

ನನ್ನ ಕನಸಿನ ಕರ್ನಾಟಕ (ಟ್ವಿಟರ್ ಟ್ರೆಂಡ್)

ಈ ಬಾರಿ ಯುವಾಬ್ರಿಗೇಡ್ ನನ್ನ ಕನಸಿನ ಕರ್ನಾಟಕ ಎಂಬ ಯೋಜನೆಯನ್ನು ಕೈಗೆತ್ತಿಕೊಂಡು ಕರ್ನಾಟಕವನ್ನು ಸುಂದರವಾಗಿಸುವ ಪ್ರಯತ್ನಕ್ಕೆ ಕೈ ಹಾಕಿತು. ನಮ್ಮ ಊರು, ಹಳ್ಳಿ, ಜಿಲ್ಲೆ, ರಾಜ್ಯದ ಕುರಿತಂತೆ ನಮ್ಮ-ನಮ್ಮ ಕನಸುಗಳನ್ನು ಹಂಚಿಕೊಳ್ಳುವ ಸಾಧ್ಯವಾದರೆ ಸಾಕಾರಗೊಳಿಸಿಕೊಳ್ಳುವ ಪ್ರಯತ್ನವನ್ನು ಯುವಾಬ್ರಿಗೇಡ್ ಮಾಡಿತು. ನವೆಂಬರ್ 1…
View Post

#BoseQuotes

ಜನವರಿ 23 ಸುಭಾಷ್ ಚಂದ್ರ ಬೋಸರ ಜಯಂತಿ. ಭಾರತ ಮಾತೆಯ ಶ್ರೇಷ್ಠ ಪುತ್ರ ಸುಭಾಷ್ ಚಂದ್ರ ಬೋಸರ ಬಗ್ಗೆ ತಿಳಿಸುವುದು ಮತ್ತು ಅವರ ಸಂದೇಶವನ್ನು ಮನೆ-ಮನೆಗೂ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ. ಈ ಕಾರಣಕ್ಕಾಗಿಯೇ ಯುವಾಬ್ರಿಗೇಡ್ ಈ ಬಾರಿ ಜನವರಿ 23 ರಂದು…
View Post