ಯುವಾಬ್ರಿಗೇಡ್ ಸದಾ ಯೋಧರೊಂದಿಗೆ, ಭಾರತೀಯ ಸೇನೆಯೊಂದಿಗೆ ನಿಂತ ಸಂಘಟನೆ. ಯೋಧರ ಕುಟುಂಬಗಳು ಸಂಕಷ್ಟದಲ್ಲಿದ್ದಾಗ ಅವರಿಗೆ ಹೆಗಲು ಕೊಟ್ಟು ನಿಂತಿದೆ.

ಈ ಬಾರಿ ಯುವಾಬ್ರಿಗೇಡ್ ಹೊಸತೊಂದು ಪ್ರಯತ್ನಕ್ಕೆ ಕೈ ಹಾಕಿತು. ಸೇನೆಗೆ ಸೇರಲೆಂದು ಹಲವರು ಧಾವಿಸುತ್ತಾರೆ.‌ ಈ ಸೇನಾ ಭರ್ತಿ ರ್ಯಾಲಿಗೆ ಆಗಮಿಸಿದವರಿಗೆ ಊಟದ ವ್ಯವಸ್ಥೆ ಮಾಡುವುದೇ ಸಾಹಸ. ಈ ಕಾರ್ಯವನ್ನು ಯುವಾಬ್ರಿಗೇಡ್ ಕೈಗೆತ್ತುಕೊಂಡಿತು. ರ್ಯಾಲಿಗೆ ಆಗಮಿಸಿದವರಿಗೆ ಊಟದ‌ ‌ವ್ಯವಸ್ಥೆ‌ಯನ್ನು ಮಾಡಿತು.