ಯುವಾ ಬ್ರಿಗೇಡ್ ಪ್ರಾರಂಭದಿಂದಲೂ ಸೈನಿಕರೊಂದಿಗೆ ನಿಂತಿದೆ. ನಮ್ಮ ದೇಶವನ್ನು ಕಾಯುವ ಯೋಧರ ಕುಟುಂಬದವರೆಲ್ಲರೂ ಸುಭಿಕ್ಷವಾಗಿರುತ್ತಾರೆ ಎಂದೇನಿಲ್ಲ. ಹಲವು ಯೋಧ ಕುಟುಂಬಗಳು ದಾರಿದ್ರ್ಯದಲ್ಲಿವೆ. ಯೋಧ ತೀರಿಕೊಂಡ ಮೇಲಂತೂ ಅವರ ಕಷ್ಟ ನೋಡಲಸಾಧ್ಯ.

ಯುವಾ ಬ್ರಿಗೇಡ್ ಸಾಧ್ಯವಾದಾಗಲೆಲ್ಲ ಯೋಧ ಕುಟುಂಬಗಳಿಗೆ ಸಹಾಯ ಮಾಡಿದೆ. ಪ್ರತಿ ಬಾರಿ ಹಣವನ್ನು ಸಂಗ್ರಹಿಸಿ‌ ಯೋಧ ಕುಟುಂಬದವರಿಗೆ ತಲುಪಿಸುವ, ಸಮಾಜದಲ್ಲಿ ಅವರು ಗೌರವದಿಂದ ತಲೆಯೆತ್ತುವಂತೆ ಮಾಡಿದೆ.