ಮಹಾಪುರುಷರು ಬಲಿದಾನಗೈದದ್ದು ಖಂಡತುಂಡ ಭಾರತವನ್ನು ನೋಡಲಲ್ಲ. ಅಖಂಡ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಏಕವಾದ, ಸಾಧ್ಯವಾದರೆ ಕಟಕ್ ನಿಂದ ಅಟಕ್ ಗೂ ಹಬ್ಬಿದ ಏಕರಸ ಭಾರತಕ್ಕಾಗಿ. ಜಾತಿ-ಮತ-ಪಂಥ ಮೀರಿದ ಸುಂದರ ಭಾರತಕ್ಕಾಗಿ. ಆದರೆ ನಾವಿಂದು ನಮ್ಮ ನಮ್ಮೊಳಗಿನ ಕದನದಿಂದ ಬಲಿದಾನಗೈದ ಮಹಾವೀರರಿಗೆ ಅವಮಾನ ಮಾಡುತ್ತಿದ್ದೇವೆ.

ಹಾಗಾಗಿ ಭಗತ್ ಸಿಂಗ್, ರಾಜಗುರು, ಸುಖದೇವರ ಬಲಿದಾನ‌‌ ದಿವಸದಂದು ಪಂಜಿನ ಮೆರವಣಿಗೆ ಮಾಡಿ, ‘ನಾವು ಜಾತಿ ಮತ ಪಂಥಗಳ ಮೇಲಾಟಗಳಲ್ಲಿ ಕಾದಾಡುವ ಕೀಳು ಮನುಜರಲ್ಲ. ನಾವು ಭಾರತೀಯರು’ ಎಂಬ ಸಂದೇಶ ನೀಡಿದೆವು.