ಈ ಬಾರಿ ಚುನಾವಣೆಯ ಕಾರಣದಿಂದ ಎಲ್ಲ ಪರೀಕ್ಷೆಗಳು ಮುಂಚಿತವಾಗಿ ನಡೆದವು. ಈ ಸಂದರ್ಭದಲ್ಲಿ ಯುವಾಬ್ರಿಗೇಡ್ ಹತ್ತನೆಯ ತರಗತಿಯ ಮಕ್ಕಳಿಗೆಂದೇ ‘ಆಲ್ ದಿ ಬೆಸ್ಟ್’ ಕಾರ್ಯಾಗಾರವನ್ನು ಆಯೋಜಿಸಿತ್ತು.

ಇದರಡಿಯಲ್ಲಿ ಶಾಲೆಗಳಿಗೆ ತೆರಳಿ ಹತ್ತನೆಯ ತರಗತಿ ಪರೀಕ್ಷೆ ಬರೆಯುವ ಮಕ್ಕಳಿಗೆ ಧ್ಯಾನ, ಯೋಗ, ವ್ಯಕ್ತಿತ್ವ ವಿಕಸನ ಹೀಗೆ ಮುಂತಾದ ವಿಚಾರಗಳ ಮೂಲಕ ಅವರಲ್ಲಿ ಏಕಾಗ್ರತೆಯನ್ನು, ಕಲಿಕಾ ಆಸಕ್ತಿಯನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಯಿತು.‌ ರಾಜ್ಯಾದ್ಯಂತ ಹಲವು ಶಾಲೆಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.