ಚುನಾವಣೆಯ ಹೊಸ್ತಿಲಲ್ಲಿದೆ ಕರ್ನಾಟಕ. ಇನ್ನು ಜಾತಿ-ಮತ-ಪಂಥಗಳ ರಾಜಕಾರಣ ಶುರುವಾಗಲಿದೆ. ಟಿಪ್ಪು ಜಯಂತಿ, ಹನುಮ ಜಯಂತಿಗಳು ಮತ್ತು ಲಿಂಗಾಯತ- ವೀರಶೈವಗಳು ಮತ್ತೆ ಸದ್ದು ಮಾಡಲಿವೆ. ಚುನಾವಣೆಗೂ ಮುನ್ನ ಭ್ರಷ್ಟಾಚಾರವಂತೂ ತಾಂಡವವಾಡಲಿದೆ. ಚುನಾವಣೆಗಾಗಿ ಹಣ ಸಂಗ್ರಹಿಸುವ ಧಾವಂತಕ್ಕೆ ಆಡಳಿತ ಪಕ್ಷ ಮತ್ತು ಶತಾಯ ಗತಾಯ ಅಧಿಕಾರ ಹಿಡಿಯುವ ಆತುರದಲ್ಲಿ ವಿರೋಧ ಪಕ್ಷ ಇವೆಲ್ಲವುಗಳ ಬೈಗುಳಗಳ ಕದನವನ್ನು ನಾವು ನೋಡಲೇಬೇಕಿದೆ. ಇವೆಲ್ಲಕ್ಕೂ ಪರ್ಯಾಯವಾಗಿ ಯುವಾಬ್ರಿಗೇಡ್ ಕನಸಿನ ಕರ್ನಾಟಕದ ಕಲ್ಪನೆಯನ್ನು ಜನರ ಬಳಿಗೆ ಒಯ್ಯುತ್ತಿದೆ. ಜನರಿಂದ ರಾಜ್ಯದ ಕುರಿತಂತೆ ಕನಸುಗಳನ್ನು ಸಂಗ್ರಹಿಸಿ ಕ್ರೋಢೀಕರಿಸಿ ಅದನ್ನು ಚುನಾವಣೆಗೆ ಮುನ್ನ ಸಮಾಜದ ಮುಂದಿರಿಸುವ ಪ್ರಯತ್ನ ಮಾಡುತ್ತಿದೆ‌.

ಅತ್ತ ಇಳಕಲ್ಲಿನ ಯುವಾಬ್ರಿಗೇಡ್ ಮತ್ತು ಸೋದರಿ‌ ನಿವೇದಿತಾ ಪ್ರತಿಷ್ಠಾನ ತಂಡ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನವನ್ನು ಬಲು ಸುಂದರವಾಗಿ ಆಯೋಜಿಸಿ ಎಲ್ಲರ ಗಮನ ಸೆಳೆಯಿತು. ರಾಜ್ಯಾದ್ಯಂತ ನಡೆದ ಬದುಕುವ ಹಕ್ಕು ನಮಗೂ ಇದೆ ಪ್ರತಿಭಟನೆಯ ಪರ್ವ ಎಲ್ಲರನ್ನೂ ಜಾಗ್ರತಗೊಳಿಸುವಲ್ಲಿ ಯಶಸ್ವಿಯಾಯ್ತು.

ಅಂದಹಾಗೆ ಮುಂದೆ ವಿವೇಕಾನಂದರ ಚಿಕಾಗೋದ 125 ನೇ ವರ್ಷಾಚರಣೆಗೆ ಸಿದ್ಧವಾಗುತ್ತಿದೆ ಯುವಾಬ್ರಿಗೇಡು.

ಎಂದಿನಂತೆ ಮಾಡಲು ಕೆಲಸ ಬೆಟ್ಟದಷ್ಟಿದೆ. ಇಚ್ಛಾಶಕ್ತಿಯೂ ಬಂಡೆಯಂತಿದೆ.

16265648_1193735127391146_2042931661509393595_n

ವಂದೇ,
ಚಕ್ರವರ್ತಿ ಸೂಲಿಬೆಲೆ