ಅಕ್ಟೋಬರ್ 28 ರಂದು ಇಳಕಲ್ನಲ್ಲಿ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ನಡೆಯಿತು. ಕಾರ್ಯಕ್ರಮವು ಬೆಳಿಗ್ಗೆ ೮:೩೦ರ ಸಮಯಕ್ಕೆ ಶ್ರೀ ಮಠದಿಂದ ಪಲ್ಲಕ್ಕಿ ಉತ್ಸವದ ಮೂಲಕ ಶುಭಾರಂಭಗೊಂಡಿತು. ಹಾಗೂ ಪಲ್ಲಕ್ಕಿ ಉತ್ಸವಕ್ಕೆ  ಪೂಜ್ಯ ಪ್ರಕಾಶಾನಂದ ಮಹಾರಾಜರು, ರಾಮಕೃಷ್ಣ ವಿವೇಕಾನಂದ ಆಶ್ರಮ ,ರಾಣೆಬೆನ್ನೂರು ಪೂಜ್ಯ ಶಾರದೇಶಾನಂದ ಸ್ವಾಮಿಗಳು ,ರಾಮಕೃಷ್ಣ ಆಶ್ರಮ ಹರಿಹರ ಪೂಜ್ಯ ಸುಮೇಧಾನಂದಜೀ ಮಹಾರಾಜ್,ರಾಮಕೃಷ್ಣ ಗೀತಾಶ್ರಮ ಹೋಸಪೇಟೆ ಹಾಗೂ ಇಳಕಲ್ ನ ಪೂಜ್ಯ ಗುರು ಮಹಾಂತ ಸ್ವಾಮೀಗಳು ,ಚಿತ್ತರಗಿ ಪೀಠ ,ಈ ಎಲ್ಲ ಮಹನಿಯರು ಪಲ್ಲಕ್ಕಿ ಉತ್ಸವ ಕ್ಕೆ ಚಾಲನೆ ನೀಡಿದರು.
ಹಾಗೂ ಬೆಳಿಗ್ಗೆ 10.15 ಕ್ಕೆ ಪ್ರದರ್ಶಿನಿ ಉದ್ಷಾಟನೆಗೊಂಡಿತು. 10.30 ಕ್ಕೆ ಸಮ್ಮೇಳನ ಉದ್ಘಾಟನೆಗೊಂಡಿತು.

11.30 ರಿಂದ ಮೊದಲ ಗೋಷ್ಠಿ ಶುರುವಾಯಿತು. ಜಿಜ್ಞಾಸು ಶಿಷ್ಯೆ ಮಹಾಜ್ಞಾನಿ ಗುರು ವಿಷಯದ ಕುರಿತು ಶ್ರೀ ಶಾರದೇಶಾನಂದ ಸ್ವಾಮೀಜಿ, ರಾಮಕೃಷ್ಣ ಆಶ್ರಮ ಹರಿಹರ ಇವರು ಮಾತನಾಡಿದರು. ನಂತರ ರಮೇಶ ಉಮರಾಣಿ ಅವರು ಅದಮ್ಯ ರಾಷ್ಟ್ರಭಕ್ತಿಯ ಕುರಿತು ಮಾತನಾಡಿದರು. 3.30 ರಿಂದ ಎರಡನೇ ಗೋಷ್ಠಿ ಶುರುವಾಯಿತು. ಸಾಗರದಾಚೆ ವಿವೇಕಾನಂದ ಎಂಬ ವಿಷಯದ ಕುರಿತು ಯುವಾಬ್ರಿಗೇಡ್ ನಿತ್ಯಾನಂದ ವಿವೇಕವಂಶಿಯವರು ಮಾತನಾಡಿದರು. ನಂತರ ಇದೇ ಗೋಷ್ಠಿಯಲ್ಲಿ ಯುವಾಬ್ರಿಗೇಡಿನ ಸದ್ಭಾವನಾ ಸಹಸಂಚಾಲಕರಾದ ಶ್ರೀ ಸಂತೋಷ್ ಸಾಮ್ರಾಟ್ ಅವರು ಸೋದರಿ ನಿವೇದಿತೆಯು ಭಾರತದ ಸಂಸ್ಕೃತಿ ಎತ್ತಿ ಹಿಡಿಯಲು ಮಾಡಿದ ಪ್ರಯತ್ನವನ್ನು ಮನೋಜ್ಞವಾಗಿ ಬಿಡಿಸಿಟ್ಟರು‌.ಗೋಷ್ಠಿಗಳೆಲ್ಲವೂ ಅಚ್ಚುಕಟ್ಟಾಗಿ ಅಧ್ಭುತವಾಗಿ ನಡೆದವು, ನೆರೆದಂತಹ ವಿಧ್ಯಾರ್ಥಿಗಳೆಲ್ಲರ ಪ್ರತಿಕ್ರಿಯೆಯೂ ಚೆನ್ನಾಗಿತ್ತು.

22851716_1569338843126733_6073252001999466976_n
24337394_1495733897201036_1304849387_n

24337601_1495734033867689_910136098_n

ಸಂಜೆ 4.30 ರಿಂದ ಶ್ರೀ ಚಕ್ರವರ್ತಿ ಅಣ್ಣ ಹಾಗೂ ಪೂಜ್ಯ ಶ್ರೀ ಅಭಿನವ ಹಾಲಶ್ರೀ ಮಹಾಸ್ವಾಮಿಗಳು,ಶ್ರೀ ಹಾಲ ಸಂಸ್ಥಾನ ಮಠ, ಹಿರೇಹಡಗಲಿ ಇವರುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಸಮಾರೋಪ ಬಹಳ ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮದ ಮತ್ತೊಂದು ವಿಶೇಷ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಶರ್ವರಿಯ ಅಭಿನಯ ಅಧ್ಭುತವಾಗಿ ಮೂಡಿಬಂತು.

22894377_1570347073025910_2007229030093694499_n

ಅದೇ ದಿನ ಸಂಜೆ 6:೦೦ಘಂಟೆಗೆ *ನನ್ನ ಕನಸಿನ ಕರ್ನಾಟಕ*ದ ಕುರಿತ ಮೊದಲ ಸಾರ್ವಜನಿಕ ಕಾರ್ಯಕ್ರಮ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದಲ್ಲಿ ಸೊಗಸಾಗಿ ಮೂಡಿಬಂದಿತು.