ಡೋಕ್ಲಾಮ್ ಭೂತಾನಿಗೆ ಸೇರಿದ್ದರೂ ಚೀನಾ ಮಾತ್ರ ಅದರ ಮೇಲೆ ಪ್ರಾಬಲ್ಯ ಸಾಧಿಸಲು ತನ್ನ ಸೇನೆಯನ್ನು ಡೋಕ್ಲಾಮ್ ಗಡಿ ಪ್ರದೇಶಕ್ಕೆ ಕಳಿಸಿತ್ತು. ಆದರೆ ಭೂತಾನ್ ತನ್ನ ನೆರವಿಗೆ ಭಾರತವನ್ನು ಕೇಳಿಕೊಂಡಿತು. ಭಾರತವು ತನ್ನ ಸೇನೆಯನ್ನು ಡೋಕ್ಲಾಮ್ಗೆ ಕಳಿಸಿಕೊಟ್ಟಿತ್ತು. ಇದನ್ನು ಸಹಿಸದ ಚೀನಾ ಭಾರತೀಯ ಸೈನಿಕರ ಮೇಲೆ ಮಾತಿನ ಸಮರಕ್ಕೆ ಇಳಿದಿತ್ತು. ಭಾರತೀಯ ಸೈನಿಕರು ಸುಮ್ಮನಾಗದೆ ಅವರೂ ಮಾತಿಗೆ ನಿಂತರು. ವಾದ ವಿವಾದಗಳು ಮೈ ಕೈ ಮುಟ್ಟಿಕೊಳ್ಳುವವರೆಗೂ ನಡೆಯಿತು. ಭಾರತೀಯ ಸೈನಿಕರು ಚೀನಿ ಸೈನಿಕರನ್ನು ಎದೆಯಿಂದ ಹಿಂದಕ್ಕೆ ತಳ್ಳಿದ್ದರು. ಇದರ ಪರಿಣಾಮ ಚೀನಾ ಭಾರತಕ್ಕೆ 1962 ನೆನಪಿದೆಯಾ ಎಂದು ಎಚ್ಚರಿಸಿತ್ತು.

ಚೀನಾದ ಈ ವಿಶ್ವಾಸ ಘಾತುಕ ವರ್ತನೆಗೆ ಇಡಿಯ ದೇಶದಲ್ಲಿ ಚೀನಾದ ವಿರುದ್ಧ ಧ್ವನಿ ಮೊಳಗಿತ್ತು. ಚೀನಾದ ವಸ್ತುಗಳನ್ನು ನಿಷೇಧಿಸುವಂತೆ ದೊಡ್ಡ ಕೂಗೊಂದು ದೇಶ ವ್ಯಾಪಿ ಕೇಳಿತ್ತು. ಯುವಾ ಬ್ರಿಗೇಡ್ ದಿಸ್ ಇಸ್ ನಾಟ್ 1962 ಎನ್ನುವ ಕಿರುಚಿತ್ರ ಮಾಡುವುದರ ಮೂಲಕ ಈ ಅಭಿಯಾನಕ್ಕೆ ಕೈ ಜೋಡಿಸಿತು.
ಸಾಮಾನ್ಯ ಭಾರತೀಯರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಈ ಸಾಲು ಕಿರುಚಿತ್ರದಲ್ಲಿ ತೋರಿಸಲಾಗಿತ್ತು.

1. ಸಾಮಾನ್ಯ ದೋಬಿಯೊಬ್ಬ ಚೀನಾ ಬಟ್ಟೆಯ ಸ್ವಚ್ಛತೆಗೆ ಹೆಚ್ಚಿಗೆ ಹಣವನ್ನು ಪಡೆಯುವುದರ ಮೂಲಕ ತನ್ನ ವಿರೋಧವನ್ನು ಹೇಗೆ ವ್ಯಕ್ತ ಪಡಿಸುತ್ತಾನೆ ಎಂದು ತೋರಿಸಲಾಗಿತ್ತು.

V1

2. ಚಪ್ಪಲಿ ಹೊಲಿಯುವವನೊಬ್ಬ ಚೀನಾ ಚಪ್ಪಲಿಯನ್ನು ಪಾಲಿಶ್ ಮಾಡದೇ ವಾಪಾಸ್ ಕಳಿಸುವುದರ ಮೂಲಕ ಚೀನಾದ ವಿರುದ್ಧ ತನ್ನ ಕೋಪವನ್ನು ಹೊರಹಾಕುವುದನ್ನ ತೋರಿಸಲಾಗಿತ್ತು.

V2

3. ಪೇಪರ್ ಹಾಕುವ ಹುಡುಗ ಚೀನಾ ವಸ್ತುಗಳ ಮಾರಾಟದ ಕರಪತ್ರವನ್ನು ಪೇಪರಿನೊಳಗೆ ಇಟ್ಟು ಪ್ರಚಾರ ಪಡಿಸಲು ನಿರಾಕರಿಸಿದ್ದನ್ನು ಕಿರು ಚಿತ್ರದ ಮೂಲಕ ವ್ಯಕ್ತ ಪಡಿಸಲಾಗಿತ್ತು.

V3

4. ಚೀನಾದಿಂದ ಅಧಿಕ ಪ್ರಮಾಣದಲ್ಲಿ ಆಮದಾಗುವ ಬೀಜವನ್ನ ಆಡಿಕೊಳ್ಳುತ್ತ ಉತ್ತಮ ಫಸಲು ಕೊಡೋದಿಲ್ಲ ಎಂದು ತೋರಿಸಲಾಗಿತ್ತು.

v4

ಈ ನಾಲ್ಕು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಚಾರವನ್ನು ಪಡೆಯಿತು.