ಭಾರತದಲ್ಲಿ ಜನಕ್ಕೆ, ಅದರಲ್ಲೂ ಸ್ತ್ರೀಯರಿಗೆ ಸೇವೆ ಸಲ್ಲಿಸಲು ಈಗ ಅಗತ್ಯವಾಗಿರುವುದು ಪುರುಷನಲ್ಲ, ಸ್ತ್ರೀಸಾಕ್ಷಾತ್ ಸಿಂಹಿಣಿ. ನಿನ್ನ ವಿದ್ಯೆ, ಪ್ರಾಮಾಣಿಕತೆ, ಪರಿಶುದ್ಧತೆ, ಅನಂತಪ್ರೇಮ, ಧೃಢ ನಿರ್ಧಾರ ಎಲ್ಲಕ್ಕಿಂತ ಹೆಚ್ಚು ನಿನ್ನ ಕೆಲ್ಟಿಕ್ ರಕ್ತಇವು ನಮಗೀಗ ಬೇಕಾಗಿರುವ ಮಹಿಳೆ ನೀನೇ ಎಂಬುದನ್ನು ತೀರ್ಮಾನಿಸಿವೆ”. ಮಾತನ್ನು ಸ್ವಾಮಿ ವಿವೇಕಾನಂದರು ತಮ್ಮ ಪ್ರಿಯ ಶಿಷ್ಯೆ ಸೋದರಿ ನಿವೇದಿತಾಳಿಗೆ ಹೇಳಿದಂಥವು! ಸ್ವಾಮಿ ವಿವೇಕಾನಂದರ ಆದರ್ಶವನ್ನು ಪೂರ್ಣಗೊಳಿಸುವುದೊಂದೇ ಅವಳ ಉದ್ದೇಶವಾಗಿದ್ದರೂ ಅದರಲ್ಲಿ ತನ್ನದೇ ಮಾರ್ಗವನ್ನು ಹಿಡಿದಳು ನಿವೇದಿತಾ. ಅವಳ ಭಾರತದ ಮೇಲಿನ ಪ್ರೀತಿ ಹೇಳತೀರದು. ತನ್ನ ಆಪ್ತ ಸ್ನೇಹಿತೆಯಾದ ಮಿಸ್ ಮ್ಯಾಕ್ಲಿಯೋಡ್ ಬಳಿ ನಿವೇದಿತಾ ನನ್ನ ಕರ್ತವ್ಯಇಡೀ ರಾಷ್ಟ್ರವನ್ನೇ ಎಚ್ಚರಗೊಳಿಸುವುದುಎಂದು ತಿಳಿಸಿದ್ದಳು.

ಸ್ವಾಮಿ ವಿವೇಕಾನಂದರ ಮಾತಿನಂತೆ ಭಾರತದ ಸ್ತ್ರೀಯರಿಗಾಗಿಯೇ ತನ್ನ ಜೀವನವನ್ನು ಸಮರ್ಪಿಸಿದವಳು ಅಕ್ಕ. ಆಕೆಯಿಂದ ಭಾರತವನ್ನು ದೂರಗೊಳಿಸುವುದು ಅಸಾಧ್ಯದ ಮಾತಾಗಿತ್ತು. ರಾಷ್ಟ್ರಪ್ರಜ್ಞೆಯನ್ನು ಎಲ್ಲರಲ್ಲೂ ಎಚ್ಚರಗೊಳಿಸುವ ಜವಾಬ್ದಾರಿಯನ್ನು ಹೊತ್ತಿದ್ದ ನಿವೇದಿತಾ, ದೇಶಭಕ್ತರಿಗೆ ಅಕ್ಷರಶಃ ಸ್ಫೂರ್ತಿಯ ಕಿಡಿಯಾಗಿದ್ದಳು! ಬ್ರಿಟೀಷ್ ಎಂಬ ಹೆಮ್ಮಾರಿಯನ್ನೂ, ಪ್ಲೇಗ್ ಎಂಬ ಮಹಾಮಾರಿಯನ್ನು ಓಡಿಸಲು ಆಕೆ ಮಾಡಿದ ಕೆಲಸಗಳು ಸದಾ ಸ್ಮರಣೀಯ. ಮನೆಮನೆಗೆ ತೆರಳಿ ಪ್ಲೇಗ್ ರೋಗಿಗಳ ಸೇವೆಯನ್ನು ಮಾಡಿದ್ದಳು ಅಕ್ಕ ನಿವೇದಿತಾ. ಆಕೆಯ ಬರವಣಿಗೆಗಳು, ಭಾಷಣಗಳು ಎಲ್ಲವೂ ಭಾರತೀಯತೆಯನ್ನು ಎತ್ತಿ ಹಿಡಿಯುತ್ತಿದ್ದವು. ಚಿತ್ರಕಲೆಯಲ್ಲಿ ಭಾರತೀಯತೆಯು ಮರುಕಳಿಸುವಂತೆ ಮಾಡುವುದರಲ್ಲಿ ಅಕ್ಕನ ಪಾತ್ರ ಹಿರಿದು! ರವೀಂದ್ರರು, ಬಾರೀಂದ್ರರು, ಅರವಿಂದರು, ಜಗದೀಶ್ ಚಂದ್ರ ಬೋಸರು ಹೀಗೆ ಅನೇಕರು ಆಕೆಯ ಬಳಿ ಚರ್ಚಿಸಲು, ಪ್ರಶ್ನೆಗಳಿಗೆ ಉತ್ತರ ಪಡೆಯಲು ಬರುತ್ತಿದ್ದರು. ಆಕೆಯ ಕುರಿತು ಹೇಳುತ್ತ ಹೋದರೆ ಮುಗಿಯುವ ಅಧ್ಯಾಯವಲ್ಲ!

ಬಾರಿ ನಿವೇದಿತೆಯ 150 ನೇ ಜಯಂತಿ. ಭಾರತಕ್ಕಾಗಿ ತನ್ನದೆಲ್ಲವನ್ನೂ ಸಮರ್ಪಿಸಿದ ನಿವೇದಿತೆಯ ಜೀವನವನ್ನು ಸಮಾಜಕ್ಕೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ. ಫೆಬ್ರವರಿಯಲ್ಲಿ ನಿವೇದಿತೆಯ 150 ನೇ ಜಯಂತಿಯ ಪ್ರಯುಕ್ತವಾಗಿಯೇ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ಇದಕ್ಕೊಂದು ಮುನ್ನುಡಿ. ಈಗಾಗಲೇ ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು, ಮಂಗಳೂರು, ಶಿವಮೊಗ್ಗ, ಕೊಪ್ಪಳ, ಮೈಸೂರು, ಮಂಡ್ಯ, ವಿಜಯಪುರ, ಹಾಸನ ಹೀಗೆ ಹಲವು ಕಡೆಗಳಲ್ಲಿ ನಿವೇದಿತಾ ಜಯಂತಿ ಮತ್ತು ಲಘು ಸಾಹಿತ್ಯ ಸಮ್ಮೇಳನಗಳು ನಡೆದಿವೆ.

ಎಷ್ಟೋ ಜನರಿಗೆ ನಿವೇದಿತೆಯ ಪರಿಚಯವೇ ಇರುವುದಿಲ್ಲ. ನಾವು ಕಾರ್ಯಕ್ರಮ ಮಾಡಿದಾಗ ಆದ ಅನುಭವಗಳು ಹಲವು. ‘ನಿವೇದಿತಾ ಅವರು ಇನ್ನೂ ಬದುಕಿರುವರಾ? ಅವರು ಯಾವ ಊರಿನಲ್ಲಿ ನೆಲೆಸಿದ್ದಾರೆ?’ ಎಂದು ಕೇಳಿದವರೂ ಇದ್ದಾರೆ!! ನಿವೇದಿತೆಯ ಜೀವನವನ್ನು ತಿಳಿದು, ಆಕೆಯಿಂದ ಸ್ಫೂರ್ತಿ ಪಡೆದು, ಸೇವೆಯನ್ನು ಮಾಡುತ್ತಿರುವವರೂ ಇದ್ದಾರೆ. ಶಿವಮೊಗ್ಗದ ಬಿ.ಎಡ್ ಕಾಲೇಜೊಂದರಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನ ಏರ್ಪಡಿಸಿದ್ದ ನಿವೇದಿತಾ ಜಯಂತಿಯ ನಂತರ, ನಮ್ಮ ಬಳಿಗೆ ಬಂದು ತಾನೂ ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕೆಂದು ಹೆಣ್ಣುಮಗಳೊಬ್ಬಳು ಹೇಳಿದಳು. ಹೇಳಿದ್ದಷ್ಟೇ ಅಲ್ಲ, ನಿವೇದಿತಾ ಪ್ರತಿಷ್ಠಾನವು ಶಾಲೆಯನ್ನು ಅರ್ಧದಲ್ಲಿಯೇ ಬಿಟ್ಟ ಹೆಣ್ಣುಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ, ನೇರವಾಗಿ 10 ನೇ ತರಗತಿಯ ಪರೀಕ್ಷೆಗೆ ಕೂರಿಸುವ ಕೆಲಸವನ್ನು ಮಾಡುತ್ತಿದೆ. ಹೆಣ್ಣುಮಗಳು ತನ್ನ ಬಿಡುವಿನ ವೇಳೆಯಲ್ಲಿ ಇಂತಹ ಮಕ್ಕಳಿಗೆ ಪಾಠ ಮಾಡಲು ನಿಶ್ಚಯಿಸಿದ್ದಾಳೆ!

ಇದೇ ತಾನೇ ಆಗಬೇಕಾದ್ದು? ನಿವೇದಿತೆಯ ಜೀವನವನ್ನು ಅರಿತು, ಆಕೆಯಿಂದ ಶಕ್ತಿಯನ್ನು ಪಡೆದು, ಆಕೆಯ ಮಾರ್ಗದಲ್ಲಿ ನಡೆಯುವಂತಾದರೆ ಯುವಾಬ್ರಿಗೇಡ್ ಮತ್ತು ನಿವೇದಿತಾ ಪ್ರತಿಷ್ಠಾನದ ಪ್ರಯತ್ನ ಸಾರ್ಥಕವಾಗುತ್ತದೆ. ಸಮಾಜದಲ್ಲಿ ಒಂದಷ್ಟು ನಿವೇದಿತೆಯರು ತಯಾರಾದರಂತೂ ಭಾರತವನ್ನು ವಿಶ್ವಗುರುವನ್ನಾಗಿಸುವ ಪ್ರಯತ್ನಕ್ಕೆ ಒಂದು ದೊಡ್ಡ ಕೊಡುಗೆಯೇ ನೀಡಿದಂತಾಗುತ್ತದೆ. ಬನ್ನಿ, ವಿಶ್ವಗುರು ಭಾರತದ ನಿರ್ಮಾಣಕ್ಕೆ ವಿವೇಕಾನಂದನಿವೇದಿತೆಯರ ಮಾರ್ಗದಲ್ಲಿ ನಡೆಯೋಣ.