ಯುವಾ ಬ್ರಿಗೇಡಿನ ಸೋದರಿ ಸಂಸ್ಥೆಯಾದ ನಿವೇದಿತಾ ಪ್ರತಿಷ್ಠಾನ ಬಲು ಕ್ರಿಯಾಶೀಲವಾಗಿರುವ ದಿನಗಳಿವು. ನಿವೇದಿತಾಳ 150 ನೇ ಜಯಂತಿಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ 50ಕ್ಕೂ ಹೆಚ್ಚು ಕಡೆಗಳಲ್ಲಿ ‘ದೀಕ್ಷಾದಿವಸ್’ನ್ನು ನಡೆಸಿ ಅವರು ಪಡೆದ ಯಶಸ್ಸು ಅಭಿನಂದನಾರ್ಹ. ಇದು ಸುಮ್ಮನೆ ಆದಂತದ್ದಲ್ಲ. ಇದರ ಹಿಂದೆ ಬೇರೆ-ಬೇರೆ ಜಿಲ್ಲೆಗಳಿಗೆ ಓಡಾಡಿದ, ಕಾರ್ಯಕ್ರಮದ ರೂಪು-ರೇಷೆಯನ್ನು ಆಲೋಚಿಸಿ, ಕಾರ್ಯಕ್ರಮವನ್ನು ಸಂಘಟಿಸಿದ ಎಲ್ಲ ಹೆಣ್ಣುಮಕ್ಕಳ ಪಾತ್ರ ಅನನ್ಯವಾದುದು. ಅವರೀಗ ಸ್ವಂತ ಬಲದ ಮೇಲೆ ನಿಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ನಿವೇದಿತಾಳ ಶಕ್ತಿ ಅವರೆಲ್ಲರಲ್ಲೂ ಸ್ಫೂರ್ತಿಯಾಗಿ ಹಬ್ಬಲಿ.

ಪ್ರೇಮಿಗಳ ದಿನವನ್ನು ರಾಷ್ಟ್ರಪ್ರೇಮಿಗಳ ದಿನವಾಗಿ ಆಚರಿಸುವುದು ಯುವಾ ಬ್ರಿಗೇಡ್ ನ ಪದ್ಧತಿ. ಕಳೆದ ವರ್ಷ ಪೌರಕಾರ್ಮಿಕರೊಂದಿಗೆ ಈ ದಿನವನ್ನು ಆಚರಿಸಿದ್ದ ಯುವಾಬ್ರಿಗೇಡ್ ಈ ವರ್ಷ ಹಿರಿಮನೆಯ ಹಿರಿಯರೊಂದಿಗೆ ಆಚರಿಸಿದೆ. ಅವರಲ್ಲಿ ತರುಣ ಪೀಳಿಗೆಯ ಕುರಿತಂತೆ ನಂಬಿಕೆ- ವಿಶ್ವಾಸವನ್ನು ಜಾಗೃತಗೊಳಿಸುವಲ್ಲಿ ಯಶಸ್ವಿಯಾಗಿದೆ.

ಭಗತ್ ಸಿಂಗ್, ರಾಜ್ ಗುರು, ಸುಖದೇವರ ಬಲಿದಾನ ಸ್ವಾತಂತ್ರ್ಯದ ಕಾಲಘಟ್ಟದ ಅತ್ಯಂತ ಮಹತ್ವದ ಘಟನೆ. ಭಗತ್ ನನ್ನು ಕಮ್ಯುನಿಸ್ಟ್ ಎಂದು ಬಿಂಬಿಸಿ ಅವನ ಸ್ಫೂರ್ತಿ ಪಡೆದ ತರುಣರನ್ನು ತಮ್ಮೆಡೆಗೆ ಸೆಳೆದುಕೊಳ್ಳುವ ಕಮ್ಯುನಿಷ್ಟರ ಓಟಕ್ಕೆ ಯುವಾಬ್ರಿಗೇಡ್ ನ ‘ನಂದಾದೀಪ’ ಬಲವಾದ ಪೆಟ್ಟುಕೊಟ್ಟಿದೆ. ರಾಜ್ಯಾದ್ಯಂತ ಮನೆ-ಮನೆಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷ. ನಮ್ಮ ಕಾಲದ ಭಗತ್ ಸಂದೀಪ್ ಉನ್ನಿಕೃಷ್ಣನ್ ರ ಹುಟ್ಟಿದ ಹಬ್ಬವೂ ಈ ಬಾರಿಯ ವೈಶಿಷ್ಟ್ಯ.

ಒಂದಾದ ಮೇಲೊಂದು ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಅಲ್ಲಲ್ಲಿ ಸಂಘಟನೆಯ ವಿಸ್ತಾರದ ಪ್ರಯತ್ನವೂ ಕೂಡ ತೀವ್ರಗತಿಯಲ್ಲಿದೆ. ನಿಮ್ಮೆಲ್ಲರ ವಿಶ್ವಾಸ, ಸಹಕಾರ, ಪ್ರೀತಿ, ಬೆಂಬಲ ಹೀಗೆಯೇ ಇರಲಿ. ಧನ್ಯವಾದಗಳು.

ವಂದೇ,

anna

ಚಕ್ರವರ್ತಿ